ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರು. ತತ್ವಶಾಸ್ತ್ರ-ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಸಮಾಜದ ಸ್ಪಚ್ಛತೆಗಾಗಿ ಬರವಣಿಗೆ ಎಂಬ ನಿಲುವು ಅವರದು.

ಚಂದ್ರಶೇಖರ ತಾಳ್ಯ
ಜನನ18-05-1949
ತಾಳ್ಯ
ವೃತ್ತಿನಿವೃತ್ತ ತರ್ಕಶಾಸ್ತ್ರ ಪ್ರಾಧ್ಯಾಪಕರು
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಎಂ ಎ (ತತ್ವಶಾಸ್ತ್ರ ಮತ್ತು ಕನ್ನಡ), ಮಾನಸ ಗಂಗೋತ್ರಿ, ಮೈಸೂರು
ಪ್ರಕಾರ/ಶೈಲಿಕಥೆ, ಕಾವ್ಯ, ಮತ್ತು ನಾಟಕ
ಪ್ರಮುಖ ಪ್ರಶಸ್ತಿ(ಗಳು)ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2019), ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (2018),
ಬಾಳ ಸಂಗಾತಿಜಿ.ಎಂ. ಶಶಿಕಲಾ
ಮಕ್ಕಳುಸಿ ನನ್ನಯ್ಯ ಮತ್ತು ಪಾಂಚಾಲಿ ಸಿ

ಚಂದ್ರಶೇಖರ ತಾಳ್ವರವರು 1949ನೆಯ ಇಸವಿ ಮೇ 18 ರಂದು ಜನಿಸಿದರು. ಇವರು ಎನ್‌ ಈಶ್ವರಪ್ಪ ಮತ್ತು ಗಂಗಮ್ಮನವರ ಮಗನಾಗಿ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೋಕಿನ ತಾಳ್ಯದಲ್ಲಿ ಜನಿಸಿದರು. ಇವರ ಸಾಕು ತಂದೆ ವಜ್ರಾಚಾರಿ ಮತ್ತು ಸಾಕು ತಾಯಿ ಸಿದ್ಧಮ್ಮರವರು. ಮಡದಿ ಜಿ. ಎಂ. ಶಶಿಕಲಾ ಹಾಗೂ ಮಕ್ಕಳು ಸಿ. ನನ್ನಯ್ಯ ಮತ್ತು ಪಾಂಚಾಲಿ ಸಿ ರವರನ್ನು ಹೊಂದಿರುವ ಸುಖಿ ಕುಟುಂಬ.

ಪ್ರಾಥಮಿಕ ಶಿಕ್ಷಣವನ್ನು ತಾಳ್ಯದಲ್ಲಿ, ಪ್ರೌಡ ಶಿಕ್ಷಣವನ್ನು ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಶ್ರೀ ತರಳಬಾಳು ವಿದ್ಯಾಸಂಸ್ಥೆ ಸಿರಿಗೆರೆಯಲ್ಲ ಅಧ್ಯಯನ ಮಾಡಿ, ಉನ್ನತ ವ್ಯಾಸಂಗವನ್ನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ (ತತ್ವಶಾಸ್ತ್ರ) ಮತ್ತು ಎಂ.ಎ (ಕನ್ನಡ) ಅಧ್ಯಯನ ಮಾಡಿ, ತರ್ಕಶಾಸ್ತ್ರದ ಪ್ರಾಧ್ಯಪಕರಾಗಿ ಜಿ. ಚೆನ್ನಪ್ಪ ಪದವಿಪೂರ್ವ ಕಾಲೇಜು ಆನಗೋಡುನಲ್ಲಿ ತಮ್ಮ ಉಪನ್ಯಾಸ ವೃತ್ತಿಯನ್ನು ಪ್ರಾರಂಭಿಸಿ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜಿನಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಬಾಳಿನ ಏರಿಳಿತಗಳಿಗೆ ಕುಗ್ಗದೆ ಸಾಹಿತ್ಯ ಕ್ಷೇತ್ರದಲ್ಲಿ "ನನ್ನ ಕಣ್ಣಗಲಕ್ಕೆ" ಎಂಬ ಕವನ ಸಂಕಲನದಿಂದ ಮುನ್ನುಡಿ ಬರೆದು ಇಂದು ಕನ್ನಡ ಸಾಹಿತ್ಯವೆಂಬ ಹೆಮ್ಮರದ ಬೇರಾಗಿ ನಿಂತಿದ್ದಾರೆ.

ಸಾಹಿತ್ಯ

ಬದಲಾಯಿಸಿ

ಸಾಹಿತ್ಯ ರಚನೆ ಚಂದ್ರಶೇಖರ ತಾಳ್ಯರವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕಾವ್ಯಗಳನ್ನು ಬರೆಯುತ್ತಿದ್ದರು. ಬರೆವಣಿಗೆ ಸಾಗುತ್ತಾ ಕನ್ನಡ ಸಾಹಿತ್ಯದ ಮೇರು ಪರ್ವತವಾಗಿ ಬೆಳೆದರು. ಇವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕಾವ್ಯ, ಗದ್ಯ, ನಾಟಕಗಳು ಮತ್ತು ಅನುವಾದದಲ್ಲಿ ಹೆಸರುವಾಸಿಯಾಗಿದ್ದಾರೆ.

  1. ನನ್ನ ಕಣ್ಣಗಲಕ್ಕೆ
  2. ಸಿಂಧೂ ನದಿಯ ದಂಡೆಯ ಮೇಲೆ
  3. ಎಲ್ಲಿ ನವಿಲು ಹೇಳಿರೇ
  4. ಸುಡುವ ಭೂಮಿ
  5. ಕಾವಳದ ಸಂಜೆಯಲ್ಲಿ
  6. ಮೌನ ಮಾತಿನ ಸದ್ದು
  1. ಪ್ರಭು ಅಲ್ಲಮ
  2. ನೆಲವ ಹುಡುಕಿ
  3. ಕೆ. ಕೆಂಚಪ್ಪ (ವಿಧಾನಸೌಧ ಗ್ರಂಥಾಲಯದ ಪ್ರತಿಭಾವಂತ ಸಂಸದೀಯ ಪಟು ಮಾಲಿಕೆಯಲ್ಲಿ ಪ್ರಕಟಿತ)
  4. ಭಾರತೀಯ ತತ್ವಶಾಸ್ತ್ರದ ಪರಿಚಯ
  1. ಅಲ್ಲಮ
  2. ಒಕ್ಕಲಿಗ ಮುದ್ದಣ್ಣ

ಅನುವಾದ

ಬದಲಾಯಿಸಿ
  1. ರಾಮಕೃಷ್ಣ ಮತ್ತು ಅವರ ಕಾಲ
  2. ಗಾಂಧಿ ಹೋದರು: ನಮಗೆ ದಿಕ್ಕು ತೋರುವವರು ಯಾರು

ಸಂಪಾದಿತ

ಬದಲಾಯಿಸಿ
  1. ಹೊಸ ದಿಕ್ಕಿನೆಡೆಗೆ (ಇತರರೊಂದಿಗೆ ಸಂಪಾದಿತ)
  1. ಹೂ ಗೊಂಚಲು

ಚಲನಚಿತ್ರ

ಬದಲಾಯಿಸಿ
  1. ಪ್ರಶ್ನೆ: ಸಹ ಸಂಭಾಷಣೆ
  2. ದೇವನಹಳ್ಳಿ: ಗೀತರಚನೆ
  3. ಹೆಗ್ಗೋಡಿನಲ್ಲಿ 1981ರಲ್ಲಿ ನಡೆದ ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ಭಾಗಿ

[] [] []

ಪ್ರಶಸ್ತಿ, ಪುರಸ್ಕಾರ, ಬಿರುದು

ಬದಲಾಯಿಸಿ

ಸಾಹಿತ್ಯಕ್ಕೆ ಸಂದ ಪ್ರಶಸ್ತಿಗಳು

ಬದಲಾಯಿಸಿ
  • ಆರ್ಯಭಟ ಪ್ರಶಸ್ತಿ
  • ಶಿವಮೊಗ್ಗೆಯ ಕರ್ನಾಟಕ ಸಂಘ ಕೊಡುವ ಜಿ.ಎಸ್. ಎಸ್‌ ಕಾವ್ಯ ಪ್ರಶಸ್ತಿ
  • ಡಾ. ನಲ್ಲೂರು ಪ್ರಸಾದ್‌ ಸಾಹಿತ್ಯ ಪ್ರಶಸ್ತಿ
  • ಡಿ. ಎಸ್. ಮ್ಯಾಕ್ಸ್‌ ಸಾಹಿತ್ಯ ಶ್ರಿ ಪ್ರಶಸ್ತಿ

ಪುರಸ್ಕಾರ

ಬದಲಾಯಿಸಿ
  • ಎಸ್. ಚನ್ನಬಸವಯ್ಯ ಶ್ರೇಷ್ಠ ಉಪನ್ಯಾಸಕ ಪ್ರಶಸ್ತಿ
  • 2002 ರಲ್ಲಿ ನಡೆದ ಹೊಳಲ್ಕೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
  • 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ.


 
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

ಉಲ್ಲೇಖಗಳು

ಬದಲಾಯಿಸಿ