ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳ ಕನ್ನಡವನ್ನು ಹೈದರಾಬಾದ್ ಕರ್ನಾಟಕ ಕನ್ನಡ ಎಂದೂ ಕರೆಯುವುದುಂಟು. ಈ ಉಪಭಾಷೆಯ ಮೇಲೆ ಮರಾಠಿ, ಉರ್ದು, ಸಂಸ್ಕೃತಗಳ ಪ್ರಭಾವ ತೀವ್ರತರವಾಗಿ ಆಗಿದೆ. ಮೊದಲಿಗೆ ಈ ಉಪಭಾಷೆಯನ್ನಾಡುವ ಪ್ರದೇಶ ಹೈದರಾಬಾದ್ ನಿಜಾಮರ ಆಳಿಕೆಗೆ ಒಳಗಾಗಿತ್ತಾದ ಕಾರಣ ಉರ್ದು ಈ ಭಾಷೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ಬಾರ್ಕೋಲು

ಬದಲಾಯಿಸಿ

ಗುಲ್ಬರ್ಗ ಕನ್ನಡ ಉಪಭಾಷೆಯಲ್ಲೂ ಉಳಿದ ಕನ್ನಡದ ಉಪ ಭಾಷೆಗಳಲ್ಲಿ ಕಂಡುಬರುವಂತೆ ಆ ಧ್ವನಿಮಾ ಆ್ಯ ಮತ್ತು ಆ ಎಂಬ ಎರಡು ಧ್ವನಿಮಾ ಆಗಿ ರೂಪ ತಾಳಿದೆ. ಚ ಮತ್ತು ಜ ಎಂಬ ಈಷತ್ ಸ್ಪರ್ಶ ವ್ಯಂಜನ ಧ್ವನಿಮಾಗಳು ಈ ಕನ್ನಡದಲ್ಲಿ ಕಂಡುಬರುತ್ತವೆ. ಇವುಗಳ ಜೊತೆಗೆ ಚ ಜ ಎಂಬ ತಾಲವ್ಯ ಸ್ಪರ್ಶವ್ಯಂಜನ ಧ್ವನಿಮಾಗಳೂ ಬಳಕೆಯಲ್ಲಿವೆ. ಎಷ್ಟೋ ವೇಳೆ ಉರ್ದುವಿನ ಪ್ರಭಾವದಿಂದ ಕನ್ನಡದ ಜ ವ್ಯಂಜನ ಧ್ವನಿಮಾಕ್ಕೆ ಬದಲು ಜ ಬಳಕೆಯಾಗುತ್ತದೆ ಉದಾ: ಬೀಜ > ಬೀಜ, ಶಿಷ್ಟ ಕನ್ನಡದ ವಕಾರಾಂತ ಶಬ್ದಗಳು ವ್ಯಂಜನಾಂತವಾಗಿವೆ. ಹೆಚ್ಚಿನ ಬದಲಾವಣೆ ವ್ಯಾಕರಣ ಪ್ರಕ್ರಿಯೆಗಳಿಗಿಂತ ಪದಕೋಶಕ್ಕೆ ಸೀಮಿತವಾಗಿದೆ.

ಗುಲ್ಬರ್ಗ ಪದ ಪ್ರಯೋಗ

ಬದಲಾಯಿಸಿ

ಕೆಲಮೊಮ್ಮೆ ಊರುಗಳ ಹೆಸರುಗಳು ಗುರುತು ಸಿಗದಷ್ಟು ರೂಪಾಂತರ ಹೊಂದಿವೆ. ಗುಲ್ಬರ್ಗದ ಮೂಲ ಹೆಸರು ಕಲುಬುರುಗೆ ಎಂದಿದ್ದಿತಾದರೂ ಈಗಿನ ಹೆಸರಿನಲ್ಲಿ ಅದರ ಸುಳಿವು ಸಿಗುವುದಿಲ್ಲ. ಇಂಥ ಬದಲಾವಣೆಗಳು ಕೆಲಮೊಮ್ಮೆ ಸ್ವಾಭಾವಿಕವಾಗಿಯೇ ಆಗಿರದೆ ಆಡಳಿತಗಾರರ ಬಲಾತ್ಕಾರದ ಹೇರಿಕೆಯಿಂದಲೂ ಆಗಿರುವುದುಂಟು. ಬಿಜಾಪುರ ಕನ್ನಡವನ್ನು ಕೆಲಮೊಮ್ಮೆ ಗುಲ್ಬರ್ಗ ಕನ್ನಡದಲ್ಲೆ ಸೇರಿಸುವುದುಂಟು. ಈ ಎರಡೂ ಪ್ರಭೇದಗಳ ನಡುವೆ ಅಂತರ ಹೆಚ್ಚಾಗಿ ಕಂಡುಬರುವುದಿಲ್ಲ.

ಇತರ ಭಾಷೆಗಳ ಭಾಷಾ ರೂಪಾಂತರ

ಬದಲಾಯಿಸಿ

ವ್ಯಾಕರಣಾಂಶಗಳಲ್ಲಿಯೂ ಬಿಜಾಪುರ ಕನ್ನಡ ಗುಲ್ಬರ್ಗ ಕನ್ನಡದೊಂದಿಗೆ ಸಾಮ್ಯ ಹೊಂದಿದೆ. ಈ ಎರಡು ಭಾಷಾರೂಪಗಳಲ್ಲಿ ಕೆಲಮೊಮ್ಮೆ ಆಕಾರಾಂತ ಸಂಬಂಧಸೂಚಕ ಸರ್ವನಾಮಗಳು ಯಕಾರಾದಿಯಾಗುತ್ತವೆ. ಉದಾ: ಅಪ್ಪ > ಯಪ್ಪ, ಅವ್ವ > ಯವ್ವ. ಈ ಭಾಷಾ ಪ್ರಭೇದಗಳಲ್ಲಿ ಅನ್ಯರನ್ನು ಕುರಿತು ಸಂಬೋದಿಸುವಾಗ ‘ರಿ’ ಎಂಬ ಪ್ರತ್ಯಯ ಹೆಚ್ಚಾಗಿ ಬಳಕೆಯಾಗುತ್ತದೆ. ವಿದ್ಯಾವಂತರ ಭಾಷೆಯಲ್ಲಿ ಮಾತ್ರ ಮಹಾಪ್ರಾಣಾಕ್ಷರಗಳು ಉಳಿದಿವೆ. ಅಲ್ಪಪ್ರಾಣವನ್ನೇ ಮಹಾಪ್ರಾಣವಾಗಿ ಉಚ್ಚರಿಸುವ ಪ್ರವೃತ್ತಿ ಅನ್ಯಭಾಷೆಯನ್ನಾಡುವವರಲ್ಲಿ ಕಂಡುಬರುತ್ತದೆ. ಅವಿದ್ಯಾವಂತರಲ್ಲಿ ಹಾಗೂ ಕೆಳವರ್ಗದವರಲ್ಲಿ ಹ ಕಾರ ಲೋಪವಾಗುತ್ತದೆ. ಉಕಾರಾಂತ ಪದಗಳ ವಿದ್ಯಾವಂತರ ನುಡಿಯಲ್ಲಿ ಅಕಾರಾಂತವಾಗುವುದುಂಟು (ಆಕಳು > ಆಕಳ). ಈ ಭಾಷೆಯಲ್ಲಿ ಬಳಕೆಯಾಗುವ ಬಹಳಷ್ಟು ಸಂಖ್ಯಾವಾಚಕಗಳು ಉರ್ದು ಇಲ್ಲವೇ ಮರಾಠಿ ಭಾಷೆಗಳಿಂದ ಎರವಲು ತಂದವಾಗಿವೆ. ತೀಸ್, ಅಡೀಚ್, ದೀಡು, ಶಂಭರ್ ಇತ್ಯಾದಿ. ತಿನ್ನದೆ, ಮಾಡದೆ ಎಂಬ ನಿಷೇಧಾರ್ಥಕ ರೂಪಗಳು ತಿನ್ಲಾರದೆ, ಮಾಡ್ಲಾರದೆ ಎಂಬ ರೂಪತಾಳಿ ಲಾರದೆ ಎಂಬ ಪ್ರತ್ಯಯಗಳನ್ನು ಹೊಂದುತ್ತವೆ. ರಾಯಚೂರು ಕನ್ನಡ ಕೂಡ ಗುಲ್ಬರ್ಗ ಕನ್ನಡವನ್ನೇ ಹೋಲುವುದಾದರೂ ಕೆಲವು ಸಾಮಾನ್ಯ ಬದಲಾವಣೆಗಳೂ ಕಂಡುಬರುತ್ತವೆ. ಈ ಪ್ರಭೇದದಲ್ಲಿ ಅವ, ಇವ, ಮಾವ, ಕಿವುಡ, ಕಿವಿ, ಸೋವಿ ಮುಂತಾದ ಪದಗಳಲ್ಲಿ ವಕಾರ ಅನುನಾಸಿಕವಾಗಿ ಉಚ್ಚಾರಗೊಳ್ಳುತ್ತದೆ.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: