• ಈ ಲೇಖನದಲ್ಲಿ ಒಂದು ಹೊರಕೊಂಡಿ ಬಿಟ್ಟರೆ ಬೇರೆ ಯಾವುದೇ ಉಲ್ಲೇಖವಿಲ್ಲ. --ವಿಶ್ವನಾಥ/Vishwanatha (ಚರ್ಚೆ) ೧೮:೨೬, ೩೧ ಅಕ್ಟೋಬರ್ ೨೦೧೭ (UTC)

ತಿಗಳ ಅಥವ ತಮಿಳು ಚೋಳ

ಬದಲಾಯಿಸಿ

ಮಾಹಿತಿ :- ಎಪಿಗ್ರಾಪಿಕಾ ಕರ್ನಾಟಕ ವಾಲ್ಯೂಮ್ 1 ರಿಂದ 19 , ಎಪಿಗ್ರಾಪಿಕ ಇಂಡಿಕಾ ವಾಲ್ಯೂಮ್ 1 ರಿಂದ 35 , ನಿಲಂಕಂಠ ಶಾಸ್ತ್ರಿ ಯವರ ಚೋಳರು, later chola Temple, middle chola Temple , ಮೈಸೂರು ಗೆಜೆಟಿಯರ್, ಕರ್ನಾಟಕ ಸಾಹಿತ್ಯ ಪರಿಷತ್. ಇವುಗಳ ಅವಲೋಕಿಸಿ ಆಯ್ದ ವಿಷಯ ಇಲ್ಲಿ ಬರೆದಿದ್ದೇನೆ. ಚೋಳರ ಬಗ್ಗೆ ಬರೆಯಬೇಕೆಂದರೆ ಸಾವಿರ ಪುಟಗಳಿಗೂ ಅಧಿಕ ಮಾಹಿತಿ ಸಿಗುತ್ತವೆ. ನಿಮಗೆ ಸಂದೇಹ ಇದ್ದರೆ ಸೂಚಿಸಿದ ದಾಖಲೆಗಳನ್ನು ನೀವೇ ಪರಿಶೀಲಿಸಬಹುದು.

ಕರ್ಣಾಟಕ ರಾಜ್ಯದಲ್ಲಿ #ಚೋಳರನ್ನು #ತಿಗಳ ಎಂದು ಕರೆದಿರುವುದು ಸಾಕಷ್ಟು ಉಲ್ಲೇಖಗಳು ಸಿಗುತ್ತವೆ. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ರಾಷ್ಟ್ರ ಕವಿ ಕುವೆಂಪು, ಮಾಸ್ತಿ ವೆಂಕಟಶ್ ಅಯ್ಯಂಗಾರ್ ರವರು ದಾಖಲಿಸಿದ್ದಾರೆ. 14ನೆ ಶತಮಾನದ ನಂಜುಂಡ ಕವಿ ಸಹ ತನ್ನ ಕೃತಗಳಲ್ಲಿ ಉಲ್ಲೇಖ ಮಾಡಿದ್ದಾರೆ. 15ನೆ ಶತಮಾನದ ಜೈಮಿನಿ ಭಾರತದ ಕೃತಿ ಯಲ್ಲಿ ಕವಿ ಲಕ್ಷ್ಮೀಶ ಉಲ್ಲೇಖ ಇದೆ. ತಮಿಳಿನ ಅರಸರನ್ನು "ತಿಗಳ" ಎಂದು ಕರೆದಿರುವುದು ಸಾಕಷ್ಟು ಮಾಹಿತಿ ಸಿಗುತ್ತದೆ. ಕ್ರಿ. ಶ 754 ರಲ್ಲಿ ಗಂಗರ ಶ್ರಿಪುರುಷನ ಶಾಸನಗಳಲ್ಲಿ ಮೊದಲಿಗೆ ಕಾಣಿಸುತ್ತವೆ. ತುಮಕೂರು ಜಿಲ್ಲೆ ಪಾವಗಡ , ಮಧುಗಿರಿ ತಾಲ್ಲೂಕಿನ ಶಾಸನ 12 ಮತ್ತು 13 ರಲ್ಲಿ "ಕೆರೆಯ ಕಟ್ಟಿಸಿದೋರ್ ಆಕಳೆ ತಿಗಳ್ ಅವರ ಮಕ್ಕಳ್" ಎನ್ನುವುದೂ ಇದೆ. ಅಂದರೆ ಆ ಪ್ರಾಂತ್ಯದಲ್ಲಿ ಚೋಳ ಧನಂಜಯ, ಚೊಳಿಕ ಮುತ್ತರಸ ಎನ್ನುವ ಇಬ್ಬರು ಚೋಳ ಅರಸರು ಸಾಮಂತರಾಗಿ ಗಂಗರ ಶ್ರಿಪುರುಷ ನ ಕೈ ಕೆಳಗೆ ಆಳ್ವಿಕೆ ಮಾಡಿದ್ದಾರೆ. ಇವರ ಬಗ್ಗೆ ಕೋಲಾರ ಜಿಲ್ಲೆಯ ಶಾಸನಗಳಲ್ಲೂ ಉಲ್ಲೇಖ ಇದೆ. ಚೋಳ ಧನಂಜಯ ಮತ್ತು ಚೊಳಿಕ ಮುತ್ತರಸ ಇವರು ತೆಲುಗು ಚೋಳ, ರೆನಾಡೂ ಚೋಳ ಲೈನ್ ನಲ್ಲಿ ಬರುತ್ತಾರೆ.

