ಚರ್ಚೆಪುಟ:ಕುಮಾರವ್ಯಾಸ

ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಕೆಲವು ಒಗಟು ಪದ್ಯಗಳನ್ನು ಬಳಸಿದ್ದಾನೆ. ಅವಕ್ಕೆ ಮಂಡಿಗೆಗಳೆಂದು ಕರೆಯುತ್ತಾರೆ ಅವು ವ್ಯಾಖ್ಯಾನ ಮಾಡುವವರಿಲ್ಲದಿದ್ದರೆ ಅರ್ಥವಾಗುವುದುಕಷ್ಟ . ಉದಾಹರಣೆಗೆ : "ವೇದ ಪುರುಷನ --" ಮಂಡಿಗೆ ತಾಣಕ್ಕೆ ಹೋಗಿ. ಗಮಕಸಿರಿ -ಸ್ಮರಣ ಸಂಚಿಕೆ (೧೯೯೭)ರಲ್ಲಿ - ಶ್ರೀ ಜಗನ್ನಾಥ ಶಾಸ್ತ್ರೀ ವಿದ್ವಾಂಸರು ಮತ್ತು ಸಂಶೋಧಕರು ಇವರು ಕೊಟ್ಟ ವಿವರಣೆಗಳು Bschandrasgr ೧೯:೩೬, ೧೨ ಅಕ್ಟೋಬರ್ ೨೦೧೩ (UTC) :ಸದಸ್ಯ:Bschandrasgr/ಪರಿಚಯ - ಬಿ.ಎಸ್ ಚಂದ್ರಶೇಖರ- ಸಾಗರ

ಜೀವಂಧರ ಚರಿತೆ ಬರೆದ , ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ ,ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ ಗದುಗಿನ ವೀರನಾರಾಯಣನ ದೇವಸ್ಥಾನದ ಆವರಣದಲ್ಲಿರುವ ಕ್ರ.ಶ. ೫-೯-೧೫೩೯ ರಲ್ಲಿ ಬರೆದ ಶಾಸನದಲ್ಲಿ ವಿ ಕವಿ ಕುಮಾರವ್ಯಾಸಂಗೆ ಪ್ರಸನ್ನನಾದ ಗದುಗಿನ ವೀರನಾರಾಯಣನ ಸಂನ್ನಿಧಿಯಲ್ಲಿ .... ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆmದು ಸ್ಪಷ್ಟವಾಗಿದೆ. ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ).Bschandrasgr ೧೭:೨೨, ೮ ಜುಲೈ ೨೦೧೪ (UTC)

Return to "ಕುಮಾರವ್ಯಾಸ" page.