ಚರ್ಚೆಪುಟ:ಮದಕರಿ ನಾಯಕ

  • ಆಗಿನ ಸಂಸ್ಥಾನ ಚಿತ್ರದುರ್ಗ,ದ ಭಾರತದಲ್ಲಿದ್ದ ಕಡೆಯ ಆಳರಸನಾಗಿದ್ದ.[೧] ಹೈದರ್ ಅಲಿ, ಮೈಸೂರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಾಯಕ ಚಿತ್ರದುರ್ಗದ ಮೇಲಿನ ಹಿಡಿತ ಕಳೆದುಕೊಳ್ಳುತ್ತಾನೆ. : - ಮೈಸೂರಿನ ಅಂದಿನ ರಾಜ ಹೈದರ್‌ ಅಲಿ ಚಿತ್ರದುರ್ಗಕ್ಕೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮದಕರಿಯ ಅವಸಾನವಾಗುತ್ತದೆ. ಮದಕರಿ ಮೈಸೂರಿನ ಮೇಲೆ ಎಂದಿಗೂ ಮುತ್ತಿಗೆ ಹಾಕಿರಲಿಲ್ಲ.
  • ಮದಕರಿ ನಾಯಕನ ಆಳ್ವಿಕೆಯಲ್ಲಿ, ಚಿತ್ರದುರ್ಗ ನಗರವು ಹೈದರ್ ಅಲಿಯ ಆಕ್ರಮಣಕಾರಿ ಸೈನ್ಯದಿಂದ ಮುತ್ತಿಗೆ ಹಾಕಲ್ಪಡುತ್ತದೆ - ವಾಕ್ಯ ರಚನೆ ಸಮರ್ಪಕವಾಗಿಲ್ಲ. (ಮದಕರಿಯ ಆಳ್ವಿಕೆಯಲ್ಲಿದ್ದ ಚಿತ್ರದುರ್ಗ ನಗರವನ್ನು ಹೈದರ್‌ ಅಲಿಯ ಸೇನೆ ಮುತ್ತಿಗೆ ಹಾಕುತ್ತದೆ)
  • ಆ ಕಿಂಡಿಯ ಸಮೀಪ ಕಾವಲು ಕಾಯುತ್ತಿದ್ದ ಕೋಟೆಯ ಸೈನಿಕ, ತನ್ನ ಹೆಂಡತಿ ಓಬವ್ವಳನ್ನು ಕಿಂಡಿ ಕಾಯಲು ನೇಮಿಸಿ ಊಟಮಾಡಲು ಮನೆಗೆ ಹೋಗಿರುತ್ತಾನೆ.- ಕಾವಲುಗಾರ ಊಟಕ್ಕೆ ಹೋಗಿರುತ್ತಾನೆ ಅಷ್ಟೇ. ಯಾರನ್ನೂ ಕಾವಲು ಕಾಯಲು ನೇಮಿಸಿರುವುದಿಲ್ಲ.
  • ಈ ಕಿಂಡಿಯು, ತಣ್ಣೀರು ದೋಣಿಯ ಪಕ್ಕದಲ್ಲಿ ಈ ಕಥೆಯ ಹೆಗ್ಗುರುತಾಗಿ ಹಾಗೆಯೇ ಉಳಿದುಕೊಂಡಿದೆ - ತಣ್ಣೀರು ದೋಣಿಯ ಪಕ್ಕದಲ್ಲಿರುವ ಈ ಕಿಂಡಿಯು ಈ ಕಥೆಯ ಹೆಗ್ಗುರುತಾಗಿ ಈಗಲೂ ಉಳಿದುಕೊಂಡಿದೆ
  • ತಿಮ್ಮಣ್ಣ ನಾಯಕನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ ವಿಜಯನಗರದ ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ. - ತಿಮ್ಮಣ್ಣ ನಾಯಕನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ ವಿಜಯನಗರದ ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ಕಗ್ಗತ್ತಲ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗುವ ವಿಲಕ್ಷಣ ಸಾಹಸವೊಂದಕ್ಕೆ ಕೈ ಹಾಕುತ್ತಾನೆ
  • ಇವನು ಹರಿಹರಕ್ಕೆ ಹೋಗಿ ಅದು ಮೊಹಮಡನ್ ರಿಂದ ಆಕ್ರಮಿತವಾಗುವುದನ್ನು ತಪ್ಪಿಸಬೇಕಾಗುತ್ತದೆ - ಕನ್ನಡದಲ್ಲಿ ಮೊಹಮಡನ್‌‌ರನ್ನು ಮುಸಲ್ಮಾನ ರಾಜರು ಇಲ್ಲವೇ ತುರ್ಕರು ಎಂದು ಕರೆಯಲಾಗುತ್ತದೆ.

Start a discussion about ಮದಕರಿ ನಾಯಕ

Start a discussion
Return to "ಮದಕರಿ ನಾಯಕ" page.