ಘಾತ ಶ್ರೇಣಿ ಎಂದರೆ ಒಂದು ಚರದ (ವೇರಿಯೆಬಲ್) ಆರೋಹೀ ಧನಾತ್ಮಕ ಪೂರ್ಣಾಂಕ (positive integer) ಘಾತಗಳು (powers) ಪದಗಳಾಗಿರುವ (ಟರ್ಮ್ಸ್) ಒಂದು ಶ್ರೇಣಿ (ಪವರ್ ಸೀರೀಸ್).[][][] ಇದರ ರೂಪ ಹೀಗಿದೆ:

a0 + a1x + a2x2 + ……….. + anxn + ……..

ಇಲ್ಲಿ a ಗಳು ಸ್ಥಿರಾಂಕಗಳೂ, x ಚರ. ಘಾತ ಶ್ರೇಣಿಯ ರೂಪ ಈ ಕೆಳಗಿನಂತೆಯೂ ಇರಬಹುದು:

a0 + a1(x - α) + a2(x - α)2 + ……….. + an(x - α)n + …….. (1)

ಪ್ರಮೇಯ

ಬದಲಾಯಿಸಿ

ಘಾತ ಶ್ರೇಣಿ (1) x ನ ಯಾವುದೇ ಒಂದು ಬೆಲೆಗೆ – ಅದು x2 ಆಗಿರಲಿ. ಇಲ್ಲಿ x2 ≠ a – ಅಭಿಸರಿಸುವುದಾದರೆ (ಕನ್ವರ್ಜಸ್) ಮತ್ತು R = |x2 – α1|

ಆಗಿದ್ದರೆ ಆಗ |x1 – α| < R ಆಗಿರುವಂಥ, α ಕೇಂದ್ರ (center) ಮತ್ತು R ತ್ರಿಜ್ಯವಾಗಿರುವ ವೃತ್ತ (disc of convergence) C ಯ ಒಳಗಿರುವ ಎಲ್ಲ x1 ಕ್ಕೂ ಘಾತಶ್ರೇಣಿ (1) ಅಭಿಸರಿಸುತ್ತದೆ; ಮತ್ತು ಈ ಕಾರಣದಿಂದ ಅದೊಂದು ಉತ್ಪನ್ನ f(x) ನ್ನು ವ್ಯಾಖ್ಯಿಸುತ್ತದೆ. ಈ ಉತ್ಪನ್ನ f(x) ಅವಶ್ಯವಾಗಿಯೂ C ಯಲ್ಲಿ ವಿಶ್ಲೇಷಕ (ಅನಲಿಟಿಕ್) ಆಗಿರಬೇಕು ಮತ್ತು ಶ್ರೇಣಿ (1), α ವನ್ನು ಕುರಿತು ಇದರ, ಟೇಲರನ ಶ್ರೇಣಿ ಆಗಿರಬೇಕು. (ಇಲ್ಲಿ C, ಕೇಂದ್ರ α ದಲ್ಲಿರುವ ಹಾಗೂ ತ್ರಿಜ್ಯ R ಇರುವ, ಒಂದು ವೃತ್ತ). C ಯ ಒಳಗೆ ಶ್ರೇಣಿ (1)ನ್ನು ಪದವಾರು ಅವಕಲಿಸಬಹುದು (ಡಿಫರೆನ್ಸಿಯೇಟ್) ಅಥವಾ ಅನುಕಲಿಸಬಹುದು (ಇಂಟೆಗ್ರೇಟ್). ಅಂದರೆ

f(x) = a0 + a1(x - α) + a2(x - α)2 + a3(x - α)3 + …… …..(1)

ಆಗಿದ್ದರೆ ಆಗ

f'(x) = a1 + 2a2(x - α) + 3a3(x - α)2 +…….. ….. (2)

ಮತ್ತು

  …. (3)

(3) ರಲ್ಲಿ ಅನುಕಲನಾಂಕವನ್ನು (ಇಂಟೆಗ್ರಲ್)

  …… (4)

ಎಂಬುದರಿಂದ ವ್ಯಾಖ್ಯಿಸುತ್ತೇವೆ. ಇಲ್ಲಿ F(x) ಎಂಬುದು C ಯ ಒಳಗಿನ ಎಲ್ಲ x ಗಳಿಗೂ   …… (5)

ಆಗಿರುವ ಒಂದು ಉತ್ಪನ್ನ. ಒಂದು ಘಾತ ಶ್ರೇಣಿಯು ಅವಶ್ಯವಾಗಿಯೂ ಅದರ ಮೊತ್ತ ಉತ್ಪನ್ನದ (ಸಮ್ ಫಂಕ್ಷನ್) ಟೇಲರನ ಶ್ರೇಣಿ. ಆದ್ದರಿಂದ ಈ ಮುಂದಿನ ಪ್ರರೂಪದ ಒಂದು ಸಮೀಕರಣದಿಂದ

a0 + a1(x - α) + a2(x - α)2 + ……… = b0 + b1(x - α) + b2(x - α)2 + …….. ….. (6)

ಈ ಕೆಳಗಿನಂತೆ ತೀರ್ಮಾನಿಸಬಹುದು.

a0 = b0, a1 = b1, a2 = b2 ……… ….(7)

ವಾಸ್ತವಿಕವಾಗಿ α ಮತ್ತು x ಗಳನ್ನು ನೈಜಮೌಲ್ಯಗಳಿಗೆ (real values) ಸೀಮಿತಗೊಳಿಸಿದಾಗ (6) ನಿಜವೆಂದು ಗೊತ್ತಿದ್ದರೆ ಆಗ ತೀರ್ಮಾನ (7) ಸಾಧುವಾಗುತ್ತದೆ.

ಮೊತ್ತ ಉತ್ಪನ್ನದ ಗುಣಗಳು ಗೊತ್ತಿರುವಾಗ, ಒಂದು ದತ್ತ ಘಾತ ಶ್ರೇಣಿಗೆ ಹಲವಾರು ವೇಳೆ ಸಾಧ್ಯವೃತ್ತ C ಯನ್ನು ಪಡೆಯಬಹುದು. ಇಲ್ಲವೇ ಒಂದು ಮೌಲ್ಯ x2 ನ್ನು ಶೋಧಿಸುವುದು ಶಕ್ಯವಾದರೆ ಆಗ ಈ ಮೊದಲು ನಿರೂಪಿಸಿರುವ ಪ್ರಮೇಯವನ್ನು ಬಳಸಬಹುದು.

ಉಲ್ಲೇಖಗಳು

ಬದಲಾಯಿಸಿ
  1. Britannica, The Editors of Encyclopaedia. "power series". Encyclopedia Britannica, 23 Dec. 2024, https://www.britannica.com/science/power-series. Accessed 2 January 2025.
  2. Power series. Encyclopedia of Mathematics. URL: http://encyclopediaofmath.org/index.php?title=Power_series&oldid=54239
  3. "Power Series." McGraw-Hill Dictionary of Scientific & Technical Terms, 6E. 2003. The McGraw-Hill Companies, Inc. 2 Jan. 2025 https://encyclopedia2.thefreedictionary.com/Power+Series


ಹೊರಗಿನ ಕೊಂಡಿಗಳು

ಬದಲಾಯಿಸಿ