ಬ ಲ ಸುರೇಶ
ಬ ಲ ಸುರೇಶ is permanently protected from editing since it is a page which has no reason to be changed. Substantial changes should be proposed here, if the proposal is uncontroversial or has been discussed and is supported by consensus. Use {{edit protected}} if an administrator is needed to make the requested edit. |
ಡಾ. ಬಂದಗದ್ದೆ ಲಕ್ಷ್ಮಿನಾರಾಯಣ ಸುರೇಶ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೋಕು ದಿಗಟೇಕೊಪ್ಪ-ಬಂದಗದ್ದೆ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಭಟ್ಟ ಮತ್ತು ಶ್ರೀಮತಿ ಪದ್ಮಾವತಮ್ಮ ಇವರ ಮಗನಾಗಿ ದಿನಾಂಕ 02-12-1959ರಲ್ಲಿ ಜನಿಸಿದ ಶ್ರೀ ಬ.ಲ.ಸುರೇಶ, ಕನ್ನಡ ಸಾಹಿತ್ಯರಂಗ, ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ದುಡಿದವರು.
ಬ ಲ ಸುರೇಶ | |
---|---|
ಜನನ | ಬಂದಗದ್ದೆ, ಸಾಗರ ತಾಲ್ಲೂಕುು, ಶಿವಮೊಗ್ಗ ಜಿಲ್ಲೆ | ೨ ಡಿಸೆಂಬರ್ ೧೯೫೯
ವೃತ್ತಿ | ಪ್ರಾಧ್ಯಾಪಕರು, ಕನ್ನಡ ಸಾಹಿತಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕವಿತೆ, ಕತೆ, ಕಾದಂಬರಿ, ಪ್ರಬಂಧ, ಸಾಹಿತ್ಯವಿಮರ್ಶೆ, ನಾಟಕ |
ದೇಶ ಸೇವೆಯ ಅಪಾರವಾದ ಹಂಬಲ ಹೊತ್ತ ಇವರು ಕೆಲ ಕಾಲ ಸೈನ್ಯದಲ್ಲೂ ಕೆಲಸ ಮಾಡಿದ್ದು ಅನಾರೋಗ್ಯದ ಕಾರಣ ಅನಿವಾರ್ಯವಾಗಿ ವೈದ್ಯಕೀಯ ನಿವೃತ್ತಿಹೊಂದಿ ಮುಂದೆ ಕನರ್ಾಟಕ ಜಲಮಂಡಳಿಯಲ್ಲಿ 21 ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ತೆಗೆದುಕೊಂಡರು. 2007-08 ರಲ್ಲಿ ಝಿ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದರು. ಬಾಲ್ಯದಿಂದಲೂ ಬರವಣಿಗೆ, ನಾಟಕ, ಯಕ್ಷಗಾನ, ಚಲನಚಿತ್ರಗಳತ್ತ ಆಕಷರ್ಿತರಾದ ಇವರು ಜೀವನಕ್ಕಾಗಿ ಉದ್ಯೋಗ ಮಾಡುತ್ತಾ ಮನಸ್ಸಿನ ಸಂತಸಕ್ಕಾಗಿ ಕಥೆ, ನಾಟಕ, ಕವನ, ಕಾದಂಬರಿ ಬರೆಯುತ್ತಾ, ವೃತ್ತಿ ಆರಂಭದಲ್ಲಿ ಊರೂರು ತಿರುಗಿ ಅಂತಿಮವಾಗಿ ಬೆಂಗಳೂರಿನಲ್ಲಿ ನೆಲೆಯೂರಿದರು.
