ಗುರಜಡ ಅಪ್ಪರಾವ್
ಗುರಜಡ ಅಪ್ಪರಾವ್ (೧೮೬೨-೧೯೧೫) (తెలుగు:గురజాడ అప్పారావు) ಭಾರತದ ಆಂಧ್ರಪ್ರದೇಶದ ಬರಹಗಾರ. ಕನ್ಯಸುಲ್ಕಂ ಎಂಬ ತೆಲುಗು ನಾಟಕವನ್ನು ಬರೆದಿದ್ದಾರೆ.ಈ ನಾಟಕವನ್ನು ತೆಲುಗು ಭಾಷೆಯಲ್ಲೇ ಅಧ್ಬುತ ನಾಟಕ ಎಂದು ಪರಿಗಣಿಸಲಾಗಿದೆ. ಗುರಜಡ ಅಪ್ಪಾರಾವ್ ಅವರು ಪ್ರಭಾವಿತ ಸಮಾಜ ಸುಧಾರಕರಾಗಿದ್ದರು. ಇವರನ್ನು "ಮಹಾಕವಿ" ಎಂದೂ ಕರೆಯುತ್ತಾರೆ, ಇದರಥ೯ "ಅದ್ಭುತ ಕವಿ". ಕವಿತೆ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ ತೆಲುಗು ಭಾಷೆಯ ಹೊಸ ಶೈಲಿ ಕವಿತೆಗಳನ್ನು ರಚಿಸಿರುವರು. ಇವರು ಕವಿಶೇಕರ ಮತ್ತು ಅಭ್ಯುದಯ ಕವಿತಾ ಪಿತಾಮಹುಡು(ಅಭ್ಯುದಯ ಕವಿತ ಪಿತಾಮಹ) ಎಂಬ ಬಿರುದುಗಳನ್ನು ಗಳಿಸಿದ್ದಾರೆ.[೧]
ಗುರಜಡ ಅಪ್ಪರಾವ್ | |
---|---|
ವೃತ್ತಿ | ಬರಹಗಾರ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ನಾಟಕಗಳು |
ಪ್ರಮುಖ ಕೆಲಸ(ಗಳು) | ಕನ್ಯಸುಲ್ಕಂ |
ಪ್ರಾರಂಬಿಕ ಜೀವನ ಮತ್ತು ವಿಧ್ಯಾಭ್ಯಾಸ
ಬದಲಾಯಿಸಿದಾಖಲೆಗಳನ್ನು ಗಮನಿಸಿದರೆ ಇವರ ಜನ್ಮ ದಿನಾಂಕ (ವಿದೇಶಿ ಕ್ಯಾಲೆಂಡರ್‌ನ ಪ್ರಕಾರ) ನವೆಂಬರ್ ೩೦,೧೮೬೧ ಹಾಗು ಗುರಜಡರ ಜಾತಕದ ಪ್ರಕಾರ ಇವರ ಜನ್ಮ ದಿನಾಂಕ ಸೆಪ್ಟೆಂಬರ್ ೨೧, ೧೮೬೨. ಆದರೆ ಕುಟುಂಬದವರು ಜಾತಕದ ಪ್ರಕಾರ ಜನ್ಮ ದಿನಾಂಕಕ್ಕೆ ಆದ್ಯತೆ ನೀಡಿದ್ದಾರೆ. ಗುರಜಡರವರು ಚಿಕ್ಕಪ್ಪನ ಮನೆಯಾದ ವಿಶಾಖಪಟ್ನಂ ಜಿಲ್ಲೆಯ ಯೆಲಮ೦ಚಿಲ್ಲಿ ಹತ್ತಿರದ ರಾಯವರ೦ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ವೆಂಕಟರಾಮದಾಸ ಹಾಗು ತಾಯಿ ಕೌಸಲ್ಯಮ್ಮ. ಇವರು ನಿಯೋಗಿ ಬ್ರಾಹ್ಮಣ ಕುಟುಂಬದವರು. ಇವರಿಗೆ ಶ್ಯಾಮಲರಾವ್ ಎಂಬ ತಮ್ಮ ಇದ್ದರು. ಗುರಜಡರವರ ಪೂರ್ವಜರು, ಕೃಷ್ಣ ಜಿಲ್ಲೆಯ ಗುರಜಡ ಗ್ರಾಮದಿಂದ ಕಳಿಂಗ ಪ್ರಾಂತ್ಯಕ್ಕೆ ವಲಸೆ ಹೋಗಿದ್ದರು. ವೆಂಕಟರಾಮದಾಸುರವರು ಪೆಶ್ಕರ್‌ನಲ್ಲಿ ಕಂದಾಯ ಮೇಲ್ವಿಚ್ಛಾರಕರಾಗಿ ಹಾಗು ವಿಜಯನಗರ ಸಂಸ್ಥಾನದಲ್ಲಿ ಕಿಲೇದಾರರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಒಳ್ಳೆ ವಿಧ್ಯಾವಂತ ಹಾಗು ಸಂಸ್ಕೃತದಲ್ಲಿ ಪರಿಣಿತಿಯನ್ನು ಹೊಂದಿದ್ದರು. ವಿಜಯನಗರ ಬಳಿಯ 'ಉಟಗೆದ್ದ' ಎಂಬಲ್ಲಿ ಒಂದು ಸಣ್ಣ ನದಿಯನ್ನು ದಾಟುವ ವೇಳೆ ದುರಾದೃಷ್ಟವಶಾತ್ ಇವರು ನಿಧನರಾದರು.
ಜೀವನದ ಹೆಚ್ಚಿನ ದಿನಗಳನ್ನು ಇವರು ವಿಜಯನಗರ ಎಂದು ಕರೆಯಲ್ಪಟ್ಟ ಕಳಿಂಗ ರಾಜ್ಯದಲ್ಲೇ ಕಳೆದರು. ಮೊದಲು ಇವರು ಮತ್ತು ಇವರ ತಂದೆಯವರು ವಿಜಯನಗರದ ಆಳ್ವಿಕೆಯಲ್ಲಿದ್ದ ರಾಜ್ಯಗಳಲ್ಲಿ ಕೆಲಸ ಮಾಡುತಿದ್ದರು. ಇವರು ತನ್ನ ಮಧ್ಯವಯಸ್ಸಿನಲ್ಲಿ ಆಳ್ವಿಕೆಯ ಕುಟುಂಬದವರೊಂದಿಗೆ ಆತ್ಮೀಯತೆಯನ್ನು ಹೊಂದಿದ್ದರು.
ಅಪ್ಪರಾವ್ ತಂದೆ ಕೆಲಸ ಮಾಡುವ ತನಕ, ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು (೧೦ನೇ ವಯಸ್ಸಿನವರೆಗೆ) ಚೀಪುರಪಲ್ಲಿಯಲ್ಲೇ ಮುಗಿಸಿದರು. ತಂದೆಯ ಮರಣದ ನಂತರ, ವಿಧ್ಯಾಭ್ಯಾಸವನ್ನು ವಿಜಯನಗರದಲ್ಲಿ ಮುಗಿಸಿದರು. ಈ ಸಮಯದಲ್ಲಿ ಗುರಜಡರವರು ತೀರ ಬಡತನದಲ್ಲಿದ್ದರು. ಎಮ್.ಆರ್ ಕಾಲೇಜಿನ ಪ್ರಾಂಶುಪಾಲರಾದ ಸಿ.ಚಂದ್ರಶೇಖರಶಾಸ್ತ್ರಿಯವರು ಊಟ ಮತ್ತು ವಸತಿಯನ್ನು ಒದಗಿಸಿದರು. ನಂತರ ೧೦ ನೇ ತರಗತಿಯನ್ನು ೧೮೮೨ ರಲ್ಲಿ ಮುಗಿಸಿ, ೧೮೮೪ ರಲ್ಲಿ ಎಫ಼್.ಎ. ಪದವಿಯನ್ನು ಗಳಿಸಿದರು. ನಂತರ ೧೮೮೪ ರಲ್ಲಿ ಎಮ್.ಆರ್ ಫ್ರೌಢಶಾಲೆಯಲ್ಲಿ ಕೇವಲ ೨೫ ರೂಗಳ ಸಂಬಳಕ್ಕೆ ಶಿಕ್ಷಕರಾಗಿ ನೇಮಕಗೊಂಡರು.
ಹಿನ್ನೆಲೆ
ಬದಲಾಯಿಸಿ೧೮೮೭ರಲ್ಲಿ ವಿಜಯನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಷಣ ಮಾಡಿದರು. ಇಷ್ಟೇ ಅಲ್ಲದೆ ಅವರು ಸಾಮಾಜಿಕ ಸೇವೆಗಳಲ್ಲಿ ತೊಡಗಿದ್ದರು. ಇದರಿಂದಾಗಿ ೧೮೮೮ರಲ್ಲಿ ವಿಶಾಖಪಟ್ನಂದಲ್ಲಿ ವಾಲೆಂಟರೀ ಸರ್ವೀಸ್ ಕಾರ್ಪ್ಸ್ನಲ್ಲಿ ಸದಸ್ಯತ್ವವನ್ನು ಪಡೆದರು.ಅವರ ಮಗಳು ಒಲೆಟ್ಟಿ ಲಕ್ಷ್ಮೀ ಸರಸಮ್ಮ ೧೮೮೭ ರಲ್ಲಿ ಜನಿಸಿದರು. ಅವನ ಮಗ ವೆಂಕಟ ರಾಮದಾಸ ೧೮೯೦ರಲ್ಲಿ ಜನಿಸಿದನು. ೧೮೮೯ ರಲ್ಲಿ ಆನಂದ ಗಜಪತಿ ಚರ್ಚಾಸ್ಪರ್ಧೆಯ ಉಪಾಧ್ಯಕ್ಷಾರಾಗಿ ನೇಮಕಗೊಂಡರು. ೧೮೯೧ರಲ್ಲಿ ಇವರು ಪ್ರಾಧ್ಯಾಪಕರಾಗಿ ಆಯ್ಕೆಯಾದರು(೩ನೇ ಹಂತ). ಇವರ ಸಂಬಳ ಕೇವಲ ೧೨೫ರೂಗಳು. ಮದ್ರಾಸ್ ಲಾ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಇವರ ತಮ್ಮ ಶ್ಯಾಮಲರಾವ್ ೧೮೯೨ರಲ್ಲಿ ನಿಧನರಾದರು.
ಇದರ ಹಿಂದೆ ಸುಮಾರು ಹತ್ತು ವರ್ಷಗಳಿಂದ ಗುರಜಡ ಅಪ್ಪಾರಾವ್ (ಹಾಗು ಶ್ಯಾಮಲ ಅಪ್ಪಾರಾವ್) ಅವರು ಆಂಗ್ಲ ಪದ್ಯಗಳನ್ನು ರಚಿಸುತ್ತಿದ್ದರು. ಇವರ "ಸುರಂಗಧಾರ"ಎಂಬುದು "ಇಂಡಿಯನ್ ಲೀಸರ್ ಹವರ್"ನಲ್ಲಿ ಪ್ರಕಟಗೊಂಡಿತ್ತು. ಕೊಲ್ಕತ್ತಾದ ಎಡಿಟರ್ ಆದ ರೀಸ್ ಮತ್ತು ರೋಟ್‌ನ ಶಂಭು ಚಂದ್ರ ಮುಖರ್ಜಿರವರು ಇದನ್ನು ಓದಿ ಮತ್ತೆ ಮ್ಯಾಗಜಿನ್‌ನಲ್ಲಿ ಮರು-ಪ್ರಕಟಣ ಮಾಡಿದರು. ಇವರು ಗುರಜಡರವರಿಗೆ ಅನೇಕ ರೀತಿಯಲ್ಲಿ ಪ್ರೋತ್ಸಾಹ ಮಾಡಿದರು. ಇವರು ಗುರುಜಡರ ಪ್ರತಿಭೆಯನ್ನು ಪ್ರಶಂಸಿಸುತ್ತ, ಅವರನ್ನು ತೆಲುಗಿನಲ್ಲಿ ಬರೆಯಲು ಉತೇಜಿಸಿದರು. ಮುಖರ್ಜಿಯವರು ಗುರಜಡರವರಿಗೆ; ಆಂಗ್ಲ ಭಾಷೆಯಲ್ಲಿ ಎಷ್ಟೇ ನಿಪುಣನಾಗುವರೋ, ಅದು ಕೇವಲ ಒಂದು ವಿದೇಶಿ ಭಾಷೆ.