ಚಂದ್ರಕಾಂತ ಕರದಳ್ಳಿ

ಚಂದ್ರಕಾಂತ ಕರದಳ್ಳಿಯವರು (೨೫ ಆಗಸ್ಟ್ ೧೯೫೨ - ೧೯ ಡಿಸೆಂಬರ್ ೨೦೧೯) ಕನ್ನಡದ ಒಬ್ಬರು ಬರಹಗಾರರು. ವಿಶೇಷವಾಗಿ ಮಕ್ಕಳ ಸಾಹಿತ್ಯವನ್ನು ಹೆಚ್ಚು ರಚಿಸಿದ್ದಾರೆ.[]

ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ವೃತ್ತಿಯಿದ ಶಿಕ್ಷಕರಾಗಿದ್ದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು.[] ಮೂವತ್ತಮೂರು ವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಸಾಹಿತ್ಯ ಜೀವನ

ಬದಲಾಯಿಸಿ

ಕರದಳ್ಳಿಯವರು ಸುಮಾರು ೫೦ ಪುಸ್ತಕಗಳನ್ನು ರಚಿಸಿದ್ದಾರೆ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಕ್ಕಳ ಸಾಹಿತ್ಯ ಎನ್ನುವುದು ವಿಶೇಷ. ಮಕ್ಕಳ ಸಾಹಿತ್ಯದಲ್ಲಿ ಇವರು 5 ಕಥಾ ಸಂಕಲನ, 6 ಕವನ ಸಂಕಲನ, 6 ಮಕ್ಕಳ ಕಾದಂಬರಿ, ಎರಡು ಶಿಶುಪ್ರಾಸಗಳು, ಸಾಹಿತ್ಯ ಅಕಾಡೆಮಿ ಸಂಪಾದನೆ ಸೇರಿದಂತೆ ಒಟ್ಟು ೫೦ ಕೃತಿಗಳು ಹೊರಬಂದಿವೆ. ಇದರಲ್ಲಿ ಹಾಡು, ಕಥೆ, ಜೀವನಗಾಥೆಗಳು, ಒಗಟುಗಳ ಸಂಗ್ರಹ ಎಲ್ಲಾ ಸೇರಿವೆ.

ಅವರ ಕೆಲ ಜನಪ್ರಿಯ ಕೃತಿಗಳೆಂದರೆ,

  • ನಲಿದಾಡು ಬಾ ನವಿಲೆ
  • ಚಂದಮಾಮ ಒಬ್ಬನೆ ಇದ್ದೀಯಾ?
  • ಉಪ್ಪಿನಗೊಂಬೆಯ ಹುಟ್ಟೂರು
  • ಆಕಾಶವೇಕೆ ಮೇಲಿದೆ?
  • ಉಪ್ಪಿನ ಗೊಂಬೆ
  • ಮಾಯದ ಗಂಟೆ
  • ಕಾಡು ಕನಸಿನ ಬೀಡಿಗೆ
  • ಬಯಲು ಸೀಮೆಯಿಂದ ಕರಾವಳಿಗೆ
  • ಮಹಾಜಿಪುಣ ಮೈದಾಸ
  • ಸಗರಾದ್ರಿ ಚಾರಣ
  • ಸೋಲೇ ಇಲ್ಲ ಗೆಲುವೇ ಎಲ್ಲ
  • ಗಿರಿಸಿರಿ
  • ಮನದಮಾತು

ಪ್ರಶಸ್ತಿ, ಗೌರವಗಳು

ಬದಲಾಯಿಸಿ
  • ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
  • ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲ ಸಾಹಿತ್ಯ ಪುರಸ್ಕಾರ' (೨೦೧೯)[]
  • ಸುರಪುರದಲ್ಲಿ ನಡೆದ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು (೨೦೧೦)
  • ಯಾದಗಿರಿ ಜಿಲ್ಲಾ ಎರಡನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ (೨೦೧೫)
  • ರಾಜ್ಯೋತ್ಸವ ಪ್ರಶಸ್ತಿ (೨೦೧೯)
  • ಸಂಕ್ರಮಣ ಸಾಹಿತ್ಯ, ಶಿಕ್ಷಣ ಸಿರಿ, ಸಾಕ್ಷಿ ಮಕ್ಕಳ ಸಾಹಿತ್ಯ, ಸಿಶು ಸಂಗಮೇಶ ದತ್ತಿ, ಸಿದ್ಧಾರ್ಥ ಮಕ್ಕಳ ಸಾಹಿತ್ಯ, ಮಕ್ಕಳ ಚಂದಿರ, ಅಕ್ಷರಲೋಕದ ನಕ್ಷತ್ರ ಹೀಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಗೌರವವಗಳು[]

ಉಲ್ಲೇಖಗಳು

ಬದಲಾಯಿಸಿ
  1. https://www.prajavani.net/district/yadagiri/childrens-literature-enriched-literature-691811.html
  2. https://www.bookbrahma.com/author/chandrakantha-karadalli
  3. https://vijaykarnataka.com/news/kalaburagi/the-central-acclaimed-haiku-is-the-first-literary-cactus/articleshow/69794726.cms
  4. "ಆರ್ಕೈವ್ ನಕಲು". Archived from the original on 2020-01-13. Retrieved 2020-01-13.


ಹೊರಸಂಪರ್ಕ ಕೊಂಡಿಗಳು

ಬದಲಾಯಿಸಿ