ಚರ್ಚೆಪುಟ:ಭಾಗವತ ಪುರಾಣ
ಮಹರ್ಷಿ ದಯಾನಂದ ಸರಸ್ವತಿಯವರ ಹೇಳಿಕೆ
ಬದಲಾಯಿಸಿ- ಶ್ರೀ ಭಾಗವತವನ್ನು ರಚಿಸಿದವನು ಗೀತಾಗೋವಿಂದ ಕಾವ್ಯವನ್ನು ಬರೆದಿರುವ 12/13ನೇ(೧೨ನೇ/೧೩ನೇ,) ಶತಮಾನದಲ್ಲಿದ್ದ ಜಯದೇವನ ಸೋದರನಾದ ಬೋಪದೇವನು . ಅವನ ‘ಹಿಮಾದ್ರಿ’ ಎಂಬ ಗ್ರಂಥದಲ್ಲಿ ಈವಿಚಾರದ ಶ್ಲೋಕವನ್ನು ಬರೆದಿದ್ದಾನೆ.
- ಶ್ರೀಮದ್ಭಾಗವತ ನಾಮಂ ಪುರಾಣಂ ಚ ಮಯೇರಿತಂ|(ಮಯೇರಚಿತಂ)
- ವಿದುಷಾ ಬೋಪದೇವೇನ ಶ್ರೀ ಕೃಷ್ಣಸ್ಯ ಯಶೋSನ್ವಿತಮ್||
- ಈ ವಿಚಾರವನ್ನು ವೇದ ವಿದ್ವಾಂಸರೂ ಆರ್ಯಸಮಾಜ ಪ್ರವರ್ತಕರೂ ಆದ ಮಹರ್ಷಿ ದಯಾನಂದ ಸರಸ್ವತಿ ಯವರು ತಮ್ಮ ‘ಸತ್ಯಾರ್ಥ ಪ್ರಕಾಶ’,ಗ್ರಂಥದಲ್ಲಿ ಬರೆದಿದ್ದಾರೆ.(ಪುಟ277) ಕನ್ನಡಾನುವಾದ ಪರಿಷ್ಕೃತ ಮುದ್ರಣ 2003; ಅನುವಾದಕರು : ಪಂಡಿತ ಸುಧಾಕರ ಚತುರ್ವೇದಿ ; ಪ್ರಕಾಶಕರು : ಆರ್ಯಸಮಾಜ ಶ್ರದ್ಧಾನಂದ ಭವನ, ವಿಶ್ವೇಶ್ವರಪುರಂ , ಬೆಂಗಳೂರು, 560004.(ಫೋ.6526380)
(The Gita Govinda (Oriya: ଗୀତ ଗୋବିନ୍ଦ, Devanagari: गीत गोविन्द) (Song of Govinda) is a work composed by the 12th-century poet, Jayadeva, born in either the village of Jayadeva Kenduli in Bengal or the village of Kenduli Sasan in Odisha are likely candidates though another Kenduli in Mithila is also a possibility. [[೧]]) Bschandrasgr ೧೬:೦೫, ೨೨ ಅಕ್ಟೋಬರ್ ೨೦೧೪ (UTC) 23-10-2014 ಭಾಗವತ ಪುರಾಣವು ವೋಪದೇವ (ಬೋಪದೇವ ಇದರ ಬಂಗಾಳಿ ರೂಪ) ನು ಮಾಡಿದುದು ಎಂಬ ನಾಣ್ಣುಡಿಯುಂಟು. ಇವನು ದೇವಗಿರಿಯ ರಾಜನಾದ ಹೇಮಾದ್ರಿಯ ಸಭಾಸದನು ವೋಪದೇವನು 13ನೆಯ ಶತಮಾನದವನು. ಆದರೆ ಅನೇಕರು ಇದನ್ನು ಒಪ್ಪುವುದಿಲ್ಲ; ಭಾಗವತ ದ್ವೇóಷಿಗಳಾದ ಶಾಕ್ತರು ಈ ವದಂತಿಯನ್ನು ಹರಡಿರುವರೆಂದು ವೈಷ್ಣವರು ಹೇಳುವರು. ---ಟೀಕಕಾರರಾದ ಶ್ರೀಧರಸ್ವಾಮಿ ಮೊದಲನೆಯ ಶ್ಲೋಕದ ಟೀಕಿನಲ್ಲಿಯೆ ‘ಭಾಗವತಂ ನಾಮಾನ್ಯದಿತ್ಯಪಿ ನಾ ಶಂಕನೀಯಮ್’, ಎಂದು ಬರೆದಿದ್ದಾರೆ-ಇದರಿಂದ ಭಾಗವತವು ಪುರಾಣವಲ್ಲವೆಂತಲೂ ಶ್ರೀಧರಸ್ವಾಮಿಗಿಂತ ಮುಂಚೆಯೇ ಸಂಶಯ ಉಂಟಾಗಿತ್ತೆಂದು ತಿಳಿದು ಬರುತ್ತದೆ.
- ಆಧಾರ: ಶ್ರೀ ಬಂಕಿಮಚಂದ್ರರ ‘ಶ್ರೀ ಕೃಷ್ಣ ಚರಿತ್ರೆ –ಅನುವಾದ ಶ್ರೀ ಆರ್.ವ್ಯಾಸರಾವ್ , ಪುಟ 84,85 ;1965ನೇ ಮುದ್ರಣ; ಚೇತನಾ ಪ್ರಿಂಟರ್ಸ್ ಬೆರಂಗಳೂರು-9 ಪ್ರಕಾಶಕರು ಆರ್.ವಿ. ಪ್ರಭಾಕರರಾವ್. ವ್ಯಾಸ ಕೃಪ; 656, 11ನೇ ಮೈನ್ ರಸ್ತೆ ಜಯನಗರ 4ನೇ ಬ್ಲಾಕು, ಬೆಂಗಳೂರು -11 Bschandrasgr ೦೭:೩೧, ೨೩ ಅಕ್ಟೋಬರ್ ೨೦೧೪ (UTC)
- ಸದಸ್ಯ:Bschandrasgr/ಪರಿಚಯ
ತಿದ್ದುವಿಕೆಯಲ್ಲಿ ತಪ್ಪು
ಬದಲಾಯಿಸಿ- ಸಂಸ್ಕೃತದಲ್ಲಿ ಸ್ತ್ರೀ ಲಿಂಗ ಪದಗಳು ಕೊನೆಯಲ್ಲಿ ದೀರ್ಘಾಕ್ಷರ ಹೊಂದಿರುತ್ತವೆ, ತಿದ್ದಿದ್ದು ತಪ್ಪು; ತಪ್ಪನ್ನು - ಸರಿಪಡಿಸಿದೆ. Bschandrasgr (ಚರ್ಚೆ) ೧೮:೦೬, ೫ ಮೇ ೨೦೧೮ (UTC)