ಚರ್ಚೆಪುಟ:ರಾಸಾಯನಿಕ ಗೊಬ್ಬರ
ನಿಮ್ಮ ಲೇಖನ ಬಲು ಉತ್ತಮವಾಗಿದೆ. ರಾಸಾಯನಿಕ ಗೊಬ್ಬರದ ಬಗ್ಗೆ ಹಲವಾರು ವಿಷಯ ತಿಳಿದುಕೊ೦ಡೆ, ಇದೆ ರೀತಿ ಇನ್ನಷ್ಟು ಲೇಖನಗಳನ್ನು ವಿಕಿಪೀಡಿಯಗೆ ಕೊಡುಗೆ ನೀಡಿ.--Kavana sreenivas (ಚರ್ಚೆ) ೧೨:೨೩, ೧೪ ಜನವರಿ ೨೦೧೬ (UTC)
ಈ ಲೇಖನ ಚೆನ್ನಾಗಿದೆ. ಆದರೆ ಈ ಚರ್ಚೆ ಹೆಸರಿಗೆ ಸಂಬಂಧಿಸಿದು. ರಾಸಾಯನಿಕ ಗೊಬ್ಬರ (ಉದಾಹರಣೆಗೆ ವಿಕ್ಷನರಿ ಸೂಚಿಸುವಂತೆ) inorganic fertilizer, synthetic fertilizer, chemical fertlizer, inorganic manure ಗಳಿಗೆ ಅನ್ವಯಿಸುತ್ತದೆ. ಇಂಗ್ಲೀಶ್‌ನಲ್ಲಿ manure ನ್ನು artificial manure and organic manure ಎರಡಕ್ಕೂ Oxford Dictionaries ಅನ್ವಯಿಸುತ್ತದೆ. ಆಸಕ್ತಿದಾಯಕ ಅಂಶವೆಂದರೆ ಇನೊಂದು ಸಮಾನಾರ್ಥಕ ಪದ fertilizer ಎಂಬುದಕ್ಕೂ ಇದೇ ಅರ್ಥವಿದೆ. Fertilizer (Fertiliser) ಪದಕ್ಕೆ Oxford dictinaries (web) –"A chemical or natural substance added to soil or land to increase its fertility" ಅರ್ಥ ಎನ್ನುತ್ತದೆ. ವಿಕಿಪೀಡಿಯದ ಇಂಗ್ಲೀಶ್ Fertilizer ಬಗೆಗಿನ ಪುಟ ಆರಂಭದಲ್ಲಿ ಇದೇ ಅರ್ಥವನ್ನು ಹೇಳುತ್ತದೆ ಆದರೆ ಕೇವಲ ಆಧುನಿಕ ರಾಸಾಯನಿಕ ಗೊಬ್ಬರಗಳ ಬಗೆಗೆ ಮಾತ್ರ ಮಾಹಿತಿ ನೀಡುತ್ತದೆ. ಆದರೆ ವಿಕಿಪೀಡಿಯಾದ Manure ಪುಟ "In the past, the term “manure” included inorganic fertilizers, but this usage is now very rare." ಎಂದು ಸರಿಯಾಗಿಯೇ ಗುರುತಿಸುತ್ತದೆ. ಈ ಪುಟವನ್ನೂ ಸಹ ಸರಿಯಾಗಿಯೇ ಅದೇ ಪುಟಕ್ಕೆ (Manure) ಲಿಂಕ್ ಮಾಡಲಾಗಿದೆ.
ಕನ್ನಡದಲ್ಲಿ "ಭೂಮಿ ಅಥವಾ ಮಣ್ಣಿಗೆ ಅದರ ಫಲವತ್ತತೆಯನ್ನು ಹೆಚ್ಚಿಸಲು ಸೇರಿಸುವ ಪದಾರ್ಥ"ಕ್ಕೆ ಎರಡು ಪದಗಳು ಇಲ್ಲ, ಇರುವುದು ಒಂದೇ ಪದ ಗೊಬ್ಬರ (ಕೊಟ್ಟಿಗೆ ಗೊಬ್ಬರ, ಸಗಣಿ ಗೊಬ್ಬರ, ತಿಪ್ಪೆ ಗೊಬ್ಬರ ಮುಂತಾದ ಬಳಕೆ). ಹೀಗಾಗಿ ಗೊಬ್ಬರ ಪದವನ್ನು ಸಾವಯವ ಗೊಬ್ಬರಗಳಿಗೆ (ಪ್ರಾಣಿ, ಸಸ್ಯಜನ್ಯ ತ್ಯಾಜದಿಂದ ಉಂಟಾದ ಗೊಬ್ಬರ- ಎಲೆಗೊಬ್ಬರ, ಎರೆಹುಳು ಗೊಬ್ಬರ ಮುಂತಾದವು) ಬಳಸಲಾಗುತ್ತಿದೆ ಮತ್ತು ರಾಸಾಯನಿಕ ಗೊಬ್ಬರಗಳೆಂದು ಆಧುನಿಕ ಕೃತಕ ಗೊಬ್ಬರಗಳಾದ ಎನ್‌ಪಿಕೆ (ಸಾರಜನಕ, ರಂಜಕ, ಪೊಟಾಶ್) ಮತ್ತು ಸಣ್ಣ ಪೋಷಕಾಂಶಗಳಿಗೆ (ಅಂದರೆ ಮ್ಯಾಕ್ರೊ ಮತ್ತು ಮೈಕ್ರೊ ಪೊಷಕಾಂಶಗಳೆರಡಕ್ಕೂ) ಬಳಸಲಾಗುತ್ತಿದೆ. ಇಲ್ಲಿ ಸಾವಯವದ ಇಂಗ್ಲೀಶ್ ಸಂವಾದಿ ಪದ organic ಮತ್ತು ರಾಸಾಯನಿಕದ ಬದಲು ಬಳಸುವ ಇಂಗ್ಲೀಶ್ ಪದ inorganic ಅಥವಾ chemical. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಶ್ ಕನ್ನಡ ನಿಘಂಟು fertilzer ಪದಕ್ಕೆ ಕೊಡುವ ಒಂದು ಅರ್ಥ "(ಮುಖ್ಯವಾಗಿ ರಾಸಾಯನಿಕ ಯಾ ಕೃತಕ) ಗೊಬ್ಬರ" ಎಂದು. ಕಣಜದಲ್ಲಿಯೂ ಇದೇ ಅರ್ಥದಲ್ಲಿ ಬಳಸಲಾಗುತ್ತಿದೆ (ನೋಡಿ ಕಣಜ ಸಾವಯವ-ಕೃಷಿ-ಒಂದು-ವಿಶ್ಲೇಷಣೆ (1)).
ಈ ಹಿನ್ನೆಲೆಯಲ್ಲಿ ಈ ಪುಟದ ಹೆಸರನ್ನು ಗೊಬ್ಬರ ಅಥವಾ ಸಾವಯವ ಗೊಬ್ಬರ ಎಂದು ಬದಲಿಸುವುದು ಸರಿಯಾಗುತ್ತದೆ ಎಂದು ನನ್ನ ಅನಿಸಿಕೆ. ರಾಸಾಯನಿಕ ಗೊಬ್ಬರ ಹೆಸರನ್ನು ಕೃತಕ, ರಾಸಾಯನಿಕ, ಸಾವಯವವಲ್ಲದ ಗೊಬ್ಬರಗಳಿಗೆ ಮೀಸಲಾಗಿಡುವುದು ಒಳಿತು (ಇದು ಇಂಗ್ಲೀಶ್ ವಿಕಿಪೀಡಿಯದ Fertilizers ಪುಟಕ್ಕೆ ಸಂವಾದಿಯಾಗಬಹುದು). ಪ್ರದೀಪ್ ಬೆಳಗಲ್ (ಚರ್ಚೆ) ೧೨:೧೮, ೨೫ ನವೆಂಬರ್ ೨೦೧೬ (UTC)
Rasayanika gobaragalida aguva dshparinama
ಬದಲಾಯಿಸಿPrabanda 2409:408C:BEB0:3AB5:A81C:823D:7C1:248B ೧೪:೦೯, ೧೦ ನವೆಂಬರ್ ೨೦೨೪ (IST)
Rasayanika gobaragaku aogyda meme biruva dshoatinamagalu
ಬದಲಾಯಿಸಿRasayanika gobaragala 2409:408C:BEB0:3AB5:A81C:823D:7C1:248B ೧೪:೧೧, ೧೦ ನವೆಂಬರ್ ೨೦೨೪ (IST)