ಗುರ್ಬಾಕ್ಸ್ ಸಿಂಗ್

ಗುರ್ಬಾಕ್ಸ್ ಸಿಂಗ್ (ಫೆಬ್ರವರಿ ೧೧, ೧೯೩೬) ಅವರು ಭಾರತದ ಮಾಜಿ ಹಾಕಿ ಆಟಗಾರರು. ಅವರು ಆಟಗಾರರಾಗಿದ್ದ ಸಂದರ್ಭದಲ್ಲಿ ಭಾರತ ತಂಡವು ೧೯೬೪ ರ ಬೇಸಿಗೆ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು, ೧೯೬೮ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತು ಮತ್ತು ೧೯೬೬ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಅವರು ೧೯೬೮ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡದ ಜಂಟಿ ನಾಯಕರಾಗಿದ್ದರು. ಅವರು ೧೯೭೬ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡದ ತರಬೇತುದಾರರಾಗಿದ್ದರು. ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ, ಗುರ್ಬಾಕ್ಸ್ ಅವರು ೧೯೬೬ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. []

ಗುರ್ಬಾಕ್ಸ್ ಸಿಂಗ್ ಗ್ರೆವಾಲ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತ
ಜನನ (1936-02-11) ೧೧ ಫೆಬ್ರವರಿ ೧೯೩೬ (ವಯಸ್ಸು ೮೮)
ಪೇಶಾವರ್, ನಾರ್ತ್-ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯ, ಬ್ರಿಟಿಷ್ ಭಾರತ (ಇಂದಿನ ಪೇಶಾವರ್, ಖೈಬರ್ ಪಖ್ತುಂಖ್ವಾ, ಪಾಕಿಸ್ತಾನ)
Sport
ಕ್ರೀಡೆಹಾಕಿ
ಸ್ಪರ್ಧೆಗಳು(ಗಳು)ಪುರುಷರ ತಂಡ

ಗುರ್ಬಾಕ್ಸ್ ಸಿಂಗ್ ಅವರು ಪೇಶಾವರ್‌ನಲ್ಲಿ ಜನಿಸಿದರು ಮತ್ತು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಬೆಳೆದರು. ವಿಭಜನೆಯ ಸಂದರ್ಭದಲ್ಲಿ ಅವರು ಮತ್ತು ಅವರ ಕುಟುಂಬ ಮೊದಲು ಲಕ್ನೋಗೆ ಸ್ಥಳಾಂತರಗೊಂಡರೂ, ನಂತರ ಮಾವೋಗೆ ಹೋಗಿ, ಕೊನೆಗೆ ಮೀರತ್‌ನಲ್ಲಿ ನೆಲೆಯೂರಿತು. ಅಲ್ಲಿಯೇ ಅವರು ತಮ್ಮ  ಓದುವಿಕೆಯನ್ನು ಮುಗಿಸಿದರು. ಅವರು ೧೯೫೭ ರಲ್ಲಿ ಕಲ್ಕತ್ತಾಗೆ ತೆರಳಿದರು, ಇದು ಅಂತಿಮವಾಗಿ ಅವರ ಶಾಶ್ವತ ನೆಲೆಯಾಯಿತು ಮತ್ತು ಅವರ ಕ್ರೀಡಾ ವೃತ್ತಿಜೀವನವನ್ನು ರೂಪಿಸಿತು. ಗುರ್ಬಾಕ್ಸ್ ಅವರು ಆರಂಭದಲ್ಲಿ ಬ್ಯಾಡ್ಮಿಂಟನ್‌ ಆಡಲು ಪ್ರಯತ್ನಿಸಿದರು ಆದರೆ ನಂತರ ಲಕ್ನೋದಲ್ಲಿನ ತಮ್ಮ ಶಾಲೆಗಾಗಿ ಹಾಕಿ ಆಡಲು ಪ್ರಾರಂಭಿಸಿದರು. []

ಗುರ್ಬಾಕ್ಸ್ ೧೬ ನೇ ವಯಸ್ಸಿನಲ್ಲಿ ಹಾಕಿಯನ್ನು ಪ್ರಾರಂಭಿಸಿದರು. ಅವರು ೧೯೫೪-೫೫ ರಲ್ಲಿ ಆಗ್ರಾ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದರು ಮತ್ತು ಒಂದು ವರ್ಷದ ನಂತರ ಒಬೈದುಲ್ಲಾ ಗೋಲ್ಡ್ ಕಪ್ ಹಾಕಿ ಚಾಂಪಿಯನ್‌ಶಿಪ್ ಗೆದ್ದರು. ಗುರ್ಬಾಕ್ಸ್ ಸಿಂಗ್ ಅವರು ೧೯೫೭ ರಲ್ಲಿ ಈಸ್ಟ್ ಬೆಂಗಾಲ್ ಕ್ಲಬ್‌ಗಾಗಿ ಮೊದಲ ಬಾರಿಗೆ ಆಡಿದರು ಮತ್ತು ಆ ವರ್ಷದ ಬೀಟನ್ ಕಪ್‌ನಲ್ಲಿ ಜಯಗಳಿಸಿದರು. ನಂತರ ಅವರು ೧೯೫೭ ರಿಂದ ೧೯೬೫ ರವರೆಗೆ ಕಲ್ಕತ್ತಾ ಕಸ್ಟಮ್ಸ್ ಕ್ಲಬ್ ಅನ್ನು ಪ್ರತಿನಿಧಿಸಿದರು. ನಂತರ ೧೯೬೮ ರಿಂದ ೧೯೮೦ ರವರೆಗೆ ಮೋಹನ್ ಬಗಾನ್ ಅಥ್ಲೆಟಿಕ್ ಕ್ಲಬ್ಅನ್ನು ಪ್ರತಿನಿಧಿಸಿದರು. ಅವರು ದೇಶೀಯ ಹಾಕಿಯಲ್ಲಿ ವಿಶಿಷ್ಟವಾದ ವೃತ್ತಿಜೀವನವನ್ನು ಹೊಂದಿದ್ದರು.


ಅಂತರರಾಷ್ಟ್ರೀಯ ಹಾಕಿ ವೃತ್ತಿ

ಬದಲಾಯಿಸಿ

ನುರಿತ ಆಟಗಾರರಾದ, ಗುರ್ಬಾಕ್ಸ್ ಸಿಂಗ್ ಅವರು ೧೯೬೦ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಚೊಚ್ಚಲ ಪ್ರವೇಶ ಮಾಡಿದರು ಮತ್ತು ೧೯೬೨ ರಲ್ಲಿ ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದರು. ೧೯೬೩ ರ ಹೊತ್ತಿಗೆ ಅವರು ನಾಯಕರಾಗಿದ್ದರು ಮತ್ತು ಚಿನ್ನದ ಪದಕವನ್ನು ಗೆದ್ದ ತಂಡವನ್ನು ಮುನ್ನಡೆಸಿದರು. ೧೯೬೪ ರಲ್ಲಿ ಟೋಕಿಯೋ ಒಲಿಂಪಿಕ್ಸ್ ಮತ್ತು ೧೯೬೬ ರಲ್ಲಿ ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ಆಡಿದರು. ಅವರು ೧೯೬೬ ರಲ್ಲಿ ಜರ್ಮನಿ ಮತ್ತು ಜಪಾನ್ ಪ್ರವಾಸಗಳಲ್ಲಿ ಭಾರತವನ್ನು ಮುನ್ನಡೆಸಿದರು.[] ೧೯೬೭ ರಲ್ಲಿ ಶ್ರೀಲಂಕಾ ಮತ್ತು ೧೯೬೭ ರಲ್ಲಿ ಲಂಡನ್‌ನಲ್ಲಿ ನಡೆದ ಪ್ರಿ-ಒಲಿಂಪಿಕ್ ಪಂದ್ಯಾವಳಿಗಳಲ್ಲಿ ಅವರು ನಾಯಕತ್ವವನ್ನು ವಹಿಸಿದರು. ೧೯೬೮ ರ ಮೆಕ್ಸಿಕೊ ಸಿಟಿ ಒಲಿಂಪಿಕ್ಸ್‌ನಲ್ಲಿ ಅವರು ಪೃಥಿಪಾಲ್ ಸಿಂಗ್ ಅವರೊಂದಿಗೆ ನಾಯಕತ್ವವನ್ನು ಹಂಚಿಕೊಂಡರು, ಅಲ್ಲಿ ಭಾರತವು ಕಂಚಿನ ಪದಕವನ್ನು ಗೆದ್ದುಕೊಂಡಿತು. ಅವರನ್ನು ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಹಾಕಿ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

