ಗೇವಿಯಾಲಿಸ್
ಘರಿಯಾಲ್ | |
---|---|
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | G. gangeticus
|
Binomial name | |
Gavialis gangeticus (Gmelin, 1789)
| |
ಗೇವಿಯಾಲಿಸ್ ಕ್ರಾಕೊಡಿಲಿಯ ಗಣದ ಗೇವಿಯಾಲಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಮೊಸಳೆ. ಗೇವಿಯಾಲಿಸ್ ಗ್ಯಾಂಜೆಟಿಕಸ್ ಇದರ ವೈಜ್ಞಾನಿಕ ನಾಮ.ಸ್ಥಳೀಯವಾಗಿ ಇದನ್ನು ಘರಿಯಾಲ್ ಎಂದೂ ಕರೆಯುತ್ತಾರೆ. ಭಾರತ, ಬರ್ಮ ಮತ್ತು ಮಲೇಷ್ಯಯಗಳ ನದಿಗಳಲ್ಲಿ ವಾಸಿಸುತ್ತದೆ. ಭಾರತದ ಗಂಗಾನದಿಯಲ್ಲಿ ಇದನ್ನು ಕಾಣಬಹುದು. ತೆಳುವಾದ ಮತ್ತು ಉದ್ದವಾದ ದೇಹವುಳ್ಳ ಪ್ರಾಣಿಯಿದು. ದೇಹದ ಉದ್ದ 5-6 ಮೀ (15-20'). ಮೂತಿಯೂ ಕಿರಿದಾಗಿ ಉದ್ದವಾಗಿದೆ. ಗಂಡು ಗೇವಿಯಲಿನ ಮೂತಿಯ ತುದಿಯಲ್ಲಿ ಒಂದು ರೀತಿಯ ಸಣ್ಣ ಕುಡಿಕೆಯಂಥ ಗುಬುಟು ಇದೆ. ಆದ್ದರಿಂದ ಇದನ್ನು ಹಿಂದಿ ಭಾಷೆಯಲ್ಲಿ ಗಡಿಯಲ್ (ಗಡಿ-ಗಡಿಗೆ) ಎಂದು ಕರೆಯಲಾಗುತ್ತದೆ. ಎರಡು ದವಡೆಗಳಲ್ಲೂ ಹೆಚ್ಚುಕಡಿಮೆ ಸಮಗಾತ್ರದ ಹಲ್ಲುಗಳಿವೆ. ಕಾಲುಗಳಲ್ಲಿನ ಬೆರಳುಗಳೆಲ್ಲವೂ ಪೊರೆ ಯೊಂದರಿಂದ ಕೂಡಿಕೊಂಡಿದ್ದು ಈಜಲು ಸಹಾಯಕವಾಗಿರುವ ಜಾಲಪಾದಗಳಾಗಿವೆ. ಮೂಗಿನ ಹೊಳ್ಳೆಗಳು ಮೃದುವಾಗಿದ್ದು ಬೇಕೆಂದಾಗ ಊದಿಕೊಳ್ಳಬಲ್ಲವು. ಮೀನುಗಳೇ ಗೇವಿಯಲಿನ ಪ್ರಧಾನ ಆಹಾರ.
ಬಾಹ್ಯ ಸಂಪರ್ಕಗಳು
ಬದಲಾಯಿಸಿGharial ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
Wikispecies has information related to Gavialis gangeticus.
- Gharial Conservation Alliance
- WWF : list of articles about gharials
- Arkive images and video Archived 2009-02-05 ವೇಬ್ಯಾಕ್ ಮೆಷಿನ್ ನಲ್ಲಿ.
- reptilis.net Gavialidae
- Adam Britton: Gavialis gangeticus Archived 2015-02-25 ವೇಬ್ಯಾಕ್ ಮೆಷಿನ್ ನಲ್ಲಿ.
- Fort Worth Zoo: Gharials
- The Gharial and the Monkey, a folk tale from India Archived 2017-03-25 ವೇಬ್ಯಾಕ್ ಮೆಷಿನ್ ನಲ್ಲಿ.
- National Geographic Society: Gavial Archived 2007-06-25 ವೇಬ್ಯಾಕ್ ಮೆಷಿನ್ ನಲ್ಲಿ.
- BBC: Mystery of crocs' mass die-off
- National Geographic: Gharial pictures and facts Archived 2007-06-25 ವೇಬ್ಯಾಕ್ ಮೆಷಿನ್ ನಲ್ಲಿ..
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: