ಚಾಕು (ಚೂರಿ) ಹಿಡಿಕೆಗೆ ಜೋಡಣೆಗೊಂಡ ಕತ್ತರಿಸುವ ಅಂಚು ಅಥವಾ ಅಲಗು ಇರುವ ಉಪಕರಣ. ಮಾನವಕುಲವು ಬಳಸಿದ ಅತ್ಯಂತ ಮುಂಚಿನ ಉಪಕರಣವಾದ ಚಾಕುವು ಕನಿಷ್ಠಪಕ್ಷ ಎರಡೂವರೆ ಮಿಲಿಯನ್ ವರ್ಷಗಳಷ್ಟು ಹಿಂದೆ ಕಾಣಿಸಿಕೊಂಡಿತು. ಓಲ್ಡೊವಾನ್ ಉಪಕರಣಗಳು ಇದಕ್ಕೆ ಸಾಕ್ಷಿ ಒದಗಿಸಿದೆ.[][] ಮೂಲತಃ ಇದನ್ನು ಕಟ್ಟಿಗೆ, ಮೂಳೆ ಮತ್ತು (ಚಕಮಕಿ ಕಲ್ಲು ಹಾಗೂ ಕಾರ್ಗಲ್ಲಿನಂತಹ) ಕಲ್ಲಿನಿಂದ ತಯರಿಸಲಾಗುತ್ತಿತ್ತು. ಶತಮಾನಗಳು ಕಳೆದಂತೆ, ಲೋಹಶಾಸ್ತ್ರ ಮತ್ತು ಉತ್ಪಾದನೆ ಎರಡರಲ್ಲಿನ ಸುಧಾರಣೆಗಳನ್ನು ಅನುಸರಿಸಿ, ಚಾಕುವಿನ ಅಲಗನ್ನು ತಾಮ್ರ, ಕಂಚು, ಕಬ್ಬಿಣ, ಉಕ್ಕು, ಪಿಂಗಾಣಿ ಮತ್ತು ಟೈಟೇನಿಯಮ್‍ನಿಂದ ತಯಾರಿಸಲಾಗಿದೆ. ಬಹುತೇಕ ಆಧುನಿಕ ಚಾಕುಗಳು ಸ್ಥಿರ ಅಥವಾ ಮಡಚಬಲ್ಲ ಅಲಗುಗಳನ್ನು ಹೊಂದಿರುತ್ತವೆ; ಅಲಗಿನ ಮಾದರಿಗಳು ಮತ್ತು ಶೈಲಿಗಳು ತಯಾರಕ ಹಾಗೂ ಉಗಮದ ದೇಶ ಬದಲಾದಂತೆ ಬದಲಾಗುತ್ತವೆ.

Large knife with polished wooden handle, lying next to a leather sheath

ಉಲ್ಲೇಖಗಳು

ಬದಲಾಯಿಸಿ
  1. "No. 1 The knife". Forbes. 2005-08-31. Archived from the original on 2012-07-31. Retrieved 2007-05-07.
  2. "Early Human Evolution: Early Human Culture". Archived from the original on 2007-05-12. Retrieved 2007-05-07.


ಹೆಚ್ಚಿನ ಓದಿಗೆ

ಬದಲಾಯಿಸಿ
  • Everybody's Knife Bible by Don Paul,  
"https://kn.wikipedia.org/w/index.php?title=ಚಾಕು&oldid=978540" ಇಂದ ಪಡೆಯಲ್ಪಟ್ಟಿದೆ