೧೯೬೮ ರಲ್ಲಿ ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದ ನಂತರ, ಗುರ್ಬಾಕ್ಸ್ ಸಿಂಗ್ ಕೋಚಿಂಗ್ ಮತ್ತು ಅಂಪೈರಿಂಗ್ ಮಾಡಲು ಶುರುಮಾಡಿದರು. ಅವರು ೧೯೭೪-೭೫ರಲ್ಲಿ ಫ್ರಾನ್ಸ್ ಮತ್ತು ೧೯೭೬ ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ತರಬೇತಿ ನೀಡಿದರು. ೧೯೭೩ ರಲ್ಲಿ ರಾಷ್ಟ್ರೀಯ ಆಯ್ಕೆಗಾರರಾಗಿದ್ದರು. ೧೯೮೦ ರಿಂದ ೧೯೮೫ ರವರೆಗೆ, ಅವರು ೧೯೭೩ ರ ವಿಶ್ವಕಪ್ ಮತ್ತು ೧೯೮೩ ರ ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ತಂಡದ ವ್ಯವಸ್ಥಾಪಕರಾಗಿದ್ದರು.[]

೧೯೬೬ ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡದ ವಿಜಯದ ನಂತರ ಗುರ್ಬಾಕ್ಸ್ ಸಿಂಗ್ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.[] ೨೦೧೩ ರಲ್ಲಿ, ಅವರು ವಿವಿಧ ಕ್ಷೇತ್ರಗಳಲ್ಲಿನ ವಿಶಿಷ್ಟ ಸಾಧನೆಗಳನ್ನು ಗೌರವಿಸಲು ಪಶ್ಚಿಮ ಬಂಗಾಳ ಸರ್ಕಾರವು ಸ್ಥಾಪಿಸಿದ ಬಂಗಾ ಬಿಭೂಷಣ ಬಿರುದನ್ನು ಪಡೆದರು. ೨೦೧೮ ರಲ್ಲಿ, ಅವರಿಗೆ ಈಸ್ಟ್ ಬೆಂಗಾಲ್ ಕ್ಲಬ್‌ನಿಂದ ಭಾರತ್ ಗೌರವ್ ಪ್ರಶಸ್ತಿಯನ್ನು ನೀಡಲಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. https://www.pinterest.com/pin/531706299737945738/. Retrieved 6 ಸೆಪ್ಟೆಂಬರ್ 2018. {{cite web}}: Missing or empty |title= (help)
  2. https://www.pinterest.com/pin/531706299737945738/. Retrieved 6 ಸೆಪ್ಟೆಂಬರ್ 2018. {{cite web}}: Missing or empty |title= (help)
  3. https://www.hockeyindia.org/news/i-value-it-the-most-says-gurbux-singh-on-winning-the-hockey-india-major-dhyan-chand-lifetime-achievement-award-2022
  4. "East Bengal seek a 'new identity' on foundation day". The Times of India. Archived from the original on 2 August 2018. Retrieved 19 December 2019.
  5. https://timescontent.timesgroup.com/photo/sports/Gurbux-Singh/390625
  6. https://timesofindia.indiatimes.com/sports/hockey/top-stories/hardik-savita-bag-top-honours-lifetime-award-for-gurbux-singh/articleshow/98745686.cms