ಚಂದ್ರಮೌಳೀಶ್ವರ ದೇವಸ್ಥಾನ, ಉಡುಪಿ

ಚಂದ್ರಮೌಳೀಶ್ವರ ದೇವಸ್ಥಾನವು ಕರ್ನಾಟಕದ ಉಡುಪಿಯಲ್ಲಿದೆ. ಈ ದೇವಸ್ಥಾನವು ಉಡುಪಿಯ ಕೃಷ್ಣ ಮಠದ ಮುಖ್ಯದ್ವಾರದ ಎದುರುಗಡೆ ಇದೆ. ಮಠದ ಸುತ್ತಲಿನ ದೇವಾಲಯ ಸಂಕೀರ್ಣದಲ್ಲಿರುವ ಮೊದಲ ದೇವಾಲಯಗಳಲ್ಲಿ ಇದು ಒಂದಾಗಿದೆ. ಈ ಸ್ಥಳವು ತನ್ನದೇ ಆದ ಇತಿಹಾಸವನ್ನು ಹೊಂದಿದೆ ಮತ್ತು ಇದು ಇಲ್ಲಿನ ಕೃಷ್ಣ ಮಠಕ್ಕಿಂತ ಹಳೆಯದಾದ ದೇವಾಲಯವಾಗಿದೆ. ಈ ದೇವಾಲಯವು ಭಗವಾನ್ ಶಿವನಿಗೆ ಅರ್ಪಿತವಾಗಿದೆ.

ಚಂದ್ರಮೌಳೀಶ್ವರ ದೇವಸ್ಥಾನ ಉಡುಪಿ

ದೇವಸ್ಥಾನದ ಇತಿಹಾಸ ಬದಲಾಯಿಸಿ

ಚಂದ್ರಮೌಳೀಶ್ವರ ದೇವಾಲಯವು ಉಡುಪಿ ಪಟ್ಟಣದಲ್ಲಿರುವ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇದರ ಪುರಾತನ ನೋಟದ ಪರಿಣಾಮವಾಗಿ, ಇದನ್ನು ಉಡುಪಿಯ ಆಜ್ಯ ಎಂದೂ ಕರೆಯುತ್ತಾರೆ.[೧] ಈ ದೇವಾಲಯದ ಇತಿಹಾಸವು ೯೦೦ ವರ್ಷಗಳಷ್ಟು ಹಿಂದಿನದು ಮತ್ತು ಈ ದೇವಾಲಯವು ಕೃಷ್ಣ ಮಠಕ್ಕಿಂತ ಹಳೆಯದು. [೨] ಶ್ರೀ ಅನಂತೇಶ್ವರ ದೇವರ ಎದುರುಗಡೆ ಪೂರ್ವದಿಕ್ಕಿನಲ್ಲಿರುವ ದೇವಾಲಯವೇ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ. ಈ ದೇವಾಲಯವು ಪುರಾತನವಾದರೂ ಇದರ ಬಗ್ಗೆ ಹೆಚ್ಚಿನ ಐತಿಹಾಸಿಕ ವಿವರಗಳಿಲ್ಲ. ಬಳಕೆಯಲ್ಲಿರುವ ಒಂದು ಐತಿಹ್ಯ ಹೀಗಿದೆ- ಉಡುಪಿಯ ಕೇಂದ್ರದಿಂದ ಸುಮಾರು ಅರ್ದ ಕಿ.ಮೀ ದೂರದಲ್ಲಿ ಅಬ್ಜಾರಣ್ಯ(ಪ್ರಸ್ತುತ ಪೂರ್ಣಪ್ರಜ್ಞ ಕಾಲೇಜು)ಎಂಬ ಬನವೊಂದಿದೆ. ಅಲ್ಲಿ ಒಂದು ಪುಷ್ಕರಣಿಯೂ ಇದೆ. ಇಲ್ಲಿ ದಕ್ಷನಿಂದ ಶಾಪಗ್ರಸ್ಥನಾದ ಚಂದ್ರನು, ತನ್ನ ಶಾಪವನ್ನು ನಿವಾರಿಸಲು ತಪಸ್ಸು ಮಾಡಿದನು. ದೇವಾಲಯದಲ್ಲಿನ ಶಿವಲಿಂಗವು ದಕ್ಷನ ಶಾಪವನ್ನು ನಿವಾರಿಸಲು ಚಂದ್ರನು ಮಾಡಿದ ತಪಸ್ಸಿಗೆ ಪ್ರತಿಕ್ರಿಯೆಯಾಗಿ ಶಿವನು ಕಾಣಿಸಿಕೊಂಡದ್ದನ್ನು ಸಂಕೇತಿಸುತ್ತದೆ. ಅದಕ್ಕೆಂದೇ ಈ ಸ್ಥಳಕ್ಕೆ ಅಬ್ಜಾರಣ್ಯ ಎಂದು ಹೆಸರಿಸಲಾಯಿತು. ಚಂದ್ರನ ತಪಸ್ಸಿಗೆ ಮೆಚ್ಚಿ ಒಲಿದ ಶಿವ ತಾಣವೇ ಚಂದ್ರಮೌಳೀಶ್ವರ ದೇವಾಲಯವಾಗಿದೆ. ಹೀಗೆ ಈ ಒಂದು ನಂಬಿಕೆ ಇಲ್ಲಿ ಪ್ರಚಲಿತವಾಗಿದೆ.[೩]

