ಗೋದ್ರೆ/ಡ್ರೆಜ್‌ ಉದ್ಯಮ ಸಮೂಹ

(ಗೋದ್ರೆಜ್ ಇಂದ ಪುನರ್ನಿರ್ದೇಶಿತ)


ಗೋದ್ರೆ/ಡ್ರೆಜ್‌ ಉದ್ಯಮ ಸಮೂಹ ವು 1897ರಲ್ಲಿ ಮುಂಬಯಿನ ಲಾಲ್‌‌ಬಾಗ್‌ನಲ್ಲಿ ಆರ್ದೆ/ರ್ಡೆಷಿರ್‌‌ ಮತ್ತು ಪಿ/ಫಿರೋಜ್‌ಷಾ ಗೋದ್ರೆ/ಡ್ರೆಜ್‌ ಎಂಬುವವರು ಸ್ಥಾಪಿಸಿದ್ದ ಒಂದು ಭಾರತದ ಸಂಘಟಿತ ಉದ್ಯಮ ಸಮೂಹವಾಗಿದೆ.

Godrej Group
ಸಂಸ್ಥೆಯ ಪ್ರಕಾರPublic (ಬಿಎಸ್‌ಇ: 500164)
ಸ್ಥಾಪನೆ1897, Lalbaug, ಮುಂಬೈ[]
ಸಂಸ್ಥಾಪಕ(ರು)Ardeshir Godrej
ಮುಖ್ಯ ಕಾರ್ಯಾಲಯMumbai, India
ಪ್ರಮುಖ ವ್ಯಕ್ತಿ(ಗಳು)Adi Godrej (Chairman)
ಉದ್ಯಮConglomerate
ಉತ್ಪನ್ನLocks, Soaps, mosquito repellent, Furniture, Food & Real Estate,Typewriter
ಆದಾಯ2.6 billion (2010)
ಉದ್ಯೋಗಿಗಳು9,700
ಜಾಲತಾಣwww.godrej.com

ಹಿನ್ನೆಲೆ

ಬದಲಾಯಿಸಿ

ಗೋದ್ರೆ/ಡ್ರೆಜ್‌ ಸಮೂಹವು ಭಾರತಮುಂಬಯಿ ಮಹಾನಗರ ಮೂಲದ ಸಾಮಗ್ರಿಗಳು, ನಿಷ್ಕೃಷ್ಟ ಅಳತೆಮಾಪಕ ಉಪಕರಣಗಳು, ಯಂತ್ರೋತ್ಪನ್ನ ಸಲಕರಣೆಗಳು, ಪೀಠೋಪಕರಣಗಳು, ಆರೋಗ್ಯಸೇವೆ/ವೈದ್ಯಕೀಯ ಉತ್ಪನ್ನಗಳು, ಒಳಾಂಗಣ ಅಲಂಕರಣ ಉತ್ಪನ್ನಗಳು, ಕಛೇರಿ ಉಪಕರಣಗಳು, ಆಹಾರ-ತಯಾರಿಕಾ ಉತ್ಪನ್ನಗಳು, ರಕ್ಷಣಾ ಉಪಕರಣಗಳು, ವಸ್ತುಗಳ ನಿರ್ವಹಣೆ ಮತ್ತು ಔದ್ಯಮಿಕ ಸಂಗ್ರಹಣಾ ಉತ್ಪನ್ನಗಳು, ನಿರ್ಮಾಣ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳೂ ಸೇರಿದಂತೆ ವೈವಿಧ್ಯಮಯ ಕೈಗಾರಿಕೆಗಳಲ್ಲಿ ತೊಡಗಿಕೊಂಡಿರುವ ಬೃಹತ್‌ ಸಂಘಟಿತ ಉದ್ಯಮ ಸಮೂಹಗಳಲ್ಲೊಂದಾಗಿದೆ. ಸಂರಕ್ಷಣಾ ವ್ಯವಸ್ಥೆಗಳು ಮತ್ತು ತಿಜೋರಿಗಳು, ಬೆರಳಚ್ಚು ಯಂತ್ರಗಳು/ಟೈಪ್‌ರೈಟರ್‌ಗಳು ಮತ್ತು ಪದ ಸಂಸ್ಕಾರಕಯಂತ್ರಗಳು, ರಾಕೆಟ್‌ ಉಡಾವಣಾ ಯಂತ್ರಗಳು, ಶೀತಕಗಳು/ರೆಫ್ರಿಜರೇಟರ್‌ಗಳು ಮತ್ತು ಪೀಠೋಪಕರಣಗಳು, ಹೊರಗುತ್ತಿಗೆ ಸೇವೆಗಳು, ಯಾಂತ್ರಿಕ ಸಲಕರಣೆಗಳು ಮತ್ತು ಪ್ರಕ್ರಿಯಾ ಉಪಕರಣಗಳು, ಸೌಂದರ್ಯವರ್ಧಕಗಳು ಮತ್ತು ಮಾರ್ಜಕಗಳು, ಶಿಲ್ಪಶಾಸ್ತ್ರೀಯ ಯಂತ್ರೋತ್ಪನ್ನ ಸಜ್ಜುಗಳು, ವೈದ್ಯಕೀಯ ರೋಗನಿದಾನ ಉಪಕರಣಗಳು ಮತ್ತು ವಾಯುಯಾನ ಉಪಕರಣಗಳು, ಖಾದ್ಯತೈಲಗಳು ಮತ್ತು ರಾಸಾಯನಿಕಗಳು, ಸೊಳ್ಳೆ ನಿವಾರಕಗಳು, ಕಾರುಗಳಲ್ಲಿ ಬಳಸುವ ಸುಗಂಧದ್ರವ್ಯಗಳು, ಕೋಳಿಮಾಂಸ ಮತ್ತು ಕೃಷಿ ಉತ್ಪನ್ನಗಳು, FORKLIFT ಟ್ರಕ್‌ಗಳು, ಸ್ಟೇಕರ್‌ಗಳು, ಟೈರ್‌ ನಿರ್ವಾಹಕಗಳು, ಗುಡಿಸುವ ಯಂತ್ರಗಳು, ಪ್ರವೇಶ ನಿಯಂತ್ರಣ ಉಪಕರಣಗಳು etc.ಗಳು ಸೇರಿದಂತೆ ವಸ್ತುಗಳನ್ನು ನಿರ್ವಹಿಸುವ ಉಪಕರಣಗಳು ಈ ಉದ್ಯಮ ಸಮೂಹದ ಉತ್ಪನ್ನಗಳಲ್ಲಿ ಸೇರಿವೆ. ಆದಿ ಗೋದ್ರೆ/ಡ್ರೆಜ್‌ ಮತ್ತು ಜಮ್‌ಷಿದ್‌/ಡ್‌ ಗೋದ್ರೆ/ಡ್ರೆಜ್‌ರವರುಗಳು ಈ ಉದ್ಯಮ ಸಮೂಹದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

ಸಾಂಪ್ರದಾಯಿಕವಾಗಿ, ಮುಂಬಯಿ ಮಹಾನಗರದ ಈಶಾನ್ಯ ಭಾಗದಲ್ಲಿರುವ ಉಪನಗರವಾಗಿರುವ ವಿಖ್ರೋಲಿಯು, ಗೋದ್ರೆ/ಡ್ರೆಜ್‌ ಸಮೂಹದ ತಯಾರಿಕಾ ಕೈಗಾರಿಕೆಗಳ ಕೇಂದ್ರವಾಗಿದ್ದರೂ, ಮುಂಬಯಿ ಮಹಾನಗರದ ಹೊರಭಾಗಕ್ಕೆ ಸಮೂಹವು ತನ್ನ ಗಮನಾರ್ಹ ಮಟ್ಟದ ಉತ್ಪಾದನಾ ಕೈಗಾರಿಕೆಗಳನ್ನು ಸ್ಥಳಾಂತರಿಸುತ್ತಲಿದೆ. ಗೋದ್ರೆ/ಡ್ರೆಜ್‌ ಉದ್ಯಮ ಸಮೂಹವು LBS ಮಾರ್ಗ್‌‌ನ ವಿಖ್ರೋಲಿ ವಿಭಾಗದ ಎರಡೂ ಬದಿಗಳಲ್ಲಿ ಹರಡಿರುವಂತೆ ವಿಖ್ರೋಲಿಯಲ್ಲಿ ಸುಮಾರು 3500 ಎಕರೆಗಳಷ್ಟು (14 sq km) ವಿಸ್ತಾರವಿರುವ ವಿಶಾಲವಾದ ಭೂಪ್ರದೇಶದ ಮಾಲೀಕತ್ವವನ್ನು ಹೊಂದಿದೆ. ಇದು ಗೋದ್ರೆ/ಡ್ರೆಜ್‌ ಉದ್ಯಮ ಸಮೂಹವನ್ನು ಮುಂಬಯಿ ಮಹಾನಗರದಲ್ಲಿ ಇದುವರೆಗಿನ ಬೃಹತ್‌ ಖಾಸಗಿ ಭೂಮಾಲಿಕ ಸಂಸ್ಥೆಯೆನಿಸಿಕೊಳ್ಳುವಂತೆ ಮಾಡಿದೆ[ಸೂಕ್ತ ಉಲ್ಲೇಖನ ಬೇಕು]. ಅಷ್ಟು ವಿಸ್ತಾರವಾದ ಭೂಮಿಯಲ್ಲಿ ಸೈದ್ಧಾಂತಿಕವಾಗಿ ಕನಿಷ್ಟ ಪಕ್ಷ 1,500 acres (6.1 km2)ರಷ್ಟು ವಸತಿ ಪ್ರದೇಶವನ್ನು ನಿರ್ಮಿಸಲು ಬಳಸಬಹುದಾಗಿದ್ದು, ಇಷ್ಟು ಪ್ರದೇಶಕ್ಕೆ ಸಾಧಾರಣ ದರದಲ್ಲಿಯೇ (Rs.10000/sq ft) ಆದರೂ USD 16 ಶತಕೋಟಿಗಳ ಮೊತ್ತಕ್ಕೆ ಮಾರಬಹುದಾಗಿದೆ. ಆದ್ದರಿಂದ, ಗೋದ್ರೆ/ಡ್ರೆಜ್‌ ಉದ್ಯಮ ಸಮೂಹವು ಇತರೆ ಭಾರತೀಯ ಸಂಘಟಿತ ಉದ್ಯಮ ಸಮೂಹಗಳು ಅಸೂಯೆ ಪಡುವಷ್ಟು ಅಗೋಚರ ಹಣದ ರಾಶಿಯನ್ನು ಹೊಂದಿದೆ[ಸೂಕ್ತ ಉಲ್ಲೇಖನ ಬೇಕು].

ಕಾಲಾನುಕ್ರಮ ಘಟನಾವಳಿ[]

ಬದಲಾಯಿಸಿ
  • 1897 - ಗೋದ್ರೆ/ಡ್ರೆಜ್‌ & ಬಾಯ್ಸ್‌‌ Mfg. Co. Ltd ಸ್ಥಾಪನೆಯಾಯಿತು
  • 1918 - ಗೋದ್ರೆ/ಡ್ರೆಜ್‌ ಸೋಪ್ಸ್‌‌ ನಿಯಮಿತ ಸಂಸ್ಥೆಯನ್ನು ಸಂಘಟಿಸಲಾಯಿತು
  • 1961- ಗೋದ್ರೆ/ಡ್ರೆಜ್‌ ಭಾರತದಲ್ಲಿ ಫೋರ್ಕ್‌ಲಿಫ್ಟ್‌‌ ಟ್ರಕ್‌ಗಳ ನಿರ್ಮಾಣವನ್ನು ಆರಂಭಿಸಿತು
  • 1971- ಗೋದ್ರೆ/ಡ್ರೆಜ್‌ ಆಗ್ರೋವೆಟ್‌‌ ನಿಯಮಿತ ಕಂಪೆನಿಯನ್ನು ಗೋದ್ರೆ/ಡ್ರೆಜ್‌ ಸೋಪ್ಸ್‌‌ ಸಂಸ್ಥೆಯ ಅನಿಮಲ್‌ ಫೀಡ್ಸ್‌‌ ವಿಭಾಗವನ್ನಾಗಿ ಆರಂಭಿಸಲಾಯಿತು
  • 1974 - ಮುಂಬಯಿ ಮಹಾನಗರದ ವಾಡಾಲಾದಲ್ಲಿನ ಸಸ್ಯಾಹಾರಿ ಖಾದ್ಯತೈಲ ವಿಭಾಗವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು
  • 1990 - ಮತ್ತೊಂದು ಅಂಗಸಂಸ್ಥೆಯಾದ ಗೋದ್ರೆ/ಡ್ರೆಜ್‌ ಪ್ರಾಪರ್ಟೀಸ್‌‌ ಲಿಮಿಟೆಡ್‌‌ ಅನ್ನು ಸ್ಥಾಪಿಸಲಾಯಿತು
  • 1991 - ಆಹಾರ ಉತ್ಪನ್ನಗಳ ಉದ್ಯಮವನ್ನು ಆರಂಭಿಸಲಾಯಿತು
  • 1991 - ಗೋದ್ರೆ/ಡ್ರೆಜ್‌ ಆಗ್ರೋವೆಟ್‌‌ ನಿಯಮಿತ ಕಂಪೆನಿಯನ್ನು ಸಂಘಟಿತ ಕಂಪೆನಿಯನ್ನಾಗಿ ಸಜ್ಜುಗೊಳಿಸಲಾಯಿತು
  • 1994 - ಟ್ರಾನ್ಸ್‌‌ಎಲೆಕ್ಟ್ರಾ ಡೊಮೆಸ್ಟಿಕ್‌ ಪ್ರಾಡಕ್ಟ್ಸ್‌‌‌ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು
  • 1995 - ಟ್ರಾನ್ಸ್‌‌ಎಲೆಕ್ಟ್ರಾ ಸಂಸ್ಥೆಯು ಸಾರಾ ಲೀ USA ಕಂಪೆನಿಯೊಂದಿಗೆ ವ್ಯೂಹಾತ್ಮಕ ಮೈತ್ರಿಯನ್ನು ಸಾಧಿಸಿತು
  • 1999 - ಟ್ರಾನ್ಸ್‌‌ಎಲೆಕ್ಟ್ರಾ ಸಂಸ್ಥೆಯು ಗೋದ್ರೆ/ಡ್ರೆಜ್‌ ಸಾರಾ ಲೀ ಲಿಮಿಟೆಡ್‌‌ ಅನ್ನು ಮರುನಾಮಕರಣಗೊಳಿಸಿ ಗೋದ್ರೆ/ಡ್ರೆಜ್‌ ಇನ್‌ಫೋಟೆಕ್‌ Ltd‎‎. ಆಗಿ ಸಂಘಟಿಸಿತು.
  • 2001 - ಗೋದ್ರೆ/ಡ್ರೆಜ್‌ ಸೋಪ್ಸ್‌ ಲಿಮಿಟೆಡ್‌ನ ಇಬ್ಭಾಗಗೊಳಿಸಿ ಗೋದ್ರೆ/ಡ್ರೆಜ್‌ ಕನ್‌‌‌ಷ್ಯೂಮರ್‌ ಪ್ರಾಡಕ್ಟ್ಸ್‌‌ ಸಂಸ್ಥೆಯನ್ನು ರೂಪಿಸಲಾಯಿತು. ಗೋದ್ರೆ/ಡ್ರೆಜ್‌ ಸೋಪ್ಸ್‌ಅನ್ನು ಗೋದ್ರೆ/ಡ್ರೆಜ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಎಂದು ಮರುನಾಮಕರಣಗೊಳಿಸಲಾಯಿತು
  • 2002 - ಗೋದ್ರೆ/ಡ್ರೆಜ್‌ ಟೀ ಲಿಮಿಟೆಡ್‌ ಅನ್ನು ಸ್ಥಾಪಿಸಲಾಯಿತು
  • 2003 - ಗೋದ್ರೆ/ಡ್ರೆಜ್‌ ಗ್ಲೋಬಲ್‌ ಸೊಲ್ಯೂಷನ್ಸ್‌ ಲಿಮಿಟೆಡ್‌ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ BPO ಚಟುವಟಿಕೆ ಮತ್ತು ಸೇವೆಗಳ ಕ್ಷೇತ್ರಕ್ಕೆ ಪ್ರವೇಶಿಸಿತು
  • 2004 - ಗೋದ್ರೆ/ಡ್ರೆಜ್‌ ಹೈಕೇರ್‌ ಲಿಮಿಟೆಡ್‌ ಕಂಪೆನಿಯನ್ನು ಕ್ರಿಮಿನಿವಾರಕ ಔಷಧಿರಚನೆಯಲ್ಲಿ ವೃತ್ತಿಪರ ಸೇವೆ ನೀಡುವ ಮೂಲಕ ಸುರಕ್ಷಿತ ಆರೋಗ್ಯಕರ ವಾತಾವರಣ ನಿರ್ಮಿಸಲು ಸ್ಥಾಪಿಸಲಾಯಿತು
  • 2006 - ಆಹಾರೋತ್ಪನ್ನಗಳ ಉದ್ಯಮವನ್ನು ಗೋದ್ರೆ/ಡ್ರೆಜ್‌ ಟೀ ಕಂಪೆನಿಯೊಂದಿಗೆ ವಿಲೀನಗೊಳಿಸಿ ಗೋದ್ರೆ/ಡ್ರೆಜ್‌ ಟೀ ಕಂಪೆನಿಯನ್ನು ಗೋದ್ರೆ/ಡ್ರೆಜ್‌ ಬೆವೆರೇಜಸ್‌ & ಫುಡ್ಸ್‌ ಲಿಮಿಟೆಡ್‌ ಎಂಬುದಾಗಿ ಮರುನಾಮಕರಣಗೊಳಿಸಲಾಯಿತು
  • 2007 - ಗೋದ್ರೆ/ಡ್ರೆಜ್‌ ಬೆವೆರೇಜಸ್‌ & ಫುಡ್ಸ್‌ ಲಿಮಿಟೆಡ್‌ ಸಂಸ್ಥೆಯು ಉತ್ತರ ಅಮೇರಿಕಾದ ದ ಹರ್ಷೆ ಕಂಪೆನಿಯೊಂದಿಗೆ JV ಜಂಟಿಉದ್ಯಮವನ್ನು ಕೈಗೊಂಡುದದರಿಂದ, ಕಂಪೆನಿಯನ್ನು ಗೋದ್ರೆ/ಡ್ರೆಜ್‌ ಹರ್ಷೆ ಫುಡ್ಸ್‌ & ಬೆವೆರೇಜಸ್‌ ಲಿಮಿಟೆಡ್‌ ಎಂದು ಮರುನಾಮಕರಣಗೊಳಿಸಲಾಯಿತು
  • 2008 - ಗೋದ್ರೆ/ಡ್ರೆಜ್‌ ನವೀನ ವರ್ಣಮಯ ಲೋಗೋ ಮತ್ತು ತಾಜಾ ಸ್ವರೂಪಿ ಸಂಗೀತಗಳನ್ನು ಹೊಂದುವುದರ ಮೂಲಕ ತನ್ನನ್ನು ಮರು-ಉಪಕ್ರಮಿಸಿಕೊಂಡಿತು
  • 2010 - ಗೋದ್ರೆ/ಡ್ರೆಜ್‌ ಗೋಜಿಯೋ ಎಂಬ ಉಚಿತ ಜಾಲಕ ತಂತ್ರಾಂಶ ಆಧಾರಿತ 3D ಅವಾಸ್ತವ ವಿಶ್ವ ತಂತ್ರಾಂಶವನ್ನು[] ಆರಂಭಿಸಿತು

ಸಾಮಾಜಿಕ ಹೊಣೆಗಾರಿಕೆ

ಬದಲಾಯಿಸಿ

ಗೋದ್ರೆ/ಡ್ರೆಜ್‌ ಶಾಲೆಗಳನ್ನು, ಚಿಕಿತ್ಸಾಲಯಗಳನ್ನು ಮತ್ತು ವಸತಿ ಸಮುಚ್ಛಯಗಳನ್ನು ತಮ್ಮ ಸಿಬ್ಬಂದಿ ವರ್ಗಕ್ಕಾಗಿ ನಿರ್ಮಿಸಿರುವ ಮಾನವಪ್ರೇಮಿ ಅಂಗಸಂಸ್ಥೆಯೊಂದನ್ನೂ ಕೂಡಾ ಹೊಂದಿದೆ. ಗೋದ್ರೆ/ಡ್ರೆಜ್‌ ಸಂಸ್ಥೆಯು ಸ್ಥಾಪಿಸಿದ ಪ್ರತಿಷ್ಟಾನಗಳು ಅಲ್ಪಜೀವನಮಟ್ಟವನ್ನು ಹೊಂದಿರುವವರ ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಉನ್ನತಿಗಳಿಗೆಂದು ಹಣ ಹೂಡುವುದನ್ನು ಮುಂದುವರೆಸಿವೆ.

ಸಾಂಸ್ಥಿಕ ವಿವರಗಳು

ಬದಲಾಯಿಸಿ

ಆದಿ ಗೋದ್ರೆ/ಡ್ರೆಜ್‌ರವರು ಗೋದ್ರೆ/ಡ್ರೆಜ್‌ ಉದ್ಯಮ ಸಮೂಹದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಗೋದ್ರೆ/ಡ್ರೆಜ್‌ & ಬಾಯ್ಸ್‌‌ Mfg. Co. Ltd. ಕಂಪೆನಿಯ ನೇತೃತ್ವವನ್ನು Mr. ಜಮ್‌ಷಿದ್‌/ಡ್‌ ಗೋದ್ರೆ/ಡ್ರೆಜ್‌ರವರು ವಹಿಸಿಕೊಂಡಿದ್ದಾರೆ. 06/07ರ ಆರ್ಥಿಕ ವರ್ಷದಲ್ಲಿ ಈ ಉದ್ಯಮ ಸಮೂಹದ ಆದಾಯವು ಸರಿಸುಮಾರು US$ 1.7 ಶತಕೋಟಿಗಳಷ್ಟಿತ್ತು. ಗೋದ್ರೆ/ಡ್ರೆಜ್‌ ಇಂಟೀರಿಯೋ ಎಂಬುದು ಈ ಉದ್ಯಮ ಸಮೂಹದ ಪ್ರಮುಖ ಕಂಪೆನಿಯಾಗಿದೆ.

ಗೋದ್ರೆ/ಡ್ರೆಜ್‌ ಉದ್ಯಮ ಸಮೂಹವನ್ನು ಸ್ಥೂಲವಾಗಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಎರಡು ಪ್ರಮುಖ ಹಿಡುವಳಿ ಸಂಸ್ಥೆಗಳನ್ನಾಗಿ ವಿಂಗಡಿಸಬಹುದು:

  1. ಗೋದ್ರೆ/ಡ್ರೆಜ್‌ ಇಂಡಸ್ಟ್ರೀಸ್‌ Ltd
  2. ಗೋದ್ರೆ/ಡ್ರೆಜ್‌ & ಬಾಯ್ಸ್‌‌ Mfg. Co. Ltd.

ಇದರ ಪ್ರಮುಖ ಕಂಪೆನಿಗಳು, ಅಂಗಸಂಸ್ಥೆಗಳು ಹಾಗೂ ಸದಸ್ಯ ಸಂಸ್ಥೆಗಳೆಂದರೆ[]

  • ರಾಸಾಯನಿಕ & ಸರಕುಗಳ ಕ್ಷೇತ್ರ
  • ಗೋದ್ರೆ/ಡ್ರೆಜ್‌ ಇಂಡಸ್ಟ್ರೀಸ್‌
  • ರಾಸಾಯನಿಕಗಳು
  • ಸಸ್ಯಾಹಾರಿ ತೈಲಗಳು
  • FMCG
  • ಗೋದ್ರೆ/ಡ್ರೆಜ್‌ ಕನ್‌ಷ್ಯೂಮರ್‌‌ ಪ್ರಾಡಕ್ಟ್ಸ್‌‌‌
  • ಕೀಲೈನ್‌ ಬ್ರಾಂಡ್ಸ್‌‌ UK
  • ರ್ರ್ಯಾಪಿಡಾಲ್‌‌ ಸೌತ್‌ ಆಫ್ರಿಕಾ
  • ಗೋದ್ರೆ/ಡ್ರೆಜ್‌ ಗ್ಲೋಬಲ್‌ ಮಿಡ್‌ಈಸ್ಟ್‌‌ FZE
  • ಗೋದ್ರೆ/ಡ್ರೆಜ್‌ SCA ಹೈಜೀನ್‌ ಲಿಮಿಟೆಡ್‌‌
  • ಗೋದ್ರೆ/ಡ್ರೆಜ್‌ ಹರ್ಷೆ ಫುಡ್ಸ್‌ & ಬೆವೆರೇಜಸ್‌ ಲಿಮಿಟೆಡ್‌
  • ನ್ಯೂಟ್ರೀನ್‌
  • ಗೋದ್ರೆ/ಡ್ರೆಜ್‌ ಸಾರಾ ಲೀ
  • AGRI
  • ಗೋದ್ರೆ/ಡ್ರೆಜ್‌ ಆಗ್ರೋವೆಟ್‌‌
  • ಅನಿಮಲ್‌ ಫೀಡ್ಸ್‌‌
  • ಗೋಲ್ಡ್‌ಮೊಹರ್‌ ಫುಡ್ಸ್‌ ಅಂಡ್‌ ಫೀಡ್ಸ್‌
  • ಗೋಲ್ಡನ್‌ ಫೀಡ್‌‌ ಪ್ರಾಡಕ್ಟ್ಸ್‌‌‌
  • ಹಿಗಾಷಿಮಾರು ಫೀಡ್‌‌ ಪ್ರಾಡಕ್ಟ್ಸ್‌‌‌
  • ಆಯಿಲ್‌ ಪಾಮ್‌‌
  • ಅಗ್ರಿ ಇನ್‌ಪುಟ್ಸ್‌
  • ಗೋದ್ರೆ/ಡ್ರೆಜ್‌ ಆಧಾರ್‌‌
  • ನೇಚರ್ಸ್‌‌ ಬ್ಯಾಸ್ಕೆಟ್‌
  • ಇಂಟೆಗ್ರೇಟೆಡ್‌‌ ಪೌಲ್ಟ್ರಿ ಬಿಜಿನೆಸ್‌
  • ಪ್ಲಾಂಟ್‌‌ ಬಯೋಟೆಕ್‌
  • ಸೇವೆಗಳು
  • ಗೋದ್ರೆ/ಡ್ರೆಜ್‌ ಹೈಕೇರ್‌‌ (ಕ್ರಿಮಿನಾಶಕ ಉತ್ಪನ್ನ ಸೇವೆಗಳು)
  • ಗೋದ್ರೆ/ಡ್ರೆಜ್‌ ಗ್ಲೋಬಲ್‌ ಸೊಲ್ಯೂಷನ್ಸ್‌ (ITES)
  • ಗೋದ್ರೆ/ಡ್ರೆಜ್‌ ಪ್ರಾಪರ್ಟೀಸ್‌‌

ಸಾಧನೆಗಳು[]

ಬದಲಾಯಿಸಿ
  • 1897ನೇ ಇಸವಿಯಲ್ಲಿ, ಗೋದ್ರೆ/ಡ್ರೆಜ್‌ ಕಂಪೆನಿಯು ಭಾರತದಲ್ಲಿ ಸನ್ನೆ ತಂತ್ರಜ್ಞಾನವನ್ನು ಬಳಸಿದ್ದ ಪ್ರಪ್ರಥಮ ಬೀಗವನ್ನು ಪರಿಚಯಿಸಿತ್ತು.
  • 1902ನೇ ಇಸವಿಯಲ್ಲಿ, ಗೋದ್ರೆ/ಡ್ರೆಜ್‌ ಕಂಪೆನಿಯು ಪ್ರಪ್ರಥಮ ಭಾರತೀಯ ತಿಜೋರಿಯನ್ನು ನಿರ್ಮಿಸಿತು.
  • 1920ನೇ ಇಸವಿಯಲ್ಲಿ, ಸಸ್ಯಾಹಾರಿ ತೈಲದಿಂದ ಗೋದ್ರೆ/ಡ್ರೆಜ್‌ ಕಂಪೆನಿಯು ಸಾಬೂನನ್ನು ತಯಾರಿಸಿದ್ದುದು, ಭಾರತದ ಸಸ್ಯಾಹಾರಿ ಜನಸಮೂಹದಲ್ಲಿ ಬಹು ಜನಪ್ರಿಯವೆನಿಸಿಕೊಂಡಿತು
  • 1955ನೇ ಇಸವಿಯಲ್ಲಿ, ಗೋದ್ರೆ/ಡ್ರೆಜ್‌ ಕಂಪೆನಿಯು ಭಾರತದ ಪ್ರಪ್ರಥಮ ಸ್ವದೇಶೀ ಬೆರಳಚ್ಚುಯಂತ್ರವನ್ನು ಉತ್ಪಾದಿಸಿತು
  • 1989ನೇ ಇಸವಿಯಲ್ಲಿ, ಗೋದ್ರೆ/ಡ್ರೆಜ್‌ PUFಅನ್ನು (ಪಾಲಿಯುರೇಥೇನ್‌ ಫೋಮ್‌ ರಬ್ಬರು) ಪರಿಚಯಿಸಿದ ಪ್ರಪ್ರಥಮ ಕಂಪೆನಿಯೆನ್ನಿಸಿಕೊಂಡಿತು
  • ಭಾರತದ ಪ್ರಪ್ರಥಮ ಹಾಗೂ ಏಕೈಕ 100% CFC, HCFC, HFC ಮುಕ್ತ ಶೀತಕಯಂತ್ರಗಳನ್ನು ಪರಿಚಯಿಸಿತು

ಮುಡಿಗೇರಿಸಿಕೊಂಡಿರುವ ಪ್ರಶಸ್ತಿಗಳು[]

ಬದಲಾಯಿಸಿ
  • GCPL ಸಂಸ್ಥೆಯು, ಬಿಜಿನೆಸ್‌ ವೀಕ್‌ ನಿಯತಕಾಲಿಕೆಯು ಹೊರಡಿಸಿದ ಏಷ್ಯಾದ ಭಾರೀ ಬೆಳವಣಿಗೆ ಹೊಂದುತ್ತಿರುವ ಕಂಪೆನಿಗಳ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದ ಭಾರತೀಯ FMCG ಎಂಬ ಹೆಗ್ಗಳಿಕೆ ಪಡೆದುಕೊಂಡಿತು
  • ಗೋದ್ರೆ/ಡ್ರೆಜ್‌ ಕನ್‌ಷ್ಯೂಮರ್‌ ಪ್ರಾಡಕ್ಟ್ಸ್‌‌‌ Ltd. ಕಂಪೆನಿಯನ್ನು ಉದ್ಯೋಗಿಗಳ ನೆಚ್ಚಿನ ಅತ್ಯುತ್ತಮ ಕಂಪೆನಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ 14ನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಅಧ್ಯಯನವನ್ನು ಬಿಜಿನೆಸ್‌ ಟುಡೇ, ಮರ್ಸ/ರ್ಕರ್‌ ಮತ್ತು ಟೇಲರ್‌ ನೆಲ್ಸನ್‌‌ ಸಾಫ್ರೆಸ್‌ (TNS) ಕಂಪೆನಿಗಳು ಜಂಟಿಯಾಗಿ ಆಯೋಜಿಸಿದ್ದವು
  • ಗೋದ್ರೆ/ಡ್ರೆಜ್‌ ಕನ್‌ಷ್ಯೂಮರ್‌ ಪ್ರಾಡಕ್ಟ್ಸ್‌‌‌ ಕಂಪೆನಿಯು ET-ಹೆವಿಟ್‌‌ ಭಾರತದ ಅತ್ಯುತ್ತಮ ಉದ್ಯೋಗದಾತ ಸಂಸ್ಥೆಗಳ ಸಮೀಕ್ಷೆಯಲ್ಲಿ 6ನೇ ಸ್ಥಾನವನ್ನು ಪಡೆದಿತ್ತು
  • GCPL ಕಂಪೆನಿಯು ನಡೆಸಿದ 2006ರ ಅತ್ಯುತ್ತಮ ಉದ್ಯೋಗ ಸ್ಥಳಗಳ ಸಮೀಕ್ಷೆಯಲ್ಲಿ 15ನೇ ಸ್ಥಾನವನ್ನು ಪಡೆದುಕೊಂಡಿತ್ತು
  • ಇಕನಾಮಿಕ್‌ ಟೈಮ್ಸ್‌ ನೀಡುವ ವರ್ಷದ ನಾಗರಿಕ ಸಂಸ್ಥೆ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
  • ಸೂಪರ್‌ಬ್ರಾಂಡ್ಸ್‌‌/ಅತ್ಯುತ್ಕೃಷ್ಟ ಬ್ರಾಂಡ್‌ಗಳ ಸಮಿತಿಯು ಆಯ್ಕೆ ಮಾಡಿದ್ದ ಅತ್ಯುತ್ಕೃಷ್ಟ ಬ್ರಾಂಡ್‌ಗಳಲ್ಲಿ ಪ್ರಖ್ಯಾತ ಬ್ರಾಂಡ್‌ಗಳಾದ ಗುಡ್‌ನೈಟ್‌‌, ಸಿಂಥಾಲ್‌ ಮತ್ತು ಈಜೀಗಳು ಆಯ್ಕೆಯಾಗಿದ್ದವು
  • ಗೋದ್ರೆ/ಡ್ರೆಜ್‌ ಉದ್ಯಮ ಸಮೂಹ ಮತ್ತು USAನ ಸಾರಾ ಲೀ ಕಾರ್ಪೋರೇಷನ್‌ ಸಂಸ್ಥೆಗಳ JV ಜಂಟಿ ಉದ್ಯಮವಾದ ಗೋದ್ರೆ/ಡ್ರೆಜ್‌ ಸಾರಾ ಲೀ ಕಂಪೆನಿಯನ್ನು ವಿಶ್ವದ ಅತಿದೊಡ್ಡ ಜಮಖಾನ/ಹಾಸು/ಚಾಪೆಗಳ ನಿರ್ಮಾಣ ಸಂಸ್ಥೆ ಎಂದು ಹಾಗೂ ದಕ್ಷಿಣ ಏಷ್ಯಾದಲ್ಲೇ ಸುರುಳಿಗಳ ಅತಿದೊಡ್ಡ ತಯಾರಕ ಸಂಸ್ಥೆಗಳೆಂಬ ಮಾನ್ಯತೆಯನ್ನು ಪಡೆದುಕೊಂಡಿತು.
  • ಸೂಪರ್‌ಬ್ರಾಂಡ್ಸ್‌‌/ಅತ್ಯುತ್ಕೃಷ್ಟ ಬ್ರಾಂಡ್‌ಗಳ ಸಮಿತಿಯು ಗೋದ್ರೆ/ಡ್ರೆಜ್‌ ಕನ್‌ಷ್ಯೂಮರ್‌ ಪ್ರಾಡಕ್ಟ್ಸ್‌‌‌ ಲಿಮಿಟೆಡ್‌ ಕಂಪೆನಿಯನ್ನು ಬಿಜಿನೆಸ್‌/ಉದ್ಯಮ ಅತ್ಯುತ್ಕೃಷ್ಟ ಬ್ರಾಂಡ್‌ ಎಂಬ ಮನ್ನಣೆ ನೀಡಿತು.
  • ಗೋದ್ರೆ/ಡ್ರೆಜ್‌ ಕನ್‌ಷ್ಯೂಮರ್‌ ಪ್ರಾಡಕ್ಟ್ಸ್‌ ಕಂಪೆನಿಯ ಹೂಡಿದ ಬಂಡವಾಳಕ್ಕೆ ಸಿಕ್ಕ ಲಾಭ ಮತ್ತು ನಿವ್ವಳ ಆಸ್ತಿಯ ಮೇಲಿನ ಲಾಭಗಳ ಅನುಪಾತವು - ಸಾಂಸ್ಥಿಕ ಭಾರತದಲ್ಲೇ ಅತಿ ಹೆಚ್ಚಿನದಾಗಿದೆ.
  • ಹೆವಿಟ್‌ ಅಸೋಸಿಯೇಟ್ಸ್‌ ಮತ್ತು CNBC TV18ಗಳು ಕೊಡಮಾಡುವ "ಅತ್ಯುತ್ತಮವಾಗಿ ನಿರ್ವಹಿಸಿದ ಕಾರ್ಮಿಕವರ್ಗ" ಪ್ರಶಸ್ತಿಯನ್ನು ಗೋದ್ರೆ/ಡ್ರೆಜ್‌ ಕನ್‌ಷ್ಯೂಮರ್‌ ಪ್ರಾಡಕ್ಟ್ಸ್‌ ಕಂಪೆನಿಗೆ ನೀಡಲಾಯಿತು.
  • ಗೋದ್ರೆ/ಡ್ರೆಜ್‌ ಕನ್‌ಷ್ಯೂಮರ್‌ ಪ್ರಾಡಕ್ಟ್ಸ್‌ ಕಂಪೆನಿಯು ಉದ್ಯೋಗಿಗಳ ನೆಚ್ಚಿನ ಅಗ್ರ 25 ಕಾರ್ಯಸ್ಥಳಗಳ ಪಟ್ಟಿಯಲ್ಲಿ ಸತತವಾಗಿ ನಾಲ್ಕು ವರ್ಷಗಳು ಕಾಣಿಸಿಕೊಂಡಿತ್ತು (ಈ ಸಮೀಕ್ಷೆಯನ್ನು ಗ್ರೋಟ್ಯಾಲೆಂಟ್‌‌ ಸಂಸ್ಥೆಯು ಬಿಜಿನೆಸ್‌ ವರ್ಲ್ಡ್‌ ನಿಯತಕಾಲಿಕೆಯ ಸಹಯೋಗದೊಂದಿಗೆ ಆಯೋಜಿಸಿತ್ತು).
  • CHEMEXCIL ಎಂಬ ಮೂಲಭೂತ ರಾಸಾಯನಿಕಗಳು ಔಷಧೀಯ ವಸ್ತುಗಳು ಮತ್ತು ಸೌಂದರ್ಯವರ್ಧಕಗಳ ರಫ್ತು ಅಭಿವೃದ್ಧಿ ಸಮಿತಿಯಿಂದ ಗೋದ್ರೆ/ಡ್ರೆಜ್‌ ಇಂಡಸ್ಟ್ರೀಸ್‌‌ಗೆ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ದೊರಕಿತ್ತು.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2006-10-29. Retrieved 2011-01-23.
  2. "ಗೋದ್ರೆ/ಡ್ರೆಜ್‌ ಕಾಲಾನುಕ್ರಮ ಘಟನಾವಳಿ". Archived from the original on 2009-09-22. Retrieved 2011-01-23.
  3. ಗೋದ್ರೆ/ಡ್ರೆಜ್, ಆನ್‌ಲೈನ್‌‌ ಪ್ರಕಟಣೆ", 18 ಮಾರ್ಚ್‌‌, 2010 http://www.godrej.com/godrej/Godrej/Pdf/GojiyoFinalRelease.pdf Archived 2011-07-11 ವೇಬ್ಯಾಕ್ ಮೆಷಿನ್ ನಲ್ಲಿ.
  4. "ಗೋದ್ರೆ/ಡ್ರೆಜ್‌ ಕಂಪೆನಿಗಳ ಅವಲೋಕನ". Archived from the original on 2008-02-24. Retrieved 2011-01-23.
  5. "ಗೋದ್ರೆ/ಡ್ರೆಜ್‌ ಮೈಲುಗಲ್ಲುಗಳು". Archived from the original on 2009-08-10. Retrieved 2011-01-23.
  6. "ಗೋದ್ರೆ/ಡ್ರೆಜ್‌ ಪ್ರಶಸ್ತಿಗಳು ಹಾಗೂ ಪುರಸ್ಕಾರಗಳು". Archived from the original on 2009-07-24. Retrieved 2011-01-23.

ಟೆಂಪ್ಲೇಟು:Top Indian companies