ಚರ್ಚೆಪುಟ:ವಿನಯಾ ಪ್ರಸಾದ್

ಡಾ.ವಿನಯಾ :

        ಕಾವ್ಯ, ಲಲಿತ ಪ್ರಬಂಧ, ಸಣ್ಣ ಕತೆಗಳಂಥ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿರುವ ಡಾ.ವಿನಯಾ ಪ್ರಸ್ತುತ ಕನ್ನಡದ ಸ್ಥಿತಿಗತಿಗಳನ್ನು ಸೂಕ್ಷ್ಮಗ್ರಹಿಕೆಯಲ್ಲಿ ಬರವಣಿಗೆಗೆ ಇಳಿಸಿದ್ದಾರೆ.  ಉ.ಕನ್ನಡದ ಮಾಸ್ಕೇರಿಯಲ್ಲಿ ಜನಿಸಿದ ಇವರು ಹಾವೇರಿ ಜಿಲ್ಲೆಯ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಸವಣೂರಿನಲ್ಲಿ ವೃತ್ತಿ ಬದುಕನ್ನು ಆರಂಭಿಸಿ ಪ್ರಸ್ತುತ ಸರಕಾರಿ ಮಹಾವದ್ಯಾಲಯ ಅಳ್ನಾವರದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೆವೆಸಲ್ಲಿಸುತ್ತಿದ್ದಾರೆ.  
        ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಹಾಗೂ 'ಕನ್ನಡದಲ್ಲಿ ಮಹಿಳಾ ಸಾಹಿತ್ಯದ ವಿಕಾಸದ ಘಟ್ಟಗಳು' ಸಂಶೋಧನಾ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.  'ಬಾಯಾರಿಕೆ', 'ನೂರು ಗೋರಿಯ ದೀಪ' ಇವರನ್ನು ಮುಂಚೂಣಿಗೆ ತಂದ ಕೃತಿಗಳು, ಪು.ತಿ.ನ. ಕಾವ್ಯ ಪ್ರಶಸ್ತಿ, ಸಾರಂಗ ಮಠ ದತ್ತಿ ಅಂಡಾಳ್ ಸನ್ಮಾನ್, ರತ್ನಮ್ಮ ಹೆಗ್ಗಡೆ ದತ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದವರು.  
        ಇವರ ಚೊಚ್ಚಲ ಕಥಾಸಂಕಲನ 'ಊರ ಒಳಗಣ ಬಯಲು' ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೦೮ನೇ ಸಾಲಿನ ಸಣ್ಣಕಥೆ ಪ್ರಕಾರದ ಪುಸ್ತಕ ಬಹುಮಾನವನ್ನು ಪಡೆದಿದೆ.

Start a discussion about ವಿನಯಾ ಪ್ರಸಾದ್

Start a discussion
Return to "ವಿನಯಾ ಪ್ರಸಾದ್" page.