ಗುಪ್ತನಿಧಿ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ನೆಲದಲ್ಲಿ ಅಡಗಿದ್ದು ಸಿಕ್ಕಿದ, ಮಾಲೀಕರು ಗೊತ್ತಿಲ್ಲದ ನಾಣ್ಯ, ಚಿನ್ನ, ಬೆಳ್ಳಿ ಗಟ್ಟಿ, ನಗ ಮುಂತಾದ ಪದಾರ್ಥಗಳು (ಟ್ರೆಷರ್ ಟ್ರೋವ್).
ಕಾನೂನು
ಬದಲಾಯಿಸಿಗುಪ್ತನಿಧಿ ಕಾಯಿದೆಯ ಪ್ರಕಾರ ಇದರ ಹಕ್ಕು ಸರ್ಕಾರದ್ದು. ಇದಕ್ಕೆ ಒಮ್ಮೆ ಮಾಲೀಕನಿದ್ದನಾದರೂ ಪತ್ತೆಯಾದಾಗ ಅವನು ಯಾರೆಂಬುದು ಗೊತ್ತಿರುವುದಿಲ್ಲವಾದ್ದರಿಂದ ಇದು ಸರ್ಕಾರಕ್ಕೆ ಸೇರತಕ್ಕದ್ದೇ ಹೊರತು, ಇದನ್ನು ಕಂಡವನಿಗಲ್ಲ. ಇದನ್ನು ಬಚ್ಚಿಡುವುದು ಆಪಾದಿಸ ಬಹುದಾದ ಅಪರಾಧ. ಆದರೆ ಇದನ್ನು ಬಳಸಿಕೊಳ್ಳುವ ಉದ್ದೇಶವಿದ್ದ ವಿನಾ ಇದು ಕ್ರಿಮಿನಲ್ ಅಪರಾಧವಾಗುವುದಿಲ್ಲ. ಇದನ್ನು ಪತ್ತೆ ಹಚ್ಚಿದವನು ಮತ್ತು ಈ ಬಗ್ಗೆ ತಿಳಿವಳಿಕೆ ಉಳ್ಳ ಯಾವನೂ ಸಂಬಂಧಪಟ್ಟ ಅಧಿಕಾರಿಗೆ ಈ ಬಗ್ಗೆ ವರದಿ ಮಾಡತಕ್ಕದ್ದು. ಪತ್ತೆಯಾದ್ದು ಗುಪ್ತನಿಧಿ ಹೌದೇ ಅಲ್ಲವೆ ಎಂಬುದನ್ನು ನಿರ್ಧರಿಸಲು ಆ ಅಧಿಕಾರಿ ಮಹಜರು ನಡೆಸುತ್ತಾನೆ. ಸ್ಥೂಲವಾಗಿ ಇವು ಇಂಗ್ಲೆಂಡಿನಲ್ಲೂ ಭಾರತದಲ್ಲೂ ಜಾರಿಯಲ್ಲಿರುವ ಕಾನೂನಿನ ಮುಖ್ಯಾಂಶಗಳು. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಸಾಮಾನ್ಯ ನ್ಯಾಯದ ಪ್ರಕಾರ ಗುಪ್ತನಿಧಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾಗಿದ್ದರೂ ವಾಸ್ತವವಾಗಿ ಅದನ್ನು ಕಂಡವನೆ ಇಟ್ಟುಕೊಳ್ಳಲು ಅವಕಾಶವಿದೆ. ಲುಯಿಸಿಯಾನದಲ್ಲಿ ನಿಧಿಯ ಅರ್ಧ ಅದನ್ನು ಕಂಡವನಿಗೂ ಉಳಿದರ್ಧ ನೆಲದ ಮಾಲೀಕನಿಗೂ ಹೋಗುತ್ತದೆ.