ಗುಂಜಿ

ಭಾರತದಲ್ಲಿ ಹಳ್ಳಿ

ಬೆಳಗಾಂವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಒಂದು ಗ್ರಾಮ. ಖಾನಾಪುರ ದಿಂದ 13ಕಿಮೀ ದೂರದಲ್ಲಿ ಬೆಳಗಾಂವಿ ಪಣಜಿ ಹೆದ್ದಾರಿಯಲ್ಲಿದೆ. ಇಲ್ಲಿ ಕಮಲೇಶ್ವರ, ಗಣಪತಿ, ರಾವಳನಾಥ, ಮಾವೂಲಿದೇವಿ ಮುಂತಾದ ದೇವಾಲಯಗಳಿವೆ. ಕಮಲೇಶ್ವರ ದೇವಾಲಯದ ಗರ್ಭಗುಡಿ ಮಾತ್ರ ಪುರಾತನವಾದ್ದು, ಶಿವಲಿಂಗ ಪೀಠ ತರುವಾಯದ ಚಾಳುಕ್ಯ ಶೈಲಿಯಲ್ಲಿದೆ. ಗಣಪತಿ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಚಾಳುಕ್ಯ ಶೈಲಿಯ ಶಿವಲಿಂಗ ಮತ್ತು ವಿಷ್ಣು ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ರಾವಳನಾಥ ದೇವಾಲಯ ಇತ್ತೀಚಿನ ಸಿಮೆಂಟ್ ಕಟ್ಟಡವಾಗಿದ್ದು ಸೊಗಸಾಗಿದೆ. ಈ ದೇವಾಲಯದ ಮುಂದೆ ಐದು ವೀರಗಲ್ಲುಗಳಿವೆ. ದೊಡ್ಡದಾದ ಶಿವಲಿಂಗವನ್ನೊಳಗೊಂಡ ಶಿವ ದೇವಾಲಯವೂ ಊರ ಹೊರವಲಯದಲ್ಲಿದೆ. ದಸರ ಮಹೋತ್ಸವದಲ್ಲಿ ಈ ದೇವಾಲಯ ಮತ್ತು ರಾವಳನಾಥ ದೇವಾಲಯದಲ್ಲಿ 5 ದಿನಗಳಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ ಊರಲ್ಲಿ ಖಾಜಿ ಪೀರ್ರ ದರ್ಗಾ ಇದೆ. ಗುಂಜಿಗೆ ಸು.5ಕಿಮೀ ಅಂತರದಲ್ಲಿರುವ ಕಿರವಾಲಿ ಎಂಬ ಸ್ಥಳ ನಾಥಪಂಥದ ಒಂದು ಪ್ರಾಚೀನ ಕೆಂದ್ರವಾಗಿತ್ತು. ಅಲ್ಲಿ ಗೋರಖನಾಥ ಮಠವಿದೆ; ಕಾಲಭೈರವನ ಉಪಾಸನೆ ನಡೆಯುತ್ತದೆ. ನಾಥಪಂಥಕ್ಕೆ ಸೇರಿದ ಮತ್ಸ್ಯೆಂದ್ರನಾಥ ಮಠ ಗುಂಜಿಗೆ ಸು.7ಕಿಮೀ ದೂರದ ದೊಂಗುಗಾಂವ್ನಲ್ಲಿದೆ.


"https://kn.wikipedia.org/w/index.php?title=ಗುಂಜಿ&oldid=634364" ಇಂದ ಪಡೆಯಲ್ಪಟ್ಟಿದೆ