ಚರ್ಚೆಪುಟ:ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ

ಅಳಿಸುವಿಕೆಗೆ ವಿರೋಧ ಬದಲಾಯಿಸಿ

ಈ ಲೇಖನ ಅಳಿಸುವಿಕೆಗೆ ನನ್ನ ವಿರೋಧವಿದೆ. ಕಾರಣ : ಈ ವಿಶ್ವವಿದ್ಯಾಲಯವು ಪ್ರಸ್ತುತ ಈಗ ಕಾರ್ಯ ನಿರ್ವಹಿಸುತ್ತಿರುವ ಸಿರ್ಸಿ ಯ ಅರಣ್ಯ ಮಹಾವಿದ್ಯಾಲಯ, ಕೃಷಿ ಕಾಲೇಜು, ತೋಟಗಾರಿಕಾ ಕಾಲೇಜುಗಳನ್ನೆ ವಿಲೀನಗೊಳಿಸಿ, ನೂತನ ವಿಶ್ವ ವಿದ್ಯಾಲಯವನ್ನಾಗಿ ರಚಿಸಲಾಗಿದೆ. ಇದರ ಬಗ್ಗೆ ಉಲ್ಲೇಖಗಳಲ್ಲಿ ಮಾಹಿತಿ ಇದೆ ಅದನ್ನು ಪರೀಕ್ಷಿಸಿಕೊಳ್ಳಲು ಕೋರಿದೆ.

ಮತ್ತು ಸಂಸ್ಥೆ ಅಸ್ತಿತ್ವದಲ್ಲೀ ಇಲ್ಲ ಎಂಬುದು ತಪ್ಪು ,ಕಾಲೇಜುಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಸರ್ಕಾರದ ಬಜೆಟ್ ಪ್ರತಿಯನ್ನು ಸಹ ಉಲ್ಲೇಖದಲ್ಲಿ ನೀಡಲಾಗಿದೆ.

ಮತ್ತು ಅನೇಕ ಮಾಧ್ಯಮಗಳು ಈ ವಿಶ್ವ ವಿದ್ಯಾಲಯದ ಕುರಿತು ವರದಿ ಮಾಡುತ್ತಿದ್ದು ಇದು ಒಂದು ಪ್ರಮುಖ ಚರ್ಚಿತ ವಿಷಯದ ಲೇಖನ, ಇದರಲ್ಲಿ ಕೇವಲ ಸ್ಥಳ , ಹೆಸರು, ಮತ್ತು ಘೋಷಣೆಯ ಬಗ್ಗೆ ಮಾತ್ರ ಉಲ್ಲೇಖಿಸಿದ್ದು , ಇನ್ಯಾವುದೇ ತರಹದ ಬೇರೆ ವಿಷಯಗಳನ್ನು ಇನ್ನೂ ಸೇರಿಸಿಲ್ಲ, ಒಂದು ವೇಳೆ ಈ ವಿಶ್ವವಿದ್ಯಾಲಯದ ಯೋಜನೆ ಸಂಪೂರ್ಣ ಕಾರ್ಯರೂಪಕ್ಕೆ ಬರದೆ ನಿಂತು ಹೋದರೆ, ಇದು ಯಾಕೆ ನಿಂತು ಹೋಯಿತು ಇದರ,ಹಿನ್ನಲೆ ಏನು ಎಂಬುದು ಮುಂದಿನ ದಿನಗಳಲ್ಲಿ ಈ ಲೇಖನದಲ್ಲಿ ಸೇರಿಸ ಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಈ ಮಹತ್ವದ ಯೋಜನೆಯ ಮಾಹಿತಿಯಾದರೂ ದೊರೆಯುತ್ತದೆ. ಅದನ್ನು ಬಿಟ್ಟು ಅಳಿಸುವಿದರಿಂದ ಏನು ಪ್ರಯೋಜನ?

ಈ ವಿಶ್ವವಿದ್ಯಾಲಯವು ಉತ್ತರ ಕನ್ನಡ ಜಿಲ್ಲೆಯ ಬಹು ಚರ್ಚಿತ ವಿಷಯವಾಗಿದ್ದು ಇದರ ಬಗ್ಗೆ ಅನೇಕರು ತಿಳಿದುಕೊಳ್ಳಲ್ಲು ಅಂತರ್ಜಾಲವನ್ನು ಬಳಸುತ್ತಾರೆ, ಅವರೀಗ ಇದರ ಬಗ್ಗೆ ಸಂಕ್ಷಿಪ್ತ ಮತ್ತು ಚುಟುಕು ಮಾಹಿತಿ ನೀಡಲು ಈ ಲೇಖನವನ್ನು ರಚಿಸಲಾಗಿದೆ.

ಅಸ್ತಿತ್ವದಲ್ಲಿ ಇಲ್ಲ ಎಂಬುದು ಸೂಕ್ತ ಕಾರಣವಾದರೆ, ಅಯೋಧ್ಯ ರಾಮಮಂದಿರದ ಕುರಿತು ಇರುವ ಲೇಖನವನ್ನೂ ಕೂಡ ಅಳಿಸಬೇಕು ಅಲ್ಲವೇ? ಯಾಕೆಂದರೆ ಅದು ಕೂಡ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲವಲ್ಲಾ ಅದಿನ್ನೂ ನಿರ್ಮಾಣದ ಅಂತದಲ್ಲಿಯೆ ಇದೆ. ಮತ್ತು ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆ ಚುನಾವಣೆಯು ಕೂಡ ಇನ್ನೂ ನಡೆದಿಲ್ಲವಲ್ಲ ಆದರೂ ಅದರ ಬಗ್ಗೆ ಲೇಖನ ಏಕೆ ಅದನ್ನು ಅಳಿಸಬೇಕು ಅಲ್ಲವೇ?

ಈ ಲೇಖನ ಅಳಿಸಲು ವಿಕಿಪಿಡಿಯಾದ ಯಾವ ಪಾಲಿಸಿಯು ಕಾರಣ ಎಂಬುದನ್ನು ತಿಳಿಸಿ , ಅದರ ಬಗ್ಗೆ ಚರ್ಚಿಸಿ ನಂತರ ಬೇಕಾದರೆ ಅಳಿಸಿ. ಹುಲಿ🐯 (ಚರ್ಚೆ) ೧೬:೧೫, ೨೮ ಫೆಬ್ರವರಿ ೨೦೨೩ (IST)Reply

Return to "ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ" page.