ಗುಡ್ಡೆಮನೆ ಅಪ್ಪಯ್ಯ ಗೌಡ

ಕೊಡಗಿನ ವೀರ ಪರಂಪರೆಯಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ಅಪ್ಪಯ್ಯ ಗೌಡ. ಅಮರ ಸುಳ್ಯದ ಹೋರಾಟಗಾರ.[೧]

ಮಡಿಕೇರಿಯಲ್ಲಿರುವ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ

ಹುಟ್ಟು ಬದಲಾಯಿಸಿ

ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಯ್ಯನವರ ಹಿರಿಯ ಪುತ್ರ, ಅಪ್ಪಯ್ಯ ಗೌಡ.೧೭೯೨ರಲ್ಲಿ ಜನಿಸಿದರು.[೨]

ಕುಟುಂಬ ಬದಲಾಯಿಸಿ

ಇವರಿಗೆ ಎರಡು ಜನ ಸಹೋದರರು.

ಸೇವೆ ಬದಲಾಯಿಸಿ

ಗುಡ್ಡೆಮನೆ ಅಪ್ಪಯ್ಯ ಗೌಡರು ಮೊದಲಿಗೆ ಕೊಡಗಿನ ಅರಸ ಲಿಂಗರಾಜನ ಅಳ್ವಿಕೆಯಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಅವರು ಚಿಕ್ಕವೀರ ರಾಜನ ಆಡಳಿತದ ಸಮಯದಲ್ಲಿ ಅವರಿಗೆ ಬಡ್ತಿಯನ್ನು ನೀಡಲಾಗಿತ್ತು, ಅಪ್ಪಯ್ಯ ಗೌಡರು ಸುಬೇದಾರ್ ಆಗಿ ಬಡ್ತಿ ಪಡೆದರು.

ಬ್ರಿಟಿಷರ ಆಕ್ರಮಣ ಬದಲಾಯಿಸಿ

೧೮೩೪ರ ಹೊತ್ತಿಗೆ ಬ್ರಿಟಿಷರು ಕೊಡಗನ್ನುಆಕ್ರಮಿಸಿಕೊಂಡರು. ಕೊಡಗನ್ನು ಆಳುತ್ತಿದ್ದ ಚಿಕ್ಕವೀರರಾಜನನ್ನು ಪದಚ್ಯುತಗೊಳಿಸಿ ಮಡಿಕೇರಿಯ ಕೋಟೆ ಆರಮನೆಯಲ್ಲಿ ಆತನನ್ನು ಗೃಹಬಂಧನದಲ್ಲಿ ಇಡಲಾಯಿತು. ೧೮೩೪ರಲ್ಲಿ ಬ್ರಿಟಿಷರ ಧ್ವಜ ಮಡಿಕೇರಿಯಲ್ಲಿ ಹಾರಲಾರಂಬಿಸಿತು. ನಂತರ ಚಿಕ್ಕವೀರ ರಾಜನನ್ನು ಗಡಿಪಾರು ಮಾಡಲಾಯಿತು. ಆತನನ್ನು ಕೌಶಿಕೆಗೆ ಕಳುಹಿಸಲಾಯಿತು. ಇದರಿಂದ ಸಿಟ್ಟುಗೊಂಡ ಅಪ್ಪಯ್ಯ ಗೌಡರು ಹೋರಾಟದ ಹಾದಿಯನ್ನು ಹಿಡಿದರು. ಕೊಡಗಿನ ಜನ ಆರಸನಿಗೆ ಧಾನ್ಯ ರೂಪದಲ್ಲಿ ಸಲ್ಲಿಸುತ್ತುದ್ದ ತೆರಿಗೆಯನ್ನು , ಹಣದ ರೂಪದಲ್ಲಿ ನೀಡುವಂತೆ ಆದೇಶವನ್ನು ಮಾಡಲಾಯಿತು. ಹೊಗೆಸೊಪ್ಪಿನ ಮೇಲೆ ಕರವಿದಿಸಲಾಯಿತು. ಅದನ್ನು ಬೆಳೆಯಲು ಅನುಮತಿ ಪಡೆಯುವುದು ಕಡ್ಡಾಯಗೊಳಿಸಿದರು. ಈ ವಿಚಾರವನ್ನು ಅಪ್ಪಯ್ಯ ಗೌಡರು ದಿಕ್ಕರಿಸಿದರು. ಸ್ವಂತ ಸೇನೆ ಕಟ್ಟಿ ಅದರ ಮಹಾದಂಡನಾಯಕರಾದರು.[೩]

ಕೆನರ ಬಂಡಾಯ ಬದಲಾಯಿಸಿ

ಮಂಗಳೂರಿನ ಬಾವುಟ ಗುಡ್ಡೆ ಎನ್ನುವ ಪ್ರದೇಶದಲ್ಲಿ ೧೩ ದಿನ ರಾಜ್ಯಭಾರ ಮಾಡಿದರು.ಇವರ ಸಾರಥ್ಯದಲ್ಲಿ ಮಂಗಳೂರು ಬಾವುಟಗುಡ್ಡೆ ಎನ್ನುವ ಪ್ರದೇಶದಲ್ಲಿ ಸ್ವತಂತ್ರ್ಯ ಧ್ವಜವನ್ನು ಹಾರಿಸಲಾಯಿತು.ಅವರ ನೇತೃತ್ವದಲ್ಲಿ ನಾಗರೀಕ ಸರಕಾರ ೧೩ ದಿನ ರಾಜ್ಯಭಾರ ಮಾಡಿತು.[೪]

ಮರಣ ಬದಲಾಯಿಸಿ

೪೫ ವರ್ಷದ ಅಪ್ಪಯ್ಯ ಗೌಡರನ್ನು ೧೮೩೭ ಅಕ್ಟೋಬರ್ ೩೧ರಂದು ಬೆಳಿಗ್ಗೆ ೧೦-೪೫ಕ್ಕೆ ಮಡಿಕೇರಿ ಕೋಟೆಯ ಮುಂಭಾಗ ಬಹಿರಂಗವಾಗಿ ನಾಡದ್ರೋಹಿ ಎಂದು ಗಲ್ಲಿಗೆರಿಸಲಾಯಿತು.[೫]

ಉಲ್ಲೇಖ ಬದಲಾಯಿಸಿ

  1. "ಸ್ವಾತಂತ್ರ್ಯ ಹೋರಾಟದಲ್ಲಿ ಅಮರರಾದ ಗೌಡರು". Vartha Bharati- ವಾರ್ತಾ ಭಾರತಿ (in ಇಂಗ್ಲಿಷ್).
  2. "ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ". Search Coorg (in ಇಂಗ್ಲಿಷ್). 28 October 2020.
  3. "ಅರೆಭಾಷೆ: ವೀರಯೋಧ ಗುಡ್ಡಮನೆ ಅಪ್ಪಯ್ಯಗೌಡ". ಅರೆಭಾಷೆ. 26 December 2011.
  4. "ಅಮರಸುಳ್ಯ ದಂಗೆ". ಅಕ್ಷರ ನಂಟು (in ಇಂಗ್ಲಿಷ್). 3 July 2017.
  5. "Freedom Fighter Guddemane Appaiah Gowda Kodagu First". {{cite journal}}: Cite journal requires |journal= (help)