ತೆಲುಗಿನಲ್ಲಿ ರಚಿಸಿದರೆ ಎಚ್ಚಿನ ಎತ್ತರಕ್ಕೆ ಏರುದು ಎಂದು ಪ್ರೇರೇಪಿಸಿದರು. ಗುರಜಡರವರು ಕ್ರಮೇಣವಾಗಿ ಇದೇ ತೀರ್ಮಾನಕ್ಕೆ ಬರುತ್ತಿದ್ದರು. ಇದೇ ಸಮಯದಲ್ಲಿ ಗುರಜಡರವರು ಬ್ರಿಟಿಷ್ ಪತ್ರಿಕೋದ್ಯಮಿ ಹಾಗು ಕವಿ, ಇವರ ಜೊತೆ ಸಂಪರ್ಕದಲ್ಲಿದ್ದರು. ಹಾಗು ಇದೇ ಸಮಯದಲ್ಲಿ ಇಂಡಿಯನ್ ಲೀಸರ್ ಹವರ್‌ನ ಸಂಪಾದಕರಾದ "ಗುಂಡುಕೃತಿ ವೆಂಕಟರಾಮಯ್ಯ"ನವರು ಸಹ ಗುರಜಡರವರಿಗೆ ಪ್ರೋತ್ಸಾಹ ನೀಡಿದರು. ೧೮೯೧ರಲ್ಲಿ ಗುರಜಡರವರು ವಿಜಯನಗರದ ಆಸ್ಥಾನದ ಮಹಾರಾಜರ ಬಳಿ ಎಫಿಗ್ರಾಫಿಸ್ಟ್ ಆಗಿ ನೇಮಕಗೊಂಡರು.
ಸಾಹಿತ್ಯಲೋಕದಲ್ಲಿ ಸಾಧನೆ
ಬದಲಾಯಿಸಿ೧೮೯೨ರಲ್ಲಿ ಇವರ ಕನ್ಯಾಸುಲ್ಕಂ ಎಂಬ ನಾಟಕವು ಮೊಟ್ಟಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು.ಇದು ಬಹಳ ಬೇಗ ಜನಪ್ರಿಯವಾಯಿತು. ಇದೊಂದು ಸ್ಪಷ್ಟವಾಗಿ ಮಾತನಾಡುವ ಆಡುಭಾಷೆಯಲ್ಲಿ ಬರೆಯಲ್ಪಟ್ಟ ಮೊದಲ ನಾಟಕವಾಗಿತ್ತು. ಅದಕ್ಕೂ ಮುಂಚೆ, ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಆಡುಭಾಷೆಯನ್ನು ಬಳಸಿಕೊಂಡಿದ್ದ ನಾಟಕಗಳು ಇದ್ದವು. ಕನ್ಯಾಸುಲ್ಕಂ ಯಶಸ್ಸಿನ ನಂತರ, ಇದೇ ರೀತಿಯ ಅಭಿಪ್ರಾಯವುಳವರನ್ನು ಹೊರತರಲು ಇವರನ್ನು ಪ್ರೇರೇಪಿಸಿತು. ಗುರಜಡರವರು ಇವರರೆಲ್ಲರ ಸಮಕಾಲಿನರಾಗಿ ಇವರ೦ತೆ ಬೆಳೆದು ಬಂದವರ ಜೊತೆ ಸಂಪರ್ಕ ಬೆಳೆಸಿಕೊಂಡರು. ಇವರ 'ಚಿರುಪಲ್ಲಿಯ' ಬಾಲ್ಯದ ಸ್ನೇಹಿತ ಹಾಗು ಸಹಪಾಠಿಯಾದ ಗಿಡುಗು ರಾಮೂರ್ತಿ(೧೮೬೩-೧೯೪೦) ಯವರು ಇವರನ್ನು ಬೆಳಕಿನ ಹಾದಿಯಲ್ಲಿ ಕರೆದೊಯ್ದರು. ಈ ನಾಟಕದ ಅಂದರೆ ಕನ್ಯಾಸುಲ್ಕಂನ ಸಾಧನೆ ಇವರ ಮುಂದಿನ ಕಾರ್ಯಕೆ ಹುರಿದುಂಬಿಸಿತು. ಈ ಸಾಧನೆ ಗುರಜಡರವರನ್ನು ಪ್ರಖ್ಯಾತವ್ಯಕ್ತಿಯನ್ನಾಗಿಸಿತು. ೧೯೧೦ ರಲ್ಲಿ ಇವರು ದೇಶಮುನು ಪ್ರೇಮಿಂಚಮನ್ನ ಎಂಬ ದೇಶಭಕ್ತಿ ಗೀತೆಯನ್ನು ರಚಿಸಿದರು.
