ದಕ್ಷಿಣ ಚೀನಾ ಸಮುದ್ರ ವಿವಾದ

ಬದಲಾಯಿಸಿ
  • South China Sea disputes
  • Wed, 13/07/2016;prajavani:
  • ದಕ್ಷಿಣ ಚೀನಾ ಸಮುದ್ರ ಚೀನಾಕ್ಕೆ ಸೇರಿಲ್ಲ: ಹಕ್ಕು ಪ್ರತಿಪಾದನೆ ಅಸಿಂಧು :ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ತೀರ್ಪು;
  • (ಹೇಗ್/ ಬೀಜಿಂಗ್/ ಮನಿಲಾ-ಪಿಟಿಐ): ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ತೀರ್ಪು ನೀಡಿದೆ.
  • ಹಲವು ಶತಮಾನಗಳಿಂದ ಚೀನಿಯರು ಅಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಚೀನಾದ ಪ್ರತಿಪಾದನೆಯನ್ನು ಒಪ್ಪಲು ಸಾಧ್ಯವಿಲ್ಲ. ಅದಕ್ಕೆ ಐತಿಹಾಸಿಕ ಆಧಾರವಿಲ್ಲ.ಹೀಗಾಗಿ ದಕ್ಷಿಣ ಚೀನಾ ಸಮುದ್ರ ಚೀನಾಕ್ಕೆ ಸೇರಿಲ್ಲ ಎಂದು ನ್ಯಾಯಮಂಡಳಿ ತೀರ್ಪಿನಲ್ಲಿ ಹೇಳಿದೆ.
  • ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಅಧಿಕಾರ ಸಿಂಧುತ್ವವನ್ನು ಪ್ರಶ್ನಿಸಿ ಫಿಲಿಪ್ಪೀನ್ಸ್ 2013ರಲ್ಲಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಫಿಲಿಪ್ಪೀನ್ಸ್, ಜಪಾನ್, ವಿಯೆಟ್ನಾಂ ಮತ್ತು ಅಮೆರಿಕಗಳು ತೀರ್ಪನ್ನು ಸ್ವಾಗತಿಸಿವೆ. ಆದರೆ ತೀರ್ಪಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಚೀನಾ ಹೇಳಿದೆ.
  • ಚೀನಾ ಆಕ್ರೋಶ: ದಕ್ಷಿಣ ಚೀನಾ ಸಮುದ್ರದಿಂದ ಕಾಲ್ತೆಗೆಯುವ ಮಾತೇ ಇಲ್ಲ ಎಂದು ಚೀನಾ ಹೇಳಿರುವುದರಿಂದ ಬಿಕ್ಕಟ್ಟು ಬಿಗಡಾಯಿಸಿದೆ. ಅಮೆರಿಕ ಮತ್ತು ಜಪಾನ್‌ಗಳ ನಡೆಯನ್ನು ನೋಡಿ ತನ್ನ ನಡೆಯನ್ನು ನಿರ್ಧರಿಸುವುದಾಗಿ ಚೀನಾ ಹೇಳಿದೆ.
  • ‘ಯಾವುದೇ ರೀತಿಯ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ದೇಶದ ಜನತೆ ಹಿಂದಿನಂತೆ ಮುಂದೆಯೂ ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ದಕ್ಷಿಣ ಚೀನಾ ಸಮುದ್ರ ಉಳಿಸಿಕೊಳ್ಳಲು ನಾವು ಯಾವ ಬೆಲೆ ತೆರಲೂ ಸಿದ್ಧರಿದ್ದೇವೆ.
  • ಪ್ರಜೆಗಳು ಸರ್ಕಾರದ ಈ ನಿರ್ಧಾರವನ್ನು ಒಪ್ಪುತ್ತಾರೆ ಎಂದು ನಮಗೆ ನಂಬಿಕೆ ಇದೆ’ ಎಂದು ಚೀನಾ ಸರ್ಕಾರ ಹೇಳಿರುವುದಾಗಿ ಸರ್ಕಾರಿ ಪ್ರಾಯೋಜಿತ ಸುದ್ದಿ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ‘ನಮ್ಮ ಸೇನೆಯ ಸಾಮರ್ಥ್ಯವನ್ನು ಪರೀಕ್ಷಿಸುವ ಪರಿಸ್ಥಿತಿ ಎದುರಾದರೆ ಅದಕ್ಕೂ ನಾವು ಸಿದ್ಧರಿದ್ದೇವೆ’ ಎಂದು ಚೀನಾ ಹೇಳಿದೆ.
  • ಕಟ್ಟೆಚ್ಚರ: ಚೀನಾದಲ್ಲಿರುವ ಫಿಲಿಪ್ಪೀನ್ಸ್‌ ಪ್ರಜೆಗಳು ಮತ್ತು ಚೀನಾ ಪ್ರಜೆಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇರುವುದರಿಂದ ಚೀನಾ ದೇಶದೊಳಗೆ ಕಟ್ಟೆಚ್ಚರ ವಹಿಸಿದೆ.
