ಚರ್ಚೆಪುಟ:ಭಾರತದ ವಿಭಜನೆ
ವಿಭಜನೆಯ ಬೀಜ ಬಿತ್ತನೆ
ಬದಲಾಯಿಸಿಈ ಅನುವಾದದ ಮೂಲ ಲೇಖನ ಯಾವುದೆಂದು ತಿಳಿಯದು. ಏನೇ ಆದರೂ ಮೂಲಲೇಖನ ಸತ್ಯವನ್ನು ಮರೆಮಾಚಿದೆ ಎಂದು ತೊರುತ್ತದೆ. ಹಿಂದೂಗಳು (ಅಥವಾ ಕಾಂಗ್ರೆಸ್ಸಿಗರು) ಮತೀಯವಾದಿಗಳಾಗಿದ್ದರು ಹಾಗು ವಿಭಜನೆಯನ್ನು ಅವರು ಬಯಸಿದ್ದರು ಎನ್ನುವ ಅರ್ಥಛಾಯೆ ಈ ಲೇಖನದಲ್ಲಿದೆ.ಎರಡನೆಯದಾಗಿ Direct Action Day ಕರೆ ಕೊಟ್ಟವರು ಜಿನ್ನಾ. ಇದು ಅನುವಾದದಲ್ಲಿ ಹೇಳಿದಂತೆ ಶಿಸ್ತಿನ ಕರೆ ಅಲ್ಲ. ಆದರೆ ನೇರ ಕಾರ್ಯಾಚರಣೆಯ ಕರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಭಯೋತ್ಪಾದನೆಯ ಕರೆ. ಲೇಖನದಲ್ಲಿ ಹೇಳಿದಂತೆ ೫೦೦೦ ಜನರು ಮೊದಲ ದಿನವೇ ಈ ಕರೆಗೆ ಬಲಿಯಾದರು. ಲೇಖನದಲ್ಲಿ ಹೇಳದೆ ಇರುವ, ಆದರೆ documentsಗಳಲ್ಲಿ ಲಭ್ಯವಿರುವ ಸಂಗತಿ ಎಂದರೆ ಬಲಿಯಾದವರೆಲ್ಲರೂ ಹಿಂದೂಗಳು. ಈ ನೇರ ಕಾರ್ಯಾಚರಣೆ ಮೂರು ದಿನಗಳವರೆಗೆ ನಡೆಯಿತು. ಈ ಹಿಂಸೆಯಿಂದ ತತ್ತರಿಸಿದ ಕಾಂಗ್ರೆಸ್ ಮುಖಂಡರು ವಿಭಜನೆಗೆ ಒಪ್ಪಬೇಕಾಯಿತು. ಆದುದರಿಂದ ಪಾಕಿಸ್ತಾನದ ಜನಕ ಜಿನ್ನಾ ಅವರನ್ನು ಆಧುನಿಕ ಜಗತ್ತಿನ ಮೊದಲ ಭಯೋತ್ಪಾದಕ ಎಂದು ಕರೆಯುವದು ಉಚಿತವಾದೀತು.
ತಟಸ್ಥ ಲೇಖನಗಳನ್ನು ನೀಡುವ ಉದ್ದೇಶ ಸರಿಯೇ. ಆದರೆ ಲೇಖನ ವಸ್ತುನಿಷ್ಠವಾಗಿರಬೇಡವೇ?
Sunaath ೨೦:೩೩, ೨೧ November ೨೦೦೬ (UTC)ಸುನಾಥ
- ವಿಕಿಪೀಡಿಯದಲ್ಲಿ ವಸ್ತುನಿಷ್ಠ ಲೇಖನಗಳದ್ದೇ ಆದ್ಯತೆ, ಆದರೆ ಇದನ್ನು ನಿರ್ಧರಿಸುವವರು ಯಾರು? ಯಾವುದಕ್ಕೆ ಬಹಳಷ್ಟು ಪುರಾವೆಯಿರುವುದೋ ಅದೇ ವಸ್ತುನಿಷ್ಠ ಎಂದು ಪರಿಗಣಿಸಲಾಗುತ್ತದೆಯೇ? ಇದರ ಬಗ್ಗೆ ಬಹುಮತ ಬೇಕು. ಆಂಗ್ಲ ವಿಕಿಪೀಡಿಯದಲ್ಲಿ "Further Reading" ಪಟ್ಟಿಯಿದೆ. ಇದನ್ನು ಈ ಲೇಖನಕ್ಕೆ ಅಂಟಿಸುವುದೆ?
ನೇರ ಕಾರ್ಯಾಚರಣೆಯನ್ನಾಗಿ ಬದಲಾಯಿಸಲಾಗಿದೆ. ಸೂಚನೆಗೆ ಧನ್ಯವಾದಗಳು. Ksj dr ೨೦:೫೮, ೨೧ November ೨೦೦೬ (UTC)