ಪ್ರಸಿದ್ದ-ಪುಸ್ತಕಗಳು
ಬದಲಾಯಿಸಿ೧೮೯೬ ರಲ್ಲಿ ಗುರಜಡರವರು ಪ್ರಕಾಶಿಕ ಎಂಬ ಪುಸ್ತಕವನ್ನು ಪ್ರಕಟಿಸಲು ಪ್ರಯತ್ನಿಸಿದರು. ೧೮೯೭ ರಲ್ಲಿ "ಕನ್ಯಾಸುಲ್ಕಂ" ಅನ್ನು ಪ್ರಕಟಿಸಿದರು.
ಮದ್ರಾಸಿನ ಕಾಂಗ್ರೆಸ್ ಸಮಾವೇಶ(೧೯೦೮)
ಬದಲಾಯಿಸಿ- ೧೯೦೮ ರಲ್ಲಿ ಮದ್ರಾಸಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದರು. ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದರಿಂದ ನೀಲಗಿರಿ ಬೆಟ್ಟದ ಬಳಿ ವಿಶ್ರಾಂತಿಗೆಂದು ತೆರಳಿದರು. ಆ ಸಮಯದಲ್ಲಿ "ಕನ್ಯಾಸುಲ್ಕಂ"ಗೆ ಹೆಚ್ಚಿನ ಅಂಶಗಳನ್ನು ಸೇರಿಸಿ ಮರು-ಪ್ರಕಟಿಸಿ ಹೆಚ್ಚಿನ ಯಶಸ್ಸನ್ನು ಕಂಡರು. ನಂತರ ಅಲ್ಲಿನ ಗೆಳೆಯರೊಂದಿಗೆ ಕಾಲ ಕಳೆಯುವ ಸಂಧರ್ಭದಲ್ಲಿ ಹೆಚ್ಚಿನ ಪದ್ಯ ಹಾಗೂ ಸಣ್ಣ ಕಥೆಗಳನ್ನು ರಚಿಸಿದರು. ಈ ಮೂಲಕ ಇವರು ಒಬ್ಬ ಶ್ರೇಷ್ಠ ಸಾಹಿತ್ಯಗಾರ ಎನ್ನಿಸಿಕೊಂಡರು.
- ೧೯೧೩ರಲ್ಲಿ ಇವರು ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಪಡೆದರು.
ಸಾಹಿತ್ಯ ಕೃತಿಗಳು
ಬದಲಾಯಿಸಿ- ದ ಕುಕ್-೧೮೮೨
- ಸುರಂಗದಾರ - ೧೮೮೩
- ಚಂದ್ರಹಾಸ
- ವಿಕ್ಟೋರಿಯಾ ಪ್ರಶಸ್ತಿ - ೧೮೯೦
- ನೀಲಗಿರಿ ಪಾಟಲು - ೧೯೦೭
ನಾಟಕಗಳು
ಬದಲಾಯಿಸಿ- ಕನ್ಯಸುಲ್ಕಂ - ೧೮೯೨
- ಹರಿಶ್ಚಂದ್ರ - ೧೮೯೭
- ಕೊಂಡುಭಟ್ಟೀಯಂ - ೧೯೦೬
ಕನ್ಯಾಶುಲ್ಕಂ ನಾಟಕದ ಬಗೆಗಿನ ಕೆಲವು ವಿಚಾರಗಳು
ಬದಲಾಯಿಸಿಈ ನಾಟಕವು ೧೯೮೨ ರಲ್ಲಿ ಗುರಜಡರವರಿಂದ ರಚಿಸಲ್ಪಟ್ಟಿತು. ಈ ನಾಟಕವು ಆಧುನಿಕ ಯುಗದಲ್ಲೆ ಅತೀ ಜನಪ್ರಿಯತೆಯನ್ನ ಪಡೆಯಿತು ಮತ್ತು ಮೊದಲ ಬಾರಿಗೆ ತೆಲುಗಿನಲ್ಲಿ ತೆರೆಗೆ ಬಂದಿತು. ದಕ್ಷಿಣ ಭಾರತದಲ್ಲಿ ತೆಲುಗು ಬ್ರಾಹ್ಮಣರು ಆಚರಿಸುತ್ತಿದ್ದ "ಕನ್ಯಾಶುಲ್ಕಂ" ಬಗ್ಗೆ ತಿಳಿಸಿ ಹೇಳುತ್ತದೆ. ಈ ನಾಟಕದಲ್ಲಿ ಬಳಸಿರುವ ಭಾಷೆ ಎಂದೆಂದಿಗೂ ಮರೆಯದಂತಿದೆ. ನಂತರದ ದಿನಗಳಲ್ಲಿ ಈ ನಾಟಕವು ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿತು. ೧೯೫೫ ರಲ್ಲಿ ಪಿ.ಪುಳ್ಳಯ್ಯರವರ ನಿರ್ದೇಶನದಲ್ಲಿ ಹಾಗು ಎನ್.ಟಿ.ರಾಮರವ್, ಸಾವಿತ್ರಿ,ಸಿ.ಎಸ್.ಆರ್. ಆಂಜನೇಯುಲು, ವೆಂಕಟೇಶ್ವರ ರಾವ್, ಸೂರ್ಯಕಾಂತಂ, ಛಾಯಾದೇವಿ ಮತ್ತು ಹೇಮಲತರವರ ಪಾತ್ರದಲ್ಲಿ 'ಕನ್ಯಸುಲ್ಕಂ'ಎಂಬ ಸಿನಿಮಾ ತೆರೆಗೆ ಬಂದಿತ್ತು.[೨]
ಪರಂಪರೆ
ಬದಲಾಯಿಸಿಗುರಜಡರವರು ಆಂದ್ರಪ್ರದೇಶದಲ್ಲಿ ಗುರಜಡ ಎಂದೇ ಪ್ರಸಿದ್ಧರು. ತೆಲುಗು ಕವಿಗಳಲ್ಲೆ ಅತ್ಯಂತ ಪ್ರಸಿದ್ಧರು. ವಿಜಯನಗರದಲ್ಲಿ ಇವರ ಹೆಸರಿನಲ್ಲಿ "ಟೌನ್ ಹಾಲ್" ನಿರ್ಮಾಣವಾಗಿದೆ. ಸುಮಾರು ಎಲ್ಲಾ ಪ್ರಸಿದ್ಧ ಬೀದಿಗಳು ಇವರ ಹೆಸರಿನಲ್ಲೆ ಆರಂಭವಾಗಿವೆ. ಇವರ ಪ್ರತಿಮೆಗಳನ್ನು ಆಂದ್ರಪ್ರದೇಶದ ಹೈದರಾಬಾದ್, ವಿಶಾಖಪಟ್ಟಣಂ, ವಿಜಯವಾಡ, ರಾಜಮಂಡ್ರಿ, ವಿಜಯನಗರ ಮತ್ತು ಸುಮಾರು ನಗರಗಳಲ್ಲಿ ಕಾಣಬಹುದು. ಇವರ ತೆಲುಗಿನ ದೇಶಭಕ್ತಿ ಗೀತೆಯಾದ " ದೇಶಮುನು ಪ್ರೇಮಿಂಚಮನ್ನ" ಎಂಬ ಗೀತೆ ಬಹಳ ಪ್ರಸಿದ್ಧಿಯನ್ನು ಗಳಿಸಿದೆ.
ಈ ಎಲ್ಲಾ ಸಾಧನೆಗಳನ್ನು ಮಾಡಿದ ಗುರಜಡ ಅಪ್ಪಾರಾವ್ ಅವರು ೧೯೧೫ ರಲ್ಲಿ ನಿಧನರಾದರು.
ಹೊರಗಿನ ಸಂಪರ್ಕಗಳು
ಬದಲಾಯಿಸಿ- "ಗುರಜಡರ ಕನ್ಯಾಸುಲ್ಕಂ". Archived from the original on 2016-01-08. Retrieved 2015-11-01.
- ಚಿಲುಮೆ
ಉಲ್ಲೇಖಗಳು
ಬದಲಾಯಿಸಿ- ↑ "ಕವಿಶೇಕರ".
- ↑ "ತೆಲುಗು ಸಾಹಿತ್ಯ". Archived from the original on 2015-11-10. Retrieved 2015-11-01.