ಚರ್ಚೆಪುಟ:ತಮಿಳುನಾಡು ಸರ್ಕಾರ
'ತಮಿಳುನಾಡು ಸರ್ಕಾರ' ಎಂಬ ವಿಷಯದಲ್ಲಿ ಅಲ್ಲಿನ ಸರ್ಕಾರದ ಬಗ್ಗೆ, ರಚನೆ ಬಗ್ಗೆ, ಕೆಳಮನೆ, ಮೇಲ್ಮನೆ, ಸದಸ್ಯರು, ಆಯ್ಕೆ ವಿಧಾನ, ಕಾರ್ಯನಿರ್ವಹಣೆ ಮುಂತಾದ ಜೆನೆರಲ್ ಮಾಹಿತಿಗಳನ್ನು ಬರೆಯಬೇಕೇ ಹೊರತು ಯಾವುದೋ ಒಂದು ಪಕ್ಷದ ಸರ್ಕಾರ, ಮುಖ್ಯಮಂತ್ರಿ ಜಾರಿಗೆ ತಂದ ಯೋಜನೆಗಳನ್ನಲ್ಲ. ಇದರಲ್ಲಿ ಪನ್ನೀರ್ ಸೆಲ್ವಂ ಪ್ರಮಾಣವಚನ ಸ್ವೀಕರಿಸಿದರು ಎಂದೆಲ್ಲಾ ವರದಿಯಂತೆ ಬರೆಯುವುದು ಅಸಂಬದ್ಧ. ಇಲ್ಲದಿದ್ದಲ್ಲಿ ಪ್ರಸ್ತುತ ಸರ್ಕಾರಕ್ಕೆ ಅಂತ ಒಂದು ಪುಟ ಮಾಡಿ ಅಲ್ಲಿ ಈ ಮಾಹಿತಿಗಳನ್ನು ಹಾಕಬಹುದು --Vikas Hegde (ಚರ್ಚೆ) ೦೪:೪೮, ೮ ಡಿಸೆಂಬರ್ ೨೦೧೬ (UTC)
ಉತ್ತರ
ಬದಲಾಯಿಸಿ- ದಯವಿಟ್ಟು ನೀವು The legislature of Tamil Nadu ಮತ್ತು 'ತಮಿಳುನಾದಿನ ಸರ್ಕಾರದ ಇತಿಹಾಸ' ಪುಟವನ್ನು ರಚಿಸಿ. ಇರುವುದನ್ನು ತೆಗೆಯಲು ಹೋಗಬೇಡಿ. ಹಿಂದೆ ಒಂದು ಪುಟದಲ್ಲಿ ಹಾಕಿದ ಚುನಾವಣೆ ವಿವರವನ್ನು ಬೇರೆಪುಟಕ್ಕೂ ಹಾಕದೆ ಅಳಿಸಿ ಹಾಕಿದ್ದಿರಿ. ನಿಮ್ಮ ವಿಚಾರವೇ ಸರಿ ಎಂಬ ಹಠಸಿದ್ಧಾಂತ ಸರಿಯಲ್ಲ. ನೀವು ತರಬೇತಿಕೊಟ್ಟಿರುವ ಒಬ್ಬರೂ ಸರಿಯಾದ ಉಲ್ಲೇಕವಿರುವ ಸಮಗ್ರ ಲೇಕನ ಹಾಕಿಲ್ಲ. ಶಿಷ್ಯರು ವಿಫಲರಾದರೆ ಶಿಕ್ಷಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
- O.ಪನ್ನೀರ್ಸೆಲ್ವಂ ಅವರು ಜಯಲಲಿತಾ ನಂತರ ಹೇಗೆ, ಯಾವಾಗ, ಏಕೆ ಅಧಿಕಾರಕ್ಕೆ ಬಂದರು ಎನ್ನುವುದು ಓದುಗರಿಗೆ ಮುಖ್ಯ; ವಿಷಯ ಸಮಗ್ರತೆ ದೃಷ್ಟಿಯಿಂದಲೂ ಮುಖ್ಯ, ಮತ್ತು ಸರ್ಕಾರದ ಆಡಳಿದಲ್ಲಿ ಏನು ವಿಶೇಷತೆ ಇದೆ ಎನ್ನುವುದೂ ಮಖ್ಯ. ಹಿಂದು ಮುಂದಿನ ವಿಚಾರ ಬರೆಯದೆ ಟಿಪ್ಪಣಿಗಳಂತೆ ವಿಷಯ ತಂಬುವುದು ಮತ್ತೂ ಅಸಂಬದ್ಧವೆಂದು ನನ್ನ ಅನಿಸಿಕೆ. ಮೊದಲಿನ ಮೂರು-ನಾಲ್ಕು ಪ್ಯಾರಾ ಇಂಗ್ಲಿಷ್ ವಿಕಿಯಿಂದ ಎತ್ತಿದ್ದೇನೆ. ಅಲ್ಲಿಯೂ ಕೂಡಾ ಲೇಖನ ಅಪೂರ್ಣ,ಅಸ್ಪಷ್ಟ, ಮತ್ತು ಸಮಗ್ರತೆ ಇಲ್ಲ.
