ಚರ್ಚೆಪುಟ:ಮೊದಲ ತೇದಿ (ಚಲನಚಿತ್ರ)

ಮಧ್ಯಮ ವರ್ಗದ, ತಿಂಗಳ ಸಂಬಳದಿಂದ ಸಂಸಾರ ತೂಗಿಸುವ ಮನೆಗಳಲ್ಲಿ ಕಂಡು ಬರುವ ಸರ್ವ ಕಾಲಿಕ ಸತ್ಯವನ್ನು ಬಹು ಸುಂದರವಾಗಿ ಈ ಹಾಡಿನ ಮೂಲಕ ಚಿ ಸದಾಶಿವಯ್ಯನವರು ತಿಳಿಯಪಡಿಸಿದ್ದಾರೆ. ಈ ಹಾಡಿನ ಸಾಹಿತ್ಯ ಹೀಗಿದೆ

ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ ತೇದಿ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ ಸಂಬಳ ತೇದಿ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ

ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು ಹರಕೆ ಕಾಸು ಕೂಡಿಸುವರು ತೇದಿ ಒಂದಕೆ ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು ಹರಕೆ ಕಾಸು ಕೂಡಿಸುವರು ತೇದಿ ಒಂದಕೆ

ಭಕುತಿಯಿಂದ ಕೂಡಿಸಿಟ್ಟ ಗಿಂಡಿಯ ಕುರಿಗಂಡಿಯ ಕೊಂಚ ಅಗಲಿಸುತ್ತ ಆಡಿಸುವರು ಇಪ್ಪತ್ತೊಂದಕೆ

ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು ಹರಕೆ ಕಾಸು ಕೂಡಿಸುವರು ತೇದಿ ಒಂದಕೆ

ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ ಟಿಕೆಟ್ ಸಿಕ್ಕದು ಒಂದಕೆ ಥೇಟರ್ ಖಾಲಿ ಹೊರಗಡೆ ಗೇಲಿ ತೇದಿ ಇಪ್ಪತ್ತೊಂದಕೆ ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ ಟಿಕೆಟ್ ಸಿಕ್ಕದು ಒಂದಕೆ ಥೇಟರ್ ಖಾಲಿ ಹೊರಗಡೆ ಗೇಲಿ ತೇದಿ ಇಪ್ಪತ್ತೊಂದಕೆ

ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ

ಹೆಂಡತಿ ಮಕ್ಕಳೆಲ್ಲ ಕುಣಿದಾಡುವರು ಒಂದಕೆ ಕಿತ್ತಾಡಿ ಕೈ ಮಾಡಿ ತೇದಿ ಇಪ್ಪತ್ತೊಂದಕೆ ಗೆಳೆಯ ಕೂಟವೆಲ್ಲ ಒಂದಕೆ ಬೀದಿ ನಾಯಿ ಸಹ ಮಿಟ್ಟದದು ಇಪ್ಪತ್ತೊಂದಕೆ ಗೆಳೆಯ ಕೂಟವೆಲ್ಲ ಒಂದಕೆ ಬೀದಿ ನಾಯಿ ಸಹ ಮೂಸದದು ಇಪ್ಪತ್ತೊಂದಕೆ ಉಂಡಾಟವೇ ತೇದಿ ಒಂದಕೆ ಖಾಲಿ ಭಂಡಾಟವೇ ಇಪ್ಪತ್ತೊಂದಕೆ

ಹಾಡಿನ ಸಾಹಿತ್ಯ

ಬದಲಾಯಿಸಿ

ಹಾಡಿನ ಸಾಹಿತ್ಯ ಇಲ್ಲಿ ಸಂಪೂರ್ಣವಾಗಿ ಹಾಕುವ ಹಾಗಿಲ್ಲ - ಹಾಡಿನ ಸಾಹಿತ್ಯ ಕಾಪಿರೈಟೆಡ್ ಆಗಿರುತ್ತಾದಾದ್ದರಿಂದ ನಿಮ್ಮ ಬಳಿ ಉಪಯೋಗಿಸುವ ಅನುಮತಿ ಇದ್ದಲ್ಲಿ ಮಾತ್ರ ಇಲ್ಲಿ ಹಾಕಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 05:30, ೬ April ೨೦೦೬ (UTC)

Return to "ಮೊದಲ ತೇದಿ (ಚಲನಚಿತ್ರ)" page.