ಚರ್ಚೆಪುಟ:ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

*‎NinadMysuru ರವರೇ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕಾವ್ಯದ ಸತ್ವವನ್ನು ಹೇಳುವ ವಾಕ್ಯಗಳನ್ನು ಅಳಿಸಿ ಹಾಕಿ - ಕಬ್ಬಿನ ರಸವನ್ನು ತೆಗೆದು ಸಿಪ್ಪೆ ಜೊಂಡನ್ನು ಉಳಿಸಿದಂತೆ ಮಾಡಿದ್ದೀರಿ. ಅವು ಹೊಗಳಿಕೆಯ ಮಾತಲ್ಲ, ಇದ್ದ ವಿಷಯದ ವಿಮರ್ಶೆಯ ವಾಕ್ಯಗಳು. ಸತ್ಯವನ್ನು ಮರೆಮಾಚಿ ಸತ್ವಹೀನ ಲೇಖನ ವಿಕಿಯ ಉದ್ದೇಶ ಅಲ್ಲ. ವಿಕಿಯಲ್ಲಿ ಲೇಖನ ಬರೆಯಲು " ನಿಮ್ಮ,ಕಾಮನ್‍ಸೆನ್ಸ್ ಉಪಯೋಗಿಸಿ" ಎನ್ನುವುದು ಕೊನೆಯ ಸೂಚನೆ. ಸತ್ಯವನ್ನು ಹೇಳಿದರೆ ಹೊಗಳಿಕೆಯಾಗುತ್ತದೆ ಎಂಬ ಮೂರ್ಖತನದ ಕೆಲವರ (ವಿಕಿ ಪಾಠಮಾಡುವವರ) ಅಭಿಪ್ರಾಯ; ಸತ್ಯವನ್ನು ಮರೆಮಾಚಿ ವ್ಯಕ್ತಿಗೂ - ವಿಷಯಕ್ಕೂ ಅಪಚಾರ- ದ್ರೋಹ ಮಾಡುವುದು ಸರಿಯಲ್ಲ. ಸುಬ್ಗಬಲಕ್ಷ್ಮಿ ಅತ್ಯತ್ತಮ ಹಾಡುಗಾರ್ತಿಯಾಗಿದ್ದರು ಆದ್ದರಿಂದ 'ಭಾರತ ರತ್ನ' ಕೊಟ್ಟರು ಎನ್ನುವುದು ಹೊಗಳಿಕೆ ಅಲ್ಲ- ಸತ್ಯ. ಅದೇ ರೀತಿ ' ಸಚಿನ್ ಗೆ. ಅದಿಲ್ಲದಿದ್ದರೆ ನಮ್ಮೂರಿನ ಸಂಗೀತಗಾರರಿಗೆ ಏಕೆ ಪ್ರಶಸ್ತಿ ಕೊಡಲಿಲ್ಲ,? ಸಚಿನ್ ಗೆ ಮಾತ್ರಾ ಎಕೆ ಬಿರುದು, ಎಂಬ ಪ್ರಶ್ನರೆ ಹುಟ್ಟುತ್ತದೆ. ಭಟ್ಟರಿಗೆ ಮಾತ್ರಾ ಎಕೆ ಪ್ರಶಸ್ತಿ, ಅವರ ಹಾಡನ್ನು ಜನ ಏಕೆ ಮೆಚ್ಚಿದರು ಎಂಬ ಪ್ರಶ್ನೆಗೆ ಉತ್ತರ ಎಲ್ಲಿ? ತೆಗೆದಿರುವ ಉತ್ತಮ ಭಾಗಗಳನ್ನು ದಯವಿಟ್ಟು ತುಂಬಿ- ಸತ್ಯವನ್ನು ಒಪ್ಪಿಕೊಳ್ಳಿ.Bschandrasgr (ಚರ್ಚೆ) ೦೫:೪೪, ೬ ಮಾರ್ಚ್ ೨೦೨೧ (UTC)

Start a discussion about ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Start a discussion
Return to "ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ" page.