ಗೀತಾ ಗೋಪಿನಾಥ್

ಅರ್ಥಶಾಸ್ತ್ರಜ್ಞೆ ಮತ್ತು ಐಎಂಎಫ್ ನ ಮುಖ್ಯ ಅರ್ಥಶಾಸ್ತ್ರಜ್ಞೆ

ಗೀತಾ ಗೋಪಿನಾಥ್ (ಜನನ: ೮ ಡಿಸೆಂಬರ್ ೧೯೭೧) ಭಾರತೀಯ-ಅಮೆರಿಕನ್ ಅರ್ಥಶಾಸ್ತ್ರಜ್ಞೆ. ಹಾರ್ವರ್ಡ್ ವಿಶ್ವವಿದ್ಯಾಲಯ ದಲ್ಲಿನ ಜಾನ್ ಸ್ವಾಂತ್ರ ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ. ೧ ಅಕ್ಟೋಬರ್ ೨೦೧೮ ರಂದು ಡಾ. ಗೀತಾರನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ.[೧] ತನ್ನ ಮುಖ್ಯ ಅರ್ಥ ಶಾಸ್ತ್ರಜ್ಞೆಯನ್ನಾಗಿ ನೇಮಿಸಿತು.[೨] ಪ್ರಸಕ್ತ ಡಾ. ಗೀತಾ, ಕೇರಳ ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ.

ಗೀತಾ ಗೋಪಿನಾಥ್

ಹಾಲಿ
ಅಧಿಕಾರ ಸ್ವೀಕಾರ 
೧ ಜನವರಿ ೨೦೧೯
ರಾಷ್ಟ್ರಪತಿ Christine Lagarde
David Lipton (Acting)
Kristalina Georgieva
ಪೂರ್ವಾಧಿಕಾರಿ Maurice Obstfeld
ವೈಯಕ್ತಿಕ ಮಾಹಿತಿ
ಜನನ (1971-12-08) ೮ ಡಿಸೆಂಬರ್ ೧೯೭೧ (ವಯಸ್ಸು ೫೨)
ಕೊಲ್ಕತ್ತ, ಭಾರತ

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

ಗೀತಾ, ಟಿ.ವಿ.ಗೋಪಿನಾಥ್ ಮತ್ತು ವಿ.ಸಿ.ವಿಜಯಲಕ್ಷ್ಮಿ ದಂಪತಿಗಳ [೩] ಕಿರಿಯ ಮಗಳಾಗಿ ಮೈಸೂರು, ಕರ್ನಾಟಕ, ಭಾರತನಲ್ಲಿ ಜನಿಸಿ, ಪಿ.ಯು.ಸಿ ವರೆಗಿನ ಶಿಕ್ಷಣ ಪೂರೈಸಿದರು. ನಂತರ ದಿಲ್ಲಿಯ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪದವಿ, ಮತ್ತು ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದರು.[೪] ಕೇರಳ ಮೂಲದ ಟಿವಿ ಗೋಪಿನಾಥ್, ರೈತಮಿತ್ರ ಸಂಸ್ಥೆಯ ಸಂಸ್ಥಾಪಕರು [೫]

ವೃತ್ತಿ ಬದಲಾಯಿಸಿ

ಅಕ್ಟೋಬರ್ ೨೦೧೮ ರಲ್ಲಿ, ಗೀತಾ ಗೋಪಿನಾಥ್ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞರನ್ನಾಗಿ ನೇಮಿಸಲಾಯಿತು.[೬] ಗೀತಾ ಗೋಪಿನಾಥ್ ಜಾನ್ ಜ್ವಾನ್‌ಸ್ಟ್ರಾ ಹಾರ್ವರ್ಡ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕ. ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್‌ನಲ್ಲಿ ಇಂಟರ್ನ್ಯಾಷನಲ್ ಫೈನಾನ್ಸ್ ಮತ್ತು ಮ್ಯಾಕ್ರೋ ಎಕನಾಮಿಕ್ಸ್ ಕಾರ್ಯಕ್ರಮದ ಸಹ-ನಿರ್ದೇಶಕಿ, ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಬೋಸ್ಟನ್‌ಗೆ ಭೇಟಿ ನೀಡುವ ವಿದ್ವಾಂಸ, ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್‌ನ ಆರ್ಥಿಕ ಸಲಹಾ ಸಮಿತಿಯ ಸದಸ್ಯ, ಆರ್ಥಿಕ ಸಲಹೆಗಾರ ಕೇರಳ ರಾಜ್ಯದ ಮುಖ್ಯಮಂತ್ರಿ (ಭಾರತ), ಅಮೇರಿಕನ್ ಎಕನಾಮಿಕ್ ರಿವ್ಯೂನಲ್ಲಿ ಸಹ ಸಂಪಾದಕ ಮತ್ತು ಹ್ಯಾಂಡ್ಬುಕ್ ಆಫ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ನ ೨೦೧೯ ರ ಆವೃತ್ತಿಯ ಸಹ ಸಂಪಾದಕ.[೭]

ಪ್ರಸ್ತುತ ನೇಮಕಾತಿ ಮತ್ತು ಕೆಲಸ ಬದಲಾಯಿಸಿ

ಡಾ.ಗೀತಾ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೌರವ ಬದಲಾಯಿಸಿ

  1. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಅರ್ಥ ಶಾಸ್ತ್ರಜ್ಞೆ [೮]
  2. ಬೋಸ್ಟನ್ ಫೆಡರಲ್ ರಿಸರ್ವ್ ನ ಆರ್ಥಿಕ ಸಲಹಾ ಮಂಡಳಿ ಸದಸ್ಯೆ
  3. ಅಮೇರಿಕನ್ ಎಕನಾಮಿಕ್ ರಿವ್ಯೂ ಸಂಪಾದಕ ಮಂಡಳಿಯ ಸದಸ್ಯೆ
  4. ಅಮೇರಿಕಾದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ಸ್ ನ ನಿರ್ದೇಶಕ ಮಂಡಲಿಯ ಸದಸ್ಯೆ

ವೈಯಕ್ತಿಕ ಜೀವನ ಬದಲಾಯಿಸಿ

ಗೀತಾ ಗೋಪಿನಾಥ್ ರವರ ಪತಿ ಇಕ್ಬಾಲ್ ಸಿಂಗ್ ಧಲಿವಾಲ್,ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಬ್ದುಲ್ ಲತೀಫ್ ಜಮಾಲ್ ಬಡತನ ನಿವಾರಣಾ ಲ್ಯಾಬ್ ನಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[೯]

ಐ.ಎಮ್.ಎಫ್ ಅಧಿಕಾರ ಸ್ವೀಕಾರ ಬದಲಾಯಿಸಿ

ಗೀತಾ ಗೋಪೀನಾಥ್ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ನ, ಪ್ರಥಮ ಮಹಿಳಾ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.[೧೦]

ಉಲ್ಲೇಖಗಳು ಬದಲಾಯಿಸಿ

  1. "Harvard Economist Gita Gopinath Appointed Chief Economist At International Monetary Fund". Headlines Today. Archived from the original on 2 ಅಕ್ಟೋಬರ್ 2018. Retrieved 2 October 2018.
  2. html, ಐ.ಎಮ್.ಎಫ್, ಸಂಶೋಧನ ವಿಭಾಗದ ನಿರ್ದೇಶಕಿ, ಮೈಸೂರಿನ ಹುಡುಗಿ, ಗೀತಾ ನೇಮಕ, ಒನ್ ಇಂಡಿಯ, ಅಕ್ಟೋಬರ್, ೦೩, ೨೦೧೮[ಶಾಶ್ವತವಾಗಿ ಮಡಿದ ಕೊಂಡಿ]
  3. ಮಗಳು ಉನ್ನತ ಸ್ಥಾನಕ್ಕೇರುವ ವಿಶ್ವಾಸವಿತ್ತು : ಗೀತಾ ಗೋಪೀನಾಥ್ ಪೋಷಕರ ಸಂಭ್ರಮ. ಪ್ರಜಾವಾಣಿ,೦೩,ಅಕ್ಟೋಬರ್,೨೦೧೮
  4. https://www.news18.com/news/india/good-enough-for-imf-but-gita-gopinaths-appointment-as-kerala-adviser-left-many-in-govt-unimpressed-1895163.html
  5. https://www.deccanherald.com/content/613385/congress-alleges-special-treatment-t.html
  6. "Harvard Economist Gita Gopinath Appointed Chief Economist At International Monetary Fund - HeadLines Today". web.archive.org. 2 October 2018. Archived from the original on 2 ಅಕ್ಟೋಬರ್ 2018. Retrieved 18 March 2020.{{cite web}}: CS1 maint: bot: original URL status unknown (link)
  7. www.amazon.com https://www.amazon.com/Handbook-International-Economics-Gita-Gopinath-ebook/dp/B00IWNN2E8/ref=sr_1_1?gclid=Cj0KCQjw6KrtBRDLARIsAKzvQIHbtq4b_uu2Rdf3UA_Tcojx2LuCfHr15Vp7KVTRtGJv-yqdiSIFxLQaAl1nEALw_wcB&hvadid=241655012779&hvdev=c&hvlocphy=1015166&hvnetw=g&hvpos=1t1&hvqmt=e&hvrand=2966716821645697801&hvtargid=kwd-910763792&keywords=handbook+of+international+economics&qid=1571475157&sr=8-1. Retrieved 18 March 2020. {{cite web}}: Missing or empty |title= (help)
  8. "Harvard Economist Gita Gopinath Appointed Chief Economist At International Monetary Fund". Headlines Today. Archived from the original on 2 ಅಕ್ಟೋಬರ್ 2018. Retrieved 2 October 2018.
  9. https://www.deccanherald.com/state/mysuru-elated-gita-gopinath-695730.html
  10. ಐ.ಎಮ್.ಎಫ್.ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಮೈಸೂರು ಮೂಲದ ಗೀತಾ ಗೋಪೀನಾಥ್, ಅಧಿಕಾರ ಸ್ವೀಕರಿಸಿದರು. ಕನ್ನಡ ಪ್ರಭ, ೮,ಜನವರಿ,೨೦೧೯[ಶಾಶ್ವತವಾಗಿ ಮಡಿದ ಕೊಂಡಿ]