ಚಮ್‍ಚಮ್ ಒಂದು ಸಾಂಪ್ರದಾಯಿಕ ಬಂಗಾಳಿ ಸಿಹಿತಿನಿಸಾಗಿದ್ದು, ಭಾರತೀಯ ಉಪಖಂಡದಾದ್ಯಂತ ಜನಪ್ರಿಯವಾಗಿದೆ. ಈ ತಿನಿಸು ವಿವಿಧ ಬಣ್ಣಗಳಲ್ಲಿ ಬರುತ್ತದೆ, ಮುಖ್ಯವಾಗಿ ತಿಳಿ ನಸುಗೆಂಪು, ತಿಳಿ ಹಳದಿ ಮತ್ತು ಬಿಳಿ. ಅಲಂಕಾರವಾಗಿ ಇದನ್ನು ಕೊಬ್ಬರಿ ಅಥವಾ ಖೋವಾ ಚೂರುಗಳಿಂದ ಲೇಪಿಸಲಾಗುತ್ತದೆ.

ಚೆರ್ರಿ ಚಮ್‍ಚಮ್

ಇತಿಹಾಸ

ಬದಲಾಯಿಸಿ

ಆಧುನಿಕ ದಿನದ ಬಾಂಗ್ಲಾದೇಶದ ಪೊರಾಬರಿಯ ಚಮ್‍ಚಮ್‍ನ ಅಂಡಾಕಾರದ ಕಂದು ಬಣ್ಣದ ವೈವಿಧ್ಯವು ಪೊರಾಬರಿ ಚಮ್‍ಚಮ್ ಎಂದು ಕರೆಯಲ್ಪಡುತ್ತದೆ. ಇದರ ಇತಿಹಾಸ ೧೯ನೇ ಶತಮಾನದ ಮಧ್ಯಭಾಗದಷ್ಟು ಹಳೆಯದ್ದೆಂದು ನಿರ್ಧರಿಸಲಾಗಿದೆ. ಈ ಖಾದ್ಯದ ಆಧುನಿಕ ಬಗೆಯನ್ನು ಮಾಟಿಲಾಲ್ ಗೋರೆ ಅವನ ಅಜ್ಜ ರಾಜಾ ರಾಮ್‍ಗೋರೆ ತಯಾರಿಸಿದ್ದ ಒಂದು ಸಿಹಿ ಖಾದ್ಯವನ್ನು ಆಧರಿಸಿ ತಯಾರಿಸಿದನು. ಇವನು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಸ್ಥಳೀಯನಾಗಿದ್ದನು.[]

ಉಲ್ಲೇಖಗಳು

ಬದಲಾಯಿಸಿ
  1. Mahmud Nasir Jahangiri (2012). "Sweetmeats". In Sirajul Islam and Ahmed A. Jamal (ed.). Banglapedia: National Encyclopedia of Bangladesh (Second ed.). Asiatic Society of Bangladesh.

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಚಮ್‍ಚಮ್&oldid=1145744" ಇಂದ ಪಡೆಯಲ್ಪಟ್ಟಿದೆ