- ತಮಿಳು ನಾಡಿನಲ್ಲಿ ಸರ್ಕಾರ ರಚನೆಯಾಗಿ ನೀವು ಇಷ್ಟು ದಿನವಾದರೂ ನೀವು ಏಕೆ ಈ ಪುಟ ರಚನೆ ಮಾಡಲಿಲ್ಲ?? ಈಗ ತಕರಾರು ತೆಗೆಯುತ್ತಿದ್ದೀರಿ. ಈ ಸವಾರಿ ಕೆಲಸದಿಂದಲೇ ಸರಿಯಾದ ಲೇಖನಗಳಿಲ್ಲದೇ ಬರೀ ಚುಟುಕಗಳಿಂದ, ಉಲ್ಲೇಕಗಳಿಲ್ಲದ 'ಸಾವಿರಾರು ಅಸಂಬದ್ಧ ಲೇಖನ'ಗಳು ಕನ್ನಡ ವಿಕಿಯಲ್ಲಿ ತುಂಬಿಹೋಗಿದೆ. ದಯವಿಟ್ಟು ಅವನ್ನು ಸರಿಪಡಿಸಿ ಉಲ್ಲೇಖಗಳನ್ನು ಹಾಕುವ ಮತ್ತು ವಿಕಿ ಉತ್ತಮ ಪಡಿಸುವ ಕೆಲಸ ಮಾಡಿ. Bschandrasgr (ಚರ್ಚೆ) ೦೭:೪೩, ೮ ಡಿಸೆಂಬರ್ ೨೦೧೬ (UTC)
ಪ್ರತ್ಯುತ್ತರ
ಬದಲಾಯಿಸಿ- ವಿಕಿಪೀಡಿಯ ಒಂದು ಸಮುದಾಯದ ಕೆಲಸ. ಇಲ್ಲಿ ನೀವು ಹಾಕುವ ಲೇಖನಗಳು ನಿಮ್ಮ ಆಸ್ತಿಯಲ್ಲ. ನಿಮ್ಮ ಹಕ್ಕೂ ಇರುವುದಿಲ್ಲ. ಇಲ್ಲಿ ಎಲ್ಲಾದರ ಬಗ್ಗೆಯೂ ಚರ್ಚೆಗೆ, ಸಂಪಾದನೆಗೆ /ತಿದ್ದುವಿಕೆಗೆ ಅವಕಾಶ ಇದೆ. ಇದನ್ನು ಈ ಮೊದಲೇ ನಿಮಗೆ ತಿಳಿಸಲಾಗಿದೆ. ಮೊದಲು ಈ ಮೂಲಭೂತ ನೀತಿ ತಿಳಿದುಕೊಂಡು ಅನಂತರ ಸಂಪಾದನೆಗೆ ಇಳಿಯಿರಿ.
- ಇನ್ನು ವಿಕಿಯಲ್ಲಿ ಶಿಷ್ಯ ಗುರು ಅಂತೆಲ್ಲಾ ಇರುವುದಿಲ್ಲ. ಎಲ್ಲರೂ ಸಂಪಾದಕರು. ತಪ್ಪು ಮಾಡುತ್ತಿದ್ದರೆ ಅದಕ್ಕೆ ಅವರೇ ಹೊಣೆ. ಸಮುದಾಯದ ಬೇರೆಯವರು ಇಂತದ್ದು ತಪ್ಪು ಅಂತ ಹೇಳಿದರೆ ಅದನ್ನು ತಿಳಿದುಕೊಳ್ಳುವುದು ಅಥವಾ ಚರ್ಚಿಸುವುದೂ ಕೂಡ ಸಂಪಾದಕರ ಕರ್ತವ್ಯ. ಸುಮ್ಮನೇ ಸಿಕ್ಕಸಿಕ್ಕ ಮಾಹಿತಿ ತಂದು ಸುರಿಯುತ್ತಾ ಹೋಗಿ ಬೇರೆಯವರು ಚರ್ಚೆ ಮಾಡಿದಾಗ ಕೋಪಗೊಳ್ಳುವುದಲ್ಲ.
