ಚರ್ಚೆಪುಟ:ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬

ಅಮೆರಿಕಾ ಎನ್ನುವುದು ಒಂದು ದೇಶವಲ್ಲ. ಈ ಪುಟದ ವಿವರಗಳು ಅಮೆರಿಕಾ ಸಂಯುಕ್ತ ಸಂಸ್ಥಾನಗಳದ್ದು. ಅಮೆರಿಕಾ ಖಂಡದಲ್ಲಿ ಇನ್ನೂ ಅನೇಕ ದೇಶಗಳಿವೆ ಹಾಗೂ ಈ ಅಧ್ಯಕ್ಷೀಯ ಚುನಾವಣೆ ಅವುಗಳಿಗೆ ಸಂಬಂಧಿಸಿಲ್ಲ. ಅಂದಮೇಲೆ ಈ 'ಅಮೆರಿಕದ ಅಧ್ಯಕ್ಷೀಯ ಚುನಾವಣೆ' ಅನ್ನುವ ಶೀರ್ಷಿಕೆ ಎಷ್ಟು ಸರಿ? --Vikas Hegde (ಚರ್ಚೆ) ೧೨:೪೬, ೯ ಜೂನ್ ೨೦೧೬ (UTC)

  • United States--ನೋಡಿ
  • The United States of America (USA), commonly referred to as the United States (U.S.) or America, is a federal republic composed of 50 states, the federal district of Washington, D.C., five major territories, and various possessions.....:
  • ಅಮೆರಿಕ ಸಂಯುಕ್ತ ಸಂಸ್ಥಾನವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್‌ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್‌ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ.
  • ನಾನೂ ಹಾಗೆಯೇ ಯೋಚಿಸಿದ್ದೆ. ಈ ಮೇಲಿನ ಆಧಾರದ ಮೇಲೆ, ಸ್ವಲ್ಪ ಗಿಡ್ಡ ಹೆಸರು ಇರಲಿ ಎಂದು 'ಅಮೆರಿಕದ ಅಧ್ಯಕ್ಷೀಯ ಚುನಾವಣೆ ೨೦೧೬' ಎಂದು ಹಾಕಿದ್ದೇನೆ. ('ಅಮೆರಿಕಾದ ?ಇರಬೇಕಿತ್ತೇ?) ಹುಡುಕುವವರಿಗೂ ಸುಲಭವಾಗುವುಸೆಂದು ನನ್ನ ನಂಬುಗೆ. ಇತಿ ನಿಮ್ಮವ,Bschandrasgr (ಚರ್ಚೆ) ೧೩:೦೫, ೯ ಜೂನ್ ೨೦೧೬ (UTC)
ಹೌದು. ಅದರ common name ಅಮೆರಿಕಾ ಎನ್ನುವುದು ನಿಜವಾದರೂ ಸಹ ವಿಶ್ವಕೋಶದಲ್ಲಿ ಸರಿಯಾದ ಅಧಿಕೃತ ಹೆಸರು ಇರಬೇಕಾದ್ದು ಮುಖ್ಯ. ಹಾಗಾಗಿ 'ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬' ಎಂಬ ಶೀರ್ಷಿಕೆ ಕಡೆ ನನ್ನ ಒಲವು.--Vikas Hegde (ಚರ್ಚೆ) ೧೩:೨೩, ೯ ಜೂನ್ ೨೦೧೬ (UTC)

ವಿಷಯಾಂತರ ಸಮಸ್ಯೆ

ಬದಲಾಯಿಸಿ

ಮಿತ್ರರೇ,

ಅಭ್ಯರ್ಥಿಗಳ ನೀತಿ ಒಲವು

ಬದಲಾಯಿಸಿ
  • 08/07/2016:ಪ್ರಜಾವಾಣಿ:ಲೇಖನ:ಪೃಥ್ವಿ ದತ್ತ ಚಂದ್ರ ಶೋಭಿ;ಅಮೆರಿಕ ಚುನಾವಣೆ ಮತ್ತು ಸಾಮಾಜಿಕ ಪ್ರತಿಫಲನ;
  • ಅಮೆರಿಕದ ಇತಿಹಾಸವನ್ನು ಪಾಠ ಮಾಡುವ ನನಗೆ 2016ರ ಅಧ್ಯಕ್ಷೀಯ ಚುನಾವಣೆಗಳು ತುಂಬ ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳಿಕೊಳ್ಳುವಂತೆ ಮಾಡಿವೆ. ಅದೇನೆಂದರೆ, ಈ ಚುನಾವಣೆಗಳು ಇಂದಿನ ಅಮೆರಿಕದ ಸಮಾಜದ ಬಗ್ಗೆ ಏನನ್ನು ಹೇಳುತ್ತವೆ ಎನ್ನುವುದು. ಇದಕ್ಕೆ ಕಾರಣ ಸರಳವಾದುದು. ಡೆಮಾಕ್ರಟಿಕ್ ಪಕ್ಷವು ಹಿಲರಿ ರೊಧಾಮ್‌ ಕ್ಲಿಂಟನ್ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ಅಧ್ಯಕ್ಷ ಪದವಿಗೆ ಅಭ್ಯರ್ಥಿಯಾಗಿಸುತ್ತಿದೆ.
  • ಒಬಾಮ ಅಥವಾ ಕ್ಲಿಂಟನ್‌ರ ರಾಜಕೀಯ ನಂಬಿಕೆಗಳು ಮತ್ತು ಸಾರ್ವಜನಿಕ ನೀತಿಗೆ ಸಂಬಂಧಿಸಿದ ನಿಲುವುಗಳು ಕ್ರಾಂತಿಕಾರಕವಾದವು ಅಲ್ಲ, ಬದಲಿಗೆ ಅಮೆರಿಕದ ರಾಜಕಾರಣದ ಮುಖ್ಯವಾಹಿನಿಗೆ ಸೇರಿದವು ಎನ್ನುವುದೇನೊ ನಿಜವೆ. ಆದರೂ ಸಾಂಕೇತಿಕವಾಗಿಯಾದರೂ ಸರಿಯೇ, ಇದುವರೆಗೆ ಅಮೆರಿಕದ ರಾಜಕಾರಣವನ್ನು ನಿಯಂತ್ರಿಸುತ್ತಿದ್ದ ಶ್ವೇತವರ್ಣೀಯ, ಆಂಗ್ಲೊ-ಸ್ಯಾಕ್ಸನ್ ಹಿನ್ನೆಲೆಯ ಪುರುಷರ ಪ್ರಭಾವ ಕಡಿಮೆಯಾಗುತ್ತಿದೆ ಎನ್ನುವುದು ಇಲ್ಲಿ ಪ್ರಸ್ತುತ.
  • ಅದಕ್ಕೆ ಪ್ರತಿಯಾಗಿ ರಿಪಬ್ಲಿಕನ್ ಪಕ್ಷವು ಡೊನಾಲ್ಡ್ ಟ್ರಂಪ್ ಎನ್ನುವ ಪೂರ್ಣಾವಧಿ ಉದ್ಯಮಿ ಮತ್ತು ಟೆಲಿವಿಷನ್ ರಿಯಾಲಿಟಿ ಕಾರ್ಯಕ್ರಮಗಳ ಕೇಂದ್ರ ಬಿಂದುವನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಮುಖ್ಯವಾಗಿ ರಿಯಲ್ ಎಸ್ಟೇಟ್ ಮತ್ತು ಹೋಟೆಲ್ ಉದ್ಯಮ ನಡೆಸುವ ಟ್ರಂಪ್ ಈ ಮೊದಲೂ ಆಗಾಗ ರಾಜಕಾರಣಕ್ಕೆ ಕೈಹಾಕುತ್ತಿದ್ದರು.