  • ಬೀಜಿಂಗ್‌ನಲ್ಲಿರುವ ಫಿಲಿಪ್ಪೀನ್ಸ್ ರಾಯಭಾರ ಕಚೇರಿಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಚೀನಾ ಸರ್ಕಾರ ನಿಯೋಜಿಸಿದೆ. ಜತೆಗೆ ಫಿಲಿಪ್ಪೀನ್ಸ್ ಸರ್ಕಾರ ಸಹ ಚೀನಾದಲ್ಲಿರುವ ತನ್ನ ಪ್ರಜೆಗಳಿಗೆ, ‘ಈ ತೀರ್ಪಿನ ಬಗ್ಗೆ ಯಾವುದೇ ರೀತಿಯಲ್ಲೂ ಚರ್ಚೆ ನಡೆಸಬೇಡಿ’ ಎಂದು ಸೂಚಿಸಿದೆ.
  • ತೀರ್ಪು ಪರಿಶೀಲನೆ: ಇಂತಹ ಮಹತ್ವದ ತೀರ್ಪು ನೀಡಿದ್ದಕ್ಕಾಗಿ ಫಿಲಿಪ್ಪೀನ್ಸ್ ನ್ಯಾಯಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತದೆ. ತೀರ್ಪಿನ ಪ್ರತಿಯನ್ನು ಕಾನೂನು ತಜ್ಞರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಜತೆಗೆ ನಮ್ಮ ಬೆಂಬಲಕ್ಕೆ ನಿಂತಿರುವ ರಾಷ್ಟ್ರಗಳ ಜತೆಯೂ ಚರ್ಚಿಸಲಾಗುವುದು ಎಂದು ಫಿಲಿಪ್ಪೀನ್ಸ್‌ನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಪರ್ಫೆಕ್ಟೊ ಯಾಸ್‌ ಹೇಳಿದ್ದಾರೆ.
  • ಈ ತೀರ್ಪನ್ನು ಪರಿಶೀಲಿಸುವುದಾಗಿ ಭಾರತ ಸರ್ಕಾರವೂ ಹೇಳಿದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಮುಕ್ತ ಸಮುದ್ರಯಾನಕ್ಕೆ ಅವಕಾಶವಿದೆ. ಪ್ರದೇಶದಲ್ಲಿ ಹಲವು ದೇಶಗಳ ಸರಕು ಸಾಗಣೆ ಹಡಗುಗಳು ಸಂಚರಿಸುತ್ತವೆ. ಹೀಗಾಗಿ ಈ ತೀರ್ಪು ಭಾರತದ ಪಾಲಿಗೂ ಮಹತ್ವದ್ದಾಗಿದೆ.
  • ತೀರ್ಪು ಬಂದಾಯಿತು, ಮುಂದೇನು?
  • ನ್ಯಾಯಮಂಡಳಿ ತೀರ್ಪು ಬಂದ ನಂತರ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿರುವ ನೈಸರ್ಗಿಕ ಸಂಪತ್ತನ್ನು ಹಂಚಿಕೊಳ್ಳುವ ಬಗ್ಗೆ ಚೀನಾದ ಜತೆ ನೇರವಾಗಿ ಮಾತುಕತೆ ನಡೆಸುವುದಾಗಿ ಫಿಲಿಪ್ಪೀನ್ಸ್ ಹೇಳಿತ್ತು. ಇದು ಒಳ್ಳೆಯ ಬೆಳವಣಿಗೆ. ಇದಕ್ಕೆ ಚೀನಾ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕು.
  • ಈ ವಿವಾದಕ್ಕೆ ಸಂಬಂಧಿಸಿದಂತೆ ಯುದ್ಧ ಮಾಡುವುದು ಯಾವ ರಾಷ್ಟ್ರಕ್ಕೂ ಬೇಕಿಲ್ಲ. ಆದರೆ ಎಲ್ಲಾ ರಾಷ್ಟ್ರಗಳೂ ತಮ್ಮ ಸೇನಾಬಲವನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ವಾಯುಗಡಿಯನ್ನೂ ಗುರುತಿಸಿ, ನಿರ್ಬಂಧ ಹೇರುವ ಸಾಧ್ಯತೆ ಇದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
  • ‘ತೀರ್ಪು ಕಾಗದದ ತುಂಡಷ್ಟೆ’
  • ‘ಜಲಗಡಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಹರಿಸುವ ಅಧಿಕಾರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಇಲ್ಲ. ಹೀಗಾಗಿ ಅದರ ತೀರ್ಪು ಒಂದು ಕಾಗದದ ತುಂಡಷ್ಟೆ’ ಎಂದು ಚೀನಾ ಹೇಳಿದೆ.
  • ಹೀಗಾಗಿ ಈ ತೀರ್ಪಿಗೆ ಮಾನ್ಯತೆಯೇ ಇಲ್ಲ. ನಾವು ಅದನ್ನು ಒಪ್ಪುವುದೂ ಇಲ್ಲ. ಜತೆಗೆ ದಕ್ಷಿಣ ಚೀನಾ ಸಮುದ್ರದಿಂದ ನಾವು ಒಂದು ಹೆಜ್ಜೆಯನ್ನೂ ಹಿಂದೆ ಇಡುವುದಿಲ್ಲ ಎಂದು ಚೀನಾ ಹೇಳಿದೆ.