ವಾಸ್ತುಶಿಲ್ಪ ಬದಲಾಯಿಸಿ

ದೇವಾಲಯದ ನಿರ್ಮಾಣವು ೭ ಅಥವಾ ೮ ನೇ ಶತಮಾನದಷ್ಟು ಹಿಂದಿನ ಇತಿಹಾಸವನ್ನು ಸಾಬೀತುಪಡಿಸುತ್ತದೆ. ಇದನ್ನು ಅನಂತೇಶ್ವರ ದೇವಾಲಯದ ಸಮಯದಲ್ಲಿಯೇ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.[೪] ಕಲ್ಲಿನ ಶಾಸನಗಳು ೧೧ ನೇ ಶತಮಾನದಷ್ಟು ಹಿಂದಿನದ್ದಾಗಿದ್ದು, ಗಮನಾರ್ಹವಾಗಿದೆ. ದೇವಾಲಯದ ವಾಸ್ತುಶಿಲ್ಪವು ಸರಳವಾಗಿದೆ ಹಾಗೂ ಇದು ಚಾಲುಕ್ಯರ ವಾಸ್ತುಶಿಲ್ಪಕ್ಕೆ ಸೇರಿದೆ. ದೇವಾಲಯವು ಗಣೇಶನ ನೃತ್ಯದ ಚಿತ್ರಗಳು ಮತ್ತು ವಿವಿಧ ದೇವರು ಮತ್ತು ದೇವತೆಗಳ ಇತರ ಚಿತ್ರಗಳಿಂದ ಕೂಡಿದೆ. ದೇವಾಲಯದ ಮುಂಭಾಗದಲ್ಲಿ ನಂದಿಯ ಮೂರ್ತಿಯಿದೆ ಹಾಗೂ ದೇವಾಲಯದಲ್ಲಿನ ಶಾಂತತೆಯು ಇಲ್ಲಿನ ಇನ್ನೊಂದು ವಿಶೇಷತೆಯಾಗಿದೆ.

ವಿಶೇಷತೆ ಬದಲಾಯಿಸಿ

ಶ್ರೀಕೃಷ್ಣನ ದೇವಾಲಯಕ್ಕೆ ಭೇಟಿ ನೀಡುವ ಮೊದಲು ಈ ದೇವಾಲಯಕ್ಕೆ ಭೇಟಿ ನೀಡುವುದು ವಾಡಿಕೆ. ಚಂದ್ರಮೌಳೇಶ್ವರ ದೇವಾಲಯವು ಶ್ರೀ ಅನಂತೇಶ್ವರ ದೇವಾಲಯಕ್ಕೆ ಅಭಿಮುಖವಾಗಿದೆ. ಇವೆರಡೂ ಪ್ರಾಚೀನ ದೇವಾಲಯಗಳು. ಅನಂತೇಶ್ವರ ದೇವಾಲಯವನ್ನು ಪಡು ದೇವಾಲಯವೆಂದು ಕರೆಯುತ್ತಾರೆ ಹಾಗೂ ಅದರ ಪೂರ್ವದಲ್ಲಿರುವ ಚಂದ್ರಮೌಳೀಶ್ವರ ದೇವಾಲಯವನ್ನು ಮೂಡು ದೇವಾಲಯವೆಂದು ಕರೆಯುತ್ತಾರೆ.[೫] ಈ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಚಂದ್ರಮೌಳೀಶ್ವರನ ದೀಪಕ್ಕೆ ಎಣ್ಣೆಯನ್ನು ಅರ್ಪಿಸುವ ಸಂಪ್ರದಾಯವನ್ನು ಅನುಸರಿಸುತ್ತಾರೆ.[೬] ಇಂದಿಗೂ ಸ್ವಾಮೀಜಿಯವರು ಪರ್ಯಾಯಕ್ಕೆ ಕೂಡುವ ಮುನ್ನ ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿ ಅನಂತರ ಶ್ರೀ ಅನಂತೇಶ್ವರ ದೇವರ ದರ್ಶನ ಮಾಡಿ, ನಂತರ ಶ್ರೀಕೃಷ್ಣ ದರ್ಶನ ಮಾಡುವ ಸಂಪ್ರದಾಯ ಇಂದಿಗೂ ನಡೆದುಬಂದಿದೆ.[೭]

ಸಹ ನೋಡಿ ಬದಲಾಯಿಸಿ


ಉಲ್ಲೇಖಗಳು ಬದಲಾಯಿಸಿ

  1. https://www.nativeplanet.com/udupi/attractions/chandramoulishwara-temple/#overview
  2. https://www.holidify.com/places/udupi/chandramoulishwar-temple-sightseeing-3852.html
  3. https://itms.kar.nic.in/hrcehome/history.php?tid=163
  4. https://www.nativeplanet.com/udupi/attractions/chandramoulishwara-temple/#overview
  5. https://itms.kar.nic.in/hrcehome/history.php?tid=163
  6. https://indiatemple.net/article/id/1296/temple/162/candramauleswara-temple-udupi/chandramauleswara-temple-udupi+
  7. https://itms.kar.nic.in/hrcehome/history.php?tid=163