- ನಾನಿಲ್ಲಿ ಪನ್ನೀರ್ ಸೆಲ್ವಂ ಜಯಲಲಿತಾ ಮುಂತಾದ ಮಾಹಿತಿ ತಪ್ಪು ಅಂತ ಹೇಳುತ್ತಿಲ್ಲ. ಅದು ಅಮುಖ್ಯ ಅಂತಲೂ ಹೇಳುತ್ತಿಲ್ಲ. ಮೊದಲು ಏನು ಹೇಳುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಾನು ಹೇಳಿದ್ದು ಈ ಪುಟದಲ್ಲಿ ಆ ನಿರ್ದಿಷ್ಟ ಮಾಹಿತಿ ಹಾಕಬಾರದು ಎಂದು. ಬೇಕಿದ್ದಲ್ಲಿ ಈ ನಿರ್ದಿಷ್ಟ ಸರ್ಕಾರದ ಬಗ್ಗೆ ಒಂದು ಪುಟ ಮಾಡಿ ಅಲ್ಲಿ ಇಂತಹ ಮಾಹಿತಿ ಹಾಕಬಹುದು. ’ಒಂದು ಸರ್ಕಾರ’ ಎಂದರೆ ಏನು ಎಂಬ ಮೂಲಭೂತ ತಿಳಿವಳಿಕೆ ಇಲ್ಲವೇ ನಿಮಗೆ? ತಮಿಳುನಾಡು ಸರ್ಕಾರ ಅಂದರೆ ಈಗಿನ ಎಐಡಿಎಂಕೆ ಸರ್ಕಾರ ಮಾತ್ರ ಅಲ್ಲ.
- ನೀವು ಹಾಕುವ ಹಲವಾರು ಮಾಹಿತಿಗಳೂ ಪತ್ರಿಕಾ ವರದಿಯ ರೂಪದಲ್ಲಿರುತ್ತವೆ. ಇದು ವಿಶ್ವಕೋಶ. ’ನಿನ್ನೆ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು”. ’ಇವತ್ತು ಮೂರು ಜನ ಆತ್ಮಹತ್ಯೆ ಮಾಡಿಕೊಂಡರು’.”ಪ್ರಮಾಣವಚನ ಸ್ವೀಕರಿಸಿಲಿದ್ದಾರೆ ’ ಎಂದೆಲ್ಲಾ ಪತ್ರಿಕೆ ಶೈಲಿಯಲ್ಲಿ ಬರೆಯಬಾರದು. ಎಲ್ಲಾ ವಿಷಯಗಳ ಬಗ್ಗೆಯೂ ದಿನವೂ ಹಠಕ್ಕೆ ಬಿದ್ದಂತೆ ದಿನಪತ್ರಿಕೆಗಳಿಂದ ಮಾಹಿತಿ ಕಾಪಿ ಮಾಡಿ ಇಲ್ಲಿ ಪೇಸ್ಟ್ ಮಾಡುವ ಬದಲು ವಿಶ್ವಕೋಶಕ್ಕೆ ತಕ್ಕುದಾದ ಶೈಲಿ ಬಳಸಿ. ಇಲ್ಲದಿದ್ದಲ್ಲಿ ನಿಮ್ಮಿಂದ ಸರಿಯಾದ ಫಾರ್ಮ್ಯಾಟಿಂಗ್ ಇಲ್ಲದ ಸರಿಯಾದ ಶೈಲಿಯಿಲ್ಲದ ಒಂದಷ್ಟು ಕಾಪಿ ಪೇಸ್ಟ್ ಮಾಹಿತಿಗಳು ವಿಕಿಯಲ್ಲಿ ತುಂಬುತ್ತವೆಯೇ ಹೊರತು ವಿಶ್ವಕೋಶ ಗುಣಮಟ್ಟದ ಲೇಖನಗಳಲ್ಲ.
- ಇನ್ನು ಬೇರೆಯವರ ಬಗ್ಗೆ ಹೇಳುವುದಾರೆ, ಅವರು ತಪ್ಪು ಮಾಡುತ್ತಿದ್ದರೆ, ನೀವು ಸಹ ಅವರಿಗೆ ತಿಳಿವಳಿಕೆ ಕೊಡಬಹುದು. ನಾವು ಲೇಖನಗಳಲ್ಲಿ ತಪ್ಪು ಮಾಡಿದರೆ ಖಂಡಿತ ನಮಗೆ ತಿಳಿಹೇಳಿ. ತಪ್ಪು ತೋರಿಸಿ. ಚರ್ಚೆ ಮಾಡಿ. ತಿದ್ದಿಕೊಳ್ಳುತ್ತೇವೆ. ಬೇರೆಯವರೂ ತಪ್ಪು ಮಾಡುತ್ತಿದ್ದಾರೆ ಹಾಗಾಗಿ ನೀವು ಮಾಡುವುದರ ಬಗ್ಗೆ ಚರ್ಚೆ ಮಾಡುವಂತಿಲ್ಲ ಎಂಬ ಹಠಮಾರಿ ಧೋರಣೆ ಸರಿಯಲ್ಲ. ಅಸಂಬದ್ಧ ಲೇಖನ'ಗಳು ಕನ್ನಡ ವಿಕಿಯಲ್ಲಿ ತುಂಬಿಹೋಗಿದೆ ಎಂದರೆ ಅದರಲ್ಲಿ ನಿಮ್ಮ ಪಾಲೂ ಇದೆ. ಅದು ದಿನವೂ ಸೃಷ್ಟಿಯಾಗುತ್ತಿದೆ. ಏಕೆಂದರೆ ಅತಿ ಹೆಚ್ಚು ಸಂಪಾದನೆ ಮಾಡುತ್ತಿರುವವರು ನೀವೇ.
- ಇನ್ನು ಇದು ’ತಮಿಳುನಾಡು ಸರ್ಕಾರ’ ಪುಟದ ಬಗ್ಗೆ ಚರ್ಚಾಪುಟ. ಇಲ್ಲಿ ಈ ವಿಷಯದ ಬಗ್ಗೆ ಮಾತ್ರ ಚರ್ಚೆ ಮಾಡಬೇಕು. ಈ ತಿಳಿವಳಿಕೆಯೂ ನಿಮಗಿಲ್ಲ. ಸಂಬಂದವಿಲ್ಲದ ವಿಷಯಗಳನ್ನು ತಂದು ಮಾತಾಡುತ್ತಿದ್ದೀರಿ. ಹಾಗಾಗಿ ಉತ್ತರಿಸಬೇಕಾಯಿತು. ಈ ಪುಟದ ವಿಷ್ಯಕ್ಕೆ ಹೊರತುಪಡಿಸಿ ಬೇರೆ ಇದ್ದರೆ ವೈಯಕ್ತಿಕ ಚರ್ಚಾಪುಟದಲ್ಲಿ, ಅರಳೀಕಟ್ಟೆಯಲ್ಲಿ ಹಾಕಿ. --Vikas Hegde (ಚರ್ಚೆ) ೦೬:೧೮, ೧೦ ಡಿಸೆಂಬರ್ ೨೦೧೬ (UTC)
ಉತ್ತರ
ಬದಲಾಯಿಸಿ- ನಾನು ಹೇಳುವುದು ಯಾವದೇ ಡಾಗ್ಮಾಟಿಕ್ ದೃಷ್ಟಿಯಿಂದ ಟೀಕಿಸುವುದು ಸರಿಯಲ್ಲ. ಓದುಗರ ಅಗತ್ಯಕ್ಕಾಗಿಯೇ ಬರವಣಿಗೆ ಇರುವುದು. ಅದನ್ನು ಪೂರಯಸದ ಲೇಖನ ಅಪೂರ್ಣ -ಅನಗತ್ಯ. ಅದು ಇಂಗ್ಲಿಷ್ ಇರಬಹುದು ಕನ್ನಡ ಇರಬಹುದು. ಇನ್ನು ಸುದ್ದಿ ಸಂಸ್ಥೆಯ ಮಾಹಿತಿಗಳಿಗೆ ಕಾಪಿರೀಟ್ ಅನ್ವಯಿಸುವುದಿಲ್ಲ. ಜಯಲಲಿತಾ ಹೃದಯಾಘಾತದಿಂದ ವಿಧಿವಶರಾದರು ಎಂದಿದ್ದರೆ ಅದನ್ನು ಹಾಗೆಯೇ ಕಾಪಿಮಾಡವುದರಲ್ಲಿ ತಪ್ಪಿಲ್ಲ. ಪದಗಳನ್ನು ಹಿಂದೆಮುಂದೆ ಮಾಡಬೇಕಾದ್ದಿಲ್ಲ. ಒಂದು ಲೇಖನ ಹೇಗೆ ಬರೆಯಯಬೇಕೆಂಬುದಕ್ಕೆ ಗಟ್ಟಿಯಾದ ನಿಯಮಿಲ್ಲ. ಅದು ಅವರವರ ದೃಷ್ಟಿಕೋನವನ್ನು ಅವಲಂಬಿಸಿದೆ. ವಿಕಿನಿಯಮ ಹೇಳುವಾಗಲೇ ಇದನ್ನು ಹೇಳಿದೆ:
- [ನಿಯಮದ ಬಗ್ಗೆ ವಿಕಿ ಸಂದೇಶ: ಈ ಟೆಂಪ್ಲೇಟ್ ನೋಡಿ:(ಟೆಂಪ್ಲೇಟ್ ಇದೆ-ಕೆಟ್ಟಿದೆ: This guideline is a part of the English Wikipedia's Manual of Style. Use common sense in applying it; it will have occasional exceptions.]
- ನಾನು ಕಸ ಮತ್ತು ಅಸಂಬದ್ಧ ಲೇಖನಗಳನ್ನು ತುಂಬಿದ್ದೇನೆನ್ನುವುದು ನಿಮ್ಮ ಪೂರ್ವಾಗ್ರಹ ಭಾವವೆಂದು ವಿನಯವಾಗಿ ಹೇಳುತ್ತೇನೆ. ಕೆಲವೊಮ್ಮೆ ನಿಮ್ಮ ದೃಷ್ಟಿಕೋನಕ್ಕೆ ಸರಿ ಬರದಿದ್ದರೆ ಅದು ಅಸಂಬದ್ಧವಾಗುವುದು. ನಾನು ಬಹಳಷ್ಟು ಇಂಗ್ಲಿಷ್ ವಿಕಿ ಲೇಖನ ಅನುವಾದ ಮಾಡಿದ್ದೇನೆ. ಆದರೆ ಅಲ್ಲಿಯ ಉದ್ದದ ವಾಕ್ಯಗಳನ್ನು ಚಿಕ್ಕದು ಮಾಡಿದ್ದೇನೆ. ಅನೇಕ ಪ್ರಸ್ತುತ ಅಗತ್ಯ ವಿಷಯಗಳು, ಮಾಹಿತಿಗಳು, ಅಂಕೆ ಅಂಶಗಳನ್ನು ವಿಕಿಯಲ್ಲಿ ದಾಖಲೆಗಾಗಿ ಹಾಗೆ ತೆಗೆದುಕೊಳ್ಳುತ್ತೇನೆ. ಬಿಟ್ಟರೆ ಮತ್ತೆ ಸಿಗವುದಿಲ್ಲ ವ್ಯರ್ಥವಾಗಿ ಹೋಗುವುದು.
- ಉಲ್ಲೇಖಗಳೇ ಇಲ್ಲದ ಅರ್ಥವಾದ ವಾಕ್ಯಗಳುಳ್ಳ ಲೇಖನದ ಕಡೆ ನಿಮ್ಮ ಗಮನ ಏಕೆ ಹೋಗದು? ಅದರಲ್ಲಿ ಕೆಲವನ್ನಾದರೂ ಸರಿಪಡಿಸಿ ಕನ್ನಡ ವಿಕಿಯ ಗುಣಮಟ್ಟ ಹೆಚ್ಚಿಸ ಬಹುದಲ್ಲ.-ನಿಮ್ಮವ/Bschandrasgr (ಚರ್ಚೆ) ೦೭:೫೧, ೧೧ ಡಿಸೆಂಬರ್ ೨೦೧೬ (UTC)
- ’ತಮಿಳುನಾಡು ಸರ್ಕಾರ’ ಪುಟದ ವಿಷಯದ ಬಗ್ಗೆ ಹೊರತುಪಡಿಸಿ ಬೇರೆ ವಿಷಯಗಳ ಬಗ್ಗೆ ಇದು ಚರ್ಚಾಪುಟವಲ್ಲ --Vikas Hegde (ಚರ್ಚೆ) ೧೨:೪೬, ೧೬ ಡಿಸೆಂಬರ್ ೨೦೧೬ (UTC)