ಮತ್ತೊಂದು ಉಲ್ಲೇಖ ಚಾಲುಕ್ಯ ಸತ್ಯಾಶ್ರಯ ಮತ್ತು ರಾಜ ರಾಜ ಚೋಳ ರ ಅವಧಿಯಲ್ಲಿ "ತಿಗುಳರಮಾರಿ" ಎನ್ನುವ ಉಲ್ಲೇಖ ಇದೆ. ತಿಗುಳರ ಮಾರಿ ಈ ಬಿರುದು ಚಾಲುಕ್ಯರ ಸತ್ಯಾಶ್ರಯ ನಿಗೆ ಇದ್ದಂತಹ ಬಿರುದು. ಇದನ್ನು ಕನ್ನಡ ಕವಿ #ರನ್ನ ಸಾಹಸ ಭೀಮ ವಿಜಯ ಕೃತಿ ಯಲ್ಲಿ ಉಲ್ಲೇಖ ಇದೆ. ಈ ಬಿರುದು ಬರಲು ಕಾರಣ ರಾಜ ರಾಜ ಚೋಳ ಮೊದಲಿಗೆ ಗಂಗವಾಡಿ, ನೋಣಂಬವಾಡಿ ಮೇಲೆ ಕ್ರಿ. ಶ 997 ರಲ್ಲಿ ದಾಳಿ ಮಾಡಿದರು. ಚಾಲುಕ್ಯ ಸತ್ಯಾಶ್ರಯ ರಾಜ ರಾಜ ಚೋಳ ರನ್ನು ಸೋಲಿಸಿದ ಕಾರಣಕ್ಕೆ ತಿಗುಳರ ಮಾರಿ ಎನ್ನುವ ಬಿರುದು ಬಂದಿದೆ. ತಿಗುಳ ಅಂದರೆ ತಮಿಳಿನ ಅರಸರನ್ನು, ಅದರಲ್ಲೂ ಚೋಳರನ್ನು ಕರೆದಿರುವುದು ಇದೂ ಒಂದು ಸಾಕ್ಷಿ. ತಿಗುಳರಿಗೆ ಮಾರಿಯ ರೀತಿ ಯುದ್ದ ಮಾಡಿದ್ದ ಚಾಲುಕ್ಯ ಸತ್ಯಾಶ್ರಯ. ಇದರ ಬಗ್ಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಾಸನ 30, 130, 178, 285, 297 ಮತ್ತು ಚೆನ್ನಗಿರಿ ಶಾಸನ 21 ರಲ್ಲು ಉಲ್ಲೇಖ ಇದೆ.

ಮತ್ತೊಂದು ಉಲ್ಲೇಖ ಹೊಯ್ಸಳ ರ ಕಾಲದಲ್ಲಿ . ಹೊಯ್ಸಳ ವಿಷ್ಣವರ್ಧನನು ತಲಕಾಡಿನಲ್ಲಿ ಸೋಲಿಸಿದ ನಂತರ "ತಲಕಾಡು ಕೊಂಡ ಗಂಡಂ ತಿಗುಳರ ಪಡೆಯ ಕೂಡೆ ಬೇಂಕೊಂಡ ಗಂಡಂ" ಎಂದು ಬಿರುದು ಬರುತ್ತದೆ. ಇದಕ್ಕೆ ಕಾರಣ ತಲಕಾಡಿನ ಮೇಲೆ ಚೋಳ ರ ಸೋಲಿಸಿ ತಲಕಾಡನ್ನು ವಶ ಪಡಿಸಿಕೊಂಡಿದ್ದಾರೆ. ಅದಕ್ಕಾಗಿ ತಲಕಾಡು ಕೊಂಡ ಗಂಡಂ. ಚೋಳರ ಮತ್ತು ಅವರ ಸೈನ್ಯಕ್ಕೆ ತಿಗುಳರ ಪಡೆ ಎಂಬುದಾಗಿ ಕರೆದಿದ್ದಾರೆ. ಇಲ್ಲೂ ಸಹ ಚೋಳರನ್ನು ತಿಗಳ ಎಂದು ಕರೆದಿರುವುದು ಆಧಾರ ಸಮೇತ ಸಿಗುತ್ತದೆ. ಶಾಸನ ಶ್ರಾವಣ ಬೇಳೋಗೊಳ 125, 240, 73(59) 397 ರಲ್ಲು ಮತ್ತು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಶಾಸನ 34 , ಮತ್ತು ಮೈಸೂರು ಜಿಲ್ಲೆ ನಾಗಮಂಗಲ ತಾಲೂಕಿನ ಶಾಸನ 76 ರಲ್ಲೂ ಇದೆ. ಇದೇ ಶಾಸನದಲ್ಲಿ ತಿಗುಳರು ಕ್ಷತ್ರಿಯ ರು ಎಂದು ಗೊತ್ತಾಗುತ್ತದೆ. ಏಕೆಂದರೆ ಹೊಯ್ಸಳರು ಶತ್ರು ಚೋಳರು. ಹೊಯ್ಸಳರು ಅವರ ಶಕ್ತಿ ವರ್ಣನೆ ಇದೆ. "ಶತ್ರು ಕ್ಷತ್ರಿಯ ಕಳತ್ರ ಗರ್ಭ ಸ್ರವಂಪಾದಕ " ಅಂದರೆ ಹೊಯ್ಸಳರ ಶತ್ರು ಕ್ಷತ್ರಿಯರು ಚೋಳರು ತಿಗುಳರು ಎಂಬುದು ಸ್ಪಷ್ಟ ಆಗುತ್ತದೆ.

ಮತ್ತೊಂದು ಉಲ್ಲೇಖ ತಿಗುಳಮಂಡಲ ಎಂದು ಕರೆದಿದ್ದಾರೆ. ಚೋಳ ರ ಆಳ್ವಿಕೆ ಪ್ರದೇಶಕ್ಕೆ ತಿಗುಳಮಂಡಲ ಎಂದು ಕರೆದಿದ್ದಾರೆ ಇದರ ಬಗ್ಗೆ ತುಮಕೂರು ಜಿಲ್ಲೆಯ ಗುಬ್ಬಿ ಶಾಸನ 45 ರಲ್ಲೂ ಇದೆ.

ಹಾಸನ ಜಿಲ್ಲೆಯ ಬೇಲೂರು ಶಾಸನ 298 ರಲ್ಲಿ ಉಲ್ಲೇಖ ಇದೆ.

ಅದೇ ರೀತಿಯಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು ಶಾಸನ 128 ರಲ್ಲಿ ಚೋಳರನ್ನು "ತಿಗುಳ ನೀಂ ಬಿಡು ಜಗಳ" ಎಂದು ಇದೆ.

ಇಷ್ಟೆಲ್ಲ ಇದ್ದರೂ ತಿಗಳ ಎಂದರೇ ಶೂದ್ರರು ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಶಾಸನಗಳಲ್ಲಿ ಚೋಳರನ್ನು ತಿಗಳ ಎಂದು ಕರೆದಿದ್ದು, ಚೋಳರು (ತಿಗಳ) ಶೂದ್ರ ರಾಗಲೂ ಸಾದ್ಯವಿಲ್ಲ.

ತಿಗಳ ಜನಾಂಗದ ಲ್ಲಿ ಅಗ್ನಿಕುಲ ಕ್ಷತ್ರಿಯ, ಅಗ್ನಿವಂಶ ಕ್ಷತ್ರಿಯ, ವಹ್ನಿಕುಲ ಕ್ಷತ್ರಿಯ, ಪಾಡಿಯಾಚಿ, ಗೌಂಡರ್, ಧರ್ಮರಾಜ ಕಾಪು, ಪಳ್ಳಿ ಸಮುದಾಯ ಇವೆ. ಇದೆ ಸಮುದಾಯ ಜನ ತಮಿಳುನಾಡಿನಲ್ಲು ಇದ್ದೂ ಪಳ್ಳಿ, ವಣ್ಣಿಯಾರ್, ವನ್ನಿಯಾ, ವನ್ನಿಕುಲ ಕ್ಷತ್ರಿಯ ಎಂದು ಕರೆಯಲಾಗುತ್ತದೆ. ಇದೇ ಸಮುದಾಯ ಆಂದ್ರ, ತೆಲಂಗಾಣ ಪ್ರದೇಶದಲ್ಲಿ ಪಳ್ಳಿ, ಆಗ್ನಿಕುಲ ಕ್ಷತ್ರಿಯ ಎಂದು ಕರೆಯಲಾಗುತ್ತದೆ.

ಇಲ್ಲಿ ಕರ್ನಾಟಕದಲ್ಲಿ ತಿಗಳ, ಪಳ್ಳಿ, ಆಂದ್ರ ಮತ್ತು ತೆಲಂಗಾಣ, ತಮಿಳುನಾಡಿನಲ್ಲಿ ವನ್ನೀಯರ್, ವನ್ನಿಯಾ, ಪಳ್ಳಿ ಎನ್ನುವುದು ಗೌರವಾನ್ವಿತ ಬಿರುದುಗಳು.

ಈ ಬಿರುದಿನಿಂದ ಕರೆಯಲಾಗುವ ಜನರೇ ವಹ್ನಿಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಅಗ್ನಿವಂಶ ಕ್ಷತ್ರಿಯ, ಶಂಬುಕುಲ ಕ್ಷತ್ರಿಯ, ಧರ್ಮರಾಜ ಕಾಪು, ಗೌಂಡರ್, ನಾಯರ್, ನಾಯ್ಕರ್ ಸಮುದಾಯದವರು. ಇವರೆಲ್ಲ ಆಚರಣೆ, ಸಂಪ್ರದಾಯ ಬಹುತೇಕ ಒಂದೇ ರೀತಿಯ ಹೋಲಿಕೆ ಇದೆ.

ಚೋಳರ ಬಗ್ಗೆ ನಮಗೆ ಕ್ರಿ. ಶ 1 ಅಥವ 2ನೆ ಶತಮಾನದಲ್ಲಿ ಕರಿಕಾಲ ಚೊಳನಿಂದ ಸಿಗುತ್ತದೆ. ಸಂಘಂ ಸಾಹಿತ್ಯದಲ್ಲಿ ಸಹ ಸಿಗುತ್ತದೆ. ಈತ ಮಹಾ ಪರಾಕ್ರಮಿ ರಾಜಾಳ್ವಿಕೆ ವಿರುದ್ದ ಸಿಡಿದೆದ್ದು ಸಾಮ್ರಾಜ್ಯ ಸ್ಥಾಪಿಸಿದ ಶೂರ. ಒಂದು ಸಂದರ್ಭದಲ್ಲಿ ಈತನ ಕಾಲಿಗೆ ಬೆಂಕಿ ತಗುಲಿ ಸುಟ್ಟುಕೊಂಡದ್ದರಿಂದ ಕರೀಕಾಲ ಚೋಳ ಎಂದು ಸಹ ಕರೆಯಲಾಗಿದೆ. ಈತ ತಮಿಳುನಾಡಿನ ಉರೆಯುರ್ ನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ಮಾಡಿದ್ದ. ಕೆಲವು ಉಲ್ಲೇಖಗಳಲ್ಲಿ ಮಹಾಭಾರತದ ಸಮಯದಲ್ಲಿಯೂ ಇದ್ದರೆಂದು ಹೇಳಲಾಗಿದೆ. ಅಶೋಕನ ಸ್ಥಂಭದಲ್ಲಿಯು ಚೋಳರ ಬಗ್ಗೆ ಉಲ್ಲೇಖ ಸಿಗುತ್ತದೆ.

ಪುನಃ ನಮಗೆ ಚೋಳರ ಮಾಹಿತಿ ಸಿಗುವುದು ತಂಜಾಊರು ಮತ್ತು ರೆನಾಡು ಪ್ರಾಂತ್ಯದಲ್ಲಿ. ಈ ಎರಡೂ ಪ್ರಾಂತ್ಯದಲ್ಲಿ ಕರಿಕಾಲ ಚೋಳನ ವಂಶಸ್ಥರು ಎಂದು ಹೇಳಿಕೊಂಡು ಆಳ್ವಿಕೆ ಮಾಡಿರುವ ಹಲವಾರು ಕುರುಹುಗಳು ಸಿಗುತ್ತವೆ.

ಚೋಳರು ತಮ್ಮನ್ನು ಸೂರ್ಯವಂಶ ಕ್ಷತ್ರಿಯರೆಂದು ಕರೆದುಕೊಂಡಿದ್ದಾರೆ. ಕರ್ನಾಟಕದ ಗಂಗ, ಚಾಳುಕ್ಯ, ಹೊಯ್ಸಳ, ವಿಜಯನಗರ, ಮೈಸೂರು ಅರಸರು ಶಾಸನಗಳಲ್ಲಿ ಹಾಗು ಕವಿಗಳು ಸಾಹಿತ್ಯಗಳಲ್ಲಿ ಕನ್ನಡದಲ್ಲಿ ತಿಗಳರು ಎಂಬುದಾಗಿ ಕರೆದಿದ್ದಾರೆ. ಅಂದರೆ ತಮಿಳಿನ ಅರಸರನ್ನು ಕನ್ನಡದಲ್ಲಿ ತಿಗಳರೆಂಭುದಾಗಿ ಉಲ್ಲೇಖ ಮಾಡಿದ್ದಾರೆ.

ರೇನಾಡು ಪ್ರಾಂತ್ಯದಲ್ಲಿ ( ಇಂದಿನ ಆಂದ್ರ ದ ಚಿತ್ತೂರು ಪ್ರದೇಶ, ಕರ್ನಾಟಕ ದ ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ) ಕಾಣಸಿಗುತ್ತಾರೆ. ಕ್ರಿ. ಶ 754 ರಲ್ಲೀ ಗಂಗರ ಶ್ರಿಪುರುಷ ನ ಆಳ್ವಿಕೆ ಸಮಯದಲ್ಲಿ ಸಾಮಂತರಾಗಿ ಚೋಳ ಧನಂಜಯ ಆಳ್ವಿಕೆ ಮಾಡಿರುವುದು ಕೋಲಾರ, ಮಧುಗಿರಿ, ಪಾವಗಡ ಪ್ರದೇಶದ ಶಿಲಾಶಾಸನ ಗಳಲ್ಲಿ ಕಾಣಬಹುದು. ಇದನ್ನು ಬಿಟ್ಟರೆ ರೆನಾಡಿನ ಬಾಗದಲ್ಲಿ 10ನೆ ಶತಮಾನದ ವರೆಗೂ ಕಾಣಸಿಗುವುದಿಲ್ಲ.

ತಂಜಾಊರಿನಿಂದ ಆಳ್ವಿಕೆ ಮಾಡಿರುವ ಮತ್ತೊಂದು ಚೋಳರ ಗುಂಪು ನಮಗೆ ಕ್ರಿ. ಶ 846 ರಿಂದ ವಿಜಯಾಲನ ಮುಖಾಂತರ ಕಾಣಿಸುತ್ತಾರೆ. ವಿಜಯಾಲ ನಂತರ ಪರಾಂತಕ -1, ರಾಜಾದಿತ್ಯ, ಗಂದರಾಧಿತ್ಯ, ಅರಿಂಜಯ ನ ವರೆಗೂ ಇವರ ಆಳ್ವಿಕೆ ಸಾಧಾರಣವಾಗಿ ಇರುತ್ತದೆ. ತೊಕ್ಕೊಳಂ ಯುದ್ಧದಲ್ಲಿ ರಾಷ್ಟ್ರಕೂಟರ ಕೃಷ್ಣ ನ ಜೊತೆಯಲ್ಲಿ ಗಂಗರ ಭೂತುಗನು ರಾಜಾಧಿತ್ಯ ನನ್ನು ಕೊಳ್ಳುತ್ತಾನೆ. ಆನಂತರ ಸುಂದರಚೋಳ ಆಳ್ವಿಕೆಗೆ ಬರುತ್ತಾನೆ, ಇವರ ಮಕ್ಕಳಾದ ಆದಿತ್ಯಕರಿಕಾಲ ಚೋಳ,ರಾಜರಾಜ ಚೋಳ ಯುವರಾಜರಾಗಿರುತ್ತಾರೆ. ಈ ಸಂದರ್ಭದಲ್ಲಿ ಚೋಳ ಸಾಮ್ರಾಜ್ಯದಲ್ಲಿ ಅನೇಕ ರಾಜಕೀಯ ಅಸ್ತಿರತೆ ಉಂಟಾಗುತ್ತದೆ, ಇದನ್ನು ಪೂನ್ನಿಯನ್ ಸೆಲ್ವಂ ಎನ್ನುವ ಸಿನಿಮಾದಲ್ಲಿ ತೋರಿಸಿದ್ದಾರೆ.

ದೇಶದಲ್ಲಿ ಕ್ರಿ. ಶ 929 ರಲ್ಲಿಯೆ ಸಂವಿದಾನ, ಪಂಚಾಯತ್ ವ್ಯವಸ್ಥೆ, ನ್ಯಾಯಿಕ ಪದ್ಧತಿ, ಮತ ಚಲಾಯಿಸಿ, ಎಲ್ಲರಿಗೂ ಒಳ್ಳೆಯ ಆಡಳಿತ ವ್ಯವಸ್ಥೆ ತಂದಿದ್ದು ನಮ್ಮ ಚೋಳರು. ಇದರ ಬಗ್ಗೆ ಉತ್ತರಪೇರುರು ಶಾಸನದಲ್ಲಿ ಪರಾಂತಕ ಚೋಳ-1 ಜಾರಿಗೆ ತಂದಿದ್ದಾರೆ.

ತರುವಾಯ ರಾಜರಾಜ ಚೋಳ ಕ್ರಿ. ಶ 985 ರಲ್ಲಿ ಪಟ್ಟಾಭಿಷಕಕ್ಕೆ ಬರುತ್ತಾನೆ. ಕ್ರಿ.ಶ 997 ರಲ್ಲಿ ಕರ್ನಾಟಕದ ನೋಲಂಬವಾಡಿ ಮೇಲೆ ಚಾಲುಕ್ಯರ ಸತ್ಯಾಶ್ರಯ ನ ವಿರುದ್ದ ಯುದ್ದ ಮಾಡುತ್ತಾನೆ, ಯುದ್ದದಲ್ಲಿ ಯುವರಾಜ ನಾಗಿ ರಾಜೇಂದ್ರ ಚೋಳ ಇರುತ್ತಾನೆ. ಮೊದಲಿಗೆ ಸೋತರು ಕೆಲವೇ ದಿನಗಳಲ್ಲಿ ನೊಳಂಬವಾಡಿಯನ್ನು ಚೋಳರು ವಶಕ್ಕೆ ಪಡೆದಿದ್ದಾರೆ. ಆನಂತರ ಕ್ರಿ. ಶ 1004 ರ ಹೊತ್ತಿಗೆ ಕರ್ನಾಟಕ ದ ಗಂಗವಾಡಿಯನ್ನೂ ಸಹ ವಶಕ್ಕೆ ಪಡೆದುಕೊಳ್ಳುತ್ತಾರೆ. ಇದಾದ ಮೇಲೆ ಗಂಗೈಕೊಂಡ ಚೋಳ ಎನ್ನುವ ಬಿರುದು ಚೊಳರಿಗೆ ಲಭ್ಯ ಆಗುತ್ತದೆ. ರಾಜರಾಜ ಚೋಳನು 1014 ರ ವರೆಗೆ ಇದ್ದಾಗ ಆಂದ್ರಪ್ರದೇಶ, ತಮಿಳುನಾಡು, ದಕ್ಷಿಣ ಕರ್ನಾಟಕ , ಕೇರಳದ ಭೂ ಪ್ರದಶದಲ್ಲಿ ಗೆದ್ದು ಸಾಮ್ರಾಟನಾಗುತ್ತಾನೆ. ಈ ಸಂದರ್ಭದಲ್ಲಿ ಆಳ್ವಿಕೆಗೆ ಅನುಕೂಲಕ್ಕಾಗಿ ಪ್ರಾಂತ್ಯವನ್ನು 7 ಮಂಡಲಗಳನ್ನಾಗಿ ರಚಿಸಿಕೊಂಡಿರುತ್ತಾರೆ. ಇದರ ಅಡಿ ನಾಡು, ಒಳನಾಡು ಗಳಾಗಿ ವಿಂಗಡಿಸಿಕೊಂಡು ಚೋಳರ ಅಧಿಕಾರಿಗಳನ್ನೂ ನೇಮಿಸಿಕೊಂಡಿರುತ್ತಾರೆ. ಪಾರಾಂತಕ ನ ಆಳ್ವಿಕೆ ಸಮಯದಲ್ಲಿ ಜಾರಿಗೆ ತಂದಿದ್ದ ಪಂಚಾಯತ್, ನ್ಯಾಯಿಕ ವ್ಯವಸ್ಥೆ ಯನ್ನೂ ಇವರ ಆಳ್ವಿಕೆ ಯ ಎಲ್ಲ ಪ್ರದೇಶಗಳಿಗೂ ಜಾರಿಗೊಳಿಸುತ್ತಾರೆ.

ರಾಜೇಂದ್ರ ಚೋಳ 1014 ರಲ್ಲಿ ಪಟ್ಟಕ್ಕೆ ಬಂದು ದಕ್ಷಿಣ ಭಾರದಾದ್ಯಂತ ಅಲ್ಲದೆ ಇಂಡೋನೇಷ್ಯಾ, ಬಾಂಗ್ಲಾದೇಶ ಇನ್ನಿತರೆ ಇಂದಿನ 11 ದೇಶಗಳಲ್ಲಿ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಾನೆ.

ಚೋಳರು ತಮ್ಮ ಆಡಳಿತ ಅನುಕೂಲಕ್ಕಾಗಿ ನೆರೆಯ ಅರಸರೊಂದಿಗೆ ವೈವಾಹಕ ಸಂಭಂಧಗಳನ್ನು ಚಾಲುಕ್ಯರು, ರಾಷ್ಟ್ರಕೂಟ, ಪಲ್ಲವ, ಛೇರ, ಪಾಂಡ್ಯ ರೊಂದಿಗೆ ಬೆಳೆಸಿರುತ್ತಾರೆ. 1ನೆ ಕುಲೋತುಂಗ ಚೋಳ ಸಹ ಚೋಳ, ಚಾಳುಕ್ಯ ರ ವಂಶದವನು.

1ನೆ ಕುಲೋತುಂಗ ನ ಆಳ್ವಿಕೆ ಸಮಯದಲ್ಲಿಯೇ ಹೊಯ್ಸಳರ ವಿಷ್ಣುವರ್ಧನ ತಲಕಾಡಿನಲ್ಲಿ ಯುದ್ದ ಮಾಡಿ ಗಂಗವಾಡಿ, ನೊಳಂಬ ವಾಡಿಯನ್ನು ಚೊಳರಿಂದ ವಶಪಡಿಸಿ ಕೊಳ್ಳುತ್ತಾನೆ.

ಹೊಯ್ಸಳರು 2ನೆ ನರಸಿಂಹನ ಹೊರೆಗು ಚೋಳರೊಂದಿಗೆ ಆಡಳಿತ ಅನುಕೂಲಕ್ಕೆ ವೈವಾಹಿಕ ಸಂಬಂಧ ಬೆಳೆಸಿ ಕೊಂಡಿರುತ್ತಾರೆ.

ರಾಜೇಂದ್ರ ಚೋಳ -3 ಅಲ್ಲಿಯವರೊ ಚೋಳ ಮತ್ತು ಹೊಯ್ಸಳ ರ ಮೈತ್ರಿ ಹಾಗೇ ಇರುತ್ತದೆ ಇವನ ನಂತರ ಚೋಳರ ಸಾಮ್ರಾಜ್ಯ ಪತನವಾಗಿ ಪಾಂಡ್ಯರು ಅಧಿಕಾರ ಹಿಡಿಯುತ್ತಾರೆ.

ಮತ್ತೊಂದು ಕಡೆ ರೇನಾಡಿನ ಚೋಳರು ಜಟಬ್ರಹ್ಮ ಚೋಳನು 10 ನೆ ಶತಮಾನದ ಕೊನೆ 11ನೆ ಶತಮಾನದ ಆರಂಭದಲ್ಲಿ ಆಂಧ್ರದಿಂದ ತುಮಕೂರು, ಕೋಲಾರ ಭಾಗದಲ್ಲಿ ಆಳ್ವಿಕೆ ಮಾಡುತ್ತಾರೆ, ನಂತರ ನಿಡುಗಲ್ ಗೆ ರಾಜಧಾನಿ ಬದಲಿಸಿಕೊಂಡು 15ನೆ ಶತಮಾನದ ಅಂತ್ಯದ ವರೆಗೂ ಆಳ್ವಿಕೆ ನಡೆಸಿದ್ದಾರೆ. ಇವರಲ್ಲಿ ಪ್ರಸಿದ್ದ ದೊರೆ ಇರಂಗೊಳ ಚೋಳ . ಈತ ಸಹ ಕರಿಕಾಲ ಚೋಳನ ವಂಶಸ್ಥರು ಎಂದು ಹೇಳಿಕೊಂಡಿದ್ದು, ಇವರ ನಂತರ ಬರುವ ಅರಸರು ಇರೂಂಗೊಳ ಚೋಳ ನ ವಂಶಸ್ತ ರು ಎಂದು ಹೇಳಿಕೊಂಡಿದ್ದಾರೆ.

ಇವರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಸಾವಿರಾರು ದೇಗುಲಗಳನ್ನು ಕಟ್ಟಿಸಿದ್ದಾರೆ, ಇವರ ಬಗ್ಗೆ ಸಾವಿರಾರು ಶಾಸನಗಳು ತಮಿಳಿನಲ್ಲಿ, ಗ್ರಂಥ ಲಿಪಿಯಲ್ಲಿ, ಕನ್ನಡದಲ್ಲೂ ಲಭ್ಯ ಇವೆ. ಇವರ ಆಳ್ವಿಕೆಯಲ್ಲಿ ಸಮಾಜದಲ್ಲಿ ಜನರ ಹಿತಕ್ಕಾಗಿ ಅನೇಕ ಬದಲಾವಣೆ ತಂದಿದ್ದಾರೆ, ಆಡಳಿತ ಅತ್ಯಂತ ಉತ್ಕೃಷ್ಟ, ಗುಣಮಟ್ಟವಾಗಿತ್ತು ಎನ್ನಬಹುದು.

ರಾಜ ರಾಜ ಚೋಳ 3 ಕೊನೆಯ ಅವಧಿಯಲ್ಲಿ ಈ ಸಮುದಾಯದ ಜನರು ಅನೇಕ ಸಣ್ಣ ಸಣ್ಣ ಸಂಸ್ಥಾನ ಕಟ್ಟಿಕೊಂಡು ಆಳ್ವಿಕೆ ಮಾಡಿದ್ದಾರೆ. ಅವುಗಳೆಂದರೆ ಚೆದಿರಾಯರ್, ಪಲ್ಲವರಾಯಾರ್, ಶಂಬುರಾಯಾರ್, ಕಡವರಾಯಾರ್, ಕಂಚಿರಾಯರ್ ಇತ್ಯಾದಿ. Madhusudhan K R (ಚರ್ಚೆ) ೨೨:೧೧, ೧೪ ಡಿಸೆಂಬರ್ ೨೦೨೨ (IST)Reply

Return to "ಹೊಯ್ಸಳ" page.