ಗೊನಿ ಎಣ್ಣೆ
ಗೊನಿ ಎಣ್ಣೆಯನ್ನು ಗೊನಿಮರ ಬೀಜದಿಂದ ಉತ್ಪನ್ನ ಮಾಡಲಾಗುತ್ತದೆ. ಗೊನಿಮರ ಸಲ್ವಡಾರೇಸಿ(salvadoraceae)ಸಸ್ಯ ಕುಟುಂಬಕ್ಕೆ ಸೇರಿದ ಮರ. ಎರಡು ಪ್ರಜಾತಿಗಳಿವೆ. ಒಂದನೆಯದು ರಕಮರ ಸಸ್ಯ ಶಾಸ್ತ್ರ ಹೆಸರುಸಲ್ವಡೊರ ಒಲಿಯೊಡೆಸ್ ಡೆನೆ(salvadora oleoides dene). ಇದನ್ನು ಹಿಂದಿಯಲ್ಲಿ ಮಿಠಾಪಿಲು(mitha pilu)ಎಂದು ಕರೆಯುತ್ತಾರೆ. ಎರಡನೆಯದು ರಕಮರದ ಸಸ್ಯ ಶಾಸ್ತ್ರ ಹೆಸರು ಸಲ್ವಡೊರ ಪೆರ್ಸಿಕ(salvadora persica), ಈ ಮರವನ್ನು ಹಿಂದಿಯಲ್ಲಿ ಖಾರಾ ಪಿಲು(khara Pilu)ಎಂದು ಕರೆಯುತ್ತಾರೆ.
- ಸಂಸ್ಕೃತ=ಬ್ರಿಹತ್ ಮಧು(brihat madhu),ಪಿಲು(pilu),ಗುಡ್ ಫಲ್( गुडफल)
- ಹಿಂದಿ=ಪಿಲು(pilu),ಜಲ್(jal)ಮೆಸ್ವಾಕ್(meswak)( मेस्वाक)
- ತೆಲುಗು=ಗುನ್ನಂಗಿ(gunnamgi),ಜಲ(jala),ವರಗೋಗು)
- ತಮಿಳು=(உகா) (uka) ಯುಕ
- ಮರಾಠಿ,ಪಂಜಾಬ,ರಾಜಸ್ಥಾನ =ಖಾಕನ್(khakan),ಪಿಲು(pilu-पिलु)
- ಬಂಗಾಲ=ಝಲ್(jhal),ಮದನ್ ಮಧುನಿ(madan madhuni)
- ಒರಿಯ=ಕೊತುಂಗ(kotunga)
- ಆಂಗ್ಲ=tooth brush tree,mustard tree
ಬೀಡು(habitat)
ಬದಲಾಯಿಸಿಈ ಮರದ ಪ್ರಾರಂಭ ಸ್ಥಾನ ಅರಬಿಯನ್ ಅರೆತವರು(Arabian Peninsula). ಈ ಮರ ಅರೇಬಿಯನ್ ಅರತೆವರು, ಆಫ್ರಿಕ, ಪಶ್ಚಿಮ ಏಷಿಯಾ, ಮಧ್ಯಪೂರ್ವ ಪ್ರಾಂತ್ಯದಲ್ಲಿ, ಇನ್ನೂಭಾರತ, ಪಾಕಿಸ್ತಾನ ಮತ್ತು ಶ್ರೀಲಂಕ ದೇಶಗಳಲ್ಲಿ ಬಹಳ ವ್ಯಾಪ್ತಕತೆ ಹೊಂದಿದೆ[೩]. ಭಾರತ ದೇಶದಲ್ಲಿ ಗುಜರಾತ್, ಹರ್ಯಾಣ, ಪಂಜಾಬ,ಮತ್ತು ರಾಜಸ್ಥಾನರಾಜ್ಯಗಳಲ್ಲಿ ಬೆಳೆಯುತ್ತಿದೆ[೧] .
ಮರ
ಬದಲಾಯಿಸಿಇದು ಸತತ ಹರಿತ ವೃಕ್ಷ. ವಿಸ್ತರಿಸಿದ ಕೊಂಬೆಗಳನ್ನು ಹೊಂದಿರುತ್ತದೆ. ಸಣ್ಣ ಪ್ರಮಾಣದ ಮರ ಇಲ್ಲವೆ ಪೊದೆ. ೧೫-೩೦ ಅಡಿ ಎತ್ತರ ಬೆಳೆಯುತ್ತದೆ. ಸವಳು ನೆಲದಲ್ಲಿ ಬೆಳೆಯುತ್ತದೆ. ಸಮುದ್ರ ಮಟ್ಟದಿಂದ ೧೦೦೦ ಮೀಟರುಗಳ ಎತ್ತರದಲ್ಲಿಯೂ ಬೆಳೆಯುತ್ತದೆ. ಮರದ ಕಾಂಡ ಗಿಡ್ದದಾಗಿ, ತಿರುಚುವಿಕೆ ಆಗಿರುತ್ತದೆ. ಕಾಂಡ ಮೇಲಿರುವ ತೊಗಟೆ ಬೂದಿ ಇಲ್ಲವೆ ಬೆಳ್ಳಗೆ ಇರುತ್ತದೆ. ಎಲೆಗಳು ಅಂಡಾಕಾರ,ಮತ್ತು ಈಟಿ ಆಕಾರದಲ್ಲಿರುತ್ತವೆ. ಹೂವುಗಳು ಬೆಳ್ಳಗೆ ಅಥವಾ ಪಸಿರ್ ಬೆಳ್ಳಗೆ ಇರುತ್ತವೆ, ಹೂವುಗಳು ಸಣ್ಣ ಪ್ರಮಾಣದಲ್ಲಿ ಇರುತ್ತವೆ .ಹಣ್ಣು ಗೋಲಾಕಾರವಾಗಿರುತ್ತದೆ. ಹಣ್ಣಿನ ಅಡ್ಡಳತೆ ೬.೦ಸೆಂ. ಹಣ್ಣು ಮಾಗಿದ ಮೇಲೆ ಹಳದಿ ಬಣ್ಣದಲ್ಲಿ ಇರುತ್ತದೆ.[೪]. ಬೀಜದಲ್ಲಿ ೧೯-೨೧% ಎಣ್ಣೆಯಿದೆ. ಬೀಜದಲ್ಲಿ ಎರಡು ಬಿತ್ತಿನ ಎಲೆ ಇರುತ್ತವೆ. ಬೀಜ ಪ್ರಮಾಣ ಸಣ್ಣದಾಗಿರುತ್ತದೆ. ಬೀಜದಲ್ಲಿ ಎಣ್ಣೆ ಪ್ರಮಾಣ ೩೨-೩೪% ಇರುತ್ತದೆ. ವಿತ್ತನ ಮೇಲೆ ಗಟ್ಟಿಯಾದ ಗರಗು ಸಿಪ್ಪೆ/ಹೊಟ್ಟು ಇದೆ. ವಿತ್ತನ ಪ್ರಮಾಣ ೦.೫ಸೆಂ.ಮೀ. ಒಣಗಿಸಿದ ಸಿಪ್ಪೆ/ಹೊಟ್ಟು ತೆಗೆದ ಬೀಜದಲ್ಲಿ ೪೦-೪೩% ಎಣ್ಣೆ ಇರುತ್ತದೆ. ವಿತ್ತನದಲ್ಲಿ ೨೭%ತನಕ ಪ್ರೋಟಿನ್ ಗಳಿರುತ್ತವೆ.
ಈ ಮರದ ಎಲೆ, ಹಣ್ಣು, ವಿತ್ತನ, ತೊಗಟೆ, ಮತ್ತು ಬೇರು(root)ಗಳನ್ನು ಆಯೂರ್ವೇದ ಔಷಧಗಳಲ್ಲಿ ಬಳಸುತ್ತಾರೆ.[೫].
ಎಣ್ಣೆ ಉತ್ಪಾದನೆ
ಬದಲಾಯಿಸಿಬೀಜದ ಮೇಲಿರುವ ಸಿಪ್ಪೆಯನ್ನು ತೆಗೆಯುವುದು ಕಷ್ಟ. ಪೆರ್ಸಿಕ(persica)ಜಾತಿ ಬೀಜ ಮೇಲಿರುವ ಸಿಪ್ಪೆಯನ್ನು ಡಿಕಾರ್ಡಿಕೇಟರು ಯಂತ್ರಗಳಿಂದ ತೆಗೆಯುವುದಕ್ಕೆ ಆಗುತ್ತದೆ. ಆದರೆ ಒಲೆಯೊಡೆಸ್ (oleoides) ಜಾತಿ ವಿತ್ತನ ಸಿಪ್ಪೆ/ಹೊಟ್ಟನ್ನು ತೆಗೆಯುವುದಕ್ಕೆ ಆಗುವುದಿಲ್ಲ. ವಿತ್ತನದಿಂದ ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳಿಂದ ತೆಗೆಯಲಾಗುತ್ತದೆ. ಸದ್ಯ ಭಾರತ ದೇಶದಲ್ಲಿ ಒಂದು ವರ್ಷಕ್ಕೆ ೫೦ ಸಾವಿರ ಟನ್ನುಗಳ ವಿತ್ತನ ಶೇಖರಣೆಗೆ ಅವಕಾಶವಿವೆ. ಅಂದಾಜಿಗೆ ೧೭ಸಾವಿರ ಟನ್ನುಗಳ ಎಣ್ಣೆಯನ್ನು ಉತ್ಪಾದಿಸಬಹುದು.
