ಚರ್ಚೆಪುಟ:ಭಾರತದಲ್ಲಿ ಪ್ರಸವ ಮರಣ
ಈ ಲೇಖನ ನನಗೆ ಈ ಕೆಳಗಿನ ಕಾರಣಗಳಿಗಾಗಿ ಅಪೂರ್ಣ ಎನಿಸುತ್ತಿದೆ:
- ಬಿಹಾರ ಎನ್ನುವ ಉಪಶಿರೋನಾಮೆಯಲ್ಲಿ "ಬಿಹಾರದಲ್ಲಿ" ಎಂಬುದನ್ನು ಬಿಟ್ಟು ಇನ್ನೇನೂ ಇಲ್ಲ
- ಕೊಷ್ಠಕದಲ್ಲಿ "ಭಾರತ ಒಟ್ಟು" ಅಂದರೆ? ಎಲ್ಲಾ ಸಂಖ್ಯೆಗಳ ಮೊತ್ತವಾಗಬೇಕಲ್ಲವೇ? ಸಂಪೂರ್ಣ ಭಾರತದ ಅನುಪಾತವೂ ಆಗಿರಬಹುದು. "ಇತರೆ ಉಪಮೊತ್ತ"ದ ಬಳಕೆ ಸಹ ಗಲಿಬಿಲಿಗೊಳಿಸುತ್ತದೆ.
- ಕೊಷ್ಠಕದಲ್ಲಿರುವ ಈಎಜಿ ರಾಜ್ಯಗಳ ಹೆಸರು ಆಂಗ್ಲ ವಿಕಿಯಲ್ಲಿದೆ. https://en.wikipedia.org/wiki/Maternal_mortality_in_India
- ಅದೂ ಅಲ್ಲದೇ, ಪ್ರಸವ ಮರಣದಲ್ಲಿ ೨ ಬಗೆಯ ಮರಣಗಳಿವೆ: ಮಗು ಮತ್ತು ತಾಯಿ. ಎರಡೂ ಅನುಪಾತಗಳು ಬಹಳವೇ ಬೇರೆ ಬೇರೆಯಾಗಿವೆ. (ಮಗು: ೩೨/೧೦೦೦ ಅದೇ ತಾಯಿ: ೪೭/೧೦೦೦)
- "೨೦೧೮ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಪ್ರಸವ ಮರಣದ ದರವನ್ನು ಕಡಿಮೆ ಮಾಡುವ ಇತ್ತೀಚಿನ ನಾಲ್ಕು ಬದಲಾವಣೆಗಳನ್ನು ಗಮನಿಸಿದೆ:", "ಪ್ರಸವದ ಸಮಯದಲ್ಲಿ ಮಹಿಳೆಯ ಸಾವಿನ ದರಕ್ಕೆ ವಿವಿಧ ಪ್ರಾಂತ ಮತ್ತು ವಿಭಿನ್ನ ಸಂಸ್ಕೃತಿಗಳು ಕಾರಣವಾಗಿವೆ". ಇವುಗಳಲ್ಲಿ ಮರಣದ/ಸಾವಿನ ದರ ಎನ್ನುವುದು ತಪ್ಪಾದ ಅರ್ಥವನ್ನು ನೀಡುತ್ತದೆ.
- "ಹೆಚ್ಚಿನ ಓದುವಿಕೆ" ಯಲ್ಲಿ ಪಿಡಿಎಫ಼್ ಎಂದು ಬರೆಯಲಾಗಿದೆ ಆದರೆ, ಕೊಂಡಿಯಿಲ್ಲ.
