ಚರ್ಚೆಪುಟ:ಬಿ. ಎಸ್. ಚಂದ್ರಶೇಖರ್
ಬಿ.ಎಸ್.ಚಂದ್ರಶೇಖರ ಅಥವಾ ಬಿ.ಎಸ್.ಚಂದ್ರಶೇಖರ್ - ಲೇಖನಕ್ಕೆ ಸರಿಯಾದ ಹೆಸರು ಯಾವುದು?
ಬದಲಾಯಿಸಿಬಿ.ಎಸ್.ಚಂದ್ರಶೇಖರ ಅಥವಾ ಬಿ.ಎಸ್.ಚಂದ್ರಶೇಖರ್ - ಲೇಖನಕ್ಕೆ ಸರಿಯಾದ ಹೆಸರು ಯಾವುದು? ಇದನ್ನು ಮೂಲಕಗಳನ್ನು ಉಲ್ಲೇಖಿಸಿ ಚರ್ಚಿಸುವುದರ ಮುಖೇನ ಸಮುದಾಯ ಇದರ ಸುತ್ತಲಿನ ಗೊಂದಲಕ್ಕೆ ತೆರೆ ಎಳೆಯ ಬೇಕಿದೆ. ಸದಸ್ಯ:Bschandrasgr ಇವರು ಇದನ್ನು ತನ್ನ ಪುಟ ಬಿ.ಎಸ್.ಚಂದ್ರಶೇಖರ ಎಂದು ವಾದಿಸುತ್ತಿದ್ದು, ಅವರ ಪುಟ ವಿಕಿಗೆ ಎಷ್ಟು ಸೂಕ್ತ ಎನ್ನುವುದನ್ನೂ ನಿರ್ಧರಿಸಬೇಕಿದೆ. ಈ ಚರ್ಚೆಯನ್ನು ಇಲ್ಲಿ ನೆಡೆಸಿದರೆ ಉತ್ತಮ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೯:೦೩, ೧೬ ಮಾರ್ಚ್ ೨೦೧೫ (UTC)
- ಈ ಕೊಂಡಿ ನಿರ್ದೇಶನ ಮಾಡಿದ ಸಂಪಾದಕ ಚರ್ಚೆ ಇಲ್ಲಿ ಲಭ್ಯವಿದೆ ಚರ್ಚೆಪುಟ:ಬಿ.ಎಸ್.ಚಂದ್ರಶೇಖರ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೦:೩೨, ೧೮ ಮಾರ್ಚ್ ೨೦೧೫ (UTC)
ಉತ್ತರ
ಬದಲಾಯಿಸಿ- ಇದೊಂದು ಅನಾವಶ್ಯಕ ಚರ್ಚೆ ಎಂದು ನನ್ನ ಅಭಿಪ್ರಾಯ. ಬಿ.ಎಸ್.ಚಂದ್ರಶೇಖರ ಎನ್ನುವ ಹೆಸರಿನ ನನ್ನ ಪುಟ ಇತ್ತು. ಇದಕ್ಕೆ ನನ್ನ ಹೆಸರೇ ಆಧಾರ. ಬಿ.ಎಸ್.ಚಂದ್ರಶೇಖರ್ ಅನ್ನುವುದು ಕ್ರಿಕೆಟ್ ಬೌಲರ್ ಹೆಸರು ಎನ್ನುವುದು ಜನಜನಿತ. ಪತ್ರಿಕೆಗಳಲ್ಲಿ ಈ ವಿಕಿಯಲ್ಲಿ ಅವರ ಹೆಸರು ಚಂದ್ರಶೇಖರ್ ಎಂದೇ ಇದೆ. ಇಂಗ್ಲಿಷ್ ನಲ್ಲಿ ಕೂಡಾ Bhagwat Subramanya 'Chandrasekhar' ಅದು ಕನನ್ನಡದಲ್ಲಿ 'ಚಂದ್ರಸೇಖರ್' ಆಗುತ್ತೆ. ನನ್ನ ಹೆಸರು B.S.Chandrashekhara, 'ಅ'ದಿಂದ ಅಂತ್ಯವಾಗುತ್ತೆ. ನಿಮಗೆ ನನ್ನ ಹೆಸರಿನ ಪುಟ ರದ್ದು ಮಾಡಲು ಏನು ತೊಂದರೆ?? ಹೆಸರಾಂತ ಕ್ರಿಕೆಟ್ ಬೌಲರ್ ಅವರ ಹೆಸರು ಬದಲಿಸಲು ನಿಮಗೆ ಏಕೆ ಕಾತುರ ?? ಅವರು ಈ ೬೯ ವರ್ಷಗಳೀಂದ (1945)ಉಪಯೋಗಿಸುತ್ತಿರುವ ಹೆಸರನ್ನು ಬದಲಿಸಲು; ನೀವು - ನನ್ನ ಹೆಸರು/ನನ್ನಂತೆ ಹೆಸರು ಇರುವವರ ಹೆಸರನ್ನು ಅವರಿಗೆ ಜೋಡಿಸಲು ಏಕೆ ಪ್ರಯತ್ನ-ಕಾತುರ?? ಯಾರದೋ ಹೆಸರನ್ನು ನೀವು ಬದಲಿಸಬಹುದೇ ? ಬಿ.ಎಸ್.ಚಂದ್ರಶೇಖರ ಎಂಬ ನನ್ನಹೆಸರಿನ ಪುಟವನ್ನು ರದ್ದುಗೊಲಿಸಿ ಸಮಸ್ಯೆ ಬಗೆಹರಿಸುವುದರ ಬದಲು ಅದನ್ನು ಸಮರ್ಥಿಸಿಕೊಳ್ಲುವುದು ಎಷ್ಟು ಸರಿ?.
- ಪ್ರಸಿದ್ಧ ಗೂಗ್ಲಿ ಬೌಲರ್ ಗೆ ಏಕವಚನದಿಂದ ಅಂತ್ಯವಾಗುವ ಬಿ.ಎಸ್.ಚಂದ್ರಶೇಖರ ಎನ್ನುವ ಹೆಸರನ್ನು ಹೊಸದಾಗಿ ಅವರ 69 ನೇ ವಯಸ್ಸಿನಲ್ಲಿ ಬದಲಿಸುವುದು ಅಗದು-ನೀವು ನಾಮಕರಣ ಮಾಡುವುದು ಸರಿಯೂ ಅಲ್ಲ. ಸರಳ ಮಾರ್ಗ-
- ಆ 'ಬಿ.ಎಸ್.ಚಂದ್ರಶೇಖರ', ಎನ್ನುವ ಪುಟವನ್ನು ರದ್ದು ಮಾಡಿ ಸಮಸ್ಯೆಯನ್ನು ಬಗೆಹರಿಸಿ ನನಗೆ ನೆಮ್ಮದಿ ಉಂಟು ಮಾಡಲು ನಿಮಗೆ ಏಕೆ ಕಷ್ಟ ?? ತಪ್ಪನ್ನು ಸರಿಪಡಿಸದೆ Editor prestige ಉಳಿಸಿಕೊಳ್ಳುವ ಪ್ರಯತ್ನ ಅಚ್ಚರಿಯಾಗಿದೆ. ಜಗತ್ತಿನಲ್ಲಿ ತಪ್ಪು ಮಾಡದಿರುವವರು ಯಾರೂ ಇಲ್ಲ; Err is human and to correct (accept) it is divine. ಸದಸ್ಯ:Bschandrasgrಎನ್ನುವ ಪುಟದಲ್ಲಿ ನನ್ನ ಹೆಸರು ಬಿ.ಎಸ್.ಚಂದ್ರಶೇಖರ ಎಂದು ಹಾಕಿಕೊಂಡಿದ್ದೇನೆ.ಅದು ಪ್ರಸಿದ್ಧ ಗೂಗ್ಲಿ ಬೌಲರ್ ಹೆಸರಲ್ಲ. ಇಲ್ಲಿಗೆ ಈ ವಿಷಯ/ಚರ್ಚೆ ಅಂತ್ಯಗೋಲಿಸಬಹುದೇ??ಸದಸ್ಯ:Bschandrasgr ಚರ್ಚೆ ೧೬-೩-೨೦೧೫
- ಯಾವುದೇ ವಿಷಯವನ್ನು ವಿಕಿಗೆ ಸೇರಿಸ ಬೇಕಾದಾಗ ಪಾಲಿಸಬೇಕಾದ ನಿಯಮದ ಮೂಲವಾಗಿ ಈ ಚರ್ಚೆ ನೆಡೆದಿದೆ. ಚರ್ಚೆಯ ಮೂಲಕ ಇದಕ್ಕೆ ಒಂದು ಪೂರ್ಣ ಉತ್ತರ ಕಂಡುಕೊಳ್ಳಬೇಕಿದೆ. ಆ ಕೊಂಡಿ ಬೇಕಿಲ್ಲದೇ ಇದ್ದಲ್ಲಿ ಸಮುದಾಯದ ಚರ್ಚೆಯ ನಂತರ ಅದನ್ನು ತೆಗೆದು ಹಾಕಲಾಗುತ್ತದೆ. ಏನೂ ಬೇಡ ತೆಗೆದು ಹಾಕಿ ಎನ್ನುವ ಹಠ ಒಳ್ಳೆಯದಲ್ಲ. ಯಾವುದನ್ನೋ ಬೇಕೆಂದಾಗ ಸೇರಿಸಲು, ತೆಗೆದು ಹಾಕಲು ಇದು ಯಾರದ್ದೇ ಸ್ವಂತ ಸ್ವತ್ತಲ್ಲ. ಉತ್ತಮ ಮತ್ತು ನಂಬಲರ್ಹ ಮಾಹಿತಿಯಗಳನ್ನು ನಿಯಮ ಬದ್ಧವಾಗಿ ಸೇರಿಸುವ ಅಳಿಸುವ ವ್ಯವಸ್ಥೆ ವಿಶ್ವಕೋಶದ್ದಾಗಿರಬೇಕು. ಅಂತದ್ದೊಂದು ವ್ಯವಸ್ಥೆಯನ್ನು ಉಳಿಸಿಬೆಳೆಸಲು ಈ ಚರ್ಚೆ ಅವಶ್ಯ. ಇಲ್ಲಿ ಯಾರ ಪ್ರಸ್ಟೀಜ್ ಪ್ರಶ್ನೆಯೂ ಇಲ್ಲ. ವಿನಾಕಾರಣ ವಿಕಿ ನಿಯಮ ಇತ್ಯಾದಿಗಳನ್ನು ಓದದೆ (ಹತ್ತಾರು ಬಾರಿ ಕೊಟ್ಟ ನಂತರವೂ) ಅನವಶ್ಯಕ ಸಂದೇಶಗಳಿಂದ ಚರ್ಚೆ ಅಥವಾ ಮುಖ್ಯ ವಿಷಯ ತಿರುಚಬೇಡಿ. ಧನ್ಯವಾದಗಳೊಂದಿಗೆ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೦೯, ೧೬ ಮಾರ್ಚ್ ೨೦೧೫ (UTC)
ಬಿಟ್ಟೇನಂದರು ಬಿಡದೀ ಚರ್ಚೆ
ಬದಲಾಯಿಸಿಮಾನ್ಯ ~ಓಂಶಿವಪ್ರಕಾಶ್ ರವರೇ, Hshivaram ಹೆಸರನ್ನು ಹಾಗೆಯೇ ಉಳಿಸಿ, ಆ ಪುಟವನ್ನು ಸದಸ್ಯ:Hshivaram ಪುಟಕ್ಕೆ ಪುನರ್ನಿದೇಶನ ಮಾಡಿದೆ//ಹಾಗೆಯೇ ಎಚ್.ಶಿವರಾಮ್ ಹೆಸರಿನ ಪುಟವನ್ನು ಹಾಗೆಯೇ ಉಳಿಸಿದೆ. ವಿಕಿ ನಿಯಮ ಏನೇ ಇದ್ದರೂ ಅವರು ರಾಜ್ಯ ಮಟ್ಟದ ಲೇಖಕರು, ಆ ಕ್ರಮ ನನಗೆ ಅನ್ವಯಿಸಲು ಬಾರದೆಂದು ತೋರುತ್ತದೆ. ಹೋಗಲಿ. ನಾನು ಕೇಳಿದ್ದು ನನ್ನ ಹೆಸರನ್ನು ಬೇರೆಯವರಿಗೆ ಲಿಂಕ್ ಮಾಡದೆ ಅದನ್ನು ರದ್ದು ಪಡಿಸಿ ಎಂದು; ನಾನು ವಿಕಿಗೆ ಹೊಸಬ,ನಿಯಮ ಪರಿಣತನಲ್ಲ. ಆದರೆ ನಿಯಮಗಳ ಬೋಧನೆ ಮಾಡುತ್ತಾ ಅದನ್ನೇ ದೊಡ್ಡದು ಮಾಡಿ ಅದಕ್ಕೆ ಸಂಪಾದಕರ ಸಭೆ ಕರೆಯಬೇಕಾಗಿದೆಯೇ?. ಒಬ್ಬರ ಹೆಸರನ್ನು ಮತ್ತೊಬ್ಬರ ಹೆಸರಿಗೆ ಲಿಂಕ್ ಮಾಡಲು ವಿಕಿಯಲ್ಲಿ ಅವಕಾಶ ಇದೆಯೇ?? ಈಗ ಅದು ನನ್ನ ಹೆಸರೇ ಅಲ್ಲ ಎನ್ನುವ ಮಟ್ಟಿಗೆ ತಿರುಚುವ ವಾದ ಬೆಳೆದಿದೆ. ಶ್ರೀ ಎಚ್.ಶಿವರಾಮ್ ಅವರು ದಯವಿಟ್ಟು ಬೇಸರ ಮಾಡಬಾರದು; ನನಗೆ ಮುಜುಗರದ ವಿಷಯ ಬಗೆಹರಿಸಲು ನಿಮ್ಮ ವಿಷಯ ನೆನಪಿಗೆ ಬಂದು ತರಬೇಕಾಯಿತು. ಈ ಬಗೆಯವು ಇನ್ನೂ ಇವೆ -ಅವು ಬೇಡ. (ಒಂದು ವಿಷಯ ಬೆಳಗುತ್ತಿ ತೀರ್ಥರಾಮೇಶ್ವರಕ್ಕೆ ಹಾಕಿದ ಕೊಂಡಿ 1 ಜಾಹಿರಾತು ,2.ಇನ್ನೊಂದು ನನ್ನಲ್ಲಿ ತೆರೆಯಲಿಲ್ಲ /ದಿನಾಂಕವಿದೆ ತೊಂದರೆಯಿಲ್ಲ) ; ನಾನು ಈ ಅಸಹಜ ಚರ್ಚೆಯನ್ನು ಮುಕ್ತಾಯ ಮಾಡಬೇಕೆಂದಿದ್ದೆ , ಆದರೆ ನನ್ನ ಹೆಸರಿನ ಲಿಂಕನ್ನು ತೆಗೆಯದೆ ಇರುವುದರಿಂದ ಇದನ್ನು ಬೇಸರದಿಂದ ಬರೆಯಬೇಕಾಯಿತು. ಚರ್ಚೆಮಾಡಿ ಉಪಯೋಗವಿಲ್ಲ. (refused to be convinced)--ವಂದನೆಗಳು , ಸದಸ್ಯ:Bschandrasgr ಚರ್ಚೆ-೧೮-೩-೨೦೧೫
- ಈ ವಿಷಯ ನನ್ನ ಚರ್ಚಾ ಪುಟದಲ್ಲೇ ಹಾಕಬಹುದಿತ್ತಲ್ಲ. ಈ ಪುಟಕ್ಕೆ ಸಂಬಂಧಿಸಿದ ಪ್ರಶ್ನೆ ಇದಲ್ಲ. ಕೆಲವೊಂದು ನಿರ್ಣಯಗಳನ್ನು ಪುಟ ಸಂಪಾದಕರು ಹಾಗೂ ನಿರ್ವಾಹಕರು ಪಾರದರ್ಶಕವಾಗಿ ತೆಗೆದುಕೊಳ್ಳಬೇಕು ಜೊತೆಗೆ, ಆ ಪಾರದರ್ಶಕತೆಯನ್ನು ಉಳಿಸಲು ಚರ್ಚೆ ಮತ್ತು ಅದನ್ನು ಇತರರು ಒಪ್ಪುವ/ಒಪ್ಪಿದ ಮಾಹಿತಿ ವಿಕಿಯ ಚರ್ಚಾ ಪುಟದಲ್ಲಿರಬೇಕು. ಅದಕ್ಕೇ ಈ ಚರ್ಚೆ. ಇತರರು ಈ ಚರ್ಚೆಯನು ಮುಗಿಸುವವರೆಗೂ ತಾವು ಸಮಾಧಾನದಿಂದ ಇರಬೇಕೆಂದು ಮನವಿ. ಶಿವರಾಂ ಅವರ ಲೇಖನ ಅವರೇ ಖುದ್ದು ಬರೆದದ್ದು, ನನ್ನ ಪ್ರಕಾರ ಅದನ್ನು ನಿರ್ವಾಹಕರು ವಿಕಿ ನಿಯಮದ ಪ್ರಕಾರ ತೆಗೆದಿದ್ದಾರೆ. ನಿಮ್ಮ ಹೆಸರಿಗೂ ವಿಕಿ ಪುಟಕ್ಕೂ ಕೊಂಡಿ ಹಾಕುವ ಕೆಲಸ ನಾನೇನೂ ಮಾಡಿಲ್ಲ. ನಿಮ್ಮ ವಿಷಯದ ಬಗ್ಗೆ ಕನ್ನಡ ವಿಕಿಯಲ್ಲಿ ಪುಟವೊಂದು ಇರಬೇಕಾದ್ದು ಮಾನ್ಯವೇ ಆದಲ್ಲಿ ನಾನು ಅಥವಾ ಇತರೆ ವಿಕಿ ಸಂಪಾದಕರು ಅದನ್ನು ಸೃಷ್ಟಿಸುತ್ತಾರೆ. ನೀವು ಕಾಯಬೇಕಷ್ಟೇ. ಇದಕ್ಕೆ ಸಂಪಾದಕರ ಸಭೆ ಕರೆಯಬೇಕೆ ಎನ್ನುವ ಪ್ರಶ್ನೆಗೆ, ಉತ್ತರ ಸಿಗದಿರುವ ಎಲ್ಲ ಪ್ರಶ್ನೆಗಳಿಗೂ ಚರ್ಚೆ ಅವಶ್ಯ - ಚರ್ಚೆ ಕರೆಯ ಬೇಕೆಂದಿದ್ದಲ್ಲಿ ಅದನ್ನು ಕರೆದೇ ತೀರಬೇಕು. ಹೇಳುತ್ತಿರುವುದನ್ನು ಸಮಾಧಾನದಿಂದ ಓದಿ, ಅದನ್ನು ಅರ್ಥ ಮಾಡುಕೊಳ್ಳುವ ತಾಳ್ಮೆ ನಿಮ್ಮಲ್ಲಿ ಕಾಣುತ್ತಿಲ್ಲ ಜೊತೆಗೆ ಚರ್ಚೆ ಮಾಡಿ ಉಪಯೋಗವಿಲ್ಲ ಎನ್ನುತ್ತಿದ್ದೀರಿ. ವಿಕಿ ಒಂದು ಸಮುದಾಯ ಒಬ್ಬರೇ ಬೇಕಾದ ನಿರ್ಣಯ ಕೈಗೊಳ್ಳುವ ವೇದಿಕೆಯಲ್ಲ. ನಾನು ಕೊಟ್ಟಿರುವ ಕೊಂಡಿಗಳು ಇತ್ಯಾದಿಗಳನ್ನು ಒಮ್ಮೆ ಕೂಲಂಕುಷವಾಗಿ ಓದಿಕೊಳ್ಳು. ತಾಳ್ಮೆಯಿಂದ ಪ್ರಶ್ನೆಗಳನ್ನು ಕೇಳಬೇಕಿರುವ ವ್ಯಕ್ತಿಯ ಚರ್ಚಾ ಪುಟದಲ್ಲಿ ಕೇಳಿ. ಧನ್ಯವಾದಗಳೊಂದಿಗೆ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೦:೨೮, ೧೮ ಮಾರ್ಚ್ ೨೦೧೫ (UTC)