ಗೋಲ್ಡನ್ ಆಮೆ ಜೀರುಂಡೆ
ಗೋಲ್ಡನ್ ಆಮೆ ಜೀರುಂಡೆ | |
---|---|
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಉಪಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | C. sexpunctata
|
Binomial name | |
ಚಾರಿಡೊಟೆಲ್ಲಾ ಸೆಕ್ಸ್ಪಂಕ್ಟೇಟಾ (Fabricius, 1781)
| |
Synonyms | |
|
ಗೋಲ್ಡನ್ ಆಮೆ ಜೀರುಂಡೆಯು ಕ್ರಿಸೊಮೆಲಿಡೆ ಕುಟುಂಬಕ್ಕೆ ಸೇರಿದ ಜೀರುಂಡೆಯ ಒಂದು ಜಾತಿ. ಇದು ಅಮೆರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಚಾರಿಡೊಟೆಲ್ಲಾ ಸೆಕ್ಸ್ಪಂಕ್ಟೇಟಾ..[೧] ಇದನ್ನು ಆಂಗ್ಲ ಭಾಷೆಯಲ್ಲಿ ಗೋಲ್ಡ್ ಬಗ್,ಗೋಲ್ಡೆನ್ ಟಾರ್ಟೋಯಿಸ್ ಬೀಟಲ್,ಸ್ವೀಟ್ ಪೊಟಾಟೊ ಬೀಟಲ್ ಮತ್ತು ಟಾರ್ಟೋಯಿಸ್ ಬೀಟಲ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. [೨]
ಇದು ಎರಡುಉಪಜಾತಿಗಳನ್ನು ಹೊಂದಿದೆ.
- ಉಪಜಾತಿ ಬೈಕಲರ್
- ಉಪಜಾತಿ ಸೆಕ್ಸ್ಪಂಕ್ಟೇಟಾ
ಜೀವನಚಕ್ರ
ಬದಲಾಯಿಸಿಹೆಣ್ಣು ಜೀರುಂಡೆಯು ತನ್ನ ಮೊಟ್ಟೆಗಳನ್ನು ಮರದ ಕಾಂಡ ಅಥವ ಎಲೆಗಳ ಮೇಲೆ ಇಡುತ್ತದೆ. ಮೊಟ್ಟೆಯು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಹಳದಿ ಅಥವಾ ಕೆಂಪು-ಕಂದು ಬಣ್ಣದ ಲಾರ್ವಾವು ೫ರಿಂದ೧೦ ದಿನಗಳೊಳಗೆ ಮೊಟ್ಟೆಯೊಡೆದು ಹೊರಬರುತ್ತದೆ. ೨ರಿಂದ೩ ಮೂರುವಾರಗಳೊಳಗೆ ಲಾರ್ವಾವು ಕಂದು ಬಣ್ಣದ ಪೊರೆಹೊಂದಿದ ಹುಳುವಾಗಿ ಮಾರ್ಪಡುತ್ತದೆ.[೩] ವಯಸ್ಕ ಜೀರುಂಡೆ ೫ರಿಂದ೭ ಮಿ.ಮೀ.ಉದ್ದವಿರುತ್ತದೆ.[೪] ಬೆಳವಣಿಗೆಯಾದಂತೆ ದೇಹದ ಬಣ್ಣ ಬದಲಾಗುತ್ತದೆ. ಬಣ್ಣವು ಅದರ ಬೆಳವಣಿಗೆಯ ಮೂಲಕ ಅಂದರೆ ಸಂಯೋಗದ ಸಮಯದಲ್ಲಿ,ಅಡಚಣೆಯ ಸಮಯದಲ್ಲಿ ಬದಲಾಗುತ್ತದೆ. ಬೇರೆ ಜೀವಿಗಳಿಂದ ತೊಂದರೆಗೆ ಒಳಗಾದಾಗ ತನ್ನ ಕಾಲುಗಳನ್ನು ದೇಹದ ಹತ್ತಿರಕ್ಕೆ ಆಮೆಗಳ ರೀತಿ ಎಳೆದುಕೊಳ್ಳುತ್ತದೆ.[೫]
ಆಹಾರ
ಬದಲಾಯಿಸಿಕಾನ್ವಾಲ್ವ್ಯುಲೇಷಿಯೆ ಕುಟುಂಬಕ್ಕೆ ಸೇರಿದ ಸಸ್ಯಗಳಾದ ಸಿಹಿಗೆಣಸು,ಮಾರ್ನಿಂಗ್ ಗ್ಲೋರಿ ಹಾಗೂ ಮುಂತಾದ ಸಸ್ಯಗಳ ಎಲೆಯನ್ನು ಅವುಗಳು ತಿನ್ನುತ್ತದೆ.[೬]
ನೈಸರ್ಗಿಕ ಶತ್ರುಗಳು
ಬದಲಾಯಿಸಿಕಣಜ ಪರಾಸೈಟಾಯ್ಡ್ ಟೆಟ್ರಾಸ್ಟಿಕಸ್ ಕ್ಯಾಸಿಡಸ್ ಬರ್ಕ್ಸ್ ಮತ್ತು ಫ್ಲೈ ಪರಾಸೈಟಾಯ್ಡ್ ಯುಸೆಲೇಟರ್ಯಾಪ್ಸಿಸ್ ಡಿಮ್ಮೋಕಿ ಇವುಗಳು ಗೋಲ್ಡನ್ ಆಮೆ ಜೀರುಂಡೆಯ ಮೇಲೆ ದಾಳಿ ಮಾಡುತ್ತವೆ. ಚುಚ್ಚುವ ಮತ್ತು ಹೀರುವ ಬಾಯಿಯ ಭಾಗಗಳನ್ನು ಹೊಂದಿರುವ ಡ್ಯಾಮ್ಸೆಲ್ ಬಗ್,ಶೀಲ್ಡ್ ಬಗ್,ಎಸ್ಸಾಸಿನ್ ಬಗ್ ಇದರ ಶತ್ರುಗಳು.[೭]
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://www.learnaboutnature.com/insects/beetles/golden-tortoise-beetle/
- ↑ https://books.google.co.in/books?id=3V_w-6tA8hYC&pg=PA170&dq=golden+tortoise+
- ↑ https://keys.lucidcentral.org/keys/sweetpotato/key/Sweetpotato%20Diagnotes/Media/Html/TheProblems/Pest-LeafChewingInsects/TortoiseBeetles/tortoise%20beetles.htm
- ↑ https://twistedsifter.com/2012/08/golden-tortoise-beetle-pictures/
- ↑ https://wiki.bugwood.org/HPIPM:Golden_Tortoise_Beetle
- ↑ https://bugguide.net/node/view/8826
- ↑ http://entnemdept.ufl.edu/creatures/veg/potato/golden_tortoise_beetle.htm