  • ಆದರೆ 2016ರ ರಿಪಬ್ಲಿಕನ್ ಪಕ್ಷದ ಪ್ರೈಮರಿ ಚುನಾವಣೆಗಳಲ್ಲಿ ತಾನು ಸಾಂಪ್ರದಾಯಿಕ ರಾಜಕಾರಣಿಯಲ್ಲ ಎಂದೇ ಪ್ರಚಾರ ಮಾಡಿಕೊಳ್ಳುತ್ತ, ಇದುವರೆಗೆ ಯಶಸ್ಸನ್ನು ಗಳಿಸಿದ್ದಾರೆ. ಇಂತಹ ಹೊರಗಿನ, ಅದರಲ್ಲೂ ಉದ್ಯಮ ಕ್ಷೇತ್ರದ ಅನುಭವವಿರುವ ಅಭ್ಯರ್ಥಿಯಿಂದ ಮಾತ್ರ, ಈಗ ದಾರಿ ತಪ್ಪಿರುವ ಅಮೆರಿಕ ಮತ್ತೆ ಜಾಗತಿಕ ನಾಯಕತ್ವ ಪಡೆಯಲು ಸಾಧ್ಯ ಎಂದೇ ಟ್ರಂಪ್ ವಾದಿಸುತ್ತಾರೆ.
  • ಗಂಭೀರವಾಗಿ ಚಿಂತಿಸುವ, ರಚನಾತ್ಮಕ ಕಾರ್ಯಕ್ರಮಗಳನ್ನು ದೇಶದ ಮುಂದಿಡುವ ಸಾಮರ್ಥ್ಯವುಳ್ಳವರು. ಇವರಿಬ್ಬರಿಗೆ ಹೋಲಿಸಿದಾಗ ಟ್ರಂಪ್ ಒಮ್ಮೊಮ್ಮೆ ವಿದೂಷಕನಂತೆ, ಮಗದೊಮ್ಮೆ ಅಪಾಯಕಾರಿ ಪುಢಾರಿಯಂತೆ ತೋರುತ್ತಾರೆ. 2016ರಲ್ಲಿ ಅವರ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದವರು ಸಹ ಟ್ರಂಪ್ ಅವರಿಗಿಂತ ಭಿನ್ನವಾಗಿ ಮಾತನಾಡುತ್ತಿರಲಿಲ್ಲ. ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ಇವರಿಬ್ಬರೂ ಅಮೆರಿಕದ ಎರಡು ಪಕ್ಷಗಳ ಅಭ್ಯರ್ಥಿಗಳಾಗಿರುವುದು ಆಕಸ್ಮಿಕವಲ್ಲ. ಬದಲಿಗೆ ಅಮೆರಿಕದ ಸಮಾಜದಲ್ಲಿ ಕಳೆದ ಅರ್ಧ ಶತಮಾನದಲ್ಲಾಗಿರುವ ಹಾಗೂ ಮುಂದಿನ ಅರ್ಧ ಶತಮಾನದಲ್ಲಿ ಆಗಬಹುದಾದ ಜನಾಂಗೀಯ ಅನುಪಾತದಲ್ಲಿನ (ಡೆಮೊಗ್ರಾಫಿಕ್ ರೇಷಿಯೊ) ಬದಲಾವಣೆಗಳನ್ನು ಸೂಚಿಸುತ್ತದೆ.
  • ಅಮೆರಿಕ ಮೊದಲಿನಿಂದಲೂ ವಲಸಿಗರ ಸಮಾಜ. 1609ರಲ್ಲಿ ಮೊದಲ ಇಂಗ್ಲಿಷ್‌ ವಲಸಿಗರು ಅಮೆರಿಕದ ಪೂರ್ವ ತೀರದಲ್ಲಿ ಹಡಗಿನಿಂದ ಇಳಿದು ವಲಸೆ ಪ್ರಕ್ರಿಯೆ ಪ್ರಾರಂಭಿಸಿದ ನಂತರದಿಂದ ಸತತವಾಗಿ ಮುಂದಿನ ನಾಲ್ಕು ಶತಮಾನಗಳಲ್ಲಿ ಹತ್ತಾರು ಕೋಟಿ ಯುರೋಪಿಯನ್ನರು, ಆಫ್ರಿಕನ್ನರು ಮತ್ತು ಏಷ್ಯನ್ನರು ಅಮೆರಿಕಕ್ಕೆ ಬಂದು, ನೆಲೆಸಿದ್ದಾರೆ. ಬಹುಶಃ ತನ್ನ ಅಸ್ತಿತ್ವದುದ್ದಕ್ಕೂ ವಲಸಿಗರನ್ನು ಈ ಪ್ರಮಾಣದಲ್ಲಿ ಬರಮಾಡಿಕೊಳ್ಳುತ್ತಲೇ ಇರುವ ದೇಶ ಮತ್ತೊಂದಿಲ್ಲ.
  • ರಿಪಬ್ಲಿಕನ್ ಪಕ್ಷವು ಇಂದು ಭವಿಷ್ಯದ ಕುರಿತಾಗಿ ಆತಂಕಿತರಾಗಿರುವ ಶ್ವೇತವರ್ಣೀಯ ಪುರುಷರ ಪಕ್ಷವಾಗಿ ಹೊರಹೊಮ್ಮುತ್ತಿದೆ. ಕ್ಷೇತ್ರಗಳನ್ನು ರೂಪಿಸುವಾಗ ಹಸ್ತಕ್ಷೇಪ ಮಾಡಿ, ಅಮೆರಿಕದ ಪ್ರತಿನಿಧಿಗಳ ಸಭೆ ಮತ್ತು ಸೆನೆಟ್‌ನ ಚುನಾವಣೆಗಳಲ್ಲಿ ರಿಪಬ್ಲಿಕನ್ನರು ತಮ್ಮ ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ. ಆದರೆ ಅಧ್ಯಕ್ಷೀಯ ಚುನಾವಣೆಗಳಲ್ಲಿ ಜನಾಂಗೀಯ ವೈವಿಧ್ಯದ ಕಾರಣದಿಂದ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಅಮೆರಿಕದ ಶ್ವೇತವರ್ಣೀಯ ಪುರುಷರಿಗೆ ತಾವು ಅಧಿಕಾರ, ದೇಶದೊಳಗೆ ತಮಗಿದ್ದ ಪ್ರಭಾವವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಭಾವನೆ ಗಾಢವಾಗಿ ಮೂಡಿದೆ. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಆಶ್ಚರ್ಯದ ವಿಷಯವಲ್ಲ.
  • ಹೀಗಾಗಿ 1870ರ ನಂತರ ಅಮೆರಿಕದ ಪೂರ್ವ ಮತ್ತು ಮಧ್ಯಪಶ್ಚಿಮದ ರಾಜ್ಯಗಳಲ್ಲಿನ ಬಹುತೇಕ ಕಾರ್ಖಾನೆಗಳು, ಅವುಗಳಿದ್ದ ನಗರಗಳು ಇಂದು ತಮ್ಮ ಆರ್ಥಿಕ ಚೈತನ್ಯ ಕಳೆದುಕೊಂಡಿವೆ. ಇದರ ಹೊಡೆತ ಶ್ವೇತವರ್ಣೀಯ ಪುರುಷರ ಮೇಲಾದಷ್ಟು ಇನ್ನಾರ ಮೇಲೂ ಆಗಿಲ್ಲ. ತಮ್ಮ ದೇಶವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಅವರ ಆತಂಕದ ಭಾವನೆ ಪ್ರಬಲ ರಾಷ್ಟ್ರೀಯತೆ, ಜಾಗತೀಕರಣ ವಿರೋಧಿ ನೀತಿಗಳ ರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತಿದೆ. ಇದರ ಸಚೇತನ ರೂಪವೇ ಡೊನಾಲ್ಡ್ ಟ್ರಂಪ್.[[೧]]

ಫೋಟೊಗಳು

ಬದಲಾಯಿಸಿ
{{Col-1-of-2}
 
Return to "ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬" page.