ತೀರ್ಪಿನ ವಿರುದ್ಧ ಶ್ವೇತಪತ್ರ ಹೊರಡಿಸಿದ ಚೀನಾ

ಬದಲಾಯಿಸಿ
  • ಬೀಜಿಂಗ್ (ಪಿಟಿಐ): ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ತೀರ್ಪು ಅಲ್ಲಗಳೆದಿರುವ ಚೀನಾ, ತೀರ್ಪಿನ ವಿರುದ್ಧ ಶ್ವೇತಪತ್ರ ಹೊರಡಿಸಿದೆ.
  • ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ನ್ಯಾಯಮಂಡಳಿಯು ಮಂಗಳವಾರ ತೀರ್ಪು ನೀಡಿದೆ.
  • ಚೀನಾ ಫಿಲಿಪ್ಪೀನ್ಸ್‌ನ ಸಾರ್ವಭೌಮ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುವ ಮೂಲಕ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ ಎಂದು ನ್ಯಾಯಮಂಡಳಿ ತೀರ್ಪಿನಲ್ಲಿ ಹೇಳಿದೆ.
  • ಸುಮಾರು 2 ಸಾವಿರ ವರ್ಷಗಳಿಂದಲೂ ದಕ್ಷಿಣ ಚೀನಾ ಸಮುದ್ರ ಚೀನಾಕ್ಕೆ ಸೇರಿದ್ದು ಎಂದು ಶ್ವೇತಪತ್ರದ ಮೂಲಕ ಪ್ರತಿಪಾದಿಸಿರುವ ಚೀನಾ, ಫಿಲಿಪ್ಪೀನ್ಸ್‌ ಚೀನಾದ ಸಮುದ್ರ ಭಾಗವನ್ನು ಅತಿಕ್ರಮಣ ಮಾಡುತ್ತಿದೆ ಎಂದು ದೂರಿದೆ.
  • [[೧]]

Beijing vows to protect South China Sea ‘sovereignty’, Manila upbeat

ಬದಲಾಯಿಸಿ
  • Reuters | Jul 13, 2016,
  • (BEIJING/MANILA): China vowed to take all necessary measures to protect its "sovereignty" over the South China Sea and said it had the right to set up an air defence zone, after rejecting an international tribunal's ruling denying its claims to the energy-rich waters.ಸಮುದ್ರ ನಕ್ಷೆ:[[೨]]
  • ಹೆಚ್ಚಿನ ವಿಮರ್ಶೆಗೆ;ಎನ್‍ಡಿಟಿವಿವರದಿ-(© 2016 The Washington Post):[[೩]]
  • Bschandrasgr (ಚರ್ಚೆ) ೧೩:೩೨, ೧೩ ಜುಲೈ ೨೦೧೬ (UTC)

ದಕ್ಷಿಣ ಚೀನಾ ಸಮುದ್ರ ಯುದ್ಧಭೂಮಿ ಆಗುವುದು ಬೇಡ: ಚೀನಾ ಎಚ್ಚರಿಕೆ

ಬದಲಾಯಿಸಿ

Thu, 14th Jul, 2016 ದಕ್ಷಿಣ ಚೀನಾ ಸಮುದ್ರವನ್ನು ಯುದ್ಧಭೂಮಿಯನ್ನಾಗಿಸಬೇಡಿ ಎಂದು ಚೀನಾ ತನ್ನ ಪ್ರತಿಸ್ಪರ್ಧಿ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.ಇಡೀ ಪ್ರಾಂತವನ್ನು ವಾಯುಗಡಿ ರಕ್ಷಣಾ ವಲಯವನ್ನಾಗಿ ಘೋಷಿಸುವ ಹಕ್ಕು ನಮಗಿದೆ. ಅದಕ್ಕೆ ಅವಕಾಶ ನೀಡಬೇಡಿ ಎಂದು ಚೀನಾ ಬೆದರಿಕೆ ಒಡ್ಡಿದೆ. [[೪]]

Return to "ಚೀನಾ" page.