24°22′16″N 81°17′38.25″E / 24.37111°N 81.2939583°E / 24.37111; 81.2939583

೧೮೭೦ ರಲ್ಲಿ ಗೋವಿಂದಗಢ ಅರಮನೆ

ಗೋವಿಂದಗಢ ಅರಮನೆಯನ್ನು ಗೋವಿಂದಗಢ ಕೋಟೆ ಎಂದೂ ಕರೆಯುತ್ತಾರೆ. ಇದು ಭಾರತದ ಮಧ್ಯಪ್ರದೇಶದ ಗೋವಿಂದಗಢದಲ್ಲಿರುವ ಒಂದು ಅರಮನೆಯಾಗಿದೆ . ೧೯ ನೇ ಶತಮಾನದಲ್ಲಿಈ ಕೋಟೆಯನ್ನು ರೇವಾದ ದೊರೆ ನಿರ್ಮಿಸಿದನು. ಈ ಕೋಟೆಯು ಗೋವಿಂದಗಢ ಸರೋವರದ ತೀರದಲ್ಲಿನ ರಾಜಮನೆತನದ ನಿವಾಸವಾಗಿತ್ತು.

ವಿವರಣೆ ಬದಲಾಯಿಸಿ

 
೨೦೧೮ ರಲ್ಲಿ ಕೋಟೆಯ ಆಂತರಿಕ ವಿಭಾಗ

ಗೋವಿಂದಗಢ ಕೋಟೆಯನ್ನು ೧೮೫೩ ರಲ್ಲಿ ರೇವಾ ಮತ್ತು ಗೋವಿಂದಗಢ ಪ್ರಾಂತ್ಯದ ಆಡಳಿತಗಾರ ರಾಜಾ ರಘುರಾಜ್ ಸಿಂಗ್ ಎಂಬವನು ನಿರ್ಮಿಸಿದನು. ಇವನು ಕೋಟೆಯಂತಹ ರಚನೆಯನ್ನು ಅರಮನೆಯಾಗಿ ಬಳಸುತ್ತಿದ್ದನು. [೧] ಅರಮನೆಯ ಆವರಣವು ಹಲವಾರು ಕಟ್ಟಡಗಳು ಮತ್ತು ದೇವಾಲಯಗಳನ್ನು ಒಳಗೊಂಡಿತ್ತು. ಮೊದಲು ಭಾರತದಲ್ಲಿ ಬಿಳಿ ಹುಲಿ ಎಂದು ಕರೆಸಿಕೊಂಡಿದ್ದ ಮೋಹನ್ ಎಂಬವನನ್ನು ಈ ಕೋಟೆಯಲ್ಲಿ ಇರಿಸಲಾಗಿತ್ತು. [೨] [೩] ಅರಮನೆಯು ಸುಮಾರು ೧ ಶತಮಾನದವರೆಗೆ ಬಳಕೆಯಲ್ಲಿತ್ತು. ಆದರೆ ಭಾರತೀಯ ಸ್ವಾತಂತ್ರ್ಯ ಮತ್ತು ನಂತರದ ರಾಜಪ್ರಭುತ್ವದ ರೇವಾ ರಾಜ್ಯದ ಅವನತಿಯು ಕೋಟೆಯನ್ನು ಖಾಲಿ ಮಾಡಲು ಕಾರಣವಾಯಿತು. ನಂತರ ಕಟ್ಟಡದಲ್ಲಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. [೪]

೨೦೧೮ ರಲ್ಲಿಈ ಕೋಟೆಯನ್ನು ನವೀಕರಿಸಿ ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಲಾಗುವುದೆಂದು ಘೋಷಿಸಲಾಯಿತು. [೧] [೪]

ಹೆಚ್ಚಿನ ಓದುವಿಕೆ ಬದಲಾಯಿಸಿ

References ಬದಲಾಯಿಸಿ

  1. ೧.೦ ೧.೧ "ATA - Projects Details". www.aishwaryatipnisarchitects.com. Retrieved 2020-06-19.
  2. Chowdhary, Charu (2018-12-20). "Latest travel Articles & blogs". India News, Breaking News, Entertainment News | India.com (in ಇಂಗ್ಲಿಷ್). Retrieved 2020-06-19.
  3. "World's first white tiger sanctuary opens in India in bid to protect species". ITV News (in ಇಂಗ್ಲಿಷ್). Retrieved 2020-06-19.
  4. ೪.೦ ೪.೧ "Govindgarh Fort, Rewa". www.nativeplanet.com (in ಇಂಗ್ಲಿಷ್). Retrieved 2020-06-19.