ಗೃಹವಿಮೆ

ಗೃಹ ವಿಮೆಯು ನಿಮ್ಮ ಮನೆ ಮತ್ತು ಅದರ ವಿಷಯಗಳನ್ನು ಸುರಕ್ಷಿತ ನೈಸರ್ಗಿಕ ವಿಕೋಪಗಳ ವಿರುದ್ಧ ರಕ್ಷಿಸಲು ಮತ್ತು ಜನ

ಗೃಹವಿಮೆ, ಇದನ್ನು ಮನೆ ಮಾಲೀಕರ ವಿಮೆ ಎಂದೂ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ಅಪಾಯದಿಂದ ರಕ್ಷಿಸಿಕೊಳ್ಳಲು ಹಾಗು ತಮ್ಮವರ ಸುಖವನ್ನು ಬಯಸುವವರು ಈ ವಿಮೆಯನ್ನು ಬಳಸಿಕೊಳ್ಳುತ್ತಾರೆ. ಇದು ಒಂದು ರೀತಿಯ ಖಾಸಗಿ ಆಸ್ತಿ ಮನೆಗಳ ಹಾನಿಯಾದಾಗ ಪರಿಹಾರಕ್ಕಾಗಿ ಇದನ್ನು ಉಪಯೋಗಿಸಿಕೊಳ್ಳಬಹುದು. ಈ ವಿಮೆಯ ಕರಾರು ಪತ್ರ ಮನುಷ್ಯನ ಆತನ ವೈಯಕ್ತಿಕ ವಿಮಾರಕ್ಷಣೆಯಲ್ಲಿರುವ ಆತನ ವಾಸಗೃಹ, ಅದರಲ್ಲಿನ ವಸ್ತುಗಳು, ಅನುಪಯುಕ್ತ ವಸ್ತುಗಳು, ಮಾಲೀಕನ ಒಟ್ಟಾರೆ ವಸ್ತುಗಳ ಅನಿರೀಕ್ಷಿತ ನ‍‍‍‍‍‍‍‍‍ಷ್ಟಗಳು ಹಾಗು ಆಕಸ್ಮಿಕಗಳು ಈ ಸಂದಭದಲ್ಲಿ ಭರಿಸಬೇಕಾದ ಜವಾಬ್ದಾರಿಗಳನ್ನು ತನ್ನದೇ ಪರಿಮಿತಿಯಲ್ಲಿ ಪರಿಹರಿಸುತ್ತದೆ.

