ಗುರುರಾಜ ಕರಜಗಿ
ಶಿಕ್ಷಣ ತಜ್ಞ ಹಾಗೂ ಅಂಕಣಕಾರರು
ಡಾ.ಗುರುರಾಜ ಕರ್ಜಗಿಯವರು,[೧], [೨] ಶಿಕ್ಷಣ ತಜ್ಞರು. ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ . ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದ ಇವರು ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ ಶೀಲತೆ,ಸಂವಹನಕಲೆ, ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ.ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಬರಹಕ್ಕೆ ಮತ್ತು ಉಪನ್ಯಾಸಗಳಿಗೆ ಭಾರತ ಮತ್ತು ವಿದೇಶಗಳಲ್ಲೂ ಹೆಚ್ಛು ಪರಿಚಿತರು. ಎಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದವರು, ಅಂಕಣಕಾರರು.
ಜನನ
ಬದಲಾಯಿಸಿಗುರುರಾಜರು ಜನಿಸಿದ್ದು ೨೪.೦೫.೧೯೫೨ ರಲ್ಲಿ.
ಹುದ್ದೆಗಳು
ಬದಲಾಯಿಸಿ- ವಿ.ವಿ.ಎಸ್.ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೧೬ ವರ್ಷಗಳ ಕಾಲ ಪ್ರಾಂಶುಪಾಲರಾಗಿ,
- ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯ ಸ್ಥಾಪಕ ಪ್ರಾಂಶುಪಾಲರಾಗಿ ಹಾಗು ನಿರ್ದೇಶಕರಾಗಿ,
- ಅಂತರರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
- ಇವರು ಈಗ ಸೃಜನಶೀಲ ಅಧ್ಯಾಪನ ಕೇಂದ್ರದ (ACT) ಅಧ್ಯಕ್ಷರಾಗಿದ್ದಾರೆ.
- ಇವರು ಬರೆದ 'ಕರುಣಾಳು ಬಾ ಬೆಳಕೆ' ಲೇಖನ ಮಾಲೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.