ಗುಕೇಶ್ ಡಿ
ದೊಮ್ಮರಾಜು ಗುಕೇಶ್ ಒಬ್ಬ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್. ಗುಕೇಶ್ ಅವರು ೨೯ ಮೇ ೨೦೦೬ ರಂದು ಜನಿಸಿದರು. ಇವರನ್ನು ಡಿ ಗುಕೇಶ್ ಎಂದು ಸಹ ಕರೆಯಲಾಗುತ್ತದೆ. ಚೆಸ್ ಪ್ರಾಡಿಜಿಯಲ್ಲಿ, ಇವರು ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿಗೆ ಅರ್ಹತೆ ಪಡೆದ ಇತಿಹಾಸದಲ್ಲಿ ಮೂರನೇ-ಕಿರಿಯ ವ್ಯಕ್ತಿಯಾಗಿದ್ದಾರೆ.[೧] ೨೭೦೦ ರ ಚೆಸ್ ರೇಟಿಂಗ್ ಅನ್ನು ತಲುಪಿದ ಮೂರನೇ-ಕಿರಿಯ ವ್ಯಕ್ತಿ, ೨೭೫೦ ರ ರೇಟಿಂಗ್ ತಲುಪಿದ ಕಿರಿಯ ವ್ಯಕ್ತಿ ಮತ್ತು ಎಫ್‌ಐಡಿಇ(FIDE) ಕ್ಯಾಂಡಿಡೇಟ್ಸ್ ಪಂದ್ಯಾವಳಿಯ ಕಿರಿಯ ವಿಜೇತ.[೨] ಗುಕೇಶ್ ಅವರು ೨೦೨೪ ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಅನ್ನು ಗೆದ್ದರು.[೩]
ದೊಮ್ಮರಾಜು ಗುಕೇಶ್ | |||||||||||
---|---|---|---|---|---|---|---|---|---|---|---|
Born | ಚೆನ್ನೈ, ತಮಿಳುನಾಡು, ಭಾರತ | ೨೯ ಮೇ ೨೦೦೬||||||||||
Title | Grandmaster (2019) | ||||||||||
FIDE rating | 2764 (ಮೇ 2024) | ||||||||||
Peak rating | 2764 (May 2024) | ||||||||||
Ranking | No. 6 (ಮೇ 2024) | ||||||||||
Peak ranking | No. 6 (May 2024) | ||||||||||
ಪದಕ ದಾಖಲೆ
|
೧೬ ಅಕ್ಟೋಬರ್ ೨೦೨೨ ರಂದು, ೧೬ ನೇ ವಯಸ್ಸಿನಲ್ಲಿ, ಇವರು ಪ್ರಸ್ತುತ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಇವರು ಏಮ್ಚೆಸ್ ರಾಪಿಡ್ ಟೂರ್ನಮೆಂಟ್‌ನಲ್ಲಿ ಕಾರ್ಲ್‌ಸೆನ್ ಅನ್ನು ಸೋಲಿಸಿದರು. [೪]
ಆರಂಭಿಕ ಜೀವನ
ಬದಲಾಯಿಸಿಗುಕೇಶ್ ಅವರು ೨೯ ಮೇ ೨೦೦೬ ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು.[೫] ಅವರ ತಂದೆಯ ಹೆಸರು ರಜನಿಕಾಂತ್. ಅವರು ಕಿವಿ, ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸಕರು. ಅವರ ತಾಯಿ ಡಾ ಪದ್ಮಕುಮಾರಿ. ಅವರು ಸೂಕ್ಷ್ಮ ಜೀವವಿಜ್ಞಾನದ ಸಹಾಯಕ ಪ್ರಾಧ್ಯಾಪಕರು.[೬][೭]ಗುಕೇಶ್ ಅವರು ಚೆನ್ನೈನ ಮೆಲ್ ಅಯನಂಬಾಕ್ಕಂನ ವೆಲಮ್ಮಾಳ್ ವಿದ್ಯಾಲಯ ಶಾಲೆಯಲ್ಲಿ ಓದಿದರು.[೮]ಇವರು ತಮ್ಮ ಏಳನೇ ವಯಸ್ಸಿನಲ್ಲಿ ಅವರು ಚದುರಂಗವನ್ನು ಆಡಲು ಕಲಿತರು. [೯]
ವೃತ್ತಿ
ಬದಲಾಯಿಸಿ೨೦೧೫–೨೦೧೯
ಬದಲಾಯಿಸಿಗುಕೇಶ್ ಅವರು ೨೦೧೫ ರಲ್ಲಿ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನ ೯ ವರ್ಷದೊಳಗಿನವರ ವಿಭಾಗವನ್ನು ಗೆದ್ದರು.[೧೦] ೨೦೧೮ ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ಗಳನ್ನು ೧೨ ವರ್ಷದೊಳಗಿನವರ ವಿಭಾಗದಲ್ಲಿ ಗೆದ್ದರು. ಅವರು ೨೦೧೮ ರ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದರು.[೧೧]
೧೫ ಜನವರಿ ೨೦೧೯ ರಂದು, ೧೨ ನೇ ವಯಸ್ಸಿನಲ್ಲಿ, ಗುಕೇಶ್ ಅವರು ಇತಿಹಾಸದಲ್ಲಿ ಎರಡನೇ-ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆದರು.[೧೨] ಗುಕೇಶ್ ಅವರು ಸೆರ್ಗೆಯ್ ಕರ್ಜಾಕಿನ್ ಅವರನ್ನು ಮೀರಿಸಿದರು.[೧೩]
೨೦೨೧
ಬದಲಾಯಿಸಿಜೂನ್ ೨೦೨೧ ರಲ್ಲಿ, ಗುಕೇಶ್ ಅವರು ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್, ಗೆಲ್ಫಾಂಡ್ ಚಾಲೆಂಜ್ ಅನ್ನು ಗೆದ್ದರು. ೧೯ ರಲ್ಲಿ ೧೪ ಅಂಕಗಳನ್ನು ಗಳಿಸಿದರು.[೧೪]
೨೦೨೨
ಬದಲಾಯಿಸಿಆಗಸ್ಟ್ ೨೦೨೨ ರಲ್ಲಿ, ಗುಕೇಶ್ ಅವರು ೪೪ ನೇ ಚೆಸ್ ಒಲಿಂಪಿಯಾಡ್ ಅನ್ನು ೮/೮ ಪರಿಪೂರ್ಣ ಸ್ಕೋರ್‌ನೊಂದಿಗೆ ಪ್ರಾರಂಭಿಸಿದರು. ಅವರು ೮ ನೇ ಪಂದ್ಯದಲ್ಲಿ ಯುಎಸ್ ನಂಬರ್ ಒನ್ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದರು.
ಸೆಪ್ಟೆಂಬರ್ ೨೦೨೨ ರಲ್ಲಿ, ಗುಕೇಶ್ ಅವರು ೨೭೨೬ ರ ರೇಟಿಂಗ್‌ನೊಂದಿಗೆ ಮೊದಲ ಬಾರಿಗೆ ೨೭೦೦ ಕ್ಕಿಂತ ಹೆಚ್ಚು ರೇಟಿಂಗ್ ಅನ್ನು ತಲುಪಿದರು.[೧೫] ಇದು ವೀ ಯಿ ಮತ್ತು ಅಲಿರೆಜಾ ಫಿರೌಜ್ಜಾ ನಂತರ ೨೭೦೦ ದಾಟಿದ ಮೂರನೇ ಅತಿ ಕಿರಿಯ ಆಟಗಾರರಾದರು.[೧೬]
ಅಕ್ಟೋಬರ್ ೨೦೨೨ ರಲ್ಲಿ, ಗುಕೇಶ್ ಅವರು ಏಮ್ಚೆಸ್ ರಾಪಿಡ್ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್ ಆದರು.[೧೭]
೨೦೨೩
ಬದಲಾಯಿಸಿಫೆಬ್ರವರಿ ೨೦೨೩ ರಲ್ಲಿ, ಡುಸೆಲ್ಡಾರ್ಫ್‌ನಲ್ಲಿ ನಡೆದ ಡಬ್ಯ್ಲೂಆರ್(WR) ಮಾಸ್ಟರ್ಸ್ ಪಂದ್ಯಾವಳಿಯ ಮೊದಲ ಆವೃತ್ತಿಯಲ್ಲಿ ಗುಕೇಶ್ ಅವರು ಭಾಗವಹಿಸಿದರು.
ಆಗಸ್ಟ್ ೨೦೨೩ ರ ರೇಟಿಂಗ್ ಪಟ್ಟಿಯಲ್ಲಿ, ಗುಕೇಶ್ ೨೭೫೦ ರ ರೇಟಿಂಗ್ ತಲುಪಿದ ಅತ್ಯಂತ ಕಿರಿಯ ಆಟಗಾರರಾದರು.[೧೮] ಗುಕೇಶ್ ೨೦೨೩ ರ ಚೆಸ್ ವಿಶ್ವಕಪ್‌ನಲ್ಲಿ ಭಾಗವಹಿಸಿದರು.
೨೦೨೪
ಬದಲಾಯಿಸಿಜನವರಿ ೨೦೨೪ ರಲ್ಲಿ, ಗುಕೇಶ್ ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ೨೦೨೪ ರಲ್ಲಿ ಭಾಗವಹಿಸಿದರು. ಅವರು ೧೪ ಪಂದ್ಯಗಳಿಂದ ೯ ಅಂಕಗಳನ್ನು ಗಳಿಸಿದರು (೫ ಗೆಲುವುಗಳು, ೮ ಡ್ರಾಗಳು ಮತ್ತು ೧ ಸೋಲುಗಳು) ೧ ನೇ ಸ್ಥಾನಕ್ಕಾಗಿ ೪-ವೇ ಟೈನಲ್ಲಿ ಮುಗಿಸಿದರು. ೧೨ ನೇ ಸುತ್ತಿನಲ್ಲಿ, ಗುಕೇಶ್ ಅವರು ರಮೇಶ್‌ಬಾಬು ಪ್ರಗ್ನಾನಂದ ವಿರುದ್ಧ ಪಂದ್ಯಗಳನ್ನು ಗೆದ್ದರು. ಟೈಬ್ರೇಕ್‌ನಲ್ಲಿ ಅವರು ಸೆಮಿಫೈನಲ್‌ನಲ್ಲಿ ಅನೀಶ್ ಗಿರಿಯನ್ನು ಸೋಲಿಸಿದರು. ಆದರೆ ಫೈನಲ್‌ನಲ್ಲಿ ವೈ ಯಿ ವಿರುದ್ಧ ಸೋತರು.[೧೯]
ಏಪ್ರಿಲ್‌ನಲ್ಲಿ, ಗುಕೇಶ್ ೨೦೨೪ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದರು.[೨೦]
ಪ್ರಶಸ್ತಿಗಳು
ಬದಲಾಯಿಸಿ- ೨೦೨೩: ಏಷ್ಯನ್ ಚೆಸ್ ಫೆಡರೇಶನ್‌ನಿಂದ ವರ್ಷದ ಆಟಗಾರ[೨೧]
- ೨೦೨೩: ಸ್ಪೋರ್ಟ್‌ಸ್ಟಾರ್ ಏಸಸ್ ಪ್ರಶಸ್ತಿಯಿಂದ ಅತ್ಯುತ್ತಮ ಯುವ ಸಾಧಕರು (ಪುರುಷ).
ಉಲ್ಲೇಖಗಳು
ಬದಲಾಯಿಸಿ- ↑ Team (CHESScom), Chess com (2019-03-22). "The Youngest Chess Grandmasters In History". Chess.com (in ಅಮೆರಿಕನ್ ಇಂಗ್ಲಿಷ್). Retrieved 2024-04-22.
- ↑ Levin (AnthonyLevin), Anthony (2024-04-21). "Gukesh Youngest Ever To Win Candidates Tournament, Tan Wins Women's By 1.5 Points". Chess.com (in ಅಮೆರಿಕನ್ ಇಂಗ್ಲಿಷ್). Retrieved 2024-04-22.
- ↑ "Candidates Chess: Gukesh becomes youngest winner, to challenge for world title". The Economic Times. 2024-04-22. ISSN 0013-0389. Retrieved 2024-04-22.
- ↑ Watson, Leon (2022-10-16). "Now Gukesh stuns Carlsen! Historic moment as Indian teen breaks record". Meltwater Champions Chess Tour 2022 (in ಅಮೆರಿಕನ್ ಇಂಗ್ಲಿಷ್). Retrieved 2022-10-17.
- ↑ "Who Is D Gukesh, The Indian Chess Prodigy Now Up Against Reigning World Champion Ding Liren". Times Now (in ಇಂಗ್ಲಿಷ್). 2024-04-22. Retrieved 2024-04-22.
Born in May 2006 in Chennai , Gukesh took to chess at the age of seven.
- ↑ "Chennai teen D Gukesh goes down in chess folklore with historic victory, 2nd Indian after legend Anand to win Candidates". Hindustan Times (in ಇಂಗ್ಲಿಷ್). 2024-04-22. Retrieved 2024-04-22.
- ↑ Lokpria Vasudevan (2019-01-17). "D Gukesh: Grit and determination personify India's youngest Grandmaster". India Today. Retrieved 2019-03-18.
- ↑ "Velammal students win gold at World Cadet Chess championship 2018". Chennai Plus. 2018-12-09. Archived from the original on 27 March 2019. Retrieved 2019-03-18.
- ↑ Lokpria Vasudevan (2019-01-17). "D Gukesh: Grit and determination personify India's youngest Grandmaster". India Today. Retrieved 2019-03-18.
- ↑ Shubham Kumthekar; Priyadarshan Banjan (2018). "Gukesh D: The story behind a budding talent". IIFL Wealth Mumbai International Chess Tournament. Archived from the original on 16 April 2019. Retrieved 2018-12-09.
- ↑ "Chess: India Gukesh, Savitha Shri bag gold medals in U-12 World Cadets Championship". scroll.in. 2018-11-16. Retrieved 2018-12-09.
- ↑ Shah, Sagar (2019-01-15). "Gukesh becomes second youngest GM in history". Chess News. ChessBase. Retrieved 2019-01-15.
- ↑ Shah, Sagar (2018-12-09). "Gukesh with 2 GM norms and 2490 Elo is on the verge of becoming world's youngest GM". ChessBase India. Retrieved 2018-12-09.
- ↑ Rao, Rakesh (14 June 2021). "Gritty Gukesh wins Gelfand Challenge". The Hindu. Retrieved 18 June 2021.
- ↑ [https://ratings.fide.com/profile/46616543/chart Gukesh D, Rating Progress Chart, FIDE
- ↑ "Biel: Gukesh becomes third-youngest player to cross the 2700 mark". en.chessbase.com. July 17, 2022.
- ↑ "Gukesh D vs. Carlsen, Magnus | Aimchess Rapid | Prelims 2022". chess24.com (in ಇಂಗ್ಲಿಷ್). Retrieved 2022-10-16.
- ↑ Gukesh Breaks Record: Youngest Player To Cross 2750 Rating, chess.com, July 21, 2023.
- ↑ Rao, Rakesh (2024-01-29). "TATA Steel Chess 2024: Gukesh finishes joint second in Masters, Mendonca wins Challenger". Sportstar (in ಇಂಗ್ಲಿಷ್). Retrieved 2024-01-31.
- ↑ Magnus Predictions, chess.com, April 18, 2024
- ↑ "Gukesh won the "Player of the Year" and "Best Young Achievers Male" awards". chessarena.com.