ಮನೆ ಮಾಲೀಕರ ಪಾಲಿಸಿಯು ಅಂದರೆ ವಿಮಾಯೋಜನೆಯು ವಿವಿಧ ಹಂತಗಳ ಪರಿಹಾರ ಯೋಜನೆಯೆಂದೇ ಕರೆಯಲ್ಪಟ್ಟಿದೆ. ಇದು ಆಸ್ತಿವಿಮೆ ಮತ್ತು ನಷ್ಟ ಪರಿಹಾರದ ಜವಾಬ್ದಾರಿ ನಿರ್ವಹಣೆಯು ವಿಶೇಷ ವಿಮೆಯ ಕಂತಿನಿಂದ ದೊರೆಯುತ್ತದೆ. ಅಂದರೆ ಒಂದು ವಿಮೆಯ ಕಂತಿನಿಂದ ಎಲ್ಲ ರೀತಿಯ ತೊಂದರೆಗಳಿಗೆ ಪರಿಹಾರವಾಗಿರುತ್ತದೆ. ಅದಕ್ಕಾಗಿ ವ್ಯಕ್ತಿಯು ಮಾಸಿಕವಾಗಿ ಅಥವಾ ವಾರ್ಷಿಕವಾಗಿ ವಿಮೆಯ ಕಂತು ಅಂದರೆ ಪ್ರೀಮಿಯಂ ನೀಡಬೇಕಾಗುತ್ತದೆ. ಈ ವಿಮಾ ಕಂತನ್ನು ಕಂಪನಿಯವರು ಅರ್ಜಿಯಲ್ಲಿಯೇ ನಿಗದಿ ಪಡಿಸಿರುತ್ತಾರೆ. ೧) ಮಾಲೀಕರ ವಿಮಾ ಕಂತಿನ ಹಣ ಅವರ ಮನೆಯ ವಿಪತ್ತು ಪರಿಹಾರದ ಅಂಶಗಳ ಮೇಲೆ ಹಾಗೂ ನಿಬಂಧನೆಗಳ ಮೇಲೆ ಅವಲಂಬಿತನಾಗಿರುತ್ತದೆ. ಈ ವಿಮಾ ಪಾಲಿಸಿಯು ವಿಮಾದಾರ ಹಾಗೂ ವಿಮಾ ಕಂಪನಿಯ ನಡುವಿನ ಕಾನೂನಾತ್ಮಕ ಒಪ್ಪಂದ ವಾಗಿರುತ್ತದೆ. ಇದು ನಷ್ಟಭತಿ ಒಪ್ಪಂದವಾಗಿದ್ದು. ವಿಮಾದಾರನನ್ನು ನಷ್ಟ ಪೂವಸ್ಥಿತಿಯನ್ನು ಒದಗಿಸುತ್ತದೆ. ಹಾಗಿದ್ದರೂ ಪ್ರಕೃತಿ ವಿಕೇಪ, ಯುದ್ಧ, ಅಣು ಸ್ಫೋಟಗಳಿಂದ ಆದ ಅಪಾಯ ಹಾಗೂ ತೊಂದರೆಗಳ ಪರಿಹಾರಕ್ಕೆ ಅನ್ವಯಿಸುವುದಿಲ್ಲ (ಹೊರತು ಪಡಿಸಿದೆ) ಇವುಗಳಿಗೂ ಪರಿಹಾರ ಪಡೆಯಬಯಸಿದರೆ ವಿಶೇಷ ವಿಮಾ ಪಾಲಿಸಿಯನ್ನು ಪಡೆಯಬೇಕಾಗಿರುತ್ತದೆ. (ಪ್ರವಾಹ ವಿಮೆ ಸೇರಿ) ವಿಮೆಯ್ ಆಗಿರುವ (ಆಗುವ) ನಷ್ಟದ ಸರಿ ಮೊತ್ತದ ಪರಿಹಾರ ವಾಗಿರುತ್ತದೆ.

ಗೃಹ ವಿಮಾ ಯೋಜನೆಯು ಅವಧಿ ಒಪ್ಪಂದ ವಾಗಿರುತ್ತದೆ. ಅಂದರೆ ನಿರ್ದಿಷ್ಟ ಅವಧಿಗೆ ನೀಮಿತವಾಗಿರುತ್ತದೆ. ವಿಮಾದಾರನು ಸಲ್ಲಿಸುವ ಹಣವು ಆಪಾಲಿಸಿಯ ಪ್ರೀಮಿಯಂ ಆಗಿರುತ್ತದೆ. ಈ ಹಣವನ್ನು ವಿಮಾದಾರನು ವಿಮಾ ಕಂಪನಿಗೆ ಪ್ರತಿಕಂತಿನಲ್ಲಿಯೂ ನಿರ್ದಿಷ್ಟ ದಿನಾಂಕದೊಳಗೆ (ನಿಗದಿತ) ಪಾವತಿಸಬೇಕು. ಆಗ ಬಹುದಾದ ಅನಾವುತ ಹಾಗೂ ನ‍ಷ್ಟವು ಕಡಿಮೆ ಪ್ರಮಾಣದಲ್ಲಿದ್ದರೆ. ವಿಮಾ ಕಂಪನಿಯು ಪ್ರೀಮಿಯಂ ದರವನ್ನು ಕಡಿಮೆ ಪ್ರಮಾಣದಲ್ಲಿ ಪಾವತಿಸಿಕೊಳ್ಳುತ್ತದೆ. ಇದರಲ್ಲಿ ಏಕರೂಪತೆ/ನಿರ್ದಿಷ್ಟೆತೆ ಇರುವುದಿಲ್ಲ.

ಇತಿಹಾಸ

ಬದಲಾಯಿಸಿ

ಮನೆ ಮಾಲೀಕರ ವಿಮಾಯೋಜನೆಯು ಸೆಪ್ಟೆಂಬರ್ ೧೯೫೦ರಲ್ಲಿ ಅಮೇರಿಕಾದಲ್ಲಿ ಮೊದಲಬಾರಿಗೆ ಪ್ರಾರಂಭಿಸಲಾಯಿತು. ಆದರೆ ಇದಕ್ಕೆ ನಮಾನ ರೀತಿಯಲ್ಲಿನ ಯೋಜನೆಗಳು ಗ್ರೇಟ್ ಬ್ರಿಟನ್ ನಲ್ಲಿ ಮತ್ತು ಅಮೇರಿಕಾದ ಕೆಲಪ್ರದೇಶಗಳಲ್ಲಿ ಆಗಲೇ ಚಾಲ್ತಿಯಲ್ಲಿದ್ದವು. ೧೯೪೦ರ ಕೊನೆಯಲ್ಲಿ ಅಮೇರಿಕಾ ವಿಮಾ ನಿಯಮಗಳನ್ನು ಪರಿಷ್ಕರಿಸಲಾಯಿತು. ಮತ್ತು ಈ ಹಂತದಲ್ಲಿ ವಿವಿಧ ಶಾಸನ ಬದ್ಧವಾಗುವಂತೆ ನೋಡಿಕೊಳ್ಳಲಾಯಿತು.

೧೯೫೦ರ ಪೂರ್ವದಲ್ಲಿ ಅನೇಕ ಗಂಡಾಂತರದಿಂದ(ಅಪಾಯ) ಉಂಟಾಗುತ್ತಿದ್ದ ಅಪಾಯಗಳಿಂದ ಉಂಟಾಗುವ ಪ್ರಾಣ ಹಾನಿ ಮತ್ತು ಆಸ್ತಿ ಹಾನಿಯಿಂದ ಪಾರಾಗುವುದಕ್ಕೆ ಅನೇಕ ಯೋಜನೆಗಳನ್ನು ಪ್ರಾರಂಭ ಮಾಡುವುದಕ್ಕೆ ಪ್ರೇರೇಪಿತವಾಯಿತು. ಅವುಗಳು ಯಾವುದೆಂದರೆ ಅಗ್ನಿ ಆಕಸ್ಮಿಕ, ಕಳ್ಳತನ, ಸ್ವಂತ ಆಸ್ತಿ ಹಾಗೂ ವಿಮಾದಾಯ ಬಯಕೆಗೆ (ಇಚ್ಛೆಗೆ) ಪ್ರತ್ಯೇಕ ವಿಮಾ ಪಾಲಿಸಿಗಳನ್ನು ಹೊಂದಬೇಕಾಗಿತ್ತು.

೧೯೫೦ರ ಆಸುಪಾಸಿನಲ್ಲಿ ಮಾಲೀಕನ ನಷ್ಟ ಪರಿಹಾರದ ಬಯಕೆಗೆ ಅನುಗುಣವಾಗಿ ಎಲ್ಲ ನಷ್ಟ ಪರಿಹಾರಕ್ಕೂ ಒಂದೇ ವಿಮಾ ಪಾಲಿಸಿಯನ್ನು ಹೊಂದುವ ರೀತಿಯಲ್ಲಿ ಯೋಜನಾ ನಿಯಮಗಳನ್ನ ರೂಪಿಸಲಾಯಿತು. ಹೀಗಿದ್ದರೂ ಈ ಯೋಜನಾ ರೀತಿನೀತಿಗಳು, ನಿಯಮಗಳು ಹಾಗು ನಿಬಂಧನೆಗಳು ಒಂದು ವಿಮಾ ಕಂಪನಿಯಿಂದ ಮತ್ತೊಂದು ಮತ್ತೊಂದು ವಿಮಾ ಕಂಪನಿಗೆ ತುಂಬಾ ಭಿನ್ನವಾಗಿದ್ದವು. ಇಂತಹ ವ್ಯತ್ಯಾಸಗಳನ್ನು ಹೋಗಲಾಡಿಸುವುದಕ್ಕೆ ಎಲ್ಲ ಖಾಸಗಿ ವಿಮಾ ಕಂಪನಿಗಳಿಗೂ ಸಮಾನ ನಿಯಮಗಳನ್ನೂ ರೂಪಿಸುವ ಅವಶ್ಯಕತೆ ಜರೂರಾಗಿ ಆಗಬೇಕೆಂದೆನಿಸಿ ಒಂದು ಖಾಸಗಿ ಕಂಪನಿ 'ಜೆಸಿಸಿಟಿ', 'ನ್ಯೂಜಸಿಯಲ್ಲಿ ವಿಮಾಸೇವಾ ಕಛೇರಿ'ಯನ್ನು ೧೯೭೧ರಲ್ಲಿ ಪ್ರಾರಂಭಿಸಿ ಎಲ್ಲ ರೀತಿಯ ನಷ್ಟ ಪರಿಹಾರಾಂಶಗಳನ್ನು ಒಳಗೊಂಡ ಒಳ್ಳೆಯ ಅಭಿಮತವಿರುವ ನಿಯಮಾವಳಿಗಳನ್ನು ರೂಪಿಸಿ ಮನೆ ಮಾಲೀಕರ ವಿಮಾ ಪಾಲಿಸಿಯನ್ನು ವಿಮಾಕಂಪನಿಗಳಿಗೆ ಪುನರ್‍ಮಾರಾಟ ಮಾಡಲು ಅನುವು ಮಾಡಿಕೊಟ್ಟಿತು. ಈ ವಿಮಾ ಪಾಲಿಸಿಗಳು ಕಾಲಕಾಲಕ್ಕೆ ಮಾರ್ಪಟ್ಟು ಆಧುನಿಕ ಬೆಳವಣಿಗೆಗೆ ಅನುಗುಣವಾಗಿ ವಿಮಾನ ಪ್ಯಪರಿಹಾರ ಭರಿಸುವಿಕೆಯನ್ನು ಬದಲಾಯಿಸಿ. ನಿಯಮಗಳು ದೂರುವಿಕೆ ಮತ್ತು ಅದಕ್ಕೆ ಕೊಡಬೇಕಾದ ಬೆಲೆ (೧೮)ಯನ್ನು ನಿರ್ಧರಿಸಲಾಯಿತು. ಮನೆ ಮಾಲೀಕರ ವಿಮಾ ಪಾಲಿಸಿಯು ಸಾಮಾನ್ಯವಾಗಿ ಲಾಭರಹಿತವಾಗಿದ್ದು ಕಂಪನಿಗೂ ಹಾಗು ಮನೆ ಮಾಲೀಕರ ದೃಷ್ಠಿಯಲ್ಲೂ ಲಾಭದಾಯಕವಾಗುವಂತೆ ಲಭಿಸಿತು. ಚಂಡಮಾರುತದ ದುರಂತದ ಅವಘಡದ ಸಂದರ್ಭದಲ್ಲಿ ಸಾಂದರ್ಭಿಕವಾಗಿ ಪರಿಹಾರ ಮೊತ್ತವನ್ನು ಅಧಿಕೃತವಾಗಿ ಹೆಚ್ಚಿಸಲು ಅನುವು ಮಾಡಿ ಕೊಡಲಾಯಿತು.

ಪರಿಹಾರವ್ಯಾಪ್ತಿಯನ್ನು ಸೀಮಿತಗೊಳಿಸಿ ಹಿಂದಿನ ಪ್ರಮಾಣೀಕೃತ ಮಾದರಿಯಲ್ಲಿ ನೂರೈವತ್ತು ಫಾರ್ಮ್‍ಗಳಲ್ಲಿ ನಿರ್ವಹಣೆಯನ್ನು ತರಲಾಯಿತು. ಅಷ್ಟೇ ಅಲ್ಲದೆ ನೀರಿನ ಕೊಳವೆಗಳು ಒಡೆಯುವುದರಿಂದ ಉಂಟಾಗುವ ನೀರಿನ ಹಾನಿಯನ್ನು ಈ ಪಾಲಿಸಿಯು ಸೀರುತಗೊಳಿಸಲಾಗಿದೆ. ಅಥವಾ ಕೆಲವು ಸಂಧರ್ಭಗಳಲ್ಲಿ ಅದನ್ನು ತಿರಸ್ಕರಿಸಲಾಗುತ್ತದೆ.

 

ಯೋಜನೆಗಳು

ಬದಲಾಯಿಸಿ

ವಿಮಾ ಸೇವಾ ಕಛೇರಿಯು ಮನೆಮಾಲೀಕರ ವಿಮಾ ಪಾಲಿಯನ್ನು ಸಾಮಾನ್ಯಕರಿಸಿ ಪ್ರಮಾಣೀಕರಸಿದೆ.

ವಾಸಿಸುವ ಮನೆ ಬಂಕಿ ಗಾಹುತಿಯಾಗುವ ಸಂದರ್ಭದಲ್ಲಿ) ಈ ನಮೂನೆಯು ವಿಮಾದಾರನ ಮನೆಯ ಅಗ್ನಿ ಆಕಸ್ಮಿಕ, ಹೋಗೆ, ಬಿರುಗಾಳಿ, ಆಲಿಕಲ್ಲು, ಮಿಂಚು, ಸ್ಫೋಟ, ವಾಹನಗಳು ಹಾಗೂ ನಾಗರೀಕರ ಅಸಹಕಾರ ಪ್ರತಿಭಟನೆಯಿಂದ ಉಂಟಾಗುವ ನಷ್ಟಕ್ಕೆ ಪರಿಹಾರವನ್ನು ಒದಗಿಸುತ್ತದೆ. ಇದು ವ್ಯಕ್ತಿಯ ಸ್ವಂತ ಆಸ್ತಿ, ಸ್ವಂತ ಜವಾಬ್ದಾರಿಯಾ ಆರೋಗ್ಯ ನಿರ್ವಹಣಾ ವೆಚ್ಚವನ್ನು ಭರಿಸಲು ಸಹಾಯ ಮಾಡುತ್ತದೆ. ಮನೆ ಮಾಲೀಕನ ಪಾಲಿಸಿ ಅವಧಿ ಮೀರಿದ ನಂತರದ ಮನೆಗೆ ನಷ್ಟ ಉಂಟಾದರೆ ಈ ಗೃಹವಿಮೆಯ ಪಾಲಿಸಿಯು ನಷ್ಟವನ್ನು ಪರಿಹರಿಸುವುದಕ್ಕೆ ಸಹಾಯ ಮಾಡುವುದಿಲ್ಲ. ಈ ಪಾಲಿಸಿಯಲ್ಲಿ ಹಲವಾರು ಯೋಜನೆಗಳನ್ನು ಒಳಗೊಂಡಿದೆ. ಅವುಗಳು ಯಾವುದೆಂದರೆ:

ಮೊದಲನೇಯದು

ಬದಲಾಯಿಸಿ

ಈ ನಮೂನೆಯಲ್ಲಿ ಮನೆಯ ಕೆಳಕಂಡ ಹನ್ನೊಂದು ರೀತಿಯ ಅವಘಡಗಳಿಗೆ ಅಂದರೆ ಗಂಡಾಂತರ ಹಾಗು ಅಪಾಯಗಳಿಂದ ಪರಿಹಾರ ದೊರೆಯಲಿದೆ. ಸಾಮಾನ್ಯ ತೊಂದರೆಗಳು ಈ ನಮೂನೆಯಿಂದ ಪರಿಹಾರ ದೊರೆಯುತ್ತವೆ. ಮನೆಗೆ ಬೆಂಕಿ, ವಿದ್ಯುತ್, ಬಿರುಗಾಳಿ, ಆಲಿಕಲ್ಲು ಮಳೆ ವಿಧ್ವಂಸಕ ಕೃತ್ಯಗಳು, ಕಳ್ಳತನ, ವಾಹನಗಳಿಂದ ಅವಘಡ ವಿಮಾನಗಳು, ಸ್ಫೋಟ, ಗಲಭೆ ನಾಗರೀಕ ಪ್ರತಿಭಟನೆ, ಗಾಜಿನ ಒಡೆಯುವಿಕೆ ಹೊಗೆ, ಲಾವಾ-ಅಗ್ನಿ ಸ್ಫೋಟ, ವೈವಕ್ತಿಕ ಜವಾಬ್ದಾರಿ, ಪ್ರವಾಹ, ಭೋಕಂಪ ಮುಂತಾದ ನಷ್ಟಗಳಿಂದ ಪರಿಹಾರ ದೊರೆಯುವುದು. ಇವುಗಳಲ್ಲದೇ ಬೇರೆ ಮಾಧ್ಯಮದಿಂದ ಅವಘಡ ಉಂಟಾದರೆ ಅವುಗಳಿಗೆ ಪರಿಹಾರ ಅಲಭ್ಯವಾಗುವುದು. ಈ ಯೋಜನೆಯು ಉಳಿದ ಯೋಜನೆಗಳಿಗಿಂತ ಪ್ರಧಾನವಾದ್ದುದು.

ಎರಡನೇಯದು

ಬದಲಾಯಿಸಿ

ಈ ನಮೂನೆಯಲ್ಲಿ ಆಧುನಿಕ ವಿಶೇ‍ಷತೆಯುಳ್ಳ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಹದಿನಾರು ರೀತಿಯ ಅವಘಡಗಳಿವೆ. ಮತ್ತು ಅವುಗಳಿಗೆ ಪರಿಹಾರ ದೊರೆಯಲಿದೆ. ಮೇಲಿನ ಯೋಜನೆಯಲ್ಲಿ ನಮೂದಿತವಾಗಿರುವ ಅವಘಡಗಳಿಗೆ ಪರಿಹಾರ ದೊರೆಯಲಿದೆ. ಈ ಯೋಜನೆಯಲ್ಲಿ ನಮೂದಿಸುವ ವೇಳೆಗೆ ಯಾವ ಅಪಾಯದ ಮೇರೆಗೆ ಗೃಹವಿಮೆಯನ್ನು ಮಾಡಿರುತ್ತೇವೇಯೋ ಆ ಅಪಾಯ ಒದಗಿದ ನಂತರ ಪರಿಹಾರ ದೊರೆಯುತ್ತವೆ. ಒಂದು ವೇಳೆ ಬೇರೆಯದರಿಂದ ಅಪಾಯ ಒದಗಿದರೆ ಅಂತಹದಕ್ಕೆ ಪರಿಹಾರ ದೊರೆಯುವುದಿಲ್ಲ. ಈ ಯೋಜನೆಯನ್ನು ವಿಶಾಲ ನಮೂನೆಯೆಂದೂ ಕರೆಯಲಾಗುತ್ತದೆ.

ಮೂರನೇಯದು

ಬದಲಾಯಿಸಿ

ಇದನ್ನು ವಿಶೇಷನ ನಮೂನೆಯೆಂದು ಕರೆಯಲಾಗುತ್ತದೆ. ಈ ನಮೂನೆಯು ವಿಭಿನ್ನವಾದ ಅತಿ ಸಮಗ್ರ ವಿಭಕ್ತ ಕುಟುಂಬವಿರುವ ಮನೆಗೆ ಈ ಯೋಜನೆಯು ಪರಿಹಾರ ಕೊಡುತ್ತದೆ. ಈ ಯೋಜನೆಯು ಭೂಕಂಪ ಮತ್ತು ಪ್ರವಾಹವನ್ನು ಹೊರತು ಪಡಿಸಿ ಉಳಿದ ಎಲ್ಲಾ ಹಾನಿಗಳಿಗು ಪರಿಹಾರ ದೊರೆಯುತ್ತದೆ. ಆದರೆ ನಮೂದಿತ ಅಂಶಗಳಿಗೆ ಮಾತ್ರ ಪರಿಹಾರ ದೊರೆಯಲಿದೆ.

ನಾಲ್ಕನೇಯದು

ಬದಲಾಯಿಸಿ

ಈ ಯೋಜನೆಯನ್ನು ಅಂಶಧಾರಿತ ವಿಶಾಲ ನಮೂನೆ ಎನ್ನಬಹುದು. ಇದರಲ್ಲಿ ಎರಡನೇಯದು ಮತ್ತು ಮೂರನೇಯ ನಮೂನೆಯ ಎಲ್ಲಾ ರೀತಿಯ ಅವಘಡಗಳಿಗೆ ಪರಿಹಾರ ದೊರೆಯಲಿದೆ. ಅಷ್ಟೇ ಅಲ್ಲದೇ ವ್ಯಯಕ್ತಿಕ ನೋವು, ಗಾಯ, ಪೆಟ್ಟು, ಆಸ್ತಿನಷ್ಟ ಉಂಟಾದಾಗ ಇಲ್ಲಿ ಪರಿಹಾರ ದೊರೆಯುತ್ತದೆ.

ಐದನೇಯದು

ಬದಲಾಯಿಸಿ

ಇದನ್ನು ಸಮಗ್ರ ನಮೂನೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಮೂರನೇಯ ನಮೂನೆಯಲ್ಲಿ ನಮೂದಿಸಿರುವ ಅಂಶಗಳ ಜೊತೆಗೆ ಮತ್ತೆ ಕೆಲವು ಪರಿಹಾರ ಸಹ ದೊರೆಯಲಿದೆ. ಈ ವಿಮಾ ಯೋಜನೆಯಲ್ಲಿ ಪರಿಹಾರ ಹೇಳಲ್ಪಟ್ಟ ನಿರ್ಧಿ‍ಷ್ಟ ಅವಘಡಗಳ ಆಧಾರದ ಮೇಲೆ, ನಿರ್ದಿ‍‍‌ಷ್ಟ ಅವಘಡ ಕಾರಣಗಳು ಮತ್ತು ಅದರ ನಷ್ಟದ ಲೆಕ್ಕಾಚಾರಗಳ ಆಧಾರದ ಮೇಲೆ ಅವುಗಳಿಗೆ ಮಾತ್ರ ಪರಿಹಾರ ಅವಲಂಬಿತವಾಗಿರುತ್ತದೆ.

ಆರನೇಯದು

ಬದಲಾಯಿಸಿ

ಈ ಯೋಜನೆಯಡಿ ಘಟಕ ಮಾಲೀಕರ ನಮೂನೆ ಕೊಠಡಿಯ ಮಾಲೀಕರ ಮತ್ತು ಫ್ಲಾಟ್ ಮಾಲೀಕರ ಸ್ವಂತ ಆಸ್ತಿ ಗೋಡೆ ಮೇಲ್ಛಾವಣಿಗಳಿಗೆ ಹಾನಿಯ ಮೇಲೆ ರಕ್ಷಣೆ ಹಾಗು ಪರಿಹಾರವನ್ನು ನೀಡುತ್ತದೆ

ಏಳನೇಯದು

ಬದಲಾಯಿಸಿ

ಪ್ರಸ್ತುತ ಪರಿಹಾರ ನಮೂನೆಯಲ್ಲಿ ಮಾಲೀಕನು ವಾಸಿಸಲ್ಪಡುತ್ತಿದ್ದ ಹಳೆಯ ಮನೆಗೆ ಪರಿಹಾರ ಒದಗಿಸುತ್ತದೆ. ಈ ಯೋಜನೆಯು ಮಾಲೀಕನ ವಯಕ್ತಿಕ ಆಸ್ತಿ, ಗೋಡೆ ಮತ್ತು ಮನೆಯ ನೆಲಕ್ಕೆ ಪರಿಹಾರವನ್ನು ನೀಡುತ್ತದೆ.

