ಸಂದೇಹ :

ಬದಲಾಯಿಸಿ

ಅದ್ವೈತದ ಪ್ರಕಾರ ನಾವೆಲ್ಲರು ಒಂದೆ ಆದರೆ ನಾವೆಲ್ಲರೂ ಯಾಕೆ ಕರ್ಮಗಳನ್ನು ಆಚರಿಸಬೇಕು ?ಯಾರಾದರೊಬ್ಬರು ಮಾಡಿದರೆ ಏಕೆ ಆಗುವುದಿಲ್ಲ? ಮಾಯಾ ನಿವಾರಣೆಗೆ ವೇದಗಳನ್ನೇ ಏಕೆ ಅನುಸರಿಸ ಬೇಕು? -


  • ಅದ್ವೈತ ಅಂತರಂಗದಲ್ಲಿ ಇರಬೇಕು -ಪ್ರಾಪಂಚಿಕ ಆಚರಣೆಗೆ ಬರುವುದಿಲ್ಲ. !! ಯಾರೋ ಒಬ್ಬರು ಊಟ ಮಾಡಿದರೆ ,ಎಲ್ಲರ ಹೊಟ್ಟೆ ತುಂಬದು.! ಅಧ್ಯಾಸ ಅಥವಾ ಮಾಯೆಯಿಂದ ನಾವೆಲ್ಲಾ ಬೇರೆ ಬೇರೆ; ಅಧ್ಯಾತ್ಮಿಕ ಸತ್ಯವೇ ಬೇರೆ ,ಪ್ರಾಪಂಚಿಕ ; ವ್ಯವಹಾರಿಕ ಸತ್ಯಗಳೇ ಬೇರೆ. ಜ್ಞಾನಿಯಾದರೂ ದೇಹವಿರುವವರೆಗೆ ವ್ಯವಹಾರಿಕ -ಪ್ರಾಪಂಚಿಕ ಸತ್ಯಗಳನ್ನು ಅರಿತು ಅದರ/ಅವುಗಳ ಧರ್ಮವನ್ನು ಅನುಸರಿಸಬೇಕು (ಗೀತೆ)-ಎಲ್ಲವೂ ಬ್ರಹ್ಮ -ಆತ್ಮವಾದರೂ ಮಾಯೆಯನ್ನು ಕಳಚಿ ಕೊಳ್ಳಲು ಸಾಧನೆ ಅಗತ್ಯ. ಶಂಕರರ ಅದ್ವೈತ ನೋಡಿ. ಮಾಯೆಯಿಂದ ಕೂಡಿದ ಪ್ರಪಂಚವನ್ನು ನಿರಾಕರಿಸಲಾಗದು. ಪಂಚ ಕೋಶ ನೋಡಿ ; ಭಗವದ್ಗೀತಾ ತಾತ್ಪರ್ಯ ನೋಡಿ. ಬ್ರಹ್ಮ ಅಥವಾ ಆತ್ಮ ತತ್ವವನ್ನು ತರ್ಕದಿಂದ ಅರಿಯಲು ಆಗುವುದಿಲ್ಲ.. ಜ್ಞಾನಿಗಳು ಕಂಡ ಸತ್ಯ -ವೇದ ;ಅದೇ ಆಧಾರ-ಆದರೆ -ಚಿತ್ತಶುದ್ಡಿ ಯಿಂದ, 'ನೇತಿ-ನೇತಿ' (ಇದಲ್ಲ-ಇದಲ್ಲ) ಎಂಬ ವಿಚಾರದಿಂದ ಆತ್ಮಾನುಭೂತಿ ಪಡೆಯಬೇಕು. ಬ್ರಹ್ಮ ಅಥವಾ ಆತ್ಮತತ್ವ ನೋಡಲು -ಕಾಣಲು ಬರದು-ನಿರಾಕಾರ-ನಿರ್ಗುಣ !

Bschandrasgr ೧೩:೪೧, ೨೭ ಜನವರಿ ೨೦೧೩ (UTC) : ಬಿ.ಎಸ್.ಚಂದ್ರಶೇಖರ ಸಾಗರ : ಸದಸ್ಯ:Bschandrasgr/ಪರಿಚಯ ನೋಡಿ

ಅದ್ವೈತ ದರ್ಶನ

ಬದಲಾಯಿಸಿ
ಅದ್ವೈತ ಪುಟದಲ್ಲಿ / ತಾಣದಲ್ಲಿ ,ಅದ್ವೈತ ದರ್ಶನಕ್ಕೆ ಸಂಬಂಧ ಪಟ್ಟ ಕೆಲವು ವಿಷಯಗಳು ಬಿಟ್ಟು ಹೋಗಿರುವುದರಿಂದಲೂ, ವಿಷಯ ವಿಂಗಡಣೆ ಮಾಡ ಬೇಕಾಗಿದ್ದುದರಿಂದಲೂ "ಅದ್ವೈತ ದರ್ಶನ' ಎಂಬ ಶೀರ್ಷಿಕೆಯಡಿ ವಿವರ ತುಂಬಿದ್ದೇನೆ ; ಅರ್ಥ ಮಾಡಿಕೊಳ್ಳಲು ಸುಲಭವಾಗುವುದೆಂದು ಭಾವಿಸಿದ್ದೇನೆ .Bschandrasgr ೧೨:೫೧, ೨೯ ಡಿಸೆಂಬರ್ ೨೦೧೩ (UTC) / ಸದಸ್ಯ:Bschandrasgr/ಪರಿಚಯ / ಬಿ.ಎಸ್ ಚಂದ್ರಶೇಖರ -ಸಾಗರ
Return to "ಅದ್ವೈತ" page.