ಹೀಗೆ ಶುರುವಾದ ಇವರ ಸಾಹಿತ್ಯ ಸೇವೆಗೆ ಗಟ್ಟಿ ಮಜಲು ಸಿಕ್ಕಿದ್ದು ದೃಶ್ಯ ಮಾಧ್ಯಮದಿಂದ. ಚಿತ್ರನಟ ಅನಿಲ್ಕುಮಾರ್ ರವರ ಸಹಾಯದಿಂದ 1986 ರಲ್ಲಿ ಸಾಕ್ಷಚಿತ್ರ ಹಾಗೂ ಕಿರುಚಿತ್ರಕ್ಕೆ ಸಾಹಿತ್ಯ ಒದಗಿಸುವ ಮೂಲಕ ಕಿರುತೆರೆ ಪ್ರವೇಶಿಸಿದರು. ಖ್ಯಾತ ನಿದರ್ೆಶಕರಾದ ಶ್ರೀ ಕೆ.ವಿ. ಜಯರಾಮ್ ರವರ ಮೇಘಮಂದಾರ ಚಿತ್ರಕ್ಕೆ ಸಂಭಾಷಣೆ ರಚಿಸುವ ಮೂಲಕ ಚಲನಚಿತ್ರರಂಗ ಪ್ರವೇಶಿಸಿದರು.
ನಿರಂತರ ಕಿರುಚಿತ್ರ, ವಾರದ ಧಾರಾವಾಹಿ, ಚಲನಚಿತ್ರ ಬರವಣಿಗೆಯ ನಂತರ 1998ರಲ್ಲಿ ಪ್ರಸಾರವಾದ ಮನೆತನ ಧಾರಾವಾಹಿಗೆ ಚಿತ್ರಕಥೆ-ಸಂಭಾಷಣೆ ಬರೆಯುವ ಮೂಲಕ ಮೆಗಾ ಧಾರಾವಾಹಿ ಪರ್ವ ಆರಂಭಿಸಿದರು. ತಮ್ಮ 60ನೇ ವಯಸ್ಸಿನಲ್ಲಿ ವಿಶ್ವಧರ್ಮ ಮತ್ತು ವಿಶ್ವಶಾಂತಿಗೆ ಶಿರಡಿ ಸಾಯಿಬಾಬಾರ ಕೊಡುಗೆ, ಕ್ರಮಿಸಿದ ಮಾರ್ಗ, ಜೀವನ ದರ್ಶನ, ಸಾಧನ ಎಂಬ ವಿಷಯದ ಮೇಲೆ ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಯವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿ ಪಿಹೆಚ್.ಡಿ ಪದವಿಗೆ ಭಾಜನರಾದರು.
ಕೃತಿಗಳು
ಬದಲಾಯಿಸಿಕಾದಂಬರಿ
ಬದಲಾಯಿಸಿ- ಮರಳು ದಿಬ್ಬದ ಮೇಲೆ
- ಬರುತ್ತಿದ್ದಾನೆ ಯುಗಪುರುಷ
- ಶುಭೋದಯ
- ವಿದ್ರೂಪ ಕಾಮನೆ
- ಪ್ರಕ್ಷುಬ್ದ
- ಆಯತನ
ನಾಟಕ
ಬದಲಾಯಿಸಿ- ಒಡೇರಗುಡ್ಡ
- ಕಗ್ಗಳ್ಳಿಲೊಂದಿನ
- ಒಂದು ವರ್ಗದವರು
- ಉದ್ಯೋಗ
- ಪದ್ದಿಯ ಪರಿಣಯ ಪ್ರಸಂಗ
- ಬಲಿ
- ಬದುಕ ಬಲ್ಲವರು
- ಯುದ್ಧ, ಛದ್ಮ
- ಪಾಂಡವರ ಅಗ್ನಿಪ್ರವೇಶ
- ಸಂಶೋಧಕರು
- ಹಗಲುಗನಸು
- ಕಾಲಕಣ್ರೋ ಕಾಲು
- ಸಂಶೋಧಕರು
- ಸಕಣ್ವ ಪುತ್ರಿು
- ಕಾದ್ಗೆ ಪಂಚಾತ್ಗೆ
- ಬಂಧಮುಕ್ತೆ
- ಕಾದ್ಗೆ ಪಂಚಾತ್ಗೆ
- ಲಿಂಗೋದ್ಭವ
- ಗಂಗಾವತರಣ
- ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ
ಕವನ ಸಂಕಲನ
ಬದಲಾಯಿಸಿ- ಕವನಗುಚ್ಛ
- ನೀ ಹ್ಯಾಂಗ್ ಬಾಳ್ತಿ
- ಬರ
- ಅರ್ಧಸತ್ಯ
- ಜನಜಾಗ್ರತಿ
ಕಥಾ ಸಂಕಲನ
ಬದಲಾಯಿಸಿ- ಸಂಬಂಧಗಳು
ಪವಿತ್ರ ಪಾರಾಯಣ ಗ್ರಂಥ
ಬದಲಾಯಿಸಿಇತರೆ
ಬದಲಾಯಿಸಿ- ಸಮಗ್ರ ಸಾಹಿತ್ಯ:ಬಲಸು ಬರಹ ಬುತ್ತಿ
- ಸಮಗ್ರ ನಾಟಕ:ಯುದ್ಧ ಛದ್ಮತಿ
- ಸಮಗ್ರ ಕಾವ್ಯ:ಅಸಂಗತ ಪ್ರಶ್ನೆ
- ಸಮಗ್ರ ಕಾದಂಬರಿ:ಪ್ರಕ್ಷುಬ್ದ ಮತ್ತು ಇತರ ಕಾದಂಬರಿಗಳು
- ಸಮಗ್ರ ಕಥಾ ಸಂಕಲನ:ಪರಿಹಾರ ಮತ್ತು ಇತರ ಕಥೆಗಳು
- ಅಪ್ರಕಟಿತ ಹಸ್ತ ಪ್ರತಿಗಳು:ಕರ್ತವ್ಯ, ಬಾಡಿಗೆಮನೆ, ಕಾರುಬಂತ, ಕಾಲ, ಯಾರು?, ಗಂಡಸ್ರೇನ್ ಗುಲಾಮ್ರಾ?, ಇನ್ನಿತರ 12 ನಾಟಕಗಳು
ಪ್ರಶಸ್ತಿ ಮತ್ತು ಪುರಸ್ಕಾರಗಳು
ಬದಲಾಯಿಸಿ- ಹಂಸಪುರಸ್ಕಾರ ಪ್ರಶಸ್ತಿ
- ಅರುಣೋದಯ ಪ್ರಶಸ್ತಿ
- ಆರ್ಯಭಟ ಪ್ರಶಸ್ತ್ತಿ (ಎರಡು ಬಾರಿ)
- ಆರ್.ಎನ್.ಜಯಗೋಪಾಲ್ರಾಪ್ಟ್ರೀಯ ಸದ್ಭಾವನಾ ಪ್ರಶಸ್ತಿ
- ಸಾಹಿತ್ಯ ಸಂಜೀವಿನಿ ಪ್ರಶಸ್ತಿ
- ಶ್ರೀ ಗುರುರಾಘವೇಂದ್ರ ಸದ್ಭಾವನಾ ಪ್ರಶಸ್ತಿ (ಎರಡು ಬಾರಿ)
- ಕನ್ನಡ ರತ್ನ ರಾಜ್ಯಪ್ರಶಸ್ತಿ
- ಶ್ರೀ ಪರಮೇಶ್ವರ ಪುಲಿಕೇಶಿ ಪ್ರಶಸ್ತಿ
- ಶ್ರೀ ಗುರುಸಾರ್ವಭೌಮ ರಾಘವೇಂದ್ರ ಕಲಾ ರತ್ನ ಪ್ರಶಸ್ತಿ
- ಅಂಕ ಗೌರವ ಸಾವಿರದ ಲೇಖಕ(ಕೆಟಿವಿ)