ಕೃಷ್ಣ ಮಠ
ಕೃಷ್ಣ ಮಠ - ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ಕೃಷ್ಣನ ಪ್ರತಿಮೆಯನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
ಉಡುಪಿ ಶ್ರೀ ಕೃಷ್ಣ ಮಠ | |
---|---|
![]() ಶ್ರೀಕೃಷ್ಣಮಠದ ಮುಖ್ಯದ್ವಾರ | |
ಹೆಸರು: | ಉಡುಪಿ ಶ್ರೀ ಕೃಷ್ಣ ಮಠ |
ಕಟ್ಟಿದ ದಿನ/ವರ್ಷ: | ೧೩ನೆಯ ಶತಮಾನ |
ಪ್ರಮುಖ ದೇವತೆ: | ಕೃಷ್ಣ |
ವಾಸ್ತುಶಿಲ್ಪ: | ದ್ರಾವಿಡ ಶೈಲಿ |
ಸ್ಥಳ: | Udupi |
ಈ ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಕೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಕರೆಯುತ್ತಾರೆ. ಇದನ್ನು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ೧೮ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ,ಮತ್ತೊಮ್ಮೆ ಕೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು (೧೪) ವರ್ಷಗಳು ಹಿಡಿಯುತ್ತವೆ. ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.
ಕೃಷ್ಣ ಮಠದ ಪ್ರಾಂಗಣದಲ್ಲಿ ಮುಖ್ಯಪ್ರಾಣ, ಗರುಡ, ಸುಬ್ರಹ್ಮಣ್ಯ ಮತ್ತು ನವಗ್ರಹ ಗುಡಿಗಳಿವೆ.
ಇತಿಹಾಸಸಂಪಾದಿಸಿ
ಉಡುಪಿಯ ಕೃಷ್ಣನನ್ನು ದ್ವಾಪರ ಯುಗದಲ್ಲಿ ದ್ವಾರಕೆಯ ರುಕ್ಮಿಣಿ ಪೂಜಿಸಲ್ಪಡುತ್ತಿದ್ದು ದೇವಶಿಲ್ಪಿ ವಿಶ್ವಕರ್ಮನಿಂದ ರಚಿಸಲ್ಪಟ್ಟಿದೆ.
ಶ್ರೀ ಕೃಷ್ಣ ಮಠವನ್ನು ವೈಷ್ಣವರ ಸಂತ ಜಗದ್ಗುರು ಶ್ರೀ ಮಧ್ವಾಚಾರ್ಯರು ೧೩ ನೇ ಶತಮಾನದಲ್ಲಿ ಸ್ಥಾಪಿಸಿದರು. ಇವರು ದ್ವೈತ ವೇದಾಂತ ಶಾಲೆಯ ಸ್ಥಾಪಕರೂ ಕೂಡ. ಮಧ್ವರಿಗೆ ಗೋಪಿಚಂದನದಲ್ಲಿ ಶ್ರೀ ಕೃಷ್ಣನ ವಿಗ್ರಹ ಸಿಕ್ಕಿತೆಂಬ ನಂಬಿಕೆ ಇದೆ. ತಮ್ಮ ತಂತ್ರಸಾರ ಸಂಗ್ರಹದಲ್ಲಿ ಮಧ್ವರೇ ಹೇಳಿರುವ ಹಾಗೆ ವಿಗ್ರಹವು ಪಶ್ಚಿಮಭಿಮುಖವಾಗಿತ್ತು. ಅಷ್ಟ ಮಠಗಳಲ್ಲಿ ಕೂಡ ದೇವರ ವಿಗ್ರಹ ಪಶ್ಚಿಮಕ್ಕೆ ಮುಖ ಹಾಕಿದೆ. ಭಕ್ತರು ದೇವರ ದರ್ಶನವನ್ನು ಒಳಗಿನ ನವಗ್ರಹ ಕಿಂಡಿ ಅಥವಾ ಹೊರಗಿನ ಕನಕನ ಕಿಂಡಿಯ ಮೂಲಕ ಪಡೆಯಬಹುದು. ಮಠವು ಬೆಳಗಿನ ಜಾವ ೫:೩೦ಕ್ಕೆ ತೆರೆಯುತ್ತದೆ. ದೇವರಿಗೆ ೯ ತೂತುಗಳಿರುವ ಬೆಳ್ಳಿಯಿಂದ ಲೇಪಿತವಾದ ಕಿಂಡಿಯಿಂದ ಪೂಜೆ ಮಾಡುವುದು ಇಲ್ಲಿನ ವಿಶೇಷತೆ. ಪ್ರತಿದಿನ ಬಂದ ಭಕ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇಲ್ಲಿದೆ.
ಮಧ್ವಾಚಾರ್ಯರ ಶಿಷ್ಯರುಸಂಪಾದಿಸಿ
ಮಧ್ವಾಚಾರ್ಯರಿಗೆ ತುಂಬಾ ಜನ ಶಿಷ್ಯರು ಇದ್ದರು. ಅವರಲ್ಲಿ ಮೊದಲನೆಯವರು ಶ್ರೀ ಸತ್ಯ ತೀರ್ಥರು. ಅಷ್ಟ ಮಠಗಳನ್ನು ಹೊರತುಪಡಿಸಿ ಉಳಿದ ಎಲ್ಲ ಮಠಗಳನ್ನು ಸ್ಥಾಪಿಸಿದ್ದು ಶ್ರೀ ಪದ್ಮನಾಭ ತೀರ್ಥರು. ಅಷ್ಟ ಮಠಗಳ ಆಡಳಿತಕ್ಕೆ ವಳಪಟ್ಟಿದ್ದರಿಂದ ಅವರ ಶಿಷ್ಯರಿಗೆ ಶ್ರೀ ಕೃಷ್ಣನ ಪೂಜೆ ಮಾಡುವ ಯಾವುದೇ ಅಧಿಕಾರ ಇರಲಿಲ್ಲ.
- ಶ್ರೀ ವಾಮನ ತೀರ್ಥ,ಶೀರೂರು ಮಠ.
- ಶ್ರೀ ರಾಮ ತೀರ್ಥ, ಕಾಣಿಯೂರು ಮಠ.
- ಶ್ರೀ ಅಡೋಕ್ಷಜ ತೀರ್ಥ,ಪೇಜಾವರ ಮಠ.
- ಶ್ರೀ ಹೃಷಿಕೇಶ ತೀರ್ಥ,ಪಲಿಮಾರು ಮಠ.
- ಶ್ರೀ ನರಹರಿ ತೀರ್ಥ,ಅದಮಾರು ಮಠ.
- ಶ್ರೀ ಜನಾರ್ಧನ ತೀರ್ಥ,ಕೃಷ್ಣಾಪುರ ಮಠ.
- ಶ್ರೀ ಉಪೇಂದ್ರ ತೀರ್ಥ,ಪುತ್ತಿಗೆ ಮಠ.
- ಶ್ರೀ ವಿಷ್ಣು ತೀರ್ಥ,ಸೋದೆ ವಾದಿರಾಜ ಮಠ.
ಕೃಷ್ಣ ಮಠಸಂಪಾದಿಸಿ
ಮಠದ ದಿನ ನಿತ್ಯದ ಪೂಜೆ ಪುನಸ್ಕಾರವನ್ನು ಅಷ್ಟ ಮಠಗಳು ನೋಡಿಕೊಳ್ಳುತ್ತವೆ.ಪ್ರತಿ ಮಠವು ೨ ವರ್ಷಗಳಿಗೊಮ್ಮೆ ಆವರ್ತಿಕ ಕ್ರಮದ ಅನುಸಾರ ಜವಬ್ದಾರಿ ನೋಡಿಕೊಳ್ಳುತದೆ.ಕೃಷ್ಣ ಮಠವು ಧಾರ್ಮಿಕ ಪದ್ದತಿ,ಆಚಾರ ವಿಚಾರ,ದ್ವೈತ ಮತ್ತು ತತ್ವವಾದ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾದ ಜಾಗ.ಉಡುಪಿಯಿಂದ ಹುಟ್ಟಿಕೊಂಡ ದಾಸ ಸಾಹಿತ್ಯಕ್ಕೆ ಜನಪ್ರಿಯತೆ ಪಡೆದುಕೊಂಡಿದೆ. ಮಠದ ವೆಚ್ಚಗಳನ್ನು ಅಷ್ಟ ಮಠಗಳು ಮತ್ತು ಭಕ್ತರೇ ಸ್ವತಃ ಸ್ವಯಂಪ್ರೇರಿತವಾಗಿ ನೋಡಿಕೊಳ್ಳುತಾರೆ.೧೯೭೫ರ ಭೂ ಸುಧಾರಣಾ ಕಾಯಿದೆಯ ಅನುಷ್ಠಾನದಿಂದಾಗಿ ಮಠವು ತನ್ನ ಹಲವಾರು ಭೂಮಿಯನ್ನು ಕಳೆದುಕೊಂಡಿತು.ಕೃಷ್ಣ ಮಠದ ಪೌಳಿಯನ್ನು ನವೀಕರಿಸಿ ಮೇ ೧೮ ೨೦೧೭ ರಂದು ಅದರ ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಯಿತು.
ಮಠದ ಬಗೆಗಿನ ತ್ವರಿತ ಮಾಹಿತಿಗಳುಸಂಪಾದಿಸಿ
ಮುಖ್ಯ ದೇವರು-ಶ್ರೀ ಕೃಷ್ಣ
ಭೇಟಿ ನೀಡಲು ಉತ್ತಮ ಸಮಯ-ಶ್ರೀ ಕೃಷ್ಣ ಜನ್ಮಾಷ್ಟಮಿ, ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ.
ದೇವಸ್ಥಾನದ ಸಮಯ-4pm.
ಮೊದಲ ಸೇವೆ-ಉದಯಸ್ತಮಣ ಸೇವೆ,5am.
ಕೊನೆಯ ಸೇವೆ-ಏಕಾಂತ ಸೇವೆ,9.30pm.
ವಿಳಾಸ-ಕಾರ್ ಸ್ಟ್ರೀಟ್,ತೆಂಕಪೇಟೆ, ಮಾರುತಿ ವೀಥಿಕ,ಉಡುಪಿ,ಕರ್ನಾಟಕ,576101
ಹಬ್ಬಗಳುಸಂಪಾದಿಸಿ
೨ ವರ್ಷಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದಂದು ಮಠದ ಆಡಳಿತವನ್ನು ಮುಂದಿನ ಮಠಕ್ಕೆ ಹಸ್ತಾಂತರಿಸಲಾಗುತ್ತದೆ. ಪ್ರತಿಯೊಂದು ಮಠಕ್ಕೂ ಒಂದು ಸ್ವಾಮಿಗಳು ಇರುತ್ತಾರೆ ಹಾಗೂ ಪರ್ಯಾಯದ ಸಮಯದಲ್ಲಿ ಅವರು ಅಧಿಕಾರದಲ್ಲಿರುತ್ತಾರೆ. ಪರ್ಯಾಯವು ೨೦೦೮,೨೦೧೦,೨೦೧೩ ರಂತೆ ಸಹ ವರ್ಷಗಳಲ್ಲಿ ಇರುತ್ತದೆ.ಮಕರ ಸಂಕ್ರಾಂತಿ,ರಥಸಪ್ತಮಿ,ಮಧ್ವ ನವಮಿ,ಹನುಮಾನ ಜಯಂತಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ನವರಾತ್ರಿ ಮಹೋತ್ಸವ,ವಿಜಯ ದಶಮಿ,ನರಕ ಚತುರ್ದಶಿ,ದೀಪಾವಳಿ,ಗೀತಾ ಜಯಂತಿ ಅಂತಹ ಹಬ್ಬಗಳನ್ನು ಪರ್ಯಾಯ ಮಠವು ಬಹಳ ವಿಜೃಂಭಣೆಯಿಂದ ಆಚರಿಸುತ್ತದೆ.
ನೋಡಿಸಂಪಾದಿಸಿ
- ಮಧ್ವಾಚಾರ
- ಕೃಷ್ಣ ಮಠ
- ಅಷ್ಟ ಮಠಗಳು
ಬಾಹ್ಯ ಸಂಪರ್ಕಗಳುಸಂಪಾದಿಸಿ
Wikimedia Commons has media related to Udupi Krishna Temple. |
- Sri Krishna Temple, Udupi Archived 2019-07-22 at the Wayback Machine.
- Temples in Udupi Archived 2018-10-03 at the Wayback Machine.
- Official Temple Website for Online Offerings and Seva Archived 2016-09-25 at the Wayback Machine.
- About temple
- Udupi Shri Krishna photos
- Udupi Shri Krishna Temple and related information guide Archived 2011-05-22 at the Wayback Machine.