ಗೊರಕೆ ಹೊಡೆಯುವುದು

ಟೆಂಪ್ಲೇಟು:SignSymptom infobox ಗೊರಕೆ ಯು ಉಸಿರಾಟ ವ್ಯವಸ್ಥೆಯಲ್ಲಿ ಆಗುವ ಕಂಪನ, ಜೊತೆಗೆ ಇದರಿಂದ ಉಂಟಾಗುವ ಶಬ್ದ, ಇದು ನಿದ್ರೆಯಲ್ಲಿ ಉಸಿರಾಡುವಾಗ ಗಾಳಿಯ ಚಲನೆಯಲ್ಲಿ ಉಂಟಾಗುವ ಅಡಚಣೆಯ ಪರಿಣಾಮವಾಗಿರುತ್ತದೆ. ಕೆಲವು ಪರಿಸ್ಥಿತಿಗಳಲ್ಲಿ ಶಬ್ದವು ಬಹಳ ಮೆತ್ತಗಿರಬಹುದು, ಆದರೆ ಇತರ ಪರಿಸ್ಥಿತಿಗಳಲ್ಲಿ, ಇದು ಸ್ವಲ್ಪಮಟ್ಟಿಗೆ ಜೋರಾಗಿರುವುದರ ಜೊತೆಗೆ ಅಹಿತಕರವಾಗಿರುತ್ತದೆ. ಸಾಧಾರಣವಾಗಿ ಹೇಳುವುದಾದರೆ, ಇದರಲ್ಲಿ ಒಳಗೊಳ್ಳುವ ವ್ಯವಸ್ಥೆಗಳೆಂದರೆ ಕಿರುನಾಲಗೆ ಹಾಗು ಮೃದು ಅಂಗುಳಿನ ಹಿಂಭಾಗ. ಅನಿಯಮಿತವಾದ ಗಾಳಿಯಚಲನೆಯು ನಡುವಿನನಾಳದ ಅಡಚಣೆಯಿಂದ ಉಂಟಾಗುತ್ತದೆ. ಜೊತೆಗೆ ಸಾಮಾನ್ಯವಾಗಿ ಈ ಕೆಳಗೆ ನೀಡಲಾಗಿರುವ ಯಾವುದಾದರು ಒಂದು ಕಾರಣದಿಂದ ಉಂಟಾಗುತ್ತದೆ:

ಗಂಟಲಿನ ನಿಶಕ್ತಿ, ಇದು ನಿದ್ರೆಯ ಅವಧಿಯಲ್ಲಿ ಗಂಟಲಿನ ಮುಚ್ಚುವಿಕೆಗೆ ಕಾರಣವಾಗುತ್ತದೆ.

  • ದವಡೆಯ ಅಪಸ್ಥಾನ, ಸಾಮಾನ್ಯವಾಗಿ ಸ್ನಾಯುಗಳ ಸೆಳೆತದಿಂದ ಉಂಟಾಗುತ್ತದೆ.
  • ಗಂಟಲಿನ ಸುತ್ತಮುತ್ತ ಹಾಗು ಒಳಭಾಗದಲ್ಲಿ ಕೊಬ್ಬಿನ ಶೇಖರಣೆ.
  • ಮೂಗಿನ ಹೊಳ್ಳೆಗಳಲ್ಲಿ ಉಂಟಾಗುವ ಅಡಚಣೆ
  • ಗಾಳಿದಾರಿಯ ಮೇಲ್ಭಾಗದಲ್ಲಿನ ಜೀವಕೋಶವು ಒಂದನ್ನೊಂದು ಸ್ಪರ್ಶಿಸುವ ಕಾರಣದಿಂದ ಉಂಟಾಗುವ ಕಂಪನ.
  • ಆಲ್ಕೋಹಾಲ್ ಅಥವಾ ಮಾದಕ ದ್ರವ್ಯಗಳಂತಹ ಶಾಮಕಗಳು ಗಂಟಲಿನ ಸ್ನಾಯುಗಳನ್ನು ಸಡಿಲಗೊಲಿಸುತ್ತವೆ.

ಅಂಗಾತನಾಗಿ ಮಲಗುವುದು, ಇದರಿಂದಾಗಿ ಬಾಯಿಯ ಒಳಭಾಗದಲ್ಲಿ ನಾಲಗೆಯು ಹಿಂದಕ್ಕೆ ಹೋಗುವುದರಿಂದ ಉಂಟಾಗುತ್ತದೆ.

ಗೊರಕೆಯ ಬಗೆಗಿನ ಸಂಖ್ಯಾಶಾಸ್ತ್ರವು ಸಾಮಾನ್ಯವಾಗಿ ವಿರೋಧಕವಾಗಿರುತ್ತದೆ, ಆದರೆ ಕಡೇಪಕ್ಷ 30%ನಷ್ಟು ವಯಸ್ಕರು ಹಾಗು ಸಂಖ್ಯಾಶಾಸ್ತ್ರದ ಪ್ರಕಾರವಾಗಿ ಬಹುಶಃ 50%ನಷ್ಟು ಜನರು ಗೊರಕೆ ಹೊಡೆಯುತ್ತಾರೆ.[] 5,713 ಇಟಾಲಿಯನ್ ನಿವಾಸಿಗಳ ಮೇಲೆ ನಡೆಸಿದ ಒಂದು ಸಮೀಕ್ಷೆಯು 24%ನಷ್ಟು ಪುರುಷರು ಹಾಗು 13.8%ನಷ್ಟು ಮಹಿಳೆಯರು ದಿನಂಪ್ರತಿ ಗೊರಕೆ ಹೊಡೆಯುತ್ತಾರೆಂದು ಗುರುತಿಸಲಾಗಿದೆ, ಇದು 60 ರಿಂದ 65 ವರ್ಷ ವಯಸ್ಸಿನ 60%ನಷ್ಟು ಪುರುಷರು ಹಾಗು 40%ನಷ್ಟು ಮಹಿಳೆಯರ ಹೆಚ್ಚಿನ ಸಂಖ್ಯೆಯನ್ನು ತೋರುತ್ತದೆ; ಇದರ ಪ್ರಕಾರ ವಯಸ್ಸಾದಂತೆಲ್ಲ ಗೊರಕೆಯ ಹೊಡೆಯುವುದು ಅಧಿಕವಾಗುತ್ತದೆ ಎಂದು ಸೂಚಿಸಲಾಗಿದೆ.[]

ಪರಿಣಾಮಗಳು

ಬದಲಾಯಿಸಿ

ಗೊರಕೆಯನ್ನು ಹೊಡೆಯುವವರಿಗೆ ಹಾಗು ಅವರ ಸುತ್ತಮುತ್ತಲಿನವರಿಗೆ ಗೊರಕೆಯು ನಿದ್ರೆಗೆ ಭಂಗವನ್ನುಂಟುಮಾಡುತ್ತದೆ, ಜೊತೆಗೆ ಹಗಲಿನ ಸಮಯದಲ್ಲಿ ಅರೆನಿದ್ರಾವಸ್ಥೆ, ಸಿಡುಕುತನ, ಗಮನದ ಕೊರತೆ ಹಾಗು ಕಾಮಾಸಕ್ತಿಯನ್ನು ತಗ್ಗಿಸುತ್ತದೆ.[] ಇದರಿಂದ ನರಳುವವರಿಗೆ ಮಹತ್ವದ ಮಾನಸಿಕ ಹಾಗು ಸಾಮಾಜಿಕ ಹಾನಿಯು ಉಂಟಾಗುತ್ತದೆಂದೂ ಸಹ ಸೂಚಿಸಲಾಗಿದೆ.[] ಜೋರಾಗಿ ಗೊರಕೆ ಹೊಡೆಯುವುದು ಹಾಗು ಹೃದಯಾಘಾತದ ಅಪಾಯದ(ಸುಮಾರು +67%ನಷ್ಟು ಅವಕಾಶ) ನಡುವೆ ಗುಣಾತ್ಮಕವಾದ ಪರಸ್ಪರ ಸಂಬಂಧವಿದೆಯೆಂದು ಹಲವಾರು ಅಧ್ಯಯನಗಳು ಗಮನಕ್ಕೆ ತಂದಿವೆ.[]

ಆದಾಗ್ಯೂ ಗೊರಕೆ ಹೊಡೆಯುವುದನ್ನು ಸಾಮಾನ್ಯವಾಗಿ ಒಂದು ಸಣ್ಣ ಹಿಂಸೆಯೆಂದು ಪರಿಗಣಿಸಲಾದರೂ, ಗೊರಕೆ ಹೊಡೆಯುವವರು ಕೆಲವೊಂದು ಬಾರಿ ತಮ್ಮ ಜೀವನ ಶೈಲಿಯಲ್ಲಿ ತೀವ್ರತರವಾದ ಧಕ್ಕೆಯನ್ನು ಎದುರಿಸುತ್ತಾರೆ. ಆರ್ಮ್ಸ್ಟ್ರಾಂಗ್ ಮತ್ತಿತರರು ನಡೆಸಿದ ನಡುವಿನ ಅಧ್ಯಾಯಗಳ ಪ್ರಕ್ರಿಯೆಯು, ಗೊರಕೆ ಹೊಡೆಯುವುದನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿದ ನಂತರ ದಾಂಪತ್ಯದಲ್ಲಿ ಒಂದು ಮಹತ್ವದ ಸುಧಾರಣೆಯು ಕಂಡುಬಂದಿರುವುದು ಸಂಖ್ಯಾಶಾಸ್ತ್ರರೀತ್ಯಾ ಪತ್ತೆಯಾಗಿದೆ. ಇದನ್ನು ಗಾಲ್ ಮತ್ತಿತರರು,[] ಕಾರ್ಟ್ರೈಟ್ ಹಾಗು ನೈಟ್[] ಹಾಗು ಫಿಟ್ಜ್ಪ್ಯಾಟ್ರಿಕ್ ಮತ್ತಿತರರು ಒದಗಿಸಿದ ಸಾಕ್ಷ್ಯವನ್ನು ಆಧರಿಸಿ ದೃಢಪಡಿಸಲಾಯಿತು.[]

ಇತ್ತೀಚಿನ ಅಧ್ಯಯನಗಳು "ಗೊರಕೆಯು" ಶೀರ್ಷಧಮನಿ ಅಪಧಮನಿ ಕಾಠಿಣ್ಯ[] ಹಾಗು ಪಾರ್ಶ್ವವಾಯುವಿನ ಅಪಾಯವು ಉಂಟಾಗುತ್ತದೆಂದು ಹೇಳುತ್ತವೆ. ಸಂಶೋಧಕರ ಪ್ರಕಾರ, ಜೋರಾಗಿ ಗೊರಕೆ ಹೊಡೆಯುವುದರಿಂದ ಶೀರ್ಷಧಮನಿಯಲ್ಲಿ ರಕ್ತಸಂಚಾರವು ಕ್ರಮವಿಲ್ಲದೆ ನಡೆಯುತ್ತದೆ, ಇದು ಗಾಳಿದಾರಿಗೆ ಸಮೀಪದಲ್ಲಿರುತ್ತದೆಂದು ಆಧಾರ ಕಲ್ಪನೆ ಮಾಡುತ್ತಾರೆ. ಸಾಧಾರಣವಾಗಿ ಹೇಳುವುದಾದರೆ, ಕ್ರಮವಿಲ್ಲದ ಹೆಚ್ಚಿನ ರಕ್ತಸಂಚಾರವು ರಕ್ತ ಕಣಗಳಿಗೆ ಪ್ರಚೋದನೆಯನ್ನು ಉಂಟುಮಾಡುತ್ತದೆ. ಜೊತೆಗೆ ಇದನ್ನು ಮುಂಚೆ ಅಪಧಮನಿ ಕಾಠಿಣ್ಯವನ್ನು ಉಂಟು ಮಾಡುವ ಒಂದು ಕಾರಣವೆಂದು ಸೂಚಿಸಲಾಗುತ್ತಿತ್ತು.

ರೋಗನಿರ್ಣಯ

ಬದಲಾಯಿಸಿ
ಗೊರಕೆ...

ಸಾಮಾನ್ಯವಾಗಿ, ರೋಗಿಯು ಮಲಗಿರುವಾಗ ಅವನು ಗೊರಕೆ ಹೊಡೆಯುವುದನ್ನು ಒಬ್ಬ ಸ್ನೇಹಿತ ಅಥವಾ ಸಹಯೋಗಿ ಗುರುತಿಸುತ್ತಾರೆ. ಗೊರಕೆಯ "ಶಬ್ದದ" ಹೊರತಾಗಿ, ಹೆಚ್ಚು ಜಟಿಲ ಪರಿಸ್ಥಿತಿಗಳಾದ ನಿದ್ರೆಯಲ್ಲಿ ಶ್ವಾಸಬಂಧನವು, ಗೊರಕೆಯ ಲಕ್ಷಣದೊಂದಿಗೆ ಕಂಡುಬರುತ್ತದೆ. ನಿದ್ರೆಯ ಬಗೆಗಿನ ಅಧ್ಯಯನವು ಇಂತಹ ಪರಿಣಾಮಗಳನ್ನು ಗುರುತಿಸಬಹುದು. ರೋಗಿಗಳೂ ಸಹ ತಾವು ಎದುರಿಸುವ ತೀವ್ರತರವಾದ ನಿದ್ರಾ ಸಮಸ್ಯೆಗಳನ್ನು ಆಧರಿಸಿ ಇಂತಹ ಸಮಸ್ಯೆಗಳ ಸಂಭಾವ್ಯತೆಯನ್ನು ನಿರ್ಧರಿಸಬಹುದು.

ಚಿಕಿತ್ಸಾಕ್ರಮ

ಬದಲಾಯಿಸಿ

ಗೊರಕೆಯನ್ನು ಸರಿಪಡಿಸುವ ಬಹುತೇಕ ಎಲ್ಲ ಚಿಕಿತ್ಸಾಕ್ರಮಗಳು ಉಸಿರಾಟದ ದ್ವಾರದಲ್ಲಿ ಉಂಟಾಗುವ ನಿರೋಧವನ್ನು ಸರಿಪಡಿಸುವುದರ ಸುತ್ತ ಆವರ್ತಿಸುತ್ತವೆ. ಈ ಕಾರಣದಿಂದಾಗಿ ಗೊರಕೆ ಹೊಡೆಯುವವರಿಗೆ ತೂಕ ಇಳಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. (ಗಂಟಲನ್ನು ಒತ್ತುವ ಕೊಬ್ಬನ್ನು ತಡೆಯಲಾಗುತ್ತದೆ), ಧೂಮಪಾನ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ,(ಧೂಮಪಾನವು ಗಂಟಲನ್ನು ದುರ್ಬಲಗೊಳಿಸುತ್ತದೆ. ಅದಲ್ಲದೇ ಗಂಟಲಿಗೆ ಪ್ರತಿಬಂಧಕ ಒಡ್ಡುತ್ತದೆ; ಹಾಗು ಅಂಗಾತನಾಗಿ ಮಲಗುವುದನ್ನು ತಡೆಗಟ್ಟಬೇಕು(ಗಂಟಲಿಗೆ ತಡೆಯೊಡ್ಡದಂತೆ ನಾಲಗೆಯನ್ನು ತಡೆಹಿಡಿಯಬೇಕು).[೧೦] ಇತರ ಹಲವಾರು ಚಿಕಿತ್ಸಾಕ್ರಮಗಳೂ ಸಹ ಲಭ್ಯವಿದೆ, ಅಂಗಡಿಗಳಲ್ಲಿ ದೊರಕುವ ಪರ್ಯಾಯ ಸಹಾಯಕ ಸಾಧನಗಳಾದ ಮೂಗಿನ ಪಟ್ಟಿ ಅಥವಾ ಮೂಗಿನ ಕ್ಲಿಪ್ ಗಳು, ತೈಲಲೇಪಿತ ಸೇಚಕಗಳು, ಹಾಗು "ಆಂಟಿ ಸ್ನೋರ್" ಹೊದಿಕೆಗಳು ಹಾಗು ದಿಂಬುಗಳಿಂದ ಹಿಡಿದು ಅಪಸಾಮಾನ್ಯ ಚಟುವಟಿಕೆಗಳಾದ ಡಿಜರಿಡೂಗಳನ್ನು (ಆಸ್ಟ್ರೇಲಿಯಾದ ಆದಿವಾಸಿಗಳ ಕೊಳವೆಯಾಕಾರದ ವಾದ್ಯ)ನುಡಿಸುವುದೂ ಸೇರಿದೆ.[೧೧] ಆದಾಗ್ಯೂ, ಗೊರಕೆ ಹೊಡೆಯುವುದನ್ನು ಒಂದು ವೈದ್ಯಕೀಯ ಸಮಸ್ಯೆಯೆಂದು ಗುರುತಿಸಲಾಗಿದೆ. ಜೊತೆಗೆ ಗೊರಕೆಯನ್ನು ಹೊಡೆಯುವವರು ರೋಗಲಕ್ಷಣವನ್ನು(ಅಂದರೆ ಗೊರಕೆ ಹೊಡೆಯುವುದು) ಮರೆಮಾಚುವ ವಿಧಾನಗಳ ಮೇಲೆ ಭರವಸೆ ಇಡುವ ಮುಂಚೆ ವೃತ್ತಿಪರ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಆದರೆ ಮೂಲ ಪರಿಸ್ಥಿತಿಗೆ ಚಿಕಿತ್ಸೆ ನೀಡಬಾರದು.

ದಂತ ಪರಿಕರಗಳು

ಬದಲಾಯಿಸಿ

ವಿಶೇಷವಾಗಿ ತಯಾರಾದ ದಂತ ಪರಿಕರಗಳಾದ(ಕೃತಕದಂತ) ಮ್ಯಾಂಡಿಬ್ಯುಲರ್ ಅಡ್ವಾನ್ಸ್ಮೆಂಟ್ ಸ್ಪ್ಲಿಂಟ್ ಗಳು, ಕೆಳಗಿನ ದವಡೆಯನ್ನು ಸ್ವಲ್ಪಮಟ್ಟಿಗೆ ಮುಂದಕ್ಕೆ ತರುವುದರ ಜೊತೆಗೆ ಆ ಮೂಲಕ ನಾಲಗೆಯನ್ನು ಮುಂದಕ್ಕೆ ತರುತ್ತವೆ, ಇದು ಗೊರಕೆಗೆ ಇರುವ ಸಾಮಾನ್ಯ ವಿಧಾನದ ಚಿಕಿತ್ಸೆಯಾಗಿದೆ. ಮಾದರಿಯಾಗಿ, ನಿದ್ರಾ ಶ್ವಾಸಬಂಧನದ ದಂತಚಿಕಿತ್ಸಾಶಾಸ್ತ್ರದಲ್ಲಿ ವಿಶೇಷತೆಯನ್ನು ಪಡೆದ ಒಬ್ಬ ದಂತವೈದ್ಯನ ಸಲಹೆ ಪಡೆಯಲಾಗುತ್ತದೆ. ಇಂತಹ ಪರಿಕರಗಳು ಗೊರಕೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿರುವುದು ದೃಢಪಟ್ಟಿದೆ. ಜೊತೆಗೆ ನಿದ್ರಾ ಶ್ವಾಸಬಂಧನದ ಪರಿಸ್ಥಿತಿಗಳಲ್ಲಿ ಶ್ವಾಸಬಂಧನವು ಸೌಮ್ಯವಾಗುತ್ತದೆ ಅಥವಾ ಮಿತವಾಗುತ್ತದೆ.ಮ್ಯಾಂಡಿಬ್ಯುಲರ್ ಅಡ್ವಾನ್ಸ್ಮೆಂಟ್ ಸ್ಪ್ಲಿಂಟ್ ಗಳನ್ನು CPAP ಯಂತ್ರಗಳಿಗಿಂತ ಹೆಚ್ಚು ಉತ್ತಮವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಸಂಭಾವ್ಯವಾದರೂ ವಿರಳವಾದ ಅಡ್ಡಪರಿಣಾಮಗಳಲ್ಲಿ ಕ್ರಮೇಣವಾಗಿ ಹಲ್ಲಿನ ಅಪಸ್ಥಾನ, ಟೆಂಪೊರೋಮ್ಯಾಂಡಿಬ್ಯುಲರ್ ಜಾಯಿಂಟ್ ಡಿಸಾರ್ಡರ್, ತೀವ್ರತರವಾದ ಜೊಲ್ಲುಸುರಿತ ಹಾಗು ಒಸಡಿನ ಉಪದ್ರವಗಳು ಸೇರಿವೆ.

ಅಂಗಡಿಗಳಲ್ಲಿ ದೊರೆಯುವ ಮ್ಯಾಂಡಿಬ್ಯುಲರ್ ಅಡ್ವಾನ್ಸ್ಮೆಂಟ್ ಸ್ಪ್ಲಿಂಟ್ ಗಳು ಸರಿಯಾದ ರೀತಿಯಲ್ಲಿ ಅಳವಡಿಸಿದಾಗ ಇದೆ ರೀತಿಯಾದ ಅನುಕೂಲಗಳನ್ನು ಉಂಟುಮಾಡುತ್ತವೆ.[ಸೂಕ್ತ ಉಲ್ಲೇಖನ ಬೇಕು] ಇವುಗಳನ್ನು ಸಾಮಾನ್ಯವಾಗಿ ಇವು ಪಾಲಿಮರ್ ನಿಂದ ತಯಾರಿಸಲಾಗಿರುತ್ತದೆ. ಜೊತೆಗೆ ಇವುಗಳು ಕ್ರೀಡೆಗಾಗಿ ಬಳಸುವ ಬಾಯಿಯ ರಕ್ಷಕಗಳ ಮಾದರಿಯಲ್ಲೇ ಕಂಡುಬರುತ್ತದೆ. ವೃತ್ತಿಪರರು ಅಳವಡಿಸುವ ಪರಿಕರಗಳಿಗಿಂತ ಅಗ್ಗದ ಪರಿಕರಗಳ ಒಂದು ಅನನುಕೂಲವೆಂದರೆ ದವಡೆಯ ಸ್ಥಾನಕ್ಕೆ ಸರಿಯಾದ ರೀತಿಯಲ್ಲಿ ಅಳವಡಿಸುವಾಗ ಉಂಟಾಗುವ ಸಮಸ್ಯೆ. ಅಗತ್ಯಕ್ಕಿಂತ ಮುಂದು ಬಂದ ದವಡೆಯು ಅದರ ಸಂಧಿಯ ನೋವಿಗೆ ಕಾರಣವಾಗುತ್ತದೆ, ಆದರೆ ಹಿಂದಿರುವ ದವಡೆಗೆ ಅಳವಡಿಸಿದಾಗ ಇದು ಚಿಕಿತ್ಸಾಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ. ವೃತ್ತಿಪರರು ಅಳವಡಿಸುವ ಪರಿಕರಗಳು ಸಾಧಾರಣವಾಗಿ ದವಡೆ ಒಗ್ಗಿಕೊಳ್ಳುತ್ತವೆ. ಈ ರೀತಿಯಾಗಿ ಇದರ ಅಳವಡಿಕೆಯ ನಂತರ ದವಡೆಯು ಮುಂದುಬರುವುದನ್ನು ಸುಲಭವಾಗಿ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. "ಸ್ವತಃ ಅಳವಡಿಸಿಕೊಳ್ಳುವ" ಪರಿಕರಗಳನ್ನು ಹೊಂದಿಸಿಕೊಳ್ಳಲು ಮರುತಾಪನಗೊಳಿಸಿ ಮತ್ತೆ ಅದನ್ನು ಬೇಕಾದ ಆಕಾರಕ್ಕೆ ಹೊಸದಾಗಿ ರೂಪಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಪರ್ಯಾಯವಾಗಿ, ಕಡಿಮೆ ವೆಚ್ಚದ, ಒಂದು ಹೊಸ ಸ್ಪ್ಲಿಂಟ್ ನ್ನು ಬಳಸಬಹುದು.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಮ್ಯಾಂಡಿಬ್ಯುಲರ್ ಅಡ್ವಾನ್ಸ್ಮೆಂಟ್ ಸ್ಪ್ಲಿಂಟ್ ಗಳನ್ನು ಪ್ರಸಕ್ತದಲ್ಲಿ ವೈದ್ಯಕೀಯ ಪರಿಕರಗಳ ಎರಡನೇ ವರ್ಗವೆಂದು ಪರಿಗಣಿಸಲಾಗುತ್ತದೆ ಜೊತೆಗೆ ಇದನ್ನು ಲಿಖಿತ ಸೂಚಿಯಿಲ್ಲದೆ ಕಾನೂನುಬದ್ಧವಾಗಿ ಮಾರಾಟಮಾಡುವುದು ಸಾಧ್ಯವಿಲ್ಲ. ಆದಾಗ್ಯೂ, ಅಮೆರಿಕನ್ನರಿಗೆ, ಈ ಪರಿಕರಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಹೊರಗೆ ಖರೀದಿಸಲು ಅವಕಾಶವಿದೆ, ಹಾಗು ಖಾಸಗಿ ಬಲಕೆಗಾಗಿ ಇವುಗಳನ್ನು ಆಮದು ಮಾಡಿಕೊಳ್ಳಬಹುದು. ಆಸ್ಟ್ರೇಲಿಯದಲ್ಲಿ, ತಯಾರಕರು ಇದಕ್ಕೆ TGAಯಿಂದ ಅನುಮತಿಯನ್ನು ಪಡೆಯಬಹುದು.(ಥೆರಾಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೆಶನ್), ಇದು ವೈದ್ಯರ ಸಲಹೆ ಇಲ್ಲದೆ ಸಾಧಾರಣ ಬಿಡಿ ಮಾರಾಟದ ಅಂಗಡಿಗಳ ಮೂಲಕ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತದೆ.

ಧನಾತ್ಮಕ ಗಾಳಿ ಒತ್ತಡ (ಕಂಟಿನ್ಯುಯಸ್ ಏರ್ ವೇ ಪ್ರೆಷರ್)

ಬದಲಾಯಿಸಿ

ಕಂಟಿನ್ಯೂಅಸ್ ಏರ್ ವೇ ಪ್ರೆಷರ್ (CPAP) ಯಂತ್ರವು ಸಾಮಾನ್ಯವಾಗಿ ನಿದ್ರಾಶ್ವಾಸಬಂಧ ಹಾಗು ಅದಕ್ಕೆ ಸಂಬಂಧಿಸಿದ ಗೊರಕೆಯನ್ನು ನಿಯಂತ್ರಿಸಲು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ಗಾಳಿದಾರಿಯನ್ನು ಮುಕ್ತವಾಗಿಡಲು, ಒಂದು ಶೂಬಾಕ್ಸ್-ಗಾತ್ರದ ಪಂಪ್ ಗಳನ್ನು ಗಾಳಿಯ ಒಂದು ನಿಯಂತ್ರಿತ ಹರಿವಿನ ಮೂಲಕ ಮೂಗು, ಬಾಯಿ, ಅಥವಾ ಎರಡಕ್ಕೂ ಧರಿಸಲಾದ ಒಂದು ಮುಸುಕಿನ ನಮ್ಯವಾದ ಮೆತು ನೀರ್ಕೊಳವಿಯಿಂದ ಹಾಯಿಸಬಹುದು.[೧೨]

ಶಸ್ತ್ರಚಿಕಿತ್ಸೆ

ಬದಲಾಯಿಸಿ

ಗೊರಕೆ ಹೊಡೆಯುವುದನ್ನು ಸರಿಪಡಿಸಲು ಲಭ್ಯವಿರುವ ಒಂದು ವಿಧಾನವೆಂದರೆ ಶಸ್ತ್ರಚಿಕಿತ್ಸೆ. ಕೆಲವು ವಿಧಾನಗಳಲ್ಲಿ, ಉದಾಹರಣೆಗೆ ಉವಲೋಪ್ಯಲಟೋಫಾರಿನ್ಗೋಪ್ಲ್ಯಾಸ್ಟಿ,(ಶಬ್ದಗ್ರಹಣ ಮತ್ತು ಶ್ವಾಸನಾಳದ ಚಿಕಿತ್ಸೆ) ಈ ವಿಧಾನದಲ್ಲಿ ಗಂಟಲಿನ ಹಿಂಭಾಗದಲ್ಲಿರುವ ಜೀವಕೋಶಗಳನ್ನು ತೆಗೆದುಹಾಕಿ ಗಾಳಿದಾರಿಯನ್ನು ವಿಸ್ತಾರಗೊಳಿಸುವ ಪ್ರಯತ್ನ ಮಾಡಲಾಗುತ್ತದೆ, ಇದರಲ್ಲಿ ಉವುಲ ಹಾಗು ಫಾರಿನ್ಕ್ಸ್ ಸೇರಿದೆ. ಈ ಶಸ್ತ್ರಚಿಕಿತ್ಸೆಗಳು ಅತಿಕ್ರಮಣಶೀಲವಾಗಿದೆ, ಆದಾಗ್ಯೂ, ಇದರಿಂದ ಅಡ್ಡಪರಿಣಾಮಗಳು ಉಂಟಾಗುವ ಅಪಾಯಗಳಿವೆ. ಇದರಿಂದ ಉಂಟಾಗುವ ಅತ್ಯಂತ ಅಪಾಯಕಾರಿ ಅಂಶವೆಂದರೆ ಗಾಳಿದಾರಿಯನ್ನು ಸಂಕುಚಿತಗೊಳಿಸುವ ನಿಟ್ಟಿನಲ್ಲಿ ಗಂಟಲಿನೊಳಗೆ ನಡೆಸಲಾಗುವ ಶಸ್ತ್ರಚಿಕಿತ್ಸೆಗಳು ಜೀವಕೋಶಗಳ ಮೇಲೆ ಗಾಯದ ಗುರುತನ್ನು ಉಂಟುಮಾಡುತ್ತವೆ, ಇದು ವೆಲೋಫಾರಿನ್ಕ್ಸ್ ನಲ್ಲಿ ಗಾಳಿದಾರಿಯನ್ನು ನಾಶಮಾಡುತ್ತದೆ. ಗಾಯದ ಗುರುತಾಗುವುದು ವ್ಯಕ್ತಿಯನ್ನು ಅವಲಂಬಿಸಿರುತ್ತದೆ, ಈ ರೀತಿಯಾಗಿ ಒಬ್ಬ ಶಸ್ತ್ರಚಿಕಿತ್ಸಕನಿಗೆ ವ್ಯಕ್ತಿಯು ಗಾಯದ ಗುರುತಿಗೆ ಒಳಗಾಗುತ್ತಾನೆಯೇ ಇಲ್ಲವೇ ಎಂಬುದನ್ನು ಹೇಳುವುದು ಕಷ್ಟವಾಗುತ್ತದೆ. ಫಾರ್ನಿಜಿಯಲ್ ಶಸ್ತ್ರಚಿಕಿತ್ಸೆಯಿಂದ ಗಾಳಿದಾರಿಗೆ ಉಂಟಾದ ಹಾನಿಯ ಪರಿಣಾಮವಾಗಿ ಕೆಲ ರೋಗಿಗಳು ತೀವ್ರತರವಾದ ನಿದ್ರಾಶ್ವಾಸಭಂಗಕ್ಕೆ ಗುರಿಯಾಗಿದ್ದರೆಂದು ವರದಿ ಮಾಡಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಪ್ರಸಕ್ತದಲ್ಲಿ, ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್, ಗಂಟಲಕುಳಿ ಅಥವಾ ಕಿರುನಾಳಗೆಯ ಶಸ್ತ್ರಚಿಕಿತ್ಸೆಗೆ ಲೇಸರ್ ನ ಬಳಕೆ ಮಾಡಲು ಅನುಮತಿ ನೀಡುವುದಿಲ್ಲ.

ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್(RFA),(ವಿಕಿರಣ ತಂತ್ರಜ್ಞಾನ) ಗೊರಕೆಗಿರುವ ಒಂದು ಹೊಸ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಗಂಟಲಿನ ಹಿಂಭಾಗದಲ್ಲಿರುವ ಮೃದು ಜೀವಕೋಶಗಳಿಗೆ ರೇಡಿಯೋಫ್ರೀಕ್ವೆನ್ಸಿ ಶಕ್ತಿ ಹಾಗು ಶಾಖವನ್ನು ಒದಗಿಸುತ್ತದೆ (77 °C ರಿಂದ 85 °C ನಡುವೆ), ಉದಾಹರಣೆಗೆ ಮೃದು ಅಂಗುಳ ಹಾಗು ಕಿರುನಾಳಗೆ, ಇದು ಚರ್ಮದಡಿಯಲ್ಲಿ ಜೀವಕೋಶದ ಗಾಯದ ಗುರುತನ್ನು ಉಂಟುಮಾಡುತ್ತದೆ. ಗಾಯವು ಮಾಗಿದ ನಂತರ, ಚಿಕಿತ್ಸೆ ನೀಡಲಾದ ಜಾಗದಲ್ಲಿ ಬಿಗಿತವನ್ನು ಉಂಟುಮಾಡುತ್ತದೆ. ಈ ವಿಧಾನವು ಒಂದು ಗಂಟೆಗೂ ಕಡಿಮೆ ಅವಧಿಯನ್ನು ತೆಗೆದುಕೊಳ್ಳುತ್ತದೆ, ಇದನ್ನು ಸಾಮಾನ್ಯವಾಗಿ ಹೊರರೋಗಿಯ ಘಟಕದಲ್ಲಿ ನಡೆಸಲಾಗುತ್ತದೆ, ಜೊತೆಗೆ ಸಾಮಾನ್ಯವಾಗಿ ಹಲವಾರು ಚಿಕಿತ್ಸಾ ಅವಧಿಗಳ ಅಗತ್ಯವಿರುತ್ತದೆ. ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ ತೀವ್ರತರವಾದ ಗೊರಕೆಯನ್ನು ತಗ್ಗಿಸುವಲ್ಲಿ ಸತತವಾಗಿ ಪರಿಣಾಮಕಾರಿಯಾಗಿದೆ, ಆದರೆ, ಇದು ಸಾಮಾನ್ಯವಾಗಿ ಗೊರಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದಿಲ್ಲ.[೧೩][೧೪]

ಬೈಪೋಲಾರ್ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್, ಇದು ಕೋಬ್ಲೆಶನ್ ಗಲಗ್ರಂಥಿ ಛೇಧನಕ್ಕೆ ಬಳಸಲಾಗುವ ವಿಧಾನ, ಇದನ್ನು ಗೊರಕೆಯನ್ನು ಸರಿಪಡಿಸುವ ಚಿಕಿತ್ಸೆಯಾಗಿಯೂ ಸಹ ಬಳಸಬಹುದು.

ದಿ ಪಿಲ್ಲರ್ ಪ್ರೊಸೀಜರ್ ಎಂಬುದು ಅಡ್ಡಿಪಡಿಸುವ ನಿದ್ರಾ ಶ್ವಾಸಬಂಧನ ಹಾಗು ಗೊರಕೆಗಿರುವ ಒಂದು ಹೊಸ ಚಿಕಿತ್ಸಾವಿಧಾನವಾಗಿದೆ. ಈ ವಿಧಾನದಲ್ಲಿ, ಮೂರು ಸಣ್ಣ ನಾರಿನಿಂದ ತುಂಬಿದ ಪಟ್ಟಿಗಳನ್ನು ಮೃದು ಅಂಗುಳಕ್ಕೆ ಅಳವಡಿಸಲಾಗುತ್ತದೆ. ಒಂದು ಗಂಟೆಗೂ ಕಡಿಮೆ ಕಾಲಾವಧಿ ತಗಲುವ ಈ ಅಲ್ಪಾವಧಿಯ ಹಾಗು ನೋವುರಹಿತ ಹೊರರೋಗಿ ಶಸ್ತ್ರಚಿಕಿತ್ಸೆಯ ನಂತರ, ಮೃದು ಅಂಗುಳವು ಹೆಚ್ಚು ಗದುಸಾಗುತ್ತದೆ ಹಾಗು ಗೊರಕೆ ಹಾಗು ಶ್ವಾಸಬಂಧನವು ಕಡಿಮೆಯಾಗುತ್ತದೆ.

ಔಷಧವಿಜ್ಞಾನದ ಪ್ರಕಾರವಾದ ಚಿಕಿತ್ಸೆ

ಬದಲಾಯಿಸಿ

ತೀವ್ರತರವಾದ ಗೊರಕೆಯ ಚಿಕಿತ್ಸೆಗೆ ಸ್ಯೂಡೋಎಪೆಡ್ರಿನ್ ಹಾಗು ಡೊಮ್ಪೆರಿಡೋನ್ ನ ಮಿಶ್ರಣವು ಉತ್ತಮವಾದ ಪರಿಣಾಮವನ್ನು ಬೀರುತ್ತದೆ ಎಂದು ಸೂಚಿಸಲಾಗಿದೆ(ಸುಮಾರು 95%ರಷ್ಟು). ಸಿದ್ಧವಾದ ಈ ಔಷಧವು ಕೆಲವು ರಾಷ್ಟ್ರಗಳಲ್ಲಿ ಅಂಗಡಿಗಳಲ್ಲಿ ದೊರೆಯುತ್ತದೆ.[೧೫]

ನೈಸರ್ಗಿಕ ಪರಿಹಾರೋಪಾಯ

ಬದಲಾಯಿಸಿ

ಗೊರಕೆ ಹೊಡೆಯುವುದನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುವ ಹಲವಾರು ನೈಸರ್ಗಿಕ ವಿಧಾನಗಳಿವೆ.

ಇದು ಮೂಲಿಕೆಯ ಗುಳಿಗೆಗಳು, ಆಕ್ಯುಪ್ರೆಶರ್ ಸಾಧನಗಳು ಅಥವಾ ವಿಶೇಷವಾದ ಆಕ್ಯುಪಂಕ್ಚರ್ ನ ರೂಪದಲ್ಲಿರಬಹುದು.

ಮಲಗುವ ಭಂಗಿಯಲ್ಲಿ ಬದಲಾವಣೆ - ಸರಿಯಾದ ಭಂಗಿಯಲ್ಲಿ ಮಲಗದಿರುವುದೂ ಸಹ ಗೊರಕೆಗೆ ಕಾರಣವಾಗಬಹುದು. ಕೆಲವೊಂದು ಬಾರಿ, ಹಲವಾರು ದಿಂಬುಗಳನ್ನು ಆಸರೆ ಮಾಡಿಕೊಂಡು ಮಲಗುವುದೂ ಸಹ ಗಾಳಿಯ ಚಲನೆಯನ್ನು ವಿಸ್ತಾರಗೊಳಿಸಬಹುದು ಹಾಗು ಪರಿಮಿತಗೊಳಿಸಬಹುದು. ಇದನ್ನು ತಡೆಗಟ್ಟಲು ಕೇವಲ ಒಂದೇ ಒಂದು ದಿಂಬನ್ನು ಆಸರಿಯಾಗಿ ಪಡೆಯಬೇಕು. ಅಲ್ಲದೆ, ಅಂಗಾತನಾಗಿ ಮಲಗುವುದೂ ಸಹ ಗೊರಕೆಯನ್ನು ಉಂಟುಮಾಡಬಹುದು. ಈ ರೀತಿಯಾಗಿ, ನಿದ್ರಿಸುವ ಭಂಗಿಯಲ್ಲಿ ಬದಲಾವಣೆಯು ಉತ್ತಮ ರೀತಿಯಲ್ಲಿ ಸಹಾಯಮಾಡಬಹುದು. ಎಲ್ಲ ನೈಸರ್ಗಿಕ ಗೊರಕೆ ನಿರೋಧಕ ಸೇಚಕಗಳೂ ಸಹ ಲಭ್ಯವಿದೆ. ಇವುಗಳು ಔಷಧಿಯ ಅಂಗಡಿಗಳಲ್ಲಿ ಇತರ ಉತ್ಪನ್ನಗಳೊಂದಿಗೆ ದೊರಕುತ್ತವೆ.

ನಮ್ಮ ದೇಹದಲ್ಲಿ ಉಂಟಾಗುವ ನಿರ್ಜಲೀಕರಣವೂ ಸಹ ಗೊರಕೆಗೆ ಕಾರಣವಾಗಬಹುದು, ಸಾಮಾನ್ಯವಾಗಿ ಈ ಸಮಯದಲ್ಲಿ ಮೂಗು ಮತ್ತು ಗಂಟಲಲ್ಲಿ ಶುಷ್ಕತೆ ಉಂಟಾಗಿಸುತ್ತದೆ, ಈ ವೇಳೆ ಪರಿಹಾರವಾಗಿ ಹೆಚ್ಚು ನೀರನ್ನು ಕುಡಿಯುವುದು ಹಾಗೂ ದ್ರವಯುಕ್ತ ಪದಾರ್ಥ, ಆಹಾರದ ಮೂಲಕ ದ್ರವ ಪ್ರಮಾಣವನ್ನು ಹೆಚ್ಚಿಸುವುದು ಅನುಕೂಲಕರ [೧೬]

ಸಹಭಾಗಿಯಾಗಿ ಸಮರ್ಥವಾಗಿ ಏಗುವುದು

ಬದಲಾಯಿಸಿ

ಗೊರಕೆ ಹೊಡೆಯುವವರ ಜೊತೆಯಲ್ಲಿ ಒಂದೇ ಕೋಣೆಯಲ್ಲಿ ಮಲಗುವವರಿಗೆ ಕಿವಿ ಬಿರಡೆಗಳು ಉತ್ತಮ ರೀತಿಯಲ್ಲಿ ಸಹಾಯಕವಾಗಿದೆ. ಬಾಹ್ಯ ಕಿವಿಕವಚಗಳು, ಅವುಗಳನ್ನು ಧರಿಸಿ ಮಲಗುವಂತೆ ವಿನ್ಯಾಸಗೊಂಡಿರುವುದಿಲ್ಲ. ಇತರ ಪರ್ಯಾಯಗಳಲ್ಲಿ ಬಿಳಿ ಶಬ್ದ(ಸಮಾನ ತೀವ್ರತೆಯುಳ್ಳ ಹಲವಾರು ಆವರ್ತಗಳಿಂದ ಕೂಡಿದ ಶಬ್ದ) ಉತ್ಪಾದಕಗಳು ಸೇರಿವೆ.

ಇವನ್ನೂ ಗಮನಿಸಿ

ಬದಲಾಯಿಸಿ
  • ನಿದ್ರಾ ಶ್ವಾಸಬಂಧನ
  • ಸೋಮ್ನಿಪ್ಲಾಸ್ಟಿ

ಉಲ್ಲೇಖಗಳು

ಬದಲಾಯಿಸಿ
  1. "New Vaccine Could Cure Snoring (statistics insert)". BBC News. 2001-09-19.
  2. "Some epidemiological data on snoring and cardiocirculatory disturbances". Lugaresi E., Cirignotta F., Coccoagna G. et al. (1980), Sleep 3, 221–224.
  3. Luboshitzky, Rafael (March 23, 2002). "Decreased Pituitary-Gonadal Secreti". Journal of Clinical Endocrinology & Metabolism. 87 (7): 3394–3398. doi:10.1210/jc.87.7.3394. PMID 12107256. Archived from the original on 2009-07-02. Retrieved 2007-07-03. Decreased libido is frequently reported in male patients with obstructive sleep apnea (OSA). {{cite journal}}: Unknown parameter |coauthors= ignored (|author= suggested) (help)
  4. "The effect of surgery upon the quality of life in snoring patients and their partners: a between-subjects case-controlled trial". M.W.J. Armstrong, C.L. Wallace & J. Marais, Clinical Otolaryngology & Allied Sciences 24 6 Page 510. 1999-01-12.
  5. "Snoring 'linked to heart disease'". BBC News. 2008-03-01. Retrieved 2010-05-23.
  6. "Quality of life in mild obstructive sleep apnea". Gall, R., Isaac, L., Kryger, M. (1993) Sleep, 16, S59 S61. 1993.
  7. "Silent partners: the wives of sleep apneic patients". Cartwright, R.D. & Knight, S. (1987) Sleep, 10, 244 248. 1987.
  8. "Snoring, asthma and sleep disturbance in Britain: a community-based survey". Fitzpatrick, M.F., Martin, K., Fossey, E et al. (1993) Eur. Respir. J. 69, 531 535. 1993.
  9. Lee, SA (September 2008). "Heavy snoring as a cause of carotid artery atherosclerosis". Sleep. 31 (9). Asoociated Professional Sleep Societies: 1207–1213. ISSN 0161-8105. PMC 2542975. PMID 18788645. {{cite journal}}: |access-date= requires |url= (help); Unknown parameter |coauthors= ignored (|author= suggested) (help)
  10. "BBC Health website: snoring". Archived from the original on 2012-08-01. Retrieved 2010-10-19.
  11. "Didgeridoo playing as alternative treatment for obstructive sleep apnea syndrome" (PDF). British Medical Journal. 2005-12-23.
  12. "Continuous Positive Airway Pressure (CPAP)". American Academy of Otolaryngology−Head and Neck Surgery. Archived from the original on 2007-07-10. Retrieved 2007-07-02.
  13. "ಹೊಸಚಿಕಿತ್ಸೆಯೊಂದಿಗೆ ಗೊರಕೆ ಹೊಡೆಯುವುದನ್ನು ಕಡಿಮೆ ಮಾಡಲಾಗುತ್ತದೆ:5/20/98". Archived from the original on 2008-12-08. Retrieved 2010-10-19.
  14. "ಗೊರಕೆಗೆ ಮೃದು ಅಂಗುಳಿನ ಹಿಂಭಾಗದ ರೇಡಿಯೋಆವೃತ್ತಿ ಅಂಗಚ್ಚೇದನ". Archived from the original on 2007-10-17. Retrieved 2010-10-19.
  15. "Faronkal.pd.cl" (PDF). Archived from the original (PDF) on 2011-07-07. Retrieved 2010-10-19.
  16. "ಗೊರಕೆಗೆ ಕಾರಣವೇನು ಗೊತ್ತಾ? ಗೊರಕೆ ನಿವಾರಣೆ ಹೇಗೆ". kannadanews.today. October 23, 2021.


ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:SleepSeries2 ಟೆಂಪ್ಲೇಟು:Circulatory and respiratory system symptoms and signs