ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ.

ಚಲಗೇರಾ
ಚಲಗೇರಾ
.
ಹನುಮಾನ ದೇವಾಲಯ ಚಲಗೇರಾ
.
ಶ್ರೀ ಸಿದ್ದಲಿಂಗ ಕಲ್ಯಾಣ ಮಂಟಪ ಚಲಗೇರಾ

ಭೌಗೋಳಿಕ

ಬದಲಾಯಿಸಿ

ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51"ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆ

ಬದಲಾಯಿಸಿ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 10,000 ಮಾತ್ರ ಇದೆ. ಅದರಲ್ಲಿ 6,000 ಪುರುಷರು ಮತ್ತು 4,000 ಮಹಿಳೆಯರಿದ್ದಾರೆ.

ಹವಾಮಾನ

ಬದಲಾಯಿಸಿ

ಬೇಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ ಏಪ್ರಿಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ.

ಬೇಸಿಗೆಕಾಲ:೩೫°c-೪೨°c

ಚಳಿಗಾಲ/ಮಳೆಗಾಲ:೪೮°c-೨೮°c

ಮಳೆ: ಪ್ರತೀ ವರ್ಷ ಮಳೆಯು ೩೦೦ -0 ೬೦೦ಮಿ.ಮಿ ಗಳಷ್ಟು ಆಗಿರುತ್ತದೆ.(ಬರಗಾಲ ಬಂದಾಗ ಇಲ್ಲ)

ಗಾಳಿ : ಗಾಳಿವೇಗ ೧೮.೨ ಕಿಮಿ/ ಗಂ (ಜೂನ),೧೯.೬ ಕಿಮಿ/ಗಂ (ಆಗಸ್ಟ) ಇರತ್ತದೆ.

ಸಾಂಸ್ಕೃತಿಕ

ಬದಲಾಯಿಸಿ

ಮುಖ್ಯ ಭಾಷೆ: ಕನ್ನಡ ಇದರ ಜೊತೆಗೆ ಕೆಲವರು ಇಂಗ್ಲೀಷ, ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ.

ಆಹಾರ ಧಾನ್ಯಗಳು: ಜೋಳ ಇದರ ಜೊತೆಗೆ ಗೋದಿ,ಅಕ್ಕಿ , ಮೆಕ್ಕೆಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ , ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ , ಶೇಂಗಾ ಚಟ್ನಿ , ಎಣ್ಣಿ ಬದನೆಯಕಾಯಿ ಪಲ್ಯ , ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಬದಲಾಯಿಸಿ
 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ , ನೆಹರು ಅಂಗಿ , ಮತ್ತು ರೇಷ್ಮೆ ರುಮಾಲು ಧರಿಸುತ್ತಾರೆ. ಮಹಿಳೆಯರು ಇಳಕಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ದೇವಾಲಯಗಳು

ಬದಲಾಯಿಸಿ

ಗ್ರಾಮದಲ್ಲಿ ಐದು ದೇವಾಲಯಗಳಿವೆ.

   ಹನುಮಾನ ದೇವಾಲಯ

ಅಂಬಾ ಭವಾನಿ ದೇವಾಲಯ

ಚೌಡೇಶ್ವರಿ ದೇವಾಲಯ

ಲಕ್ಷ್ಮೀ ದೇವಾಲಯ

ಪಾಂಡುರಂಗ ವಿಠಲ ದೇವಾಲಯ

ಆಶ್ರಮಗಳು

ಬದಲಾಯಿಸಿ

ಓಂ ಶ್ರೀ ದೇವಿಲಿಂಗ ಹವಾಮಲ್ಲಿನಾಥ ಮಹಾರಾಜ ಆಶ್ರಮ. ಓಂ ಶ್ರೀ ಶಾಂತೇಶ್ವರ ಆಶ್ರಮ.

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಆರ್ಥಿಕತೆ

ಬದಲಾಯಿಸಿ

ಗ್ರಾಮದಲ್ಲಿ ಆರ್ಥಿಕತೆ ಮಾಧ್ಯಮ ತರಗತಿಯಲ್ಲಿದೆ.

ರಾಜಕೀಯ

ಬದಲಾಯಿಸಿ

ಗ್ರಾಮವು ಬೀದರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ.ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿದೆ.ಗ್ರಾಮದಲ್ಲಿ 4 ಗ್ರಾಮ ಪಂಚಾಯಿತಿ ವಲಯಗಳಿವೆ.

ಅಂಚೆ ಕಚೇರಿ

ಬದಲಾಯಿಸಿ

ಉಪ ಅಂಚೆ ಕಚೇರಿ, ಚಲಗೇರಾ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಲಗೇರಾ

ಉಲ್ಲೇಖ

ಬದಲಾಯಿಸಿ

ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ. ಪಿನಕೋಡ : 585236 ಗ್ರಾಮವು ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ. ಹಾಗೂ ಮಾದನ ಹಿಪ್ಪರಗಾ ಹೋಬಳಿ ವ್ಯಾಪ್ತಿಯಲ್ಲಿ ಇದೆ.

ಆಳಂದ - ಅಫಲಪುರ ರಾಜ್ಯ ಹೆದ್ದಾರಿಯಲ್ಲಿ ಈ ಗ್ರಾಮವಿದೆ. ಮುಖ್ಯ ದೇವಾಲಯ- ಹನುಮಾನ ದೇವಾಲಯ

 
ಕಲಬುರಗಿ ಜಿಲ್ಲಾ ನಕ್ಷೆ
"https://kn.wikipedia.org/w/index.php?title=ಚಲಗೇರಾ&oldid=1216793" ಇಂದ ಪಡೆಯಲ್ಪಟ್ಟಿದೆ