ಪರಿಹಾರ ಬೇಡಿಕೆ ವಿಧಾನ

ಬದಲಾಯಿಸಿ

ನಷ್ಟದ ನಂತರ ವಿಮಾದಾರರು ತಮಗಾಗಿರುವ ನಷ್ಟವನ್ನು ಭರಿಸಲು (ತಗ್ಗಿಸಲು) ಈ ಕೆಳಕಂಡ ರೀತಿಯಲ್ಲಿ ಪರಿಹಾರ ಮನವಿಯನ್ನು ಸಲ್ಲಿಸಬೇಕು ಮತ್ತು ಕ್ರಮ ಕೈಗೊಳ್ಳಬೇಕು. ಒಂದು ನಿರ್ದಿಷ್ಟ ಸಮಯದಲ್ಲಿ ವಿಮಾಪಾಲಿಸಿಯ ನಿಬಂಧನೆಗನುಗುಣವಾಗಿ ವಿಮಾದಾರ ವಿಮಾಕಂಪನಿಗೆ ತಿಳಿಸಬೇಕು. ಆನಂತರ ಪರಿಹಾರ ಮೌಲ್ಯ ಮಾಪನಮಾಡುವ ಮೌಲ್ಯ ಮಾಪಕರು ಸಮರ್ಪಕ ರೀತಿಯಲ್ಲಿ ತನಿಖೆಮಾಡಿ ಸನ್ನಿವೇಶ, ನಷ್ಟ, ಪರಿಹಾರ, ಬೇಡಿಕೆಯಿಟ್ಟಿರುವ ಮೌಲ್ಯ ಇವುಗಳ ಪರಿಶೀಲನೆಯ ನಂತರ ವಿಮಾದಾರರು ನೀಡಿರುವ ಅಂಶಗಳ ಸತ್ಯಾಸತ್ಯಾತೆಯ ನಿರ್ಣಯ ಮಾಡಿದ ವಿವರಗಳನ್ನು ತನಿಖಾಧಿಕಾರಿ ನೀಡಿದ ನಂತರ ಪರಿಹಾರ ಮೊತ್ತವನ್ನು ಹೆಚ್ಚಿಸಿ ಅಥವಾ ಕಡಿತಗೊಳಿಸಿ ಪರಿಹಾರ ನೀಡಬಹುದು. ಅಥವಾ ನವೀಕರಿಸದೆ ವಿಮಾ ಕಂಪನಿಯು ತಿರಸ್ಕರಿಸಬಹುದು.

ಹೊರಕೊಂಡಿಗಳು

ಬದಲಾಯಿಸಿ
  1. http://www.policybazaar.com/home-insurance/
  2. http://www.icicibank.com/Personal-Banking/insurance/general-insurance/home-insurance/home-insurance.page
  3. http://www.sbigeneral.in/Internet/faces/home-insurance;JSESSIONID_INTERNET=LQNyWRLVVhLjGr9Vf7fJbszv8dnpg3JKpF9CCNFXPqxL02Xwnstj!518950079!-1115004972?_afrLoop=67499764948456226&_afrWindowMode=0&_afrWindowId=null
  4. http://www.confused.com/home-insurance/guides/home-insurance-policy-types

ಉಲ್ಲೇಖಗಳು

ಬದಲಾಯಿಸಿ
  1. http://www.consumeraffairs.com/insurance/home.html
  2. http://www.nationwide.com/homeowners-insurance-quotes.jsp
  3. https://www.libertymutual.com/home-insurance
"https://kn.wikipedia.org/w/index.php?title=ಗೃಹವಿಮೆ&oldid=1054890" ಇಂದ ಪಡೆಯಲ್ಪಟ್ಟಿದೆ