ಗೂಳೂರು' ಗ್ರಾಮವು ತುಮಕೂರಿನಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ. ಇಲ್ಲಿ ಬಹಳ ಸುಂದರವಾದ ಗೂಳೂರು ಗಣೇಶನ ದೇವಾಲಯವಿದೆ. ಪ್ರತಿ ವರ್ಷ ಇಲ್ಲಿ ಆಚರಿಸುವ ಗಣಪತಿ ಹಬ್ಬವು ನಾಡಿನಲ್ಲೆಲ್ಲ ಹೆಸರುವಾಸಿಯಾಗಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು ೬ ಕಿ.ಮೀ ಚಲಿಸಿದರೆ ಪ್ರಸಿದ್ದವಾದ ಗೂಳೂರು ಸಿಗುತ್ತದೆ.

ಇಲ್ಲಿ ಇರುವ ಗಣೇಶನ ವಿಗ್ರಹವು ಭೃಗು ಮಹರ್ಷಿಗಳಿಂದ ಪ್ರತಿಷ್ಟಾಪಿಸಲ್ಪಟ್ಟಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಪುರಾಣಗಳ ಪ್ರಕಾರ ಭೃಗು ಮಹರ್ಷಿಗಳು ಕಾಶಿ ಯಾತ್ರೆಯ ನಡುವೆ ಭಾದ್ರಪದ ಮಾಸದ ಶುಕ್ಲ ಪಕ್ಷಚೌತಿಯ ದಿನದಂದು ಈ ಗೂಳೂರಿನಲ್ಲಿ ಇದ್ದರಂತೆ. ಆ ದಿನ ಗಣೇಶನ ಪೂಜೆ ಮಾಡಲು ತಾವೆ ತಮ್ಮ ಕೈಯ್ಯಾರ ಗಣೇಶನನ್ನು ಮಾಡಿ ಪೂಜಿಸಿದರು. ನಂತರ ಸ್ಥಳೀಯರಿಗೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನದಂದೇ ಗಣೇಶನನ್ನು ಮಾಡಿ ಪೂಜೆ ಮಾಡಬೇಕು ಎಂದು ಹೇಳಿದರಂತೆ. ಆದ್ದರಿಂದ ಇಲ್ಲಿ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನದಂದು ಗಣೇಶನನ್ನು ತಯಾರಿಸಲು ಆರಂಭಿಸಿ ವಿಜಯದಶಮಿಯ ವೇಳೆಗೆ ಮುಗಿಸುತ್ತಾರೆ. ಗಣೆಶನ ಎತ್ತರ ೯.೫ ಅಡಿ ಮತ್ತು ಅಗಲವೂ ಕೂಡ ೯.೫ ಅಡಿ. ದೀಪಾವಳಿ ಹಬ್ಬದಿಂದ ನಿತ್ಯ ಪೂಜೆ ನಡೆಯುತ್ತದೆ. ನಂತರ ಕಾರ್ತಿಕ ಮಾಸದ ಅಮಾವಾಸ್ಯೆಯ ನಂತರ ಬರುವ ಭಾನುವಾರದಂದು ಗಣೇಶನನ್ನು ವಿಸರ್ಜಿಸುತ್ತಾರೆ. ಇಲ್ಲಿಇದ್ದಭೂತಗಳ ಹಾವಳಿ ತಡೆಯಲು ವ್ಯಾಸರಾಯರು ಇಲ್ಲಿ ಶೂಲದ ಹನುಮಂತರಾಯಸ್ವಾಮಿಯನ್ನು ಪ್ರತಿಸ್ತಾಪಿಸಿದರು ಎಂಬ ಪ್ರತೀತಿ ಇದೆ.

ಹತ್ತಿರದ ಐತಿಹಾಸಿಕ ಪುಣ್ಯಸ್ಥಳಗಳು: 1. ಕೈದಾಳ, 2.ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ

"https://kn.wikipedia.org/w/index.php?title=ಗೂಳೂರು&oldid=1048192" ಇಂದ ಪಡೆಯಲ್ಪಟ್ಟಿದೆ