ಯೂಜೆನ್ ಗೋಲ್ಡ್‌ಸ್ಟೈನ್

(ಗೋಲ್ಡ್‌ಸ್ಟೈನ್, ಯೂಜೆನ್ ಇಂದ ಪುನರ್ನಿರ್ದೇಶಿತ)

ಯೂಜೆನ್ ಗೋಲ್ಡ್‌ಸ್ಟೈನ್(5 ಸೆಪ್ಟೆಂಬರ್ 1850 – 25 ಡಿಸೆಂಬರ್ 1930). ಜರ್ಮನಿಯ ಭೌತವಿಜ್ಞಾನಿ.

ಯೂಜೆನ್ ಗೋಲ್ಡ್‌ಸ್ಟೈನ್
ಜನನ5 September 1850
Gliwice, Poland
ಮರಣ25 December 1930, 80 ವರುಷಗಳು
ರಾಷ್ಟ್ರೀಯತೆಜರ್ಮನ್
ಕಾರ್ಯಕ್ಷೇತ್ರಭೌತಶಾಸ್ತ್ರ
ಪ್ರಸಿದ್ಧಿಗೆ ಕಾರಣdiscovery of anode rays
ಗಮನಾರ್ಹ ಪ್ರಶಸ್ತಿಗಳುHughes Medal (1908)


ಸಂಶೋಧನೆ

ಬದಲಾಯಿಸಿ

ಮೊದಲು ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಕೆಲಸಮಾಡಿದ. ಹಲವು ವರ್ಷಗಳ ಬಳಿಕ ಆ ಹುದ್ದೆಯನ್ನು ತೊರೆದು ತನ್ನದೇ ಆದ ಒಂದು ಸಂಶೋಧನಾಲಯವನ್ನು ಸ್ಥಾಪಿಸಿ ಅಲ್ಲಿ ಅನಿಲಗಳ ಮೂಲಕವೂ ನಿರ್ವಾತದಲ್ಲಿಯೂ ಆಗುವ ವಿದ್ಯುದ್ವಿಸರ್ಜನೆಯ ಬಗ್ಗೆ ಅಧ್ಯಯನ ನಡೆಸಿದ. ನಿರ್ವಾತ ವಿಸರ್ಜನ ನಳಿಕೆಯಲ್ಲಿ ವಿದ್ಯುತ್ತನ್ನು ವಿಸರ್ಜಿಸಿದಾಗ ಋಣಧ್ರುವದ (ಕ್ಯಾಥೋಡ್) ಬಳಿ ಸಂದೀಪ್ತಿ (ಲ್ಯೂಮಿನಿಸೆನ್ಸ್‌) ಉಂಟಾಗುವುದನ್ನು ಗಮನಿಸಿದ. ಈ ಪರಿಣಾಮವನ್ನು ಎರಡು ದಶಕಗಳ ಹಿಂದೆಯೇ ಪ್ಲುಕರ್ ಎಂಬ ವಿಜ್ಞಾನಿ ಗಮನಿಸಿದ್ದನಾದರೂ ಪ್ಲುಕರ್, ಜೂಲಿಯಸ್ ಇದನ್ನು ಋಣವಿದ್ಯುತ್ ಕಿರಣವೆಂದು (ಕ್ಯಾಥೋಡ್ ರೇ) ಹೆಸರಿಸಿದಾತ ಗೋಲ್ಡ್‌ಸ್ಟೈನ್ (1876). ವಿದ್ಯುದ್ವಿಸರ್ಜನ ನಳಿಕೆಯಲ್ಲಿನ ಸರಂಧ್ರಋಣಧ್ರುವಫಲಕದ ರಂಧ್ರಗಳ ಮೂಲಕ ಋಣವಿದ್ಯುತ್ ಕಿರಣಗಳ ವಿರುದ್ಧ ದಿಶೆಯಲ್ಲಿ ಚಲಿಸುವ ಕಿರಣಗಳನ್ನು 1886ರಲ್ಲಿ ಈತ ಗಮನಿಸಿ ಇವನ್ನು ಕೆನಾಲ್‍ಸ್ಟ್ರಹ್ಲನ್ (ಚ್ಯಾನಲ್ ರೇಸ್ ಅಥವಾ ಕೆನಾಲ್ ರೇಸ್) ಎಂದು ಹೆಸರಿಸಿದ. ಇದೇ ಕಿರಣಗಳ ಬಗ್ಗೆ ಜೆ.ಜೆ. ಥಾಮ್ಸನ್ ಅಧ್ಯಯನ ನಡೆಸಿ ಇವುಗಳಿಗೆ ಧನವಿದ್ಯುತ್ ಕಿರಣಗಳೆಂದು (ಪಾಸಿಟಿವ್ ರೇಸ್) ಹೆಸರಿಟ್ಟ. ಈ ಕಿರಣಗಳ ಅಧ್ಯಯನದಿಂದ ರುದರ್ಫರ್ಡ್ ಪ್ರೋಟಾನಿನ ಅಸ್ತಿತ್ವವನ್ನು ಪತ್ತೆಹಚ್ಚಿದ.