- ಅಲ್ಲದೇ ಇತರೇ ಕಾಗುಣಿತ ದೋಷಗಳು:
"ಮಧ್ಯಪ್ರದೇಶ / hatt ತ್ತೀಸ್‌ಗ h" "೨೦೧೧೧೩" "೧೬೦,೦೦೦ ಗರ್ಭಿಣಿ ಮಹಿಳೆಯರ" (ಎಲ್ಲ ಗರ್ಭಿಣಿಯರೂ ಮಹಿಳೆಯರೇ ಆಗಿರುತ್ತಾರಲ್ಲವೇ?) "ಶೇಕಡಾ ೬.೧೫%" % ಇಲ್ಲವೇ ಶೇಕಡಾ ಒಂದರ ಉಪಯೋಗ ಸಾಕು
ಒಟ್ಟಿನಲ್ಲಿ, ಅರೆಬರೆಯಾಗಿ ಭಾಷಾಂತರಿಸಲಾಗಿದೆಂದು ಅನ್ನಿಸಿ, "ಅಪೂರ್ಣ" ಎಂದು ಟೆಂಪ್ಲೇಟ್ ಹಾಕಿದ್ದೆ. ನಿಮಗೆ ಬೇರೆ ಯಾವುದೇ ಬ್ಯಾನರ್ ಸರಿಯೆಂದು ತೋರಿದರೆ, ಹಾಕಬಹುದು. ಇದು ಕನ್ನಡ ವಿಕಿಯ ಗುಣಮಟ್ಟಕ್ಕೆ ಸ್ವೀಕರಿಸಬಹುದೆಂದರೆ, ಹೀಗೆಯೇ ಬಿಡಬಹುದು.
ಗುರುಪಾದ್ ಹೆಗಡೆ ಮುಂಡಿಗೇಸರ (ಚರ್ಚೆ) ೦೪:೧೩, ೨ ಏಪ್ರಿಲ್ ೨೦೨೦ (UTC)
- ಬಿಹಾರ ವಿಭಾಗದಲ್ಲಿ ಮಾಹಿತಿ ಸೇರಿಸಲಾಗಿದೆ. ಭಾರತ ಒಟ್ಟು ಎಂದರೆ ಭಾರತದ ಸರಾಸರಿ ಎಂದು ಅರ್ಥ ಮಾಡಿಕೊಳ್ಳಬಹುದು. ಮೂಲ ಇಂಗ್ಲಿಷ್ ವಿಕಿ ಲೇಖನದಲ್ಲೇ ಈ ವಿಷಯ ಸ್ಪಷ್ಟವಾಗಿಲ್ಲ. ಇತರೆ ಉಪಮೊತ್ತವನ್ನೂ ಹಾಗೆಯೇ ಅರ್ಥ ಮಾಡಿಕೊಳ್ಳಬಹುದು. ಪ್ರಸವ ಮರಣ ಎಂಬುದು maternal mortality ಎಂಬುದರ ಕನ್ನಡಾನುವಾದ. ಈ ಪದವನ್ನು ಕನ್ನಡ ವಿ.ವಿ. ಹಂಪಿಯವರು ಪ್ರಕಟಿಸಿದ ಕನ್ನಡ ವೈದ್ಯ ವಿಶ್ವಕೋಶದಿಂದ ಪಡೆದುಕೊಳ್ಳಲಾಗಿದೆ. ತಾಯಿಯ ಮರಣ ಎಂಬುದು ಅಷ್ಟು ಸರಿಯಾದ ಅರ್ಥವನ್ನು ನೀಡುವುದಿಲ್ಲ. maternal mortality ಎಂಬುದು ಹೆರಿಗೆಯ ಸಮಯದಲ್ಲಿ ಮಹಿಳೆಯ ಸಾವು ಎಂದು ಅರ್ಥ. ಇದು ಶಿಶು ಮರಣ ಎಂಬ ಅರ್ಥವನ್ನು ನೀಡುವುದಿಲ್ಲ.--ಪವನಜ ಯು. ಬಿ. (ಚರ್ಚೆ) ೦೫:೦೬, ೨ ಏಪ್ರಿಲ್ ೨೦೨೦ (UTC)
- ಧನ್ಯವಾದಗಳು ಗುರುಪಾದ್ ಹೆಗಡೆ ಮುಂಡಿಗೇಸರ (ಚರ್ಚೆ) ೧೧:೨೫, ೨ ಏಪ್ರಿಲ್ ೨೦೨೦ (UTC)
Start a discussion about ಭಾರತದಲ್ಲಿ ಪ್ರಸವ ಮರಣ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಭಾರತದಲ್ಲಿ ಪ್ರಸವ ಮರಣ.