ಗೃಹಮಂತ್ರಿಯು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಮುಖ್ಯಸ್ಥನಾಗಿರುತ್ತಾನೆ. ಕೇಂದ್ರ ಸಚಿವ ಸಂಪುಟದ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಒಬ್ಬನಾದ ಗೃಹಮಂತ್ರಿಯ ಮುಖ್ಯ ಜವಾಬ್ದಾರಿಯೆಂದರೆ ಭಾರತದ ಆಂತರಿಕ ಭದ್ರತೆಯನ್ನು ಕಾಪಾಡುವುದು; ದೇಶದ ದೊಡ್ಡ ಪೋಲಿಸ್ ಪಡೆಯು ಇದರ ಅಧಿಕಾರವ್ಯಾಪ್ತಿಯಲ್ಲಿ ಬರುತ್ತದೆ. ಕೆಲವೊಮ್ಮೆ, ಇವನಿಗೆ/ಇವಳಿಗೆ ಗೃಹ ವ್ಯವಹಾರಗಳ ರಾಜ್ಯ ಸಚಿವ ಮತ್ತು ಕೆಳದರ್ಜೆಯ ಗೃಹ ವ್ಯವಹಾರಗಳ ರಾಜ್ಯ ಉಪಸಚಿವನು ನೆರವಾಗುತ್ತಾರೆ.

ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿಯಾಗಿದ್ದ ಸರ್ದಾರ್ ವಲ್ಲಭ್‌ಭಾಯಿ ಪಟೇಲ್‍ರ ಕಾಲದಿಂದ, ಈ ಕಚೇರಿಯನ್ನು ಕೇಂದ್ರ ಸಚಿವಸಂಪುಟದಲ್ಲಿ ಹಿರಿತನದಲ್ಲಿ ಪ್ರಧಾನಮಂತ್ರಿಯ ನಂತರದ ಸ್ಥಾನ ಪಡೆದಿದೆಯೆಂದು ಕಾಣಲಾಗಿದೆ. ಪಟೇಲ್‍ರಂತೆ, ಹಲವಾರು ಗೃಹಮಂತ್ರಿಗಳು ಉಪ ಪ್ರಧಾನಮಂತ್ರಿಯ ಹೆಚ್ಚುವರಿ ಖಾತೆಯನ್ನು ಹೊಂದಿದವರಿದ್ದಾರೆ. ಫ಼ೆಬ್ರುವರಿ ೨೦೧೮ರ ವೇಳೆಗೆ, ಮೂರು ಗೃಹಮಂತ್ರಿಗಳು ಮುಂದೆ ಪ್ರಧಾನ ಮಂತ್ರಿಯಾದವರಿದ್ದಾರೆ: ಲಾಲ್ ಬಹಾದುರ್ ಶಾಸ್ತ್ರಿ, ಚೌಧುರಿ ಚರಣ್ ಸಿಂಗ್, ಮತ್ತು ಪಿ.ವಿ.ನರಸಿಂಹರಾವ್.

ಬಾಹ್ಯ ಸಂಪರ್ಕಗಳು ಬದಲಾಯಿಸಿ