ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು

ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


ಯಾವುದೇ ಒಂದು ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಪ್ರಧಾನಪಾತ್ರವನ್ನು ವಹಿಸುತ್ತವೆ. ಹಲವಾರು ಕೈಗಾರಿಕೆಗಳು ಕೃಷಿಯನ್ನಾಧರಿಸಿವೆ. ಉದಾ.ಹತ್ತಿಬಟ್ಟೆ , ಕಾಗದ, ಸಕ್ಕರೆ, ಸಣಬು, ತಂಬಾಕು ಮುಂತಾದವು. ಈ ಕೈಗಾರಿಕೆಗಳಿಗೆ ಅಗತ್ಯವಾದಂತಹ ಕಚ್ಚಾ ಪದಾರ್ಥಗಳು ಕೃಷಿಯಿಂದ ಪೂರೈಕೆಯಾಗುತ್ತವೆ. ದೊಡ್ಡ ಪ್ರಮಾಣದ ಕೈಗಾರಿಕೆಗಳಿಂದ ಗ್ರಾಮೀಣ ಜನರಿಗೆ ಉದ್ಯೋಗ ಸಿಗಲಾರದು. ಗ್ರಾಮಾಂತರ ಪ್ರದೇಶಗಳಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಆದ್ಯತೆ ಕೊಡಬೇಕಾಗುತ್ತದೆ, ಇಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲಿನಿಂದಲೂ ಕಂಡುಬರುತ್ತಿದ್ದವು, ಇವುಗಳ ಅಭಿವೃದ್ದಿಗೆ ಭಾರತವು ಸ್ವತಂತ್ರವಾದ ಮೇಲೆ ಹೆಚ್ಚು ಪ್ರೋತ್ಸಹಾ ಕೊಡಲಾಗುತ್ತಿದೆ, ರೈತರಿಗೆ ವರ್ಷದ ಎಲ್ಲ ತಿಂಗಳಲ್ಲಿ ಕೆಲಸವಿಲ್ಲದ್ದರಿಂದ ಅವರ ಸಂಪಾದನೆಗೆ ಪೂರಕಮಾಗಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಮಹಾತ್ಮಾ ಗಾಂಧಿಯವರು ಒತ್ತಿ ಹೇಳಿದ್ದರು ಗೃಹ ಕೈಗಾರಿಗಳನ್ನು ಗುಡಿ ಕೈಗಾರಿಕೆಗಳಂತಲೂ ಕರೆಯುತ್ತಾರೆ. ಇವುಗಳನ್ನು ಕುಶಲ ಕರ್ಮಿಗಳು ಅವರ ಮನೆಗಳಲ್ಲಿ ನಡೆಸುತ್ತಾರೆ ಇವರಿಗೆ ಅವರ ಕುಟುಂಬದ ಸದಸ್ಯರ ಮತ್ತು ಕಲಿಯುವವರು ಸಹಾಯ ಮಾಡುತ್ತಾರೆ ಇವು ಪ್ರಧಾನವಾಗಿ ಹಳ್ಳಿಗಳಲ್ಲಿ ಕೇಂದ್ರೀಕೃತವಾಗಿರುತ್ತವೆ, ಕೇತ್ತನೆ ಕೆಲಸ, ಬುಟ್ಟಿ ಹೆಣೆಯುವುದು, ಬೊಂಬೆ ತಯಾರು ಮಾಡುವುದು ಕೈ ಮಗ್ಗದಲ್ಲಿ ಬಟ್ಟೆ ಹಾಗೂ ಕಂಬಳಿ ನೇಯುವುದು, ಚಾಪೆ ತಯಾರಿಕೆ ಹಗ್ಗ ತಯಾರಿಸುವುದು, ಬಡಗಿತನ, ಕಮ್ಮಾರಿಕೆ, ಕುಂಚರಿಕೆ ಮುಂತಾದವು ಉದಾಹರಣೆಗಳಾಗಿದ್ದು ಇವುಗಳಲ್ಲಿ ಕೆಲವು ವಂಶಪಾರಂಪರ್ಯದಿಂದ ಬಂದುಗಳಾಗಿವೆ. ಈ ಕೈಗಾರಿಕೆಗಳು ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆಗಾಗಿ ವಸ್ತುಗಳನ್ನು ಉತ್ಪಾದಿಸುತ್ತವೆ. ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ವಿದ್ಯುಚ್ಚಕ್ತಿಯನ್ನು ಬಳಸುತ್ತಾರೆ, ಉದಾಹರಣೆಗೆ, ಎತ್ತಿನಗಾಣದ ಬದಲು ವಿದ್ಯುತ್ ಗಾಣಗಳು ಬಂದಿವೆ ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ ಒಂದು ನಿರ್ದಿಷ್ಟ ಕಟ್ಟಡದಲ್ಲಿ ಈ ಕೈಗಾರಿಕೆಗಳು ಸ್ಥಾಪಿಸಲ್ಪಟ್ಟಿರುತ್ತವೆ ಸರಕುಗಳ ಉತ್ಪಾದನೆಗೆ ಆಧುನಿಕ ಕೌಶಲ್ಯಗಳನ್ನು ಬಳಸಿಕೊಳ್ಳತ್ತಾರೆ. ರಾಸಾಯನಿಕ ವಸ್ತುಗಳು ಇಂಜಿನೀಯರಿಂಗ್ ವಸ್ತುಗಳು ಪಾದರಕ್ಷೆಗಳು ಸೈಕಲ್ಲುಗಳು ರೇಡಿಯೋ. ವಿದ್ಯುತ್ ಪಂಕಗಳು ಹೊಲಿಗೆ ಯಂತ್ರಗಳು, ಸಿದ್ದಪಡಿಸಿದ ಉಡುಪುಗಳು ಸಾಬೂನು ಮುಂತಾದವು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಉದಾಹರಣೆಗಳಾಗಿವೆ. ಈ ಕೈಗಾರಿಕೆಗಳ ಅನೇಕ ಉತ್ಪಾನ್ನಗಳು ರಫ್ತಾಗುತ್ತವೆ. ಭಾರತದ ಆರ್ಥಿಕ ಅಭಿವೃದ್ದಿಯಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳ ಪಾತ್ರ ಹೀಗಿದೆ ,

  1. ಗ್ರಾಮಾಂತರ ಪ್ರದೇಶಗಳ ಅನೇಕ ನಿರುದ್ಯೋಗಿ ಮತ್ತು ಅರೆ ಉದ್ಯೋಗಿಗಳಿಗೆ ಕೆಲಸ ಒದಗಿಸಿ ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಸಹಾಯ ಮಾಡುತ್ತವೆ,
  2. ಗ್ರಾಮಾಂತರ ಪ್ರದೇಶಗಳಲ್ಲಿ ಪರ್ಯಾಯ ಉದ್ಯೋಗಾವಕಾಶಗಳನ್ನು ಒದಗಿಸಿ ಕೃಷಿ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ,
  3. ಇವುಗಳ ಸ್ಥಾಪನೆಗೆ ಹೆಚ್ಚು ಬಂಡಾವಾಳದ ಅವಶ್ಯಕತೆ ಇಲ್ಲ ,
  4. ಇವುಗಳನ್ನು ಸ್ಥಳೀಯ ಸಂಪನ್ಮೂಲಗಳಿಂದಲೇ ಪ್ರಾರಂಭಿಸಬಹುದು,
  5. ಗ್ರಾಮಾಂತರ ಜನರಲ್ಲಿ ಅಡಗಿರುವ ಅನೇಕ ಸುಪ್ತ ಕೌಶಲ್ಯಗಳನ್ನು ಬಳಸಿಕೊಳ್ಳಲು ಅವಕಾಶ ಸಿಕ್ಕುತ್ತದೆ,
  6. ಉತ್ಪಾದಕ ಕೈಗಾರಿಕೆಗಳಲ್ಲಿ ತಲೆದೋರುವ ಮುಷ್ಕರ, ಬೀಗಮುದ್ರೆ ಮತ್ತಿತರ ಸಮಸ್ಯೆಗಳು ಈ ಕೈಗಾರಿಕೆಗಳಲ್ಲಿ ಕಂಡುಬರುವುದಿಲ್ಲ ,
  7. ಈ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಮಾದದ ವಿದ್ಯುಚ್ಚಕ್ತಿಯ ಅವಶ್ಯಕತೆ ಇಲ್ಲ,
  8. ಇವು ಕೈಗಾರಿಕೆಗಳ ವಿಕೇಂದ್ರೀಕರಣಕ್ಕೆ ಸಹಾಯ ಮಾಡಿ, ವಾಯುಮಾಲಿನ್ಯ ಕೊಳಚೆ ಪ್ರದೇಶಗಳ ಸೃಷ್ಡಿಯ ನಿವಾರಣೆ ಮತ್ತು ಜನಸಾಂದ್ರತೆಯ ಪ್ರಭಾವ ಬೀರುತ್ತವೆ.
  9. ಅನೇಕ ಜನರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸುತ್ತದೆ ,
  10. ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ಅನೇಕ ವಸ್ತುಗಳು ಬೃಹತ್ ಪ್ರಮಾಣದ ಕೈಗಾರಿಕೆಗಳಿಗೆ ಪೂರಕಗಳಾಗಿವೆ,
  11. ಹೆಚ್ಚು ಜನರಿಗೆ ಉದ್ಯೋಗಗಳನ್ನು ನೀಡುವುದರಿಂದ ಜನರ ಜೀವನಮಟ್ಟ ಉತ್ತಮಗೊಳ್ಳುತ್ತದೆ. ಹಾಗೂ,
  12. ಸಂಪತ್ತಿನ ಕೇಂದ್ರೀಕರಣವನ್ನು ತಪ್ಪಿಸಿ ಸಂಪತ್ತಿನ ವಿತರಣೆ ಸಹಾಯ ಮಾಡುತ್ತವೆ.
  13. ಕೃಷಿಯನ್ನೇ ಅವಲಂಬಿಸಿದ ಗ್ರಾಮಗಳಲ್ಲಿ ಮಳೆ ಇಲ್ಲದೆ ನೀರಾವರಿ ಸೌಲಭ್ಯಕ್ಕೆ ಅಡಚಣೆಯಾದಗ ಜನರಿಗೆ ಪರ್ಯಾಯ ಉದ್ಯೋಗಕ್ಕೆ ಅವಕಾಶವಿದೆ.
  14. ಕರಕುಶಲ ಕಲೆಗಳು ಜನರ ಸುಪ್ತ ಪ್ರತಿಭೆಯನ್ನು ಹೊರತರುತ್ತವೆ ಹಾಗೂ ಬಳಕೆದಾರನ ಅಭಿರುಚಿಯಂತೆ ವಸ್ತುಗಳನ್ನು ತಯಾರಿಸಿಕೊಡುತ್ತವೆ,


ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸಮಸ್ಯೆಗಳು

ಬದಲಾಯಿಸಿ
  1. ಕಚ್ಚಾ ಪದಾರ್ಥಗಳ ಆಸಮರ್ಪಣ ಪೂರೈಕೆ ಈ ಕೈಗಾರಿಕೆಗಳಿಗೆ ಸಕಾಲದಲ್ಲಿ ಯೊಗ್ಯ ಬೆಲೆಯಲ್ಲಿ ಕಚ್ಚಾವಸ್ತುಗಳು ದೊರೆಯುವುದಿಲ್ಲ ಅನೇಕ ವೇಳೆ ಕಡಿಮೆ ದರ್ಜೆಯ ಕಚ್ಚಾಪದಾರ್ಥಗಳನ್ನು ಬಳಸಬೇಕಾಗುತ್ತದೆ, ಇದರಿಂದಾಗಿ ಉತ್ಪಾದನೆಯಾಗುವ ವಸ್ತುಗಳ ಗುಣಮಟ್ಟ ಕುಸಿಯುತ್ತದೆ.
  2. ಯೋಗ್ಯಯಂತ್ರಗಳ ಅಭಾವ, ಈ ಕೈಗಾರಿಕೆಗಳು ಯ್ಯೋಗ್ಯ ಯಂತ್ರಗಳನ್ನು ಮತ್ತು ಉಪಕರಣಗಳನ್ನು ಬಳಸಲು ಅಸಮರ್ಥವಾಗಿದೆ, ಏಕೆಂದರೆ ಯಂತ್ರಗಳ ಮತ್ತು ಉಪಕರಣಗಳ ಬೆಲೆ ದುಬಾರಿಯಾಗಿದ್ದು ಕೊಳ್ಳಲು ಸಮರ್ಥವಾಗಿರುವುದಿಲ್ಲ.
  3. ವಿದ್ಯುಚ್ಚಕ್ತಿಯ ಕೊರತೆ, ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಅನೇಕ ಸಂದರ್ಭಗಳಲ್ಲಿ ವಿದ್ಯುಚ್ಚಕ್ತಿ ಅವಶ್ಯವಿದ್ದು ಇದರ ಅಭಾವ ಮತ್ತು ಕಡಿತಗಳಿಂದ ಉತ್ಪಾದನೆ ಕುಂಠಿತಗೊಳ್ಳುತ್ತದೆ.
  4. ಪುರಾತನ ತಂತ್ರಜ್ಞಾನ, ಈ ಕೈಗಾರಿಗಳಲ್ಲಿ ಇನ್ನು ಹಳೆಯಕಾಲದ ತಾಂತ್ರಿಕಯನ್ನು ಅನುಸರಿಸಲಾಗುತ್ತಿದೆ ಆದುದರಿಂದ ಉತ್ಪಾದಿತ ವಸ್ತುಗಳ ಗುಣಮಟ್ಟ ಕಡಿಮೆ.
  5. ಹಣದ ಕೊರತೆ , ಈ ಕೈಗಾರಿಕೆಗಳಿಗೆ ಸಾಕಷ್ಟು ಹಣದ ಅಭಾವವಿದ್ದು ಹಣ ಒದಗಿಸುವ ಸೂಕ್ತ ಮೂಲಗಳು ಇರುವುದಿಲ್ಲ ಹಾಗೂ ಪಡೆಯಬಹುದಾದ ಮೂಲಗಳ ಬಗ್ಗೆ ಹೆಚ್ಚು ಕೂಡ ಲಭ್ಯವಿರುವುದಿಲ್ಲ.
  6. ಮಾರಾಟದ ಅನುಕೂಲತೆಗಳ ಅಭಾವ, ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ಇಲ್ಲವಾಗಿದೆ ಹಳ್ಳಿಗಳಿಂದ ಪಟ್ಟಣಗಳ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಸಾರಿಗೆ ವ್ಯವಸ್ಥೆ ಸರಿಯಾಗಿರುವುದಿಲ್ಲ. ಪಟ್ಟಣಗಳಲ್ಲಿ ಇವರಿಗೆ ಸರಿಯಾದ ಬೆಲೆಗಳು ಸಿಕ್ಕವುದಿಲ್ಲ ಅನೇಕ ವೇಳೆ ಮಧ್ಯವರ್ತಿಗಳಿಂದ ಮೋಸಗಳಿಗೊಳಗಾಗುತ್ತಾರೆ.
  7. ದೊಡ್ಡ ಕೈಗಾರಿಕೆಗಳಿಂದ ಪೈಪೋಟಿ, ಗುಡಿ ಕೈಗಾರಿಕೆಗಳ ಮತ್ತು ಸಣ್ಣ ಪ್ರಮಾಣದ ಅನೇಕ ವಸ್ತುಗಳನ್ನು ದೊಡ್ಡ ಪ್ರಮಾಣದ ಕೈಗಾರಿಕೆಗಳು ಉತ್ಪಾದಿಸುತ್ತಿವೆ. ಇವುಗಳ ಪೈಪೋಟಿಯಿಂದ ತಪ್ಪಿಸಿಕೊಳ್ಳಲು ಈ ಕೈಗಾರಿಕೆಗಳಿಗೆ ಸಾಧ್ಯಾವಾಗುವುದಿಲ್ಲ .

ಗುಡಿ ಕೈಗಾರಿಕೆಗಳನ್ನು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಅಭಿವೃದ್ದಿಪಡಿಸುವುದು ನಮ್ಮ ರಾಷ್ಟ್ರೀಯ ಸರ್ಕಾರದ ನೀತಿಗಳಲ್ಲೊಂದಗಿದೆ ಅನೇಕ ಕೈಗಾರಿಕೆಗಳ ಅಭಿವೃದ್ದಿಗೆ ಮಹತ್ವದ ಸ್ಥಾನ ನೀಡಿದೆ ಸರ್ಕಾರವು ಕೈಗೊಂಡ ಕೆಲವು ಕಾರ್ಯಗಳಲ್ಲಿ ಮುಖ್ಯವಾದವು ಈ ರೀತಿ ಇವೆ , ಪ್ರಥಮ ಪಂಚಾವಾರ್ಷಿಕ ಯೋಜನೆಯಿಂದ ಆರನೆಯ ಪಂಚವಾರ್ಷಿಕ ಯೋಜನೆಯೊಳಗೆ ಸುಮಾರು ೩,೦೦೦ ಕೋಟಿ ರೂಪಾಯಿಗಳನ್ನು ಈ ಕೈಗಾರಿಕೆಗಳ ಏಳಿಗೆಗಾಗಿ ಖರ್ಚು ಮಾಡಲಾಯಿತು. ಈ ಕೈಗಾರಿಕೆಗಳ ಅಭಿವೃದ್ದಿಗೆ ಮುಖ್ಯವಾಗಿ ಅ) ಸಾಂಸ್ಥಿಕ ಸಹಾಯ ಆ) ಧನ ಸಹಾಯ ಇ) ತಾಂತ್ರಿಕ ನೇರವು ಈ) ಕಾರ್ಮಿಕರಿಗೆ ತರಬೇತಿ ಉ) ಕಚ್ಚಾವಸ್ತುಗಳ ಮತ್ತು ಶಕ್ತಿಯ ಪೂರೈಕೆ ಹಾಗೂ ಊ) ಮಾರುಕಟ್ಟೆ ಸೌಲಭ್ಯ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