ಚರ್ಚೆಪುಟ:ಹೃದಯ ಸ್ತಂಭನ

Source Text: A cardiac arrest is different from (but may be caused by) a heart attack, where blood flow to the muscle of the heart is impaired

Translation is : ಹೃದಯ ಸ್ತಂಭನವು ಹೃದಯಾಘತಕ್ಕಿಂತ ಭಿನ್ನವಾಗಿದ್ದು (ಆದರೆ ಹೃದಯಾಘಾತಕ್ಕೆ ಕಾರಣವೂ ಆಗಬಹುದು), ಹೃದಯದ ಸ್ನಾಯುಭಾಗದಲ್ಲಿನ ರಕ್ತಸಂಚಾರದ ಏರಿಳಿತವು ದುರ್ಬಲವಾಗುತ್ತದೆ.

That can be written like this: ಹೃದಯ ಸ್ತಂಭನ ಹಾಗೂ ಹೃದಯಾಘಾತಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ (ಹೃದಯಾಘಾತವೂ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು). ಹೃದಯಾಘಾತಕ್ಕೆ ಮುಖ್ಯ ಕಾರಣ, ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತನಾಳಗಳ ಅಸಮರ್ಪಕ ಕಾರ್ಯನಿರ್ವಹಣೆ. (Its bit comprehensible for common readers than the previous translation)


Source Text: Arrested blood circulation prevents delivery of oxygen to the body. Lack of oxygen to the brain causes loss of consciousness, which then results in abnormal or absent breathing. Brain injury is likely if cardiac arrest goes untreated for more than five minutes.[3][4][5] For the best chance of survival and neurological recovery, immediate and decisive treatment is imperative.

Translation is : ರಕ್ತಸಂಚಾರದಲ್ಲಿ ಸ್ತಂಭನವಾದಾಗ ದೇಹಕ್ಕೆ ಆಮ್ಲಜನಕವು ಸರಬರಾಜಾಗುವುದನ್ನು ತಡೆಯುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಿಕ ಸರಬರಾಜು ಪ್ರಮಾಣದಲ್ಲಿ ಕಡಿಮೆಯಾಗಿ ಪ್ರಜ್ಞೆ ಹೋಗುವುದಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಉಸಿರಾಟ ಪ್ರಮಾಣವು ಹೆಚ್ಚಾಗುತ್ತದೆ ಅಥವಾ ನಿಲ್ಲುತ್ತದೆ. ಈ ರೀತಿಯ ಹೃದಯ ಸ್ತಂಭನ ಉಂಟಾದಾಗ ಐದು ನಿಮಿಷಗಳ ವರೆಗೆ ಚಿಕಿತ್ಸೆ ನೀಡದೇ ಹೋದಲ್ಲಿ ಬ್ರೈನ್ ಇಂಜುರಿ (ಮೈದುಳು ನಿಷ್ಕ್ರಿಯ)ವಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಆ ರೋಗಕ್ಕೆ ತುತ್ತಾದವರನ್ನು ಬದುಕಿಸಲು ಮತ್ತು ನರಶಾಸ್ತ್ರೀಯ ಗುಣಮುಖಕ್ಕೆ ತಕ್ಷಣದ ಮತ್ತು ನಿರ್ಧಿಷ್ಟವಾದ ಚಿಕಿತ್ಸೆ ಅತಿ ಅವಶ್ಯಕವಾಗಿದೆ.

This can be written like this :- ರಕ್ತ ಸಂಚಾರ ಸ್ಥಗಿತಗೊಂಡಾಗ ದೇಹಕ್ಕೆ ದೊರೆಯುವ ಆಮ್ಲಜನಕದ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗುತ್ತದೆ. ಮೆದುಳಿನಲ್ಲಿ ಆಮ್ಲಜನಕದ ಕೊರತೆಯುಂಟಾಗಿ ಅದು ನಂತರ ಪ್ರಜ್ಞಾಹೀನತೆಗೆ ಹಾಗೂ ಅಸಹಜ ಉಸಿರಾಟ ಅಥವಾ ಉಸಿರಾಟವೇ ಇಲ್ಲದಿರುವ ಸನ್ನಿವೇಶಕ್ಕೆ ದಾರಿ ಮಾಡಿಕೊಡುತ್ತದೆ. ಐದು ನಿಮಿಷಗಳ ಒಳಗೆ ಚಿಕಿತ್ಸೆ ನೀಡದಿದ್ದರೆ ಮೆದುಳಿಗೆ ಘಾಸಿಯಾಗುವ ಸಾಧ್ಯತೆಯೂ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಸಿಲುಕಿದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹಾಗೂ ಆತ ನರಶಾಸ್ತ್ರೀಯ ಚೇತರಿಸಿಕೊಳ್ಳುವಂತೆ ಮಾಡಲು ಸೂಕ್ತ ಹಾಗೂ ನಿರ್ಣಾಯಕ ಚಿಕಿತ್ಸೆ ಅನಿವಾರ್ಯ. (Please, use the proper terms from that only readability can be increased)


Source Text: [1] The treatment for cardiac arrest is cardiopulmonary resuscitation (CPR) to provide circulatory support, followed by defibrillation if a shockable rhythm is present. If a shockable rhythm is not present after CPR and other interventions, clinical death is inevitable.

Your Translation is: ಹೃದಯ ಸ್ತಂಭನಕ್ಕೆ ಚಿಕಿತ್ಸೆಯೆಂದರೆ ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧರಕ್ತನಾಳವು (ಸಿಪಿಆರ್- (ಕಾರ್ಡಿಯೋಪಲ್ಮೋನರಿ ರೆಸಸಿಟೇಶನ್) ಗಾಬಿರಯುತ ಹೃದಯ ಬಡಿತ ಅಥವಾ ಕಂಪನವನ್ನು ಅನುಸರಿಸಿದರೆ ಸುಗಮ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ. ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧ ರಕ್ತನಾಳ ಮತ್ತು ಕೆಲ ಅಂಶಗಳ ಮಧ್ಯಪ್ರವೇಶದಿಂದ ಒಂದು ವೇಳೆ ಗಾಬರಿಯುತ ಹೃದಯ ಕಂಪನವು ಆ ಕ್ಷಣದಲ್ಲಿ ಇಲ್ಲದೇ ಹೋದಲ್ಲಿ ವೈದ್ಯಕೀಯ ಮೃತ್ಯು ಅನಿವಾರ್ಯವಾಗುತ್ತದೆ.

This Can be written like this: ಹೃದಯ ಸ್ತಂಭನಕ್ಕೆ ನೀಡಬಹುದಾದ ಚಿಕಿತ್ಸೆ ಎಂದರೆ ಕಾರ್ಡಿಯೋಪಲ್ಮನರಿ ರೆಸಸಿಟೇಷನ್‌ (ಸಿಪಿಆರ್‌). ಸಿಪಿಆರ್‌ ನಂತರ ಆಘಾತಕಾರಿ ಕಂಪನವಿದ್ದರೆ ಡಿಫೈಬ್ರಿಲೇಷನ್‌ ಚಿಕಿತ್ಸೆಯ ನಂತರ ರಕ್ತ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಈ ಚಿಕಿತ್ಸೆ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಸಿಪಿಆರ್‌ ನಂತರ ಆಘಾತಕಾರಿ ಕಂಪನವಿಲ್ಲದಿದ್ದರೆ ಮತ್ತು ಇನ್ನಿತರ ಅಡಚಣೆಗಳಿದ್ದರೆ ಸಾವು ಕಟ್ಟಿಟ್ಟ ಬುತ್ತಿ. (Please careful while translating such bits. Any negligence can mislead the reader)


Source Text: Implantable cardioverter defibrillators

Your Translation is : ಇಂಪ್ಲಿಮೆಂಟೆಬಲ್ ಕಾರ್ಡಿಯೊವರ್ಟರ್ ಡಿಫೈಬ್ರಿಲೆಟರ್

That should be like this: "ಇಂಪ್ಲ್ಯಾಂಟಬಲ್‌" ಕಾರ್ಡಿಯೊವರ್ಟರ್‌ ಡಿಫೈಬ್ರಿಲೇಟರ್‌ (It is not ಇಂಪ್ಲಿಮೆಂಟೆಬಲ್‌‌. It is ಇಂಪ್ಲ್ಯಾಂಟಬಲ್‌‌)

Source Text: If possible, recognition of illness before the patient develops a cardiac arrest will allow the rescuer to prevent its occurrence. Early recognition that a cardiac arrest has occurred is key to survival - for every minute a patient is in cardiac arrest, their chances of survival drop by roughly 10%.[7]

Your Translation is like this: ಸಾಧ್ಯವಿದ್ದರೇ, ರೋಗಿಗೆ ಹೃದಯ ಸ್ತಂಭನ ಗೋಚರವಾಗುವ ಮೊದಲೇ ಕಾಯಿಲೆ ಗುರುತಿಸಿ ಇದರ ಸಂಭವನೀಯತೆಯನ್ನು ತಪ್ಪಿಸಿ ಕಾಪಾಡುವ ಅವಕಾಶ ನೀಡಬಹುದು. ಹೃದಯ ಸ್ತಂಭನ ಮೊದಲೇ ಗುರುತಿಸುವುದು ಹೃದಯ ಸ್ತಂಭನದಲ್ಲಿ ರೋಗಿಗೆ ಬದುಕುಳಿಯಲು ಪ್ರತಿಯೊಂದು ನಿಮಿಷವು ಮಹತ್ವದ ಘಟನೆಯಾಗಿರುತ್ತದೆ-ಸುಮಾರು 10% ರಷ್ಟು ಅದರಿಂದ ಬದುಕುಳಿಯುವ ಅವಕಾಶ ಕಡಿಮೆ ಇದುತ್ತದೆ.[೪]

That can be written like this: ಸಾಧ್ಯವಾದರೆ ರೋಗಿಗೆ ಹೃದಯ ಸ್ತಂಭನ ಸಂಭವಿಸುವುದಕ್ಕಿಂತ ಮುಂಚಿತವಾಗಿಯೇ ಅದರ ಮುನ್ಸೂಚನೆಯ ಅಸ್ವಸ್ಥತೆಯನ್ನು ಗುರುತಿಸುವುದರಿಂದ ಆ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಕಾಪಾಡುವ ಅವಕಾಶ ಸಾಕಷ್ಟಿರುತ್ತದೆ. ಎಷ್ಟು ಮುಂಚಿತವಾಗಿ ಹೃದಯ ಸ್ತಂಭನದ ಮುನ್ಸೂಚನೆಗಳನ್ನು ಗ್ರಹಿಸಲು ಸಾಧ್ಯವೋ ಅಷ್ಟು ಒಳ್ಳೆಯದು. ಏಕೆಂದರೆ, ವ್ಯಕ್ತಿಯೊಬ್ಬ ಹೃದಯ ಸ್ತಂಭನಕ್ಕೀಡಾದ ಮೇಲೆ ಆತ ಬದುಕುಳಿಯುವ ಸಾಧ್ಯತೆ ಪ್ರತಿ ನಿಮಿಷವೊಂದಕ್ಕೆ ಶೇ.10ರಷ್ಟು ಕುಸಿಯುತ್ತಾ ಹೋಗುತ್ತದೆ. (Please note that, without damaging the intention of the source text you can make some alteration in translation. So that you can make translation more read worthy and bring it a sense of nativity.)

Start a discussion about ಹೃದಯ ಸ್ತಂಭನ

Start a discussion
Return to "ಹೃದಯ ಸ್ತಂಭನ" page.