ಗೋಳಿಬಜೆ

ರುಚಿರುಚಿಯಾದ ಮಂಗಳೂರು ಬಜ್ಜಿ; ಗೋಳಿ ಬಜೆ

ಗೋಳಿ ಬಜೆ (ಮೂಲ ತುಳು) ಮೈದಾ ಹಾಗೂ ಮೊಸರಿನಿಂದ ಮಾಡಿದಂತಹ ಒಂದು ಕರಿದ ತಿಂಡಿ.[] ಇದನ್ನು ಮಂಗಳೂರು ಬಜ್ಜಿ ಎಂದೂ ಕರೆಯುತ್ತಾರೆ. ಇದು ಕರ್ನಾಟಕದ ಕರಾವಳಿ ಭಾಗದ ಜನಪ್ರಿಯ ಸಂಜೆ ತಿಂಡಿ.

ಗೋಳಿಬಜೆ

ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ
  • ಮೊಸರು- ಅರ್ಧ ಕಪ್
  • ಹಸಿಮೆಣಸಿನಕಾಯಿ- 1 (ಕಟ್ ಮಾಡಿದ್ದು)
  • ಶುಂಠಿ- 1 ಇಂಚು (ಕಟ್ ಮಾಡಿಕೊಳ್ಳಿ)
  • ಕರಿಬೇವಿನ ಎಲೆ- ಸ್ವಲ್ಪ
  • ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ
  • ಸಣ್ಣಗೆ ಕತ್ತರಿಸಿದ ತೆಂಗಿನಕಾಯಿ ಚೂರು- 1 ಚಮಚ
  • ಸಣ್ಣಗೆ ಕಟ್ ಮಾಡಿದ ಈರುಳ್ಳಿ- ಅರ್ಧ (ನಿಮ್ಮ ಆಯ್ಕೆಗೆ ಬಿಟ್ಟಿದ್ದು)
  • ಉಪ್ಪು- ರುಚಿಗೆ ತಕ್ಕಷ್ಟು
  • ಅಡುಗೆ ಸೋಡಾ – ಅರ್ಧ ಚಮಚ
  • ಮೈದಾಹಿಟ್ಟು- 1 ಕಪ್
  • ಅಕ್ಕಿ ಹಿಟ್ಟು- 1 ಚಮಚ
  • ಜೀರಿಗೆ – 1/2 ಚಮಚ

ಮಾಡುವ ವಿಧಾನ

ಬದಲಾಯಿಸಿ
  • ಒಂದು ಕಪ್‍ನಲ್ಲಿ ಮೊಸರು, ಸಣ್ಣಗೆ ಕಟ್ ಮಾಡಿಕೊಂಡ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವಿನ ಎಲೆ, ತೆಂಗಿನಕಾಯಿ ಚೂರು, ಈರುಳ್ಳಿ, ಜೀರಿಗೆ, ಉಪ್ಪು, ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು.
  • ನಂತ್ರ ಅದರ ಮೇಲೆ 1 ಕಪ್ ಮೈದಾ ಹಿಟ್ಟು ಹಾಗೂ ಅಕ್ಕಿ ಹಿಟ್ಟು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆಹಿಟ್ಟಿಗಿಂತ ಸ್ವಲ್ಪ ಗಟ್ಟಿಯಿರಬೇಕು. (ಅವಶ್ಯಕತೆ ಇದ್ದಲ್ಲಿ ಸ್ವಲ್ಪ ಮೊಸರು ಸೇರಿಸಿಕೊಳ್ಳಿ).
  • ಹಿಟ್ಟು ಹದವಾದ ಬಳಿಕ 3 ಗಂಟೆ ನೆನೆಯಲು ಬಿಡಿ.
  • 3 ಗಂಟೆಯ ಬಳಿಕ ಮತ್ತೊಮ್ಮೆ ಮಿಕ್ಸ್ ಮಾಡಬೇಕು.
  • ಸ್ಟೌವ್ ಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಬಿಸಿಯಾದ ಬಳಿಕ ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಉಂಡೆಯಂತೆ ಎಣ್ಣೆಗೆ ಬಿಡಿ.
  • ಉಂಡೆಗಳು ಕಂದು ಬಣ್ಣ ಬರುವವರೆಗೆ ಕರಿದು, ಎಣ್ಣೆಯಿಂದ ತೆಗೆದು ಒಂದು ಪ್ಲೇಟ್ ಗೆ ಹಾಕಿ.
  • ತೆಂಗಿನಕಾಯಿ ಚಟ್ನಿ ಜೊತೆ ಬಿಸಿಬಿಸಿ ಗೋಳಿಬಜೆ ಸವಿಯಿರಿ.[]

ಬಡಿಸುವ ವಿಧಾನ

ಬದಲಾಯಿಸಿ
 
ಗೋಳಿಬಜೆ

ಗೋಳಿ ಬಜೆಯನ್ನು ಹೆಚ್ಚಾಗಿ ಕಾಯಿ ಚಟ್ನಿಯೊಂದಿಗೆ ಅಥವಾ ಕೆಚಪ್‍ನೊಂದಿಗೆ ನೀಡಲಾಗುವುದು.[]

ಉಲ್ಲೇಖಗಳು

ಬದಲಾಯಿಸಿ
  1. ಕನ್ನಡಪ್ರಭ
  2. "ಮಂಗಳೂರು ಬೋಂಡಾ/ಗೋಳಿಬಜೆ ಮಾಡೋ ವಿಧಾನ". Public TV - Latest Kannada News, Public TV Kannada Live, Public TV News. 1 July 2017. Retrieved 16 July 2024.
  3. https://hebbarskitchen.com/goli-baje-recipe/


"https://kn.wikipedia.org/w/index.php?title=ಗೋಳಿಬಜೆ&oldid=1235112" ಇಂದ ಪಡೆಯಲ್ಪಟ್ಟಿದೆ