ಅಮ್ಮ

ನಾ ಹುಟ್ಟಿದ ಮೇಲೆ ತಾನೆ ನೀ ನಿನಗಾಗಿ ಬದುಕೋದ ಮರೆತದ್ದು.. ನನ್ನಲ್ಲೆ ನಿನ್ನ ಬದುಕ ಕಾಣತೊಡಗಿದ್ದು ಎಂತಹ ಅನುಬಂದವಿದು ಸೃಷ್ಟಿಕರ್ತನ ನಿಷ್ಕಲ್ಮಶ ಸಂಬಂದವಿದು..

ನಾ ಗರ್ಭದಲ್ಲಿರುವಾಗಲೇ ನನ್ನ ಮೇಲೆ ಕಟ್ಟತೊಡಗಿದ ಕನಸುಗಳನೆಲ್ಲ ಎಲ್ಲರೊಡನೆ ವಿವರಿಸುತ್ತಿದ್ದೆ.. ಅಂದೆ ನಿನ್ನೆಲ್ಲಾ ಕನಸು ನಾನಗತೊಡಗಿದೆ..

ಅತ್ತರೆ ಹಸಿವೆಂದು ಮೊದಲು ಎದೆಹಾಲ ಉಣಿಸಿ.. ನನ್ನ ಖುಶಿಗೆಂದು ಅಪ್ಪನಿಂದ ಏನೆಲ್ಲಾ ಆಟಾಸಾಮಾನ ತರಸಿ.. ನನ್ನ ನಗುವ ನೀ ನೋಡುತ್ತಿದ್ದೆ..

ತುತ್ತು ತಿನ್ನಲು ಹಟತೊಟ್ಟರೆ ಮುತ್ತು ನೀಡುತ, ಅಪ್ಪನನ್ನೇ ಆನೆ ಮಾಡಿ ನನ್ನ ಅಂಬಾರಿಯಂತೆ ಕೂರಿಸಿ ಏನೆಲ್ಲಾ ಆಟ ಆಡಿಸಿ ಚಂದಮಾಮನ ಕೊಡಿಸೋ ಆಸೆ ತೋರಿಸಿ ನನ್ನ ಕಿಲ ಕಿಲ ನಗುವಲಿ ಆ ನಗುವ ನಡುವಲಿ ತುತ್ತು ತಿನ್ನಿಸಿ ಏನೆಲ್ಲಾ ಸಂತಸವ ಕಾಣುತ್ತಿದ್ದೆ..

ನೀನು ನಿನಗೋಸ್ಕರ ಅಂದಿನಿಂದ ಖುಷಿಪಟ್ಟ ದಿನ ನಾ ನೋಡಲೇ ಇಲ್ಲವಲ್ಲ ಕಾರಣ ನಿನಗೆ ನಾನೇ ಎಲ್ಲ ಅಲ್ಲ.. ನನ್ನ ಕಣ್ಣಲೊಂದು ಹನಿ ಬಿದ್ದರೆ ಅಂದು ಮರುಗಿದವಳು ನೀನೆ ಇಂದಿಗೂ ಎಲ್ಲಿದ್ದರು ಕನಳುವಳು ನೀನೆ.. ನಿನ್ನ ಋಣ ಹೇಗೆ ತೀರಿಸಲಿ ಮರು ಜನ್ಮದಲ್ಲಾದರೂ ನನಗೆ ಕರುಣಿಸು ನಿನ್ನ ಸ್ಥಾನವ...

Return to "ಅಮ್ಮ" page.