ಘಾಟಿ ಸುಬ್ರಹ್ಮಣ್ಯದಲ್ಲಿರುವ ಈ ಬನ್ನಿ ಮಂಟಪಕ್ಕೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ. ಈ ಮಂಟಪದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ವಿಜಯದಶಮಿಯಂದು ಉಯ್ಯಾಲೆ ಸೇವೆ ಹಾಗೂ ಭಜಂತ್ರಿ ಸೇವೆ ಗಳು ನಡೆದುಕೊಂದು ಬಂದಿದೆ. ಇದನ್ನು ಘೋರ್ಪಡೆ ವಂಶಸ್ಥರು ಕಟ್ಟಿಸಿರುತ್ತಾರೆ. ಇದನ್ನು ಸಾಧು ಮಂಟಪ ಎಂದು ಕರೆಯುವುದುಂಟು. ಈ ಮಂಟಪವು ದೇವಾಲಯದ ಮುಂಭಾಗ ಪೂರ್ವಕ್ಕೆ ಇದ್ದು ದೇವಾಲಯದ ಮುಂಭಾಗಕ್ಕೆ ಗೊಚರಿಸುತ್ತದೆ.