ಗುರು ರಾಘವೇಂದ್ರ ವೈಭವ(ಧಾರಾವಾಹಿ)

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನ ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

"ಗುರು ರಾಘವೇಂದ್ರ ವೈಭವ"
ಚಿತ್ರ:--
"ಗುರು ರಾಘವೇಂದ್ರ ವೈಭವ"
ಶೈಲಿಐತಿಹಾಸಿಕ ಹಾಗೂ ಪುರಾಣಗಳನ್ನು ಆಧಾರಿತ ಧಾರಾವಾಹಿ
ರಚನಾಕಾರರುಎಂ ಆರ್ ಪಟ್ಟಾಭಿರಾಮ್
ನಟರುಶ್ರೀನಿವಾಸ ಮೂರ್ತಿ, ಪವಿತ್ರಾ ಲೋಕೇಶ್, ಶಿವರಾಂ, ಲೋಕೇಶ್ ,ಶಂಕರ್ ಭಟ್, ಮಾಸ್ಟರ್ ಸೌರಭ್, ಪರೀಕ್ಷೀತ್, ಲಕ್ಷ್ಮಿ ಹೆಗಡೆ,ಪ್ರಶಾಂತ್
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು-
ನಿರ್ಮಾಣ
ಸಮಯ೩೦ ನಿಮಿಷ
ಪ್ರಸಾರಣೆ
ಮೂಲ ವಾಹಿನಿಸುವರ್ಣ ವಾಹಿನಿ
ಮೂಲ ಪ್ರಸಾರಣಾ ಸಮಯಜೂನ್ ೨೧, ೨೦೧೦ – -
ಕಾಲಕ್ರಮ
ನಂತರ-

ಇವರ ಮೂಲ ಬ್ರುಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಘಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೆಟ್ಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯ ದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗು ಭವ್ಯ ಆರಾಧನೆ ನಡೆಯುತ್ತದೆ.

ಧಾರಾವಾಹಿ ಬದಲಾಯಿಸಿ

ಐತಿಹಾಸಿಕ ಹಾಗೂ ಪುರಾಣಗಳನ್ನು ಆಧಾರಿತವಾದ "ಗುರು ರಾಘವೇಂದ್ರ ವೈಭವ " ಧಾರಾವಾಹಿ. ಕ್ರಿ.ಶ.೧೫೯೫5 ರಲ್ಲಿ ವೆಂಕಟನಾಥನ ಜನನದಿಂದ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳಾಗುವವರೆಗಿನ ಕಥೆ. ಕರ್ನಾಟಕ ಜನತೆಯ ಆರಾಧ್ಯ ಗುರು, ಮಂತ್ರಾಲಯದ ಮಹಿಮಾ ಪುರುಷ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನಗಾಥೆಯ ಸಂಪೂರ್ಣ ಚಿತ್ರಣ ನೀಡುವ "ಗುರು ರಾಘವೇಂದ್ರ ವೈಭವ" ಧಾರಾವಾಹಿ.

ಮಿಡಿಯಾ ಬದಲಾಯಿಸಿ

ಎಂ.ಎಸ್.ರಾಮಯ್ಯ ಮಿಡಿಯಾ ಎಂಡ್ ಎಂಟರ್‌ಟೈನ್‌ಮೆಂಟ್ ಪ್ರೈ.ಲಿ. ತಂಡವು

ವಾಹಿನಿ ಬದಲಾಯಿಸಿ

ಸುವರ್ಣ ವಾಹಿನಿ.

ಪ್ರಸಾರ ಸಮಯ ಬದಲಾಯಿಸಿ

ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ರಾತ್ರಿ ೧೦ ಗಂಟೆಗೆ , ೩೦ ನಿಮಿಷಗಳ ಕಂತು.

ತಂಡ ಬದಲಾಯಿಸಿ

  • ""ತಾರಗಣ""

ಶ್ರೀನಿವಾಸ ಮೂರ್ತಿ, ಪವಿತ್ರಾ ಲೋಕೇಶ್, ಶಿವರಾಂ, ಲೋಕೇಶ್ ,ಶಂಕರ್ ಭಟ್, ಮಾಸ್ಟರ್ ಸೌರಭ್, ಪರೀಕ್ಷೀತ್, ಲಕ್ಷ್ಮಿ ಹೆಗಡೆ,ಪ್ರಶಾಂತ್ ಇನ್ನೂ ಮುಂತಾದವರು.

ತಾಂತ್ರಿಕ ತಂಡ ಬದಲಾಯಿಸಿ

ಕಿರುತೆರೆ ಕಂತುಗಳು ಬದಲಾಯಿಸಿ

೨೦೦ ಎಪಿಸೋಡ್

ಹಾಡುಗಳು ಬದಲಾಯಿಸಿ

ಈ ಧಾರಾವಾಹಿಗಾಗಿ ಸುಮಾರು ೪೫ಕ್ಕೂ ಹೆಚ್ಚು ದಾಸರ ಪದಗಳನ್ನು ಆಯ್ಕೆ .

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕಾಲಘಟ್ಟವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ನಿಟ್ಟಿನಲ್ಲಿ, ೧೪-೧೫ ನೇ ಶತಮಾನದ ಅರಮನೆ, ಮಠ ಇತ್ಯಾದಿಗಳ ಸೆಟ್‌ಗಳನ್ನು ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ .

"ಶ್ರೀ ರಾಘವೇಂದ್ರ ವೈಭವ' ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಬಾಲ್ಯಾವಸ್ಥೆಯ ಪಾತ್ರದಲ್ಲಿ ಚಿರಾಗ್ ರಾಘವೇಂದ್ರ, 12ರ ಹರೆಯದ ಬಾಲಕ ಅಭಿನಯಿಸಿದ್ದಾರೆ. "