ಎಣ್ಣೆ ಲಕ್ಷಣಗಳು
ಬದಲಾಯಿಸಿಎಣ್ಣೆ ಹಸಿರು ಛಾಯೆ ಇದ್ದು ಅರಿಶಿನ ಬಣ್ಣದಲ್ಲಿ ಇರುತ್ತದೆ. ಒಗಟಾದ ಅಹಿತಕರ ವಾಸನೆ ಇರುತ್ತದೆ. ರುಚಿಯು ವಿಕಾರ ಬರುವ ಹಾಗಿರುತ್ತದೆ. ಎಣ್ಣೆಯಲ್ಲಿ ಇದ್ದ ಬೆಂಜಿಲ್ ಐಸೋಥೈ ಯೊಸೈನೆಟ್(Benzyl isothio cynate)ಕಾರಣದಿಂದ ಎಣ್ಣೆ ದಟ್ಟವಾದ ಒಗಟಾದ ವಾಸನೆ ಹೊಂದಿರುತ್ತದೆ. ಎಣ್ಣೆಯನ್ನು ರಿಫೈಂಡ್ ಮಾಡಿದ ಮೇಲೆ ಈ ಎರಡು ಗುಣಗಳು ಕಳಚಿ ಹೊಗುತ್ತವೆ. ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ೮೦-೮೫% ತನಕ ಇರುವುದರಿಂದ ಸಾಧಾರಣ ಉಷ್ಣೋಗ್ರತ ದಲ್ಲಿಯೂ ಇದು ಘನರೂಪದಲ್ಲಿ ಇರುತ್ತ ದೆ. ಅದರಿಂದ ಗೊನಿ ಎಣ್ಣೆಯನ್ನು ಗೊನಿ ಕೊಬ್ಬು ಎಂದು ಕರೆಯಲಾಗುತ್ತದೆ. ಸಾಧಾರಣ , ಪರಿಸರ ಉಷ್ಣೋಗ್ರತದಲ್ಲಿ ಘನರೂಪದಲ್ಲಿರುವ ಎಣ್ಣೆಯನ್ನು ಕೊಬ್ಬು(Fat)ಎಂದು ಕರೆಯುತ್ತಾರೆ.
ಗೊನಿ ಬೀಜದ ಕೊಬ್ಬಿನಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳಾದ ಕಾಫ್ರಿಕ್, ಲಾರಿಕ್, ಮಿರಿಸ್ಟಿಕ್ ಮತ್ತು ಪಾಮಿಟಿಕ್ ಆಮ್ಲಗಳು ಇವೆ. ಇದರಲ್ಲಿ ಲಾರಿಕ್ ಮತ್ತು ಮಿರಿಸ್ಟಿಕ್ ಅಮ್ಲಗಳು ಹೆಚ್ಚು ಶೇಕಡಾದಲ್ಲಿ ಇವೆ.
ಎಣ್ಣೆ-ಭೌತಿಕ ಧರ್ಮಗಳು
ಭೌತಿಕ ಧರ್ಮ | ಮಿತಿ |
ವಕ್ರಿಭವನ ಸೂಚಿಕೆ 400Cಕಡೆ | 1.440-1.450 |
ಅಯೋಡಿನ್ ಮೌಲ್ಯ | 10-15 |
ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ | 245-255 |
ಅನ್ ಸಪೋನಿಫಿಯಬುಲ್ ಪದಾರ್ಥ | 1.0-1.5% ಗರಿಷ್ಟವಾಗಿ |
ತೇವ | 1.0% గరిష్టం |
ದ್ರವೀಭವನ ಉಷ್ಣೋಗ್ರತೆ | 30-320C |
polenske value,Min | 10 |
ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು
ಕೊಬ್ಬಿನ ಆಮ್ಲ | ಶೇಕಡ |
ಕಾಪ್ರಿಕ್ ಆಮ್ಲ(C10:0) | 1.0-1.05 |
ಲಾರಿಕ್ ಆಮ್ಲ(C12.0) | 19.0-47.0 |
ಮಿರಿಸ್ಟಿಕ್ ಆಮ್ಲ(C14:0) | 28.0-55.0 |
ಪಾಮಿಟಿಕ್ ಆಮ್ಲ(C16:0) | 20% వరకు |
ಒಲಿಕ್ ಆಮ್ಲ(C18:1) | 5.5-12.0 |
ಲಿನೊಲಿಕ್ ಆಮ್ಲ(C18:2) | 0.0-1.3 |
ಎಣ್ಣೆಯ ಉಪಯೋಗಗಳು
ಬದಲಾಯಿಸಿ- ಸಾಬೂನು ತಯಾರು ಮಾಡುವುದಕ್ಕೆ ಈ ಎಣ್ಣೆಯನ್ನು ಉಪಯೋಗಿಸುತ್ತಾರೆ.
- ಮೇಣದ ಬತ್ತಿ(candle stick)ತಯಾರು ಮಾಡುವುದರಲ್ಲಿ ಬಳಸುತ್ತಾರೆ.
- ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಉಲ್ಲೇಖನ
ಬದಲಾಯಿಸಿ- ↑ ೧.೦ ೧.೧ SEA Hand Book-2009 by The Solvent Extractors' Association Of India
- ↑ http://www.flowersofindia.net/catalog/slides/Toothbrush%20Tree.html
- ↑ "ಆರ್ಕೈವ್ ನಕಲು". Archived from the original on 2013-12-12. Retrieved 2013-10-12.
- ↑ http: //www. worldagroforestry. org/sea/ Products/ AFDbases/af/asp/SpeciesInfo.asp?SpID=17991
- ↑ http:/ /www. ncbi.nlm. nih.gov/pmc